Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?


Team Udayavani, Dec 1, 2024, 11:32 AM IST

6-surgery

ನೀವು ಯಾವುದೇ ವೈದ್ಯರನ್ನು ಭೇಟಿಯಾಗುವ ಸಂದರ್ಭದಲ್ಲಿ ಅವರ ಬಳಿ ಸರಿಯಾದ ಪ್ರಶ್ನೆಗಳನ್ನೇ ಕೇಳುವುದು ಬಹಳ ಮುಖ್ಯವಾದುದು. ವೈದ್ಯರ ಜತೆಗೆ ಸಮಾಲೋಚನೆಗಳು ಅನೇಕ ಬಾರಿ ಈ ಹಿಂದೆಯೇ ಮಾಡಿಕೊಂಡ ಊಹೆಗಳ ಆಧಾರದಲ್ಲಿ ಮತ್ತು ಬಹುತೇಕ ಬಾರಿ ಅರೆಬರೆ ತಿಳಿವಳಿಕೆ ಅಥವಾ ತಪ್ಪು ಮೂಲಗಳಿಂದ ಪಡೆದ ಮಾಹಿತಿಗಳ ಆಧಾರದಲ್ಲಿ ನಡೆಯುತ್ತದೆ. ವೈದ್ಯರತ್ತ ತೂರಿ ಬರುವ ಕೆಲವು ಪ್ರಶ್ನೆಗಳನ್ನು ಉದಾಹರಿಸುವುದಾದರೆ, ಯಾಕೆ ಈ ಸಮಸ್ಯೆ ಉಂಟಾಗಿದೆ? ಇದಕ್ಕೇನು ಕಾರಣ? ಇದೊಂದು ದೊಡ್ಡ ಅನಾರೋಗ್ಯವೇ? ಇದು ಸಂಪೂರ್ಣವಾಗಿ ಗುಣವಾಗುತ್ತದೆಯೇ? ಇದಕ್ಕೆ ಔಷಧ ಸಾಕಾ ಅಥವಾ ಶಸ್ತ್ರಚಿಕಿತ್ಸೆ ಬೇಕಾ? – ಇತ್ಯಾದಿ.

ನಾವೊಂದು ತರಕಾರಿ ಮಾರಾಟಗಾರನ ಬಳಿ ಹೋದಾಗ ಅತ್ಯಂತ ಸೂಕ್ತವಾದ ಪ್ರಶ್ನೆಗಳನ್ನೇ ಕೇಳುತ್ತೇವೆ ಮತ್ತು ಗುಣಮಟ್ಟ ಮತ್ತು ಯೋಗ್ಯವಾದ ಬೆಲೆಯ ವಿಷಯದಲ್ಲಿ ಸರಿಯಾಗಿ ವ್ಯವಹಾರ ಕುದುರಿಸುವ ನಿರೀಕ್ಷೆಯಿಂದ ಯಾವುದೇ ಹಿಂಜರಿಕೆ ಇಲ್ಲದೆ ಪ್ರಶ್ನಿಸುತ್ತೇವೆ. ನಾವು ವ್ಯವಹರಿಸುತ್ತಿರುವ ವಸ್ತು-ವಿಷಯದ ಬಗ್ಗೆ ನಮಗೆ ಸ್ಪಷ್ಟ ತಿಳಿವಳಿಕೆ ಇದ್ದಾಗ ಪ್ರಶ್ನೆಗಳು ಹೆಚ್ಚು ನಿಖರ ಮತ್ತು ಸ್ಪಷ್ಟವಾಗಿರುತ್ತವೆ.

