‘ಸಣ್ಣ ಕಡಿತದ ಬಗೆಗೂ ಎಚ್ಚರದಿಂದಿರಿ’- ವಿಶ್ವ ಪ್ರಾಣಿಜನ್ಯ ರೋಗ ದಿನ


Team Udayavani, Jul 10, 2022, 12:25 PM IST

3

ಪ್ರತೀ ವರ್ಷ ನಾವು ಶ್ರೇಷ್ಠ ವಿಜ್ಞಾನಿ ಲೂಯಿಸ್‌ ಪ್ಯಾಶ್ಚರ್‌ ಅವರ ಗೌರವಾರ್ಥ ಜುಲೈ 6ರಂದು ವಿಶ್ವ ಪ್ರಾಣಿಜನ್ಯ ರೋಗ ದಿನವನ್ನು ಆಚರಿಸುತ್ತೇವೆ. ಪ್ರಾಣಿಜನ್ಯ ರೋಗಗಳಲ್ಲಿ ಒಂದಾಗಿರುವ ರೇಬಿಸ್‌ ವಿರುದ್ಧ 1885ರಲ್ಲಿ ಮೊತ್ತ ಮೊದಲನೆಯ ಲಸಿಕೆಯನ್ನು ಆವಿಷ್ಕರಿಸಿದವರು ಲೂಯಿಸ್‌ ಪ್ಯಾಶ್ಚರ್‌. ಪ್ರಾಣಿಜನ್ಯ ಕಾಯಿಲೆಗಳು ಅಥವಾ “ಝೂನೋಸಸ್‌’ ಎಂದರೆ “ಇತರ ಕಶೇರುಕ ಪ್ರಾಣಿಗಳು ಮತ್ತು ಮಾನವನ ನಡುವೆ ನೈಸರ್ಗಿಕವಾಗಿ ಪ್ರಸಾರವಾಗುವ ಕಾಯಿಲೆಗಳು ಮತ್ತು ಸೋಂಕುಗಳು’ ಎಂದರ್ಥ.

ಪ್ರಾಣಿಗಳಿಂದ ಹರಡುವ ರೋಗಕಾರಕ ಸೂಕ್ಷ್ಮಜೀವಿಗಳು ಬ್ಯಾಕ್ಟೀರಿಯಾ, ವೈರಾಣು ಅಥವಾ ಪರೋಪಜೀವಿಗಳಾಗಿರಬಹುದು ಅಥವಾ ಇತರ ಯಾವುದೇ ಅಸಾಂಪ್ರದಾಯಿಕ ಏಜೆಂಟ್‌ಗಳಾಗಿರಬಹುದು ಹಾಗೂ ಪ್ರಾಣಿಗಳ ನೇರ ಸಂಪರ್ಕ ಅಥವಾ ಆಹಾರ, ನೀರು ಅಥವಾ ಪರಿಸರದಿಂದ ಹರಡಬಹುದು.

ವಿಶ್ವ ಪ್ರಾಣಿಜನ್ಯ ರೋಗ ದಿನವನ್ನು ಪ್ರತೀ ವರ್ಷ ಆಚರಿಸಲಾಗುತ್ತದೆ ಹಾಗೂ ಇದು ಮನುಷ್ಯನ ಆರೋಗ್ಯಕ್ಕೆ ಗಂಭೀರ ಅಪಾಯವನ್ನು ತಂದೊಡ್ಡುವ ಪ್ರಾಣಿಜನ್ಯ ಕಾಯಿಲೆಗಳು ಮತ್ತು ಸೂಕ್ಷ್ಮಜೀವಿಗಳ ಬಗ್ಗೆ ಅರಿವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಈ ದಿನದ ಆಚರಣೆಯು ಪ್ರಾಣಿಜನ್ಯ ಕಾಯಿಲೆಗಳು ಮನುಷ್ಯರ ನಡುವೆ ಹರಡುವುದನ್ನು ತಡೆಯುವುದಕ್ಕೆ ಸಂಬಂಧಿಸಿದ ನಿಯಂತ್ರಕ ಕ್ರಮಗಳು ಮತ್ತು ನಿಗಾ ವ್ಯವಸ್ಥೆಗಳನ್ನು ಬಲಪಡಿಸುವ ಹಾಗೂ ಪ್ರಾಣಿಜನ್ಯ ಕಾಯಿಲೆಗಳು ಹರಡುವುದಕ್ಕೆ ಕಾರಣವಾಗಬಲ್ಲ ಪ್ರಧಾನ ಮೂಲಗಳ ಬಗ್ಗೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ. ಪ್ರಸ್ತುತ ಇರುವ ಕೋವಿಡ್‌-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ದಿನಾಚರಣೆಗೆ ಇನ್ನಷ್ಟು ಮಹತ್ವ ಬಂದಿದೆ.

