ನ್ಯೂಕ್ಲಿಯರ್‌ ಮೆಡಿಸಿನ್‌ ಎಂದರೇನು?


Team Udayavani, Mar 5, 2017, 3:45 AM IST

Nuclear-650.jpg

ಹಿಂದಿನ ವಾರದಿಂದ – ಕಳೆದ ವಾರದಲ್ಲಿ ನಾವು ನ್ಯೂಕ್ಲಿಯರ್‌ ಮೆಡಿಸಿನ್‌ನ ಮೂಲ ಅಂಶಗಳು ಹಾಗೂ ಮೆದುಳು ಮತ್ತು ಹೃದಯಕ್ಕೆ ಸಂಬಂಧಿಸಿದ ಸ್ಕ್ಯಾನ್‌ ಗಳ ಬಗ್ಗೆ ತಿಳಿದುಕೊಂಡೆವು. ಈ ವಾರ ಇನ್ನುಳಿದ ಅಂಗಗಳ ತಪಾಸಣೆಯ ಬಗ್ಗೆ ಅರಿವು ಮೂಡಿಸಿಕೊಳ್ಳೋಣ.

ನ್ಯೂಕ್ಲಿಯರ್‌ ನೆಫೊ-ಯುರೋಲಜಿ ಮೂತ್ರಪಿಂಡ ಹಾಗೂ ವಿಸರ್ಜನಾಂಗಗಳಿಗೆ ಬಾಧಿಸುವ ರೋಗಗಳನ್ನು ಉದ್ದೇಶಿಸಿರುತ್ತದೆ. ಈ ಅಂಗಗಳಲ್ಲಿ ಕಲ್ಲು ರಚನೆಯಾಗುವುದು, ಮೂತ್ರ ವಿಸರ್ಜನೆಗೆ ಅಡಚಣೆಯಾಗುವುದು, ಸೋಂಕುಗಳಿಗೀಡಾಗುವುದು ಸಹಜ. ಈ ಕಾರಣಗಳನ್ನು ಕಂಡು ಹಿಡಿಯಲು ಯು.ಎಸ್‌.ಜಿ (USG – Ultrasound),  ಎಮ್‌. ಸಿ. ಯು (MCU), ಸಿ.ಟಿ-ಐಪಿ (CT-IVP Intravenous pyelogram) ಮುಂತಾದ ಸ್ಕ್ಯಾನ್‌ಗಳನ್ನು ಮಾಡುತ್ತಾರೆ. ಆದರೆ ಈ ಕಾರಣಗಳಿಂದ ಮೂತ್ರಪಿಂಡದ ಕಾರ್ಯಗಳ ಮೇಲಾಗುವ ಪರಿಣಾಮವನ್ನು ನೋಡಲು ನಾವು ರೀನಲ್‌ ಡೈನಾಮಿಕ್‌ ಸ್ಕ್ಯಾನ್‌, ಡಿ.ಟಿ.ಪಿ.ಏ (DTPA) ಅಥವಾ ಇ.ಸಿ (E.C) ಎಂಬ ಔಷಧವನ್ನು ಬಳಸಿ ಮಾಡುತ್ತೇವೆ. ಈ ಸ್ಕ್ಯಾನಿನಿಂದ ನಮಗೆ ಪ್ರತ್ಯೇಕ ಮೂತ್ರಪಿಂಡವು ಹೇಗೆ ಕೆಲಸ ಮಾಡುತ್ತಿದೆ, ಅವುಗಳಲ್ಲಿ ರಕ್ತ ಸರಬರಾಜು ಹೇಗಾಗುತ್ತಿದೆ, ಮೂತ್ರ ವಿಸರ್ಜನೆಗೆ ಏನಾದರೂ ಅಡಚಣೆ ಇದೆಯೇ ಅಥವಾ ಇಲ್ಲವೇ ಎಂಬುದು ತಿಳಿದುಬರುತ್ತದೆ. ಮೂತ್ರಪಿಂಡದ ಕಾಯಿಲೆಯಿಂದಾಗಿ ಆಗುವ ತೀವ್ರ ರಕ್ತದೊತ್ತಡವನ್ನು ಕಂಡುಹಿಡಿಯಲು ಸಹ ಈ ಸ್ಕ್ಯಾನ್‌ ಅನ್ನು ಬಳಸುತ್ತಾರೆ. ಮೂತ್ರಪಿಂಡಗಳಿಗೆ ಸೋಂಕು ಬಾಧಿಸಿದಲ್ಲಿ ಇದರಿಂದಾಗುವ ಕಲೆಗಳನ್ನು ಕಂಡುಹಿಡಿಯಲು ಡಿ.ಎಮ್‌.ಎಸ್‌.ಏ (DMSA) ಆನ್ನೊ ಔಷಧಿ ಉಪಯೋಗಿಸಿ ಸ್ಕ್ಯಾನ್‌ ಮಾಡುತ್ತೇವೆ.ಇನ್ನು ಹೆಚ್ಚು ಸಾಮಾನ್ಯವಾಗಿ ಮಾಡುವ ಸ್ಕ್ಯಾನ್‌ಗಳೆಂದರೆ ಈ ನಿರ್ನಾಳ ಗ್ರಂಥಿಗಳದ್ದು. ಇದರಲ್ಲಿ ಥೈರಾಯ್ಡ, ಪಾರಾಥೈರಾಯ್ಡ, ಅಡ್ರಿನಲಿನ್‌ ಮುಂತಾದ ಗ್ರಂಥಿಗಳ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ.