ವೈದ್ಯರ ಭೇಟಿಯ ಸಂದರ್ಭದಲ್ಲಿ ಅತ್ಯಂತ ಮುಖ್ಯವಾಗಿ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ವಿಷಯ ಏನೆಂದರೆ, ವೈದ್ಯರು ಹೇಳುವುದನ್ನು ಯಾವುದೇ ಪೂರ್ವಾಗ್ರಹ ಇಲ್ಲದೆ ಸಂಪೂರ್ಣವಾಗಿ, ಸರಿಯಾಗಿ ಕೇಳಿಸಿಕೊಳ್ಳುವುದು. ಇಷ್ಟರಿಂದಲೇ ನಿಮಗೆ ಅಗತ್ಯವಾದ ಅನೇಕ ಮಾಹಿತಿಗಳು ಸಿಗಬಲ್ಲವು. ಹೀಗಾಗಿ ಗುಣ ಹೊಂದುವುದು ಅಥವಾ ಚಿಕಿತ್ಸೆಯ ವಿಚಾರದಲ್ಲಿ ನಿಮ್ಮ ಸಂದೇಹಗಳನ್ನು ಪೂರ್ಣವಾಗಿ ಪರಿಹರಿಸಿಕೊಳ್ಳಬೇಕಾದರೆ ಸರಿಯಾದ ಪ್ರಶ್ನೆಗಳನ್ನು ಕೇಳುವುದು ಅತ್ಯಂತ ಮುಖ್ಯ. ಯಾವುದೇ ಅನಾರೋಗ್ಯಕ್ಕೆ ಆಪರೇಶನ್‌ ನಡೆಸಬೇಕಾಗಿರುವ ಸಂದರ್ಭದಲ್ಲಿ ಸ್ಪಷ್ಟ ಚಿತ್ರಣ ಪಡೆಯಲು ಮತ್ತು ಸಮರ್ಪಕವಾದ ನಿರ್ಧಾರಕ್ಕೆ ಬರಲು ಈ ಪ್ರಶ್ನೆಗಳನ್ನು ಕೇಳಬೇಕಿದೆ.

1. ಗುಣ ಹೊಂದುವುದಕ್ಕಾಗಿ ಎಲ್ಲ ಅನಾರೋಗ್ಯಗಳಿಗೂ ಸರ್ಜರಿ ಅಗತ್ಯವೇ? ಸ್ಥೂಲವಾಗಿ ಉತ್ತರಿಸುವುದಾದರೆ “ಇಲ್ಲ’ ಎಂದೇ ಹೇಳಬೇಕು. ಈಗ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ, “ನನಗೇಕೆ ಆಪರೇಶನ್‌ ಬೇಕು?’. ಯಾವುದೇ ರೋಗವನ್ನು ನಿಖರವಾಗಿ ಪತ್ತೆ ಮಾಡಿದ ಬಳಿಕ ವೈದ್ಯರು ತೆಗೆದುಕೊಳ್ಳುವ ಮುಂದಿನ ನಿರ್ಧಾರ ಅದನ್ನು ನಿಭಾಯಿಸಲು ಯಾವ ವಿಧವಾದ ಚಿಕಿತ್ಸೆಯ ಆಯ್ಕೆಯನ್ನು ಪರಿಗಣಿಸಬೇಕು ಎಂಬ ವಿಷಯದಲ್ಲಿಯೇ ಆಗಿರುತ್ತದೆ. ಪ್ರತೀ ಆರೋಗ್ಯ ಸಮಸ್ಯೆಯ ವಿಷಯದಲ್ಲಿ ವೈದ್ಯರು ಕೂಲಂಕಷವಾದ ವಿಶ್ಲೇಷಣೆಯನ್ನು ನಡೆಸಿ ಅದರ ಆಧಾರದಲ್ಲಿ ಶಸ್ತ್ರಚಿಕಿತ್ಸೆ ಬೇಕೇ – ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅನಾರೋಗ್ಯವೊಂದಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕೇ -ಬೇಡವೇ ಎಂಬ ನಿರ್ಧಾರವು ಶಸ್ತ್ರಚಿಕಿತ್ಸಕರ ವಾಸ್ತವಿಕ ವಿಶ್ಲೇಷಣೆ ಹಾಗೂ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಾಹಿತ್ಯದ ಸಲಹೆ, ಶಿಫಾರಸುಗಳ ಆಧಾರದಲ್ಲಿ ನಡೆಯುತ್ತದೆ. ವೈದ್ಯರು ಸರ್ಜರಿಯ ಆಯ್ಕೆಯನ್ನು ಪರಿಗಣಿಸುವುದಕ್ಕೆ ಮುನ್ನ ಇನ್ಯಾವುದೇ ಚಿಕಿತ್ಸಾ ವಿಧಾನಗಳು ಇವೆಯೇ, ಸೂಕ್ತವೇ ಎಂಬ ಬಗ್ಗೆ ಚರ್ಚೆ, ಸಮಾಲೋಚನೆಗಳನ್ನು ನಡೆಸುತ್ತಾರೆ. ಇತರ ಆಯ್ಕೆಗಳು ಇದ್ದರೆ ಅದರ ಮಿತಿಗಳು ಮತ್ತು ಪ್ರಯೋಜನಗಳ ಬಗೆಗೂ ಚರ್ಚಿಸಲಾಗುತ್ತದೆ. ಇಷ್ಟಾದ ಬಳಿಕ ಸರ್ಜನ್‌ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ರೋಗಿಗೆ ಆ ಬಗ್ಗೆ ಇರುವ ಸಂಶಯಗಳು, ಪ್ರಶ್ನೆಗಳನ್ನು ಸಂಪೂರ್ಣವಾಗಿ ನಿವಾರಿಸುವಂತೆ ವಿವರಿಸಲು ಶಕ್ತರಾಗಿರುತ್ತಾರೆ.