ಕೋವಿಡ್‌-19 ಸಾಂಕ್ರಾಮಿಕವು “ಮುಂದಿನ ಇನ್ನೊಂದು ಸಾಂಕ್ರಾಮಿಕವನ್ನು ತಡೆಯುವುದು: ಪ್ರಾಣಿಜನ್ಯ ಕಾಯಿಲೆಗಳು ಮತ್ತು ರೋಗ ಪ್ರಸರಣದ ಸರಪಣಿಯನ್ನು ತುಂಡರಿಸುವುದು ಹೇಗೆ’ ಎಂಬ ವರದಿಯ ಪ್ರಕಟನೆಗೆ ಕಾರಣವಾಗಿದೆ. ವಿಶ್ವ ಸಂಸ್ಥೆಯ ಪರಿಸರ ಯೋಜನೆ (ಯುಎನ್‌ಇಪಿ) ಮತ್ತು ಅಂತಾರಾಷ್ಟ್ರೀಯ ಪಶು ಸಂಶೋಧನ ಸಂಸ್ಥೆ (ಐಎಲ್‌ಆರ್‌ಐ)ಗಳು ಜತೆಯಾಗಿ ಈ ವರದಿಯನ್ನು ತಯಾರಿಸಿದ್ದು, ಸಾಂಕ್ರಾಮಿಕಗಳನ್ನು ತಡೆಯುವುದಕ್ಕಾಗಿ ಸರಕಾರಗಳಿಗೆ ಶಿಫಾರಸುಗಳನ್ನು ಹೊಂದಿದೆಯಲ್ಲದೆ, ಪ್ರಾಣಿಜನ್ಯ ಕಾಯಿಲೆಗಳು ಹೆಚ್ಚುವುದಕ್ಕೆ ಕಾರಣಗಳ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ. ಪರಿಸರ ವ್ಯವಸ್ಥೆಯನ್ನು ಸುಸ್ಥಿರವಾಗಿರಿಸುವುದಕ್ಕೆ ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಕಾಯಿಲೆಗಳು ಹರಡುವುದನ್ನು ತಡೆಯುವುದಕ್ಕಾಗಿ ಆರೋಗ್ಯಕರ ಭೂಬಳಕೆಯ ಕ್ರಮಗಳು ಹಾಗೂ ಸುಸ್ಥಿರ ಅಭಿವೃದ್ಧಿ ಕ್ರಮಗಳನ್ನು ಪ್ರವರ್ಧಮಾನಕ್ಕೆ ತರುವ ಗುರಿಯನ್ನು ಈ ದಿನಾಚರಣೆ ಹೊಂದಿದೆ.