ಥೈರಾಯ್ಡಗೆ ಸಂಬಂಧಿಸಿದ ಹಾಗೆ ಇದರಲ್ಲಿ ಥೈರೋಟೊಕ್ಸಿಕೋಸಿಸ್‌ಗೆ (ಅಂದರೆ ದೇಹದಲ್ಲಿ ಥೈರಾಯ್ಡ ಹಾರ್ಮೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿರುವುದು) ಹಲವಾರು ಕಾರಣಗಳಿದ್ದು (ಉದಾಹರಣೆಗೆ ಹೆಚ್ಚು ಕೆಲಸ ಮಾಡುವ ಗಡ್ಡೆ ಅಥವಾ ಗ್ರಂಥಿ, ಥೈರಾಯ್ಡ  ಗ್ರಂಥಿಗೆ ಆಗುವ ಸೋಂಕು ಇತ್ಯಾದಿ). ರೋಗಿಗೆ ಯಾವ ಕಾರಣದಿಂದ ಕಾಯಿಲೆಯಾಗಿದೆ ಎಂದು ಥೈರಾಯ್ಡ ಸ್ಕ್ಯಾನ್‌ ಪತ್ತೆಹಚ್ಚುತ್ತದೆ. ಪಾರಾಥೈರಾಯ್ಡ ಗ್ರಂಥಿಗಳು ಥೈರಾಯ್ಡ ಗ್ರಂಥಿಯ ನಾಲ್ಕು ಮೂಲೆಗಳಲ್ಲಿರುವ ಸಣ್ಣ ಗ್ರಂಥಿಗಳು ಇವು ಶರೀರದಲ್ಲಿ ಕ್ಯಾಲ್ಸಿಯಂ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಕೆಲವು ಬಾರಿ ಇವುಗಳಲ್ಲಿ ಒಂದು ಅಥವಾ ಅಧಿಕ ಗ್ರಂಥಿಗಳು ಅಸಹಜವಾಗಿ ಹೆಚ್ಚು ಕೆಲಸ ಮಾಡಲಾರಂಭಿಸಿ ದೇಹದ ಕ್ಯಾಲ್ಸಿಯಂ ಮಟ್ಟವನ್ನು ಏರಿಸಿ ಅನೇಕ ತೊಂದರೆಗಳನ್ನುಂಟು ಮಾಡತ್ತದೆ. ಸಿಸ್ಟಮಿಬಿ ಪಾರಾಥೈರಾಯ್ಡ ಸ್ಕ್ಯಾನ್‌ ಎನ್ನುವ ಅತಿ ಸೂಕ್ಷ್ಮ ಹಾಗು ನಿರ್ದಿಷ್ಟ ಸ್ಕ್ಯಾನ್‌ ಮಾಡುವ ಮೂಲಕ ಇಂತಹ ಅಸಹಜ ಗ್ರಂಥಿಗಳನ್ನು ಪತ್ತೆಮಾಡಬಹುದು.

ಯಕೃತ್ತು (ಲಿವರ್‌) ಮತ್ತು ಪಿತ್ತರಸ ನಾಳಗಳಿಗೆ ಸಂಬಂಧಿಸಿದ ಸ್ಕ್ಯಾನ್‌ಗಳನ್ನು ಸಹಜವಾಗಿ ನವಜಾತ ಮತ್ತು ಎಳೆಯ ಶಿಶುಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಈ ಪುಟ್ಟ ಮಕ್ಕಳಲ್ಲಿ ಕಾಮಲೆ ಕಂಡುಬಂದಾಗ, ಅದು ಯಾವ ಕಾರಣದಿಂದಾಗಿ ಎಂಬುದನ್ನು ಇದು ಬಹಳ ಸ್ಪಷ್ಟವಾಗಿ ವರ್ಗೀಕರಿಸುತ್ತದೆ. ಬಿಲಿಯರಿ ಆಟ್ರಿಸಿಯಾ ಕಾಯಿಲೆಗೆ ಶಸ್ತ್ರ ಚಿಕಿತ್ಸೆ ಆವಶ್ಯಕವಿದ್ದು, ಇರುವ ಕಾಮಾಲೆ ಹೆಪಟೈಟಿಸ್‌ ಅಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮಹತ್ವವಾಗುತ್ತದೆ. 