2. ಶಸ್ತ್ರಚಿಕಿತ್ಸೆಯ ಸಮಯ?

ಇದೇನೂ ಜ್ಯೋತಿಷವನ್ನು ಆಧರಿಸಿ ನಿರ್ಧಾರವಾಗುವುದಿಲ್ಲ. ಆದರೂ ಸರ್ಜನ್‌ ಈ ವಿಷಯದಲ್ಲಿ ರೋಗಿಯ ಅಭಿಪ್ರಾಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಸರ್ಜರಿಯ ಸಮಯ ಎಂದರೆ, ರೋಗಿ ಯಾವಾಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂಬುದೇ ಆಗಿದೆ. ಅಂದರೆ ತತ್‌ಕ್ಷಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೇ ಅಥವಾ ವಿಳಂಬಿಸಬಹುದೇ ಎಂಬ ಪ್ರಶ್ನೆ. ಇತರ ಚಿಕಿತ್ಸಾ ವಿಧಾನಗಳಿಗೆ ಹೋಲಿಸಿದರೆ ಶಸ್ತ್ರಚಿಕಿತ್ಸೆಯ ಮಹತ್ವ ಹೆಚ್ಚಿನದಾಗಿದ್ದರೂ ಶಸ್ತ್ರಚಿಕಿತ್ಸೆಗಳನ್ನು ತುರ್ತು ಆಪರೇಶನ್‌ ಮತ್ತು ಆಯ್ಕೆಯ ಆಪರೇಶನ್‌ ಎಂಬ ಎರಡು ವಿಧಗಳಾಗಿ ಪರಿಗಣಿಸಲಾಗುತ್ತದೆ. ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಶಸ್ತ್ರಕ್ರಿಯಾತ್ಮಕ ಚಿಕಿತ್ಸೆಯನ್ನು ರೋಗಪತ್ತೆಯಾದ ಕೆಲವೇ ತಾಸುಗಳಲ್ಲಿ ನಡೆಸಬೇಕಿರುತ್ತದೆ. ಆಯ್ಕೆಯ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಎಷ್ಟು ಕಾಲದ ವರೆಗೆ ಕಾಯಬಹುದು ಎಂಬುದನ್ನು ರೋಗಿ ಕೇಳಿ ತಿಳಿದುಕೊಳ್ಳಬಹುದಾಗಿರುತ್ತದೆ. ಕೆಲವು ರೋಗಗಳ ಸಂದರ್ಭದಲ್ಲಿ ಉತ್ತಮ ಫ‌ಲಿತಾಂಶ ಪಡೆಯಲು ರೋಗಿಯ ದೇಹಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಕಾಯಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸರ್ಜನ್‌ ರೋಗಿಯು ಶಸ್ತ್ರಚಿಕಿತ್ಸೆಗೆ ವೈದ್ಯಕೀಯವಾಗಿ ಸಜ್ಜುಗೊಳ್ಳುವುದಕ್ಕಾಗಿ ಇತರ ಆರೈಕೆಗಳನ್ನು ಒದಗಿಸುತ್ತ ಶಸ್ತ್ರಚಿಕಿತ್ಸೆಯನ್ನು ಸ್ವತಃ ವಿಳಂಬಿಸಬಹುದು. ಕೆಲವು ನಿರ್ದಿಷ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದಕ್ಕೆ ಮುನ್ನ ಕೆಲವು ಮಧ್ಯಾಂತರ ಚಿಕಿತ್ಸೆಗಳನ್ನು ಒದಗಿಸಬೇಕಾದ ಅಗತ್ಯವಿರುತ್ತದೆ. ಇಂತಹ ವಿಳಂಬಗಳನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಫ‌ಲಿತಾಂಶವನ್ನು ಉತ್ತಮಪಡಿಸುವುದಕ್ಕಾಗಿ ಮಾಡಲಾಗುತ್ತದೆ.