ಮನುಷ್ಯರಲ್ಲಿ ಈಗಾಗಲೇ ಕಂಡುಬರುತ್ತಿರುವ ಕಾಯಿಲೆಗಳು ಮತ್ತು ಅನೇಕ ಹೊಸ ಕಾಯಿಲೆಗಳಲ್ಲಿ ಬಹುಪಾಲು ಪ್ರಾಣಿಜನ್ಯ ಕಾಯಿಲೆಗಳಲ್ಲಿ ಸೇರಿವೆ. ಜಾಗತಿಕವಾಗಿ 200ಕ್ಕೂ ಹೆಚ್ಚು ಪ್ರಾಣಿಜನ್ಯ ಕಾಯಿಲೆಗಳನ್ನು ಗುರುತಿಸಲಾಗಿದೆ. ನೈಸರ್ಗಿಕ ಪರಿಸರದಲ್ಲಿ, ಒಡನಾಡಿಗಳಾಗಿ ಮತ್ತು ಕೃಷಿಯಲ್ಲಿ ಪ್ರಾಣಿಗಳ ಜತೆಗೆ ನಮ್ಮ ಸಂಬಂಧ ಅತ್ಯಂತ ನಿಕಟವಾಗಿರುವುದರಿಂದ ಇತ್ತೀಚೆಗಿನ ವರ್ಷಗಳಲ್ಲಿ ಪ್ರಾಣಿಜನ್ಯ ಕಾಯಿಲೆಗಳು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಬೆಳೆದು ನಿಂತಿವೆ. ತೀವ್ರವಾದ ಪಶುಸಾಕಣೆ ಮತ್ತು ಕೃಷಿ, ಅಪೂರ್ವ ಪ್ರಾಣಿಗಳ ಅಂತಾರಾಷ್ಟ್ರೀಯ ಮಾರಾಟ ಮತ್ತು ಪ್ರಾಣಿಗಳ ಸಹಜ ಅರಣ್ಯ ಆವಾಸಸ್ಥಾನಗಳನ್ನು ನಾವು ಹೆಚ್ಚು ಹೆಚ್ಚು ಅತಿಕ್ರಮಿಸುತ್ತಿರುವುದರ ಜತೆಗೆ ಅಂತಾರಾಷ್ಟ್ರೀಯ ಪ್ರಯಾಣ ಜಾಲಗಳು ಮತ್ತು ನಗರೀಕರಣಗಳು ಮನುಷ್ಯರು- ಪ್ರಾಣಿಗಳು- ಪರಿಸರಗಳ ಸಂಯೋಜನೆಯ ಸಮತೋಲನವನ್ನು ತಪ್ಪಿಸಿವೆ.

ಪ್ರಾಣಿ ಸಂಕುಲದಿಂದ ಮನುಷ್ಯ ಸಂಕುಲದ ಮೇಲೆ ರೋಗಕಾರಕ ಸೂಕ್ಷ್ಮಜೀವಿಗಳ ತುಳುಕಾಟ ಸಾಕಷ್ಟು ದೀರ್ಘ‌ಕಾಲದಿಂದಲೇ ನಡೆಯುತ್ತಿದೆ. ಆದರೆ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ ಮತ್ತು ಪರಿಸರದ ಅತೀವ ಶೋಷಣೆ ಈ ತುಳುಕಾಟವನ್ನು ಹೆಚ್ಚು ಕ್ಷಿಪ್ರವಾಗಿಸಿದೆ ಮತ್ತು ದುಷ್ಪರಿಣಾಮಕಾರಿಯಾಗಿಸಿದೆ. ಪ್ರಾಣಿಜನ್ಯ ವೈರಾಣು ಕಾಯಿಲೆಗಳಲ್ಲಿ ಕಶೇರುಕ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅನೇಕ ರೋಗಗಳು ಒಳಗೊಳ್ಳುತ್ತವೆ. ಈ ಕಾಯಿಲೆಗಳನ್ನು ಸಂವರ್ಧಿಸುವ, ಸಂಗ್ರಹಾಗಾರಗಳಾಗಿ ಹೊಂದಿ ಮನುಷ್ಯರಿಗೆ ಪ್ರಸಾರ ಮಾಡುವ ವೈವಿಧ್ಯಮಯ ಅತಿಥೇಯ ಪ್ರಾಣಿಗಳಿವೆ: ಸಸ್ತನಿಗಳು, ಪಕ್ಷಿಗಳು, ಉಭಯವಾಸಿಗಳು ಮತ್ತು ಉರಗಗಳು ಇವುಗಳಲ್ಲಿ ಸೇರುತ್ತವೆ. ಇದೇವೇಳೆ, ಮನುಷ್ಯೆàತರ ಕಶೇರುಕ ಪ್ರಾಣಿಗಳಲ್ಲಿ ಈ ಪ್ರಾಣಿಜನ್ಯ ಕಾಯಿಲೆಗಳ ತಲೆದೋರುವಿಕೆ ಕನಿಷ್ಠ ಅಥವಾ ಪ್ರತ್ಯಕ್ಷವಾಗಿದ್ದರೆ, ಮನುಷ್ಯರಲ್ಲಿ ಅವುಗಳ ಸೋಂಕು ಮಾರಣಾಂತಿಕವಾಗಬಹುದು ಅಥವಾ ಯಾವುದೇ ಪರಿಣಾಮ ಬೀರದೆಯೂ ಇರಬಹುದು.