ಇದು ನಮ್ಮ ನ್ಯೂಕ್ಲಿಯರ್‌ ಮೆಡಿಸಿನ್‌ ವಿಭಾಗದ ಪ್ರಮುಖ ಭಾಗವಾದ ನ್ಯೂಕ್ಲಿಯರ್‌ ಆಂಕಾಲಜಿಗೆ ಬರೋಣ. ಕ್ಯಾನ್ಸರ್‌ ಎನ್ನುವುದು ಹೊಸ ರೋಗವೇನಲ್ಲ 3,500 ವರ್ಷಗಳ ಹಿಂದೆ ಈಜಿಪ್ಟಿನವರು ಈ ಕಾಯಿಲೆಯ ಬಗ್ಗೆ ಬರೆದು ವರ್ಣಿಸಿದ್ದಾರೆ. ಈ ಕಾಯಿಲೆಯ ಬಗ್ಗೆ ಆಗ ಅವರು ಹೇಳಿದ ಮಾತು ಈ ಕಾಯಿಲೆಗೆ ಪರಿಹಾರ ಇಲ್ಲ ಎಂದು. ಅಂದಿನಿಂದ ಇಲ್ಲಿಯವರೆಗೆ ಈ ಕಾಯಿಲೆಯ ವಿರುದ್ಧ ಮಾನವನ ಹೋರಾಟ ಅಪಾರ. ವೈದ್ಯಕೀಯ ವಿಜಾnನದಲ್ಲಿ ಅನೇಕ ಬಾರಿ ಈ ಕಾಯಿಲೆಯ ಚಿಕಿತ್ಸೆಯಲ್ಲಿ ಮಹತ್ವದ ತಿರುವುಗಳು ಬಂದಿದ್ದು, ಅದರಲ್ಲಿ  PET/CT   (ಪೆಟ್‌/ಸಿಟಿ) ಆವಿಷ್ಕಾರದಿಂದಾಗಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಂಡುಬಂದಿವೆ.

ರೋಗಿಯು ಚಿಕಿತ್ಸೆಗೆ ತೋರಿಸುವ ಪ್ರತಿಕ್ರಿಯೆ ಮತ್ತು ಇನ್ನಿತರ ಅಂಶಗಳ ಆಧಾರದ ಮೇಲೆ ಕ್ಯಾನ್ಸರ್‌ ಚಿಕಿತ್ಸೆಯ ನಿರ್ವಹಣೆ ಎಂಬುದು ರೋಗಿಯಿಂದ ರೋಗಿಗೆ ಬದಲಾಗುತ್ತದೆ. ರೋಗದ ಹಂತ-ವರ್ಗೀಕರಣ  (staging), ಮರುವರ್ಗೀಕರಣ, ಪ್ರತಿಕ್ರಿಯೆಯ ವಿಶ್ಲೇಷಣೆ ಮತ್ತು ಮರುಕಳಿಸುವುದನ್ನು  ಪತ್ತೆ ಮಾಡುವುದು – ಇವು ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವೆಲ್ಲವನ್ನು ಪೆಟ್‌-ಸಿಟಿ ((PET/CT) ವಿಶ್ಲೇಷಿಸುತ್ತದೆ. ಈಗಾಗಲೆ ಎಫ್.ಡಿ.ಜಿ ಪೆಟ್‌-ಸಿಟಿ(FDG-PET/CT) ಗಳು ಹಾಡಿRನ್ಸ್‌ ಲಿಂಫೋಮಾ (Hodgkin’s Lymphoma)  ಶ್ವಾಸಕೋಶ, ಸ್ತನ, ತಲೆ ಮತ್ತು ಕುತ್ತಿಗೆ, ಜಠರಗಳ ಕ್ಯಾನ್ಸರ್‌ಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