ಯಾವ ರೀತಿಯ ಸರ್ಜರಿ? ಇದು ನಡೆಸಲಾಗುವ ಶಸ್ತ್ರಚಿಕಿತ್ಸೆಯ ರೀತಿ ಹೇಗಿರುತ್ತದೆ ಎಂಬುದಕ್ಕೆ ಸಂಬಂಧಿಸಿದ್ದು. ಹೊಟ್ಟೆಯ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನಿಮ್ಮ ಸರ್ಜನ್‌ರ ಬತ್ತಳಿಕೆಯಲ್ಲಿ ತೆರೆದ, ಲ್ಯಾಪರೊಸ್ಕೋಪಿಕ್‌ ಹಾಗೂ ಅತ್ಯಾಧುನಿಕವಾದ ರೊಬೋಟಿಕ್‌ ಸರ್ಜರಿಯಂತಹವು ಇರಬಹುದು. ಆಯಾ ರೀತಿಯ ಲಭ್ಯತೆ, ಕಾರ್ಯಸಾಧ್ಯತೆ, ನಿರ್ದಿಷ್ಟ ಅನುಕೂಲಗಳು ಮತ್ತು ಸಮಸ್ಯೆಗಳು ಹಾಗೂ ಖರ್ಚುವೆಚ್ಚದ ಆಧಾರದಲ್ಲಿ ಯಾವ ರೀತಿ ಅತ್ಯಂತ ಸೂಕ್ತ ಎಂಬುದನ್ನು ನಿರ್ಧರಿಸಲಾಗುತ್ತದೆ. ಸರ್ಜನ್‌ ನಿಮಗೆ ಯಾವ ರೀತಿಯ ಸರ್ಜರಿ ಎಂಬುದನ್ನು ವಿವರಿಸಿರುತ್ತಾರೆಯೋ ಅದನ್ನೇ ನಡೆಸುತ್ತಾರೆ. ಒಂದು ನಿರ್ದಿಷ್ಟ ಸ್ಥಳವನ್ನು ಬಸ್‌, ರೈಲು ಅಥವಾ ವಿಮಾನದಲ್ಲಿ ತಲುಪಿದಂತೆಯೇ ಇದು; ಗುರಿ ಒಂದೇ – ರೀತಿ ಮಾತ್ರ ಬೇರೆ ಬೇರೆ.