ಪ್ರಾಣಿಜನ್ಯ ವೈರಾಣು ಕಾಯಿಲೆಗಳು ಹಲವು ರೀತಿಗಳಲ್ಲಿ ಪ್ರಸಾರವಾಗಬಹುದಾಗಿದೆ: ನೇರ ಸಂಪರ್ಕ – ಸೋಂಕುಪೀಡಿತ ಪ್ರಾಣಿಯ ಜೊಲ್ಲು, ಮೂತ್ರ, ಶ್ಲೇಷ್ಮ, ಮಲ ಅಥವಾ ಇತರ ದೇಹದ್ರವ (ಉದಾಹರಣೆಗೆ, ರೇಬಿಸ್‌)ಗಳು; ಪರೋಕ್ಷ ಸಂಪರ್ಕ- ಪ್ರಾಣಿಗಳು ವಾಸಿಸುವ ಮತ್ತು ತಿರುಗಾಡುವ ಪ್ರದೇಶಗಳ ಸಂಪರ್ಕ, ಜತೆಗೆ ಸೋಂಕುಕಾರಕ ಸೂಕ್ಷ್ಮಜೀವಿಗಳಿಂದ ಕಲುಷಿತವಾಗಿರುವ ವಸ್ತುಗಳು ಅಥವಾ ಮೇಲ್ಮನೆಗಳ ಸಂಪರ್ಕ (ಉದಾಹರಣೆಗೆ, ಹಂಟಾವೈರಸ್‌); ಆಹಾರದಿಂದ ಹರಡುವ ಮತ್ತು ನೀರಿನಿಂದ ಹರಡುವಿಕೆ – ಸೋಂಕುಪೀಡಿತ ಪ್ರಾಣಿಯ ಮಲಮೂತ್ರಗಳಿಂದ ಕಲುಷಿತವಾಗಿರುವ ನೀರು ಅಥವಾ ಆಹಾರವನ್ನು ಸೇವಿಸುವುದು ಯಾ ಸಂಪರ್ಕ (ಉದಾಹರಣೆಗೆ, ಹೆಪಟೈಟಿಸ್‌ ಎ ವೈರಸ್‌); ನೊಸೊಕೋಮಿಯಲ್‌ – ವೈದ್ಯಕೀಯ ಆರೈಕೆ ಪಡೆಯುತ್ತಿರುವಾಗ ಪ್ರಸರಣವಾದ, ಆದರೆ ಆಸ್ಪತ್ರೆಗೆ ದಾಖಲಾದಾಗ ಇರದ ಸೋಂಕು (ಉದಾಹರಣೆಗೆ, ಹೆಪಟೈಟಿಸ್‌ ಎ ವೈರಸ್‌); ಹನಿಬಿಂದು ಪ್ರಸರಣ – ಸೋಂಕುಪೀಡಿತ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಅಥವಾ ಭಾರೀ ಉಸಿರಾಟ ನಡೆಸುವಾಗ ಹೊರಬೀಳುವ ವೈರಾಣು ಸಹಿತ ಶ್ವಾಸಕೋಶೀಯ ಹನಿಬಿಂದುಗಳ ಮೂಲಕ ಪ್ರಸರಣ (ಸಾರ್ಸ್‌ ಕೊರೊನಾ ವೈರಸ್‌); ರೋಗವಾಹಕ ಆಶ್ರಿತ – ಅಥವಾ ಸಂಧಿಪದಿ ಆಶ್ರಿತ – ಉಣ್ಣಿಯ ಕಡಿತ ಅಥವಾ ಸೊಳ್ಳೆ ಅಥವಾ ಚಿಗಟದಂತಹ ಕೀಟಗಳ ಕಡಿತದಿಂದ ಪ್ರಸರಣ (ಉದಾಹರಣೆಗೆ, ಡೆಂಗ್ಯು ವೈರಸ್‌, ಜೆಇವಿ, ಕೆಎಫ್ಡಿ ಅಥವಾ ಮಂಗನ ಕಾಯಿಲೆ ವೈರಸ್‌ ಮತ್ತು ಹಳದಿ ಜ್ವರ ವೈರಸ್‌).