ಈಗ ವೈದ್ಯಕೀಯ ವಿಜಾnನವು ಪರ್ಸನಲೈಸ್ಡ್ ಮೆಡಿಸಿನ್‌ (personlised medicine) ಎಂದರೆ ಪ್ರತ್ಯೇಕ ರೋಗಿಗೆ ಅವನಿಗೆ ಸೂಕ್ತವಾಗುವ ಚಿಕಿತ್ಸೆ ನೀಡುವ ದಿಕ್ಕಿನಲ್ಲಿ ಮುಂದುವರಿಯುತ್ತಿದೆ. ಏಕೆಂದರೆ ರೋಗ ಒಂದೆ ಆದರೂ ರೋಗ ಲಕ್ಷಣ ಹಾಗೂ ಚಿಕಿತ್ಸೆಗೆ ರೋಗಿಯ ಪ್ರತಿಕ್ರಿಯೆ ಭಿನ್ನವಾಗಿರುತ್ತದೆ. ಹೇಗೆ ಚಿಕಿತ್ಸೆಯನ್ನು ರೋಗಿಗೆ ಅನುಗುಣವಾಗಿ ಯೋಜಿಸಬೇಕು, ಹೇಗೆ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಬೇಕು, ಎನ್ನುವ ಚಿಂತನೆ ಈಗ ವೈಜಾnನಿಕ ಜಗತ್ತಿನದ್ದಾಗಿದೆ. ಈ ದಿಕ್ಕಿನಲ್ಲಿ ನ್ಯೂಕ್ಲಿಯರ್‌ ಮೆಡಿಸಿನ್‌ ರೋಗಿಯ ಜೀವಕೋಶದಲ್ಲಿ ಆಗುವ ಬದಲಾವಣೆ, ಅದರ ಮೇಲಾ ಗುವ ಗ್ರಾಹಿಗಳ ಬೆಳವಣಿಗೆ, ಚಿಕಿತ್ಸೆಯಿಂದಾಗಿ ರೋಗದ ಕಾರ್ಯಚಟುವಟಿಕೆಯ ಮೇಲೆ ಆಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಸಾಮರ್ಥ್ಯ ಹೊಂದಿದ್ದು ರೋಗಿಯ ಚಿಕಿತ್ಸೆಯನ್ನು ಅವನಿಗೆ ಸೂಕ್ತವಾಗುವಂತೆ ನಿಯೋಜಿಸುವುದಕ್ಕೆ ದಾರಿ ಮಾಡಿಕೊಟ್ಟಿದೆ. 

ಇದು ನಮ್ಮ ನ್ಯೂಕ್ಲಿಯರ್‌ ಮೆಡಿಸಿನ್‌ ಶಾಖೆಯ ತಪಾಸಣಾ ವಿಭಾಗದ ಸಣ್ಣ ಪರಿಚಯ. ಇನ್ನೂ ಬಹಳಷ್ಟು ವಿಷಯಗಳು ಬಾಕಿ ಇವೆ. ಓದುಗರಿಗೆ ನಮ್ಮ ಶಾಖೆಯ ಬಗ್ಗೆ ಸ್ವಲ್ಪವಾದರೂ ಅರಿವು ಮೂಡಿಸುವಲ್ಲಿ ಈ ಲೇಖನವು ಸಹಾಯ ಮಾಡಿದೆ ಎಂದು ಭಾವಿಸುತ್ತೇನೆ. ಗರ್ಭಿಣಿ ಮಹಿಳೆಯರನ್ನು ಹೊರತು ಪಡಿಸಿ, ಉಳಿದ ಎಲ್ಲಾ ರೋಗಿಗಳು, ಯಾವುದೇ ಭಯ ಹಿಂಜರಿಕೆ ಇಲ್ಲದೆ ಈ ಸ್ಕ್ಯಾನ್‌ ಗಳ ಸದುಪಯೋಗ ಮಾಡಿಕೊಳ್ಳಬಹುದು. 

– ಡಾ| ಸುಮೀತ್‌ ಸುರೇಶ್‌ ಮಲಪುರೆ, 
ಅಸಿಸ್ಟೆಂಟ್‌ ಪ್ರೊಫೆಸರ್‌, 
ನ್ಯೂಕ್ಲಿಯರ್‌ ಮೆಡಿಸಿನ್‌ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ,  ಮಣಿಪಾಲ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-tooth

Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

10-wayanad

Landslide Survivors: ಭೂಕುಸಿತದಿಂದ ಪಾರಾದವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಮಾರ್ಗದರ್ಶಿ

9-cancer

Cancer Symptoms: ಕ್ಯಾನ್ಸರ್‌ನ ಸಾಮಾನ್ಯವಲ್ಲದ ಲಕ್ಷಣಗಳು

8-weight-gain

Weight gain: ಕ್ರೀಡಾಳುಗಳಲ್ಲಿ ತೂಕ ಗಳಿಕೆ- ದೈಹಿಕ, ಮಾನಸಿಕ ಪರಿಣಾಮಗಳ ನಿರ್ವಹಣೆ

4-breastfeeding

Infant’s Immune System: ಶಿಶುವಿನ ರೋಗ ನಿರೋಧಕ ವ್ಯವಸ್ಥೆಗ ಸ್ತನ್ಯಪಾನದಿಂದ ಪ್ರಯೋಜನಗಳು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.