ಯಶಸ್ವಿಯೋ ಅಥವಾ ವಿಫ‌ಲವೋ? ಯಾವುದೇ ಶಸ್ತ್ರಚಿಕಿತ್ಸೆಯನ್ನು ಅದರ ಅಪಾಯಗಳು ಮತ್ತು ಪ್ರಯೋಜನಗಳನ್ನು ಸವಿವರವಾಗಿ ಪರಿಗಣಿಸಿಯೇ ಆಯ್ದುಕೊಳ್ಳಲಾಗಿರುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸುವುದಕ್ಕೆ ಮುನ್ನ ಅದು ಯಶಸ್ವಿಯಾಗುವ ಅಥವಾ ವಿಫ‌ಲವಾಗುವ ಸಾಧ್ಯತೆಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಶಸ್ತ್ರಚಿಕಿತ್ಸೆಯ ಲಾಭ – ನಷ್ಟಗಳ ಬಗ್ಗೆ ಸರ್ಜನ್‌ ನಿಮಗೆ ವಿವರಿಸುತ್ತಾರೆ. ಯಾವುದೇ ಒಂದು ಶಸ್ತ್ರಚಿಕಿತ್ಸೆಯ ಬಗ್ಗೆ ರೋಗಿಗೆ ವಿವರಿಸುವಾಗ ಸಾಮಾನ್ಯವಾಗಿ ಈ ಪ್ರಾಮುಖ್ಯವಾದ ಪ್ರಶ್ನೆಯನ್ನು ಬಿಟ್ಟು ಬಿಡುತ್ತಾರೆ ಅಥವಾ ಅದು ನಿರ್ಲಕ್ಷಿಸಲ್ಪಟ್ಟಿರುತ್ತದೆ. ಶಸ್ತ್ರಚಿಕಿತ್ಸೆ ಸಣ್ಣ ಮಟ್ಟದ್ದಾಗಿರಲಿ ಅಥವಾ ದೊಡ್ಡ ಮಟ್ಟದ್ದಾಗಿರಲಿ; ಒಂದಲ್ಲ ಒಂದು ಸಂಕೀರ್ಣ ಸಮಸ್ಯೆಯನ್ನು ಉಂಟು ಮಾಡುವ ಅಪಾಯ ಇದ್ದೇ ಇರುತ್ತದೆ ಎಂಬ ತಿಳಿವಳಿಕೆ ಇರಬೇಕು. ನಡೆಯಲು ಕಲಿಯುವ ಶಿಶು ಬೀಳುವುದು ಸಹಜ; ಆದರೆ ಬೀಳುತ್ತದೆ ಎಂಬುದು ನಡೆಯಲು ಕಲಿಯುವುದಕ್ಕೆ ಅಡ್ಡಿಯಾಗಬಾರದು. ಆದ್ದರಿಂದ ಶಸ್ತ್ರಚಿಕಿತ್ಸೆಯಿಂದ ಉಂಟಾಗಬಹುದಾದ ಸಂಕೀರ್ಣ ಸಮಸ್ಯೆಗಳು, ಲಾಭ-ನಷ್ಟಗಳ ಬಗ್ಗೆ ಸರ್ಜನ್‌ ಮತ್ತು ರೋಗಿಯ ನಡುವೆ ಸವಿವರವಾದ ಸಮಾಲೋಚನೆ ನಡೆದಿರಬೇಕು. ಈ ಅಂಶವು ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ರೋಗಿ ಮತ್ತು ಸರ್ಜನ್‌ ನಡುವೆ ನಡೆಯುವ ಸಮಾಲೋಚನೆಯ ಪ್ರಾಮುಖ್ಯ ಭಾಗವಾಗಿರಬೇಕು.

ಶಸ್ತ್ರಚಿಕಿತ್ಸೆಯ ಪ್ರಾಮುಖ್ಯ ಅಂಶಗಳ ಬಗ್ಗೆ ರೋಗಿ ಮತ್ತು ಅವರ ಕುಟುಂಬದವರು ಸಂಪೂರ್ಣವಾದ ತಿಳಿವಳಿಕೆಯನ್ನು ಹೊಂದಿರುವುದು ಅತ್ಯಂತ ಅಗತ್ಯವಾಗಿದೆ. ಇದರಿಂದ ಆತಂಕ, ಅಂಜಿಕೆಗಳು ಸಾಕಷ್ಟು ಮಟ್ಟಿಗೆ ದೂರವಾಗುತ್ತವೆ ಮತ್ತು ಯಾವುದೇ ಶಸ್ತ್ರಚಿಕಿತ್ಸೆಯ ಬಗ್ಗೆ ಸ್ಪಷ್ಟ ಚಿತ್ರಣವನ್ನು ಒದಗಿಸುವ ಸಮಾಲೋಚನೆಯು ರೋಗಿ ಗುಣ ಹೊಂದುವುದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಿಕೊಡುತ್ತದೆ ಎಂಬುದನ್ನು ಅಧ್ಯಯನಗಳು ಕೂಡ ದೃಢಪಡಿಸಿವೆ. ಬಹುತೇಕ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಖರ್ಚುವೆಚ್ಚಗಳ ಬಗೆಗಿನ ಚರ್ಚೆಯ ಪ್ರಧಾನ ಭಾಗವಾಗಿರುತ್ತದೆ; ಆದರೆ ನಿಜವಾಗಿಯೂ ಅದು ಮೇಲೆ ಹೇಳಲಾದ ವಿಷಯಗಳ ಸಮಗ್ರ ವಿವರಣೆ, ಸಮಾಲೋಚನೆಯ ಬಳಿಕ ನಡೆಯಬೇಕಾದ ಅಂಶವಾಗಿದೆ. ವ್ಯಕ್ತಿಯ ಆರೋಗ್ಯ ಸಮಸ್ಯೆಗೆ ವೈದ್ಯರು ಶಿಫಾರಸು ಮಾಡುವ ಪರಿಹಾರದ ಜತೆಗೆ ಅದರಿಂದ ಉಂಟಾಗಬಹುದಾದ ಸ್ವಲ್ಪ ಪ್ರಮಾಣದ ತೊಂದರೆಯ ಕುರಿತಾಗಿಯೂ ಹೇಳಿದ್ದರೆ ಅದು ಪಾರದರ್ಶಕತೆಯ ಸಂಕೇತವಷ್ಟೇ ವಿನಾ ಬೇರಿನ್ನೇನೂ ಅಲ್ಲ. ಶಸ್ತ್ರಚಿಕಿತ್ಸೆಯ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ತಮಗೆ ಏನಾಗಲಿದೆ ಮತ್ತು ಯಾಕೆ ಎಂಬುದನ್ನು ತಿಳಿಯುವ ಹಕ್ಕನ್ನು ಹೊಂದಿರುತ್ತಾರೆ. ಸರಿಯಾದ ಪ್ರಶ್ನೆಯನ್ನು ಕೇಳಿ ಸಮರ್ಪಕ ಮತ್ತು ಸೂಕ್ತವಾದ ಉತ್ತರವನ್ನು ಪಡೆಯುವುದೇ ಇವೆಲ್ಲದರ ಒಟ್ಟು ಹೂರಣವಾಗಿದೆ.

-ಡಾ| ಭರತ್‌ಕುಮಾರ್‌ ಭಟ್‌

ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ಇನ್‌ಚಾರ್ಜ್‌ ಹೆಡ್‌

ಸರ್ಜಿಕಲ್‌ ಗ್ಯಾಸ್ಟ್ರೊಎಂಟರಾಲಜಿ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Vimana 2

Air India Express; ಮಂಗಳೂರು-ಪುಣೆ ನೇರ ವಿಮಾನ ಆರಂಭ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.