ಕಳೆದ ಶತಮಾನಗಳ ಅವಧಿಯಲ್ಲಿ ಉಂಟಾಗಿರುವ ಪ್ರಾಣಿಜನ್ಯ ಕಾಯಿಲೆಗಳ ಹಾವಳಿಗಳ ದಾಖಲೀಕರಣ ಮತ್ತು ವಿಶ್ಲೇಷಣೆಯ ಬಳಿಕ ವಿಜ್ಞಾನಿಗಳು ಅವುಗಳ ನಡುವೆ ಇರುವ ಕೆಲವು ಗುಣಲಕ್ಷಣ ಸಮಾನತೆಗಳನ್ನು ಗುರುತಿಸಲು ಶಕ್ತರಾಗಿದ್ದಾರೆ. ಅವುಗಳೆಂದರೆ, ಈ ಪ್ರಾಣಿಜನ್ಯ ವೈರಸ್‌ಗಳು ಆರ್‌ಎನ್‌ಎಯನ್ನು ವಂಶವಾಹಿ ವಸ್ತುವಾಗಿ ಹೊಂದಿರುತ್ತವೆ, ನೇರ ಅಥವಾ ಪರೋಕ್ಷ ಸಂಪರ್ಕದಿಂದ ಈ ವೈರಸ್‌ ಗಳು ಮನುಷ್ಯ ಕುಲಕ್ಕೆ ದಾಟುವುದಕ್ಕೆ ಶೇ. 91ರಷ್ಟು ಪ್ರಮಾಣದಲ್ಲಿ ವನ್ಯಜೀವಿಗಳೇ ಕಾರಣವಾಗಿರುತ್ತವೆ, ಈ ವೈರಾಣುಗಳ ಆವಾಸಸ್ಥಾನಗಳಾಗಿ ವೈವಿಧ್ಯಮಯ ಸಾಕು ಪ್ರಾಣಿಗಳು, ವಿವಿಧ ವರ್ಗ ಮತ್ತು ಪ್ರಭೇದಗಳ ವನ್ಯಜೀವಿಗಳು ಮತ್ತು ಮನುಷ್ಯರೂ ಇರುತ್ತಾರೆ, ಈ ವಿದ್ಯಮಾನವನ್ನು “ಅತಿಥೇಯ ನಮನೀಯತೆ – ಹೋಸ್ಟ್‌ ಪ್ಲಾಸ್ಟಿಸಿಟಿ’ ಎಂಬುದಾಗಿ ಕರೆಯಲಾಗುತ್ತದೆ.

ಈಗ ನಾವೊಂದು ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಇದ್ದೇವೆ; ಮುಂದೆ ಇನ್ನಷ್ಟು ಬೃಹತ್ತಾದ ಆರೋಗ್ಯ ಅಪಾಯಗಳು ಉಂಟಾಗದಂತೆ ಸಕ್ರಿಯರಾಗಿ ಕಾರ್ಯಪ್ರವೃತ್ತರಾಗಲು ಇದು ಸುಸಮಯವಾಗಿದೆ. ಸಾಂಕ್ರಾಮಿಗಳ ಹಾವಳಿಯನ್ನು ತಡೆಗಟ್ಟಲು ಒಂದೇ ಗುರಿಯತ್ತ ಕಾರ್ಯಪ್ರವೃತ್ತರಾಗಿರುವ ವಿವಿಧ ಸಮೂಹಗಳು ಮತ್ತು ಸಹಭಾಗಿಗಳ ಸಾಮೂಹಿಕ ಪ್ರಯತ್ನ ಅಗತ್ಯವಾಗಿದೆ.

ಪ್ರಾಣಿ, ಮನುಷ್ಯ ಮತ್ತು ಪರಿಸರದ ಆರೋಗ್ಯದ ಬಗೆಗಿನ ಭಯವು “ಒಂದು ಆರೋಗ್ಯ’ ಎಂಬ ಪರಿಕಲ್ಪನೆಯನ್ನು ಆಧರಿಸಿದೆ. ಪ್ರಾಣಿಜನ್ಯ ಕಾಯಿಲೆಗಳ ಹಾವಳಿಗಳನ್ನು ಪ್ರಾಣಿ ಮತ್ತು ಮನುಷ್ಯ ಕುಲವೆರಡರಲ್ಲಿಯೂ ತಡೆಯುವುದು, ಆಹಾರದ ಸುರಕ್ಷೆ ಮತ್ತು ಭದ್ರತೆಯನ್ನು ಹೆಚ್ಚಿಸುವುದು, ಆ್ಯಂಟಿಬಯೋಟಿಕ್‌ ಪ್ರತಿರೋಧ ಗುಣವುಳ್ಳ ಅನಾರೋಗ್ಯಗಳನ್ನು ಕಡಿಮೆ ಮಾಡುವ ಮೂಲಕ ಮನುಷ್ಯ ಮತ್ತು ಪ್ರಾಣಿ ಆರೋಗ್ಯವನ್ನು ಉತ್ತಮಪಡಿಸುವುದು ಈ ಕಾರ್ಯವಿಧಾನದಲ್ಲಿ ಸೇರಿದೆ. ಇದಲ್ಲದೆ, ಅಯೋಜಿತವಾದ ಮತ್ತು ಅನಿಯಂತ್ರಿತವಾದ ಅರಣ್ಯ ಭೂಮಿಯ ಬಳಕೆಯಿಂದ ಪ್ರಾಣಿಜನ್ಯ ಮತ್ತು ರೋಗವಾಹಕ ಆಶ್ರಿತ ರೋಗಗಳು ಉಂಟಾಗುವುದು ಹೆಚ್ಚುತ್ತದೆ, ಇವು ಅನಾಹುತಕಾರಿ ಸಾಂಕ್ರಾಮಿಕಗಳಾಗುವ ಸಾಧ್ಯತೆಯೂ ಅಧಿಕ.

