ಕುಷ್ಠಕೇವಲ ಸೋಂಕುರೋಗ; ಶಾಪವಲ್ಲ !
Team Udayavani, Feb 4, 2018, 6:00 AM IST
ಪುರಾತನ ಕಾಲದಿಂದಲೂ ಮನುಕುಲಕ್ಕೆ ತಿಳಿದಿದ್ದ ಕಾಯಿಲೆಗಳಲ್ಲಿ ಕುಷ್ಠರೋಗ ಒಂದು. ಬೈಬಲ್, ಈಜಿಪ್ಟ್ನ ಪುರಾತನ ದಾಖಲೆಗಳು, ಭಾರತದ ಸುಶ್ರುತ, ಚರಕ ಬರೆದ ಗ್ರಂಥಗಳಲ್ಲಿಯೂ ಕುಷ್ಠದ ಉಲ್ಲೇಖವಿದೆ. ಬಹುಹಿಂದಿನಿಂದಲೂ ಕುಷ್ಠ ರೋಗದ ಬಗ್ಗೆ ಮನುಷ್ಯರು ಭಯಪಡುತ್ತಲೇ ಬಂದಿದ್ದಾರೆ ಮತ್ತು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಇದೊಂದು ವಂಶವಾಹಿ ಕಾಯಿಲೆ, ಪೂರ್ವಜನ್ಮದಲ್ಲಿ ಮಾಡಿದ ಪಾಪಗಳಿಗಾಗಿ ದೇವರ ಶಾಪ ಎಂಬೆಲ್ಲ ತಪ್ಪು ಕಲ್ಪನೆಗಳನ್ನು ಜನರು ಈಗಲೂ ಹೊಂದಿದ್ದಾರೆ. ಈ ಕಾಲಘಟ್ಟದಲ್ಲಿಯೂ ಕುಷ್ಠ ರೋಗವು ಕೈಕಾಲುಗಳನ್ನು ಕೊಳೆಯಿಸಿ ಅಂಗ ಊನಕ್ಕೆ ಕಾರಣವಾಗುತ್ತದೆ, ಕುಷ್ಠ ರೋಗಿಗಳನ್ನು ಸಮಾಜ ಬಹಿಷ್ಕರಿಸುತ್ತದೆ ಎಂಬುದಾಗಿ ಜನಸಾಮಾನ್ಯರು ವೃಥಾ ಹೆದರುವುದುಂಟು.
ನಿಜವಾಗಿ ಕುಷ್ಠ ರೋಗವು ದೇವರ ಶಾಪ ಅಥವಾ ಒಂದು ವಿಕೃತ ಕಾಯಿಲೆಯಲ್ಲ, ಅದೊಂದು ಸೋಂಕು ರೋಗವಷ್ಟೆ. ವೈದ್ಯವಿಜ್ಞಾನ ಅತ್ಯಾಧುನಿಕವಾಗಿ ಮುಂದುವರಿದಿರುವ ಪ್ರಸ್ತುತ ಕಾಲದಲ್ಲಿ ಕುಷ್ಠ ರೋಗದ ಬಗ್ಗೆ ಯಾರೂ ಭಯ ಪಡಬೇಕಾಗಿಲ್ಲ ಅಥವಾ ದುರದೃಷ್ಟವಶಾತ್ ಕುಷ್ಠ ರೋಗ ಪೀಡಿತರಾಗಿರುವ ವ್ಯಕ್ತಿಗಳನ್ನು ದೂರ ಇರಿಸಬೇಕಾಗಿಲ್ಲ. ಗುಣವಾಗದ ಗಾಯಗಳು, ಕೈಕಾಲು ಮತ್ತು ಮುಖಗಳಲ್ಲಿ ಊನ ಇತ್ಯಾದಿ ಕುಷ್ಠ ರೋಗದ ಭೀಕರ ಮುಖ ಮುಗಿದು ಹೋದ ಕಥೆ. 1980ರಿಂದ ಈಚೆಗೆ ಕುಷ್ಠ ರೋಗಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಲು ವೈದ್ಯ ವಿಜ್ಞಾನ ಪರಿಣಾಮಕಾರಿ ಔಷಧಗಳನ್ನು ಹೊಂದಿದೆ, ಕುಷ್ಠ ರೋಗದಿಂದಾಗಿ ಅಂಗ ಊನವಾಗುವ ಸಾಧ್ಯತೆ ಅತ್ಯಲ್ಪವಾಗಿದೆ.
ಕುಷ್ಠ ರೋಗವು ಸಂಪೂರ್ಣವಾಗಿ ಗುಣಪಡಿಸಬಹುದಾದ ಒಂದು ಸೋಂಕು ರೋಗ, ಅದೊಂದು ಶಾಪ ಅಥವಾ ವಂಶವಾಹಿ ಕಾಯಿಲೆ ಅಲ್ಲ.
ಕುಷ್ಠ ರೋಗ
ಉಂಟಾಗುವುದು ಹೇಗೆ?
ಮೈಕೊಬ್ಯಾಕ್ಟೀರಿಯಂ ಲೆಪ್ರ ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದ ಕುಷ್ಠ ರೋಗವು ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾವು ಕ್ಷಯ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ಕುಟುಂಬಕ್ಕೆ ಸೇರಿದೆ. ಕುಷ್ಠ ರೋಗವು ರೋಗಪೀಡಿತರ ಸಂಪರ್ಕದಿಂದ ಹರಡುತ್ತದೆ. ಆದರೆ ಹೀಗೆ ಅದು ಹರಡುವುದು ತುಂಬಾ