![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 23, 2022, 5:39 PM IST
ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಒಂದು ಬಾರಿ ಕೊರೊನಾ ವೈರಸ್ ಸೋಂಕಿಗೀಡಾಗಿ ಗುಣಮುಖನಾಗಿ ಚೇತರಿಸಿಕೊಂಡ ವ್ಯಕ್ತಿಯು ಮತ್ತೂಮ್ಮೆ ಕೋವಿಡ್-19 ಸೋಂಕಿಗೀಡಾಗಬಹುದು ಎಂಬುದು ಈಗಾಗಲೇ ಸಾಬೀತಾಗಿದೆ. ಸೋಂಕನ್ನು ತಡೆಗಟ್ಟಲು ಲಸಿಕೆ ಹಾಕಿಸಿಕೊಳ್ಳುವುದು ಪ್ರಧಾನ ಮಾರ್ಗೋ ಪಾಯವಾಗಿದ್ದರೂ ಎಲ್ಲ ಸನ್ನಿವೇಶಗಳಲ್ಲಿ, ಎಲ್ಲ ಸಮಯದಲ್ಲಿ ಲಸಿಕೆಯಿಂದಲೂ ಪೂರ್ಣ ಪ್ರಮಾಣದ ರಕ್ಷಣೆ ಸಿಗುವುದಿಲ್ಲ ಎಂಬ ಅಭಿಪ್ರಾಯ ತಜ್ಞರದ್ದಾಗಿದೆ.
ಈ ಹಿನ್ನೆಲೆಯಲ್ಲಿ ಇದುವರೆಗೆ ಸೋಂಕಿಗೀಡಾಗದವರು ಮತ್ತು ಇತ್ತೀಚೆಗೆ ಕೋವಿಡ್-19ಕ್ಕೆ ಒಳಗಾಗಿ ಚೇತರಿಸಿಕೊಂಡವರು ಮುನ್ನೆಚ್ಚರಿಕೆಗಳನ್ನು ವಹಿಸುವುದು ಬಹಳ ಮುಖ್ಯವಾಗಿದೆ.
ಇತ್ತೀಚೆಗೆ ಕೋವಿಡ್-19 ಸೋಂಕಿಗೆ ತುತ್ತಾದವರು ಚೇತರಿಸಿಕೊಂಡ ಕೂಡಲೇ ಹಲ್ಲುಜ್ಜುವ ಬ್ರಶ್ ಬದಲಾಯಿಸಿಕೊಳ್ಳು ವುದು ಒಳ್ಳೆಯದು ಎಂದು ದಂತವೈದ್ಯರು ಅಭಿಪ್ರಾಯಪಡುತ್ತಾರೆ. ಇದರಿಂದ ಅವರು ಸ್ವತಃ ಮರಳಿ ಸೋಂಕಿಗೆ ತುತ್ತಾಗುವ ಅಪಾಯ ದೂರವಾಗುವುದಷ್ಟೇ ಅಲ್ಲದೆ ಮನೆಯಲ್ಲಿ ಅದೇ ವಾಶ್‌ರೂಮ್ ಉಪಯೋಗಿಸುವ ಇತರರು ಕೂಡ ಸೋಂಕಿಗೆ ತುತ್ತಾಗುವ ಅಪಾಯವನ್ನು ತಡೆಯಬಹುದು ಎನ್ನುತ್ತಾರೆ ದಂತವೈದ್ಯರು.
ಸೋಂಕು ಇನ್ನಷ್ಟು ಮಂದಿಗೆ ಪ್ರಸಾರವಾಗುವುದನ್ನು ತಡೆಯಲು ರೋಗಿಯು ಕೋವಿಡ್-19ನಿಂದ ಚೇತರಿಸಿಕೊಂಡ ಕೂಡಲೇ ಹಲ್ಲುಜ್ಜುವ ಬ್ರಶ್ ಮತ್ತು ಟಂಗ್ ಕ್ಲೀನರ್ ಇತ್ಯಾದಿಗಳನ್ನು ಬದಲಾಯಿಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇವುಗಳಲ್ಲಿ ವೈರಾಣುಗಳು ಅಡಗಿರಬಹುದು, ಹೀಗಾಗಿ ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂಬುದಾಗಿ ಅವರು ಹೇಳುತ್ತಾರೆ.
ನಾವು ಇನ್ನು ಕೂಡ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸುತ್ತಿದ್ದು, ಹೊಸ ಹೊಸ ರೂಪಾಂತರಿಗಳನ್ನು ಪತ್ತೆಯಾಗುತ್ತಲೇ ಇವೆ. ಹೀಗಾಗಿ ಈ ವೈರಾಣುವಿನ ಪ್ರಸರಣವನ್ನು ತಡೆಯಲು ಎಲ್ಲ ರೀತಿಗಳಲ್ಲಿಯೂ ಸಹಕರಿಸಬೇಕಾದದ್ದು ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಜವಾಬ್ದಾರಿಯಾಗಿದೆ.
ನಾವು ಕೋವಿಡ್-19 ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ತತ್‌ಕ್ಷಣ ನಮ್ಮ ಹಲ್ಲುಜ್ಜುವ ಬ್ರಶ್ ಮತ್ತು ಟಂಗ್ ಕ್ಲೀನರ್ ಇತ್ಯಾದಿಗಳನ್ನು ಬದಲಾಯಿಸಿಕೊಳ್ಳುವುದು ನಮ್ಮ ಕುಟುಂಬದವರು ಮತ್ತು ನಿಕಟವರ್ತಿಗಳನ್ನು ಸೋಂಕಿನಿಂದ ಕಾಪಾಡುವಲ್ಲಿ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ.
-ಡಾ| ಆನಂದದೀಪ್ ಶುಕ್ಲಾ
ಅಸೋಸಿಯೇಟ್ ಪ್ರೊಫೆಸರ್
ಮಣಿಪಾಲ ದಂತವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ, ಮಾಹೆ, ಮಣಿಪಾಲ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.