ವನ್ಯಭೂಮಿ ಮತ್ತು ವನ್ಯ ಸಂಪನ್ಮೂಲಗಳ ಬಳಕೆಯ ಸಂದರ್ಭದಲ್ಲಿ ಇದನ್ನು ಆದ್ಯತೆಯ ನೆಲೆಯಲ್ಲಿ ಗಮನಿಸಬೇಕಾಗಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಪ್ರಸಾರವಾಗಬಲ್ಲ ಕಾಯಿಲೆಗಳ ಜಾಡು ಹಿಡಿಯುವುದಕ್ಕೆ ಮತ್ತು ಪರಿಸರದ ಬಗ್ಗೆ ಹೇಗೆ ನಿಗಾ ಹೊಂದಿರಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದಕ್ಕೆ ಇದು ಸಕಾಲ. ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದನ್ನು ತಪ್ಪಿಸುವುದಕ್ಕಾಗಿ ನಾವು ಹಲವು ಸ್ತರದ ಸರ್ವೇಕ್ಷಣ ವೇದಿಕೆಗಳನ್ನು, ಸಶಕ್ತ ಪ್ರಯೋಗಾಲಯಗಳನ್ನು ಹಾಗೂ ಪ್ರಾಣಿ ಮತ್ತು ಮನುಷ್ಯರ ಕಾಯಿಲೆಗಳನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆಯನ್ನು ಹೊಂದಿರಬೇಕಾಗಿದೆ.

ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ (ಎಂಐವಿ)ಯು ಪ್ರತೀ ವರ್ಷ ವಿಶ್ವ ಪ್ರಾಣಿಜನ್ಯ ಕಾಯಿಲೆಗಳ ದಿನವನ್ನು ಸಂವಾದ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಕಾನ್ಫರೆನ್ಸ್‌ಗಳು ಮತ್ತು ಭಿತ್ತಿಪತ್ರಿಕೆಗಳ ವಿನ್ಯಾಸದ ಮೂಲಕ ಸಕ್ರಿಯವಾಗಿ ಆಚರಿಸುತ್ತ ವೈದ್ಯರು, ಸಂಶೋಧಕರು ಮತ್ತು ಜನಸಾಮಾನ್ಯರಲ್ಲಿ ಅರಿವನ್ನು ಹೆಚ್ಚಿಸಲು ಶ್ರಮಿಸುತ್ತಿದೆ.

ಡಾ| ಸುಧೀಶ್‌ ಎನ್‌., ಅಸಿಸ್ಟೆಂಟ್‌ ಪ್ರೊಫೆಸರ್‌

-ಡಾ| ಪ್ರಿಯಾ ಮುದ್ಗಲ್‌, ಅಸೋಸಿಯೇಟ್‌ ಪ್ರೊಫೆಸರ್‌

ಎಂಎಸ್‌ಸಿ ಕ್ಲಿನಿಕಲ್‌ ವೈರಾಲಜಿ

ವಿದ್ಯಾರ್ಥಿಗಳು – 2020-22 ಬ್ಯಾಚ್‌

ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್

ವೈರಾಲಜಿ, ಮಾಹೆ. ಮಣಿಪಾಲ

ಟಾಪ್ ನ್ಯೂಸ್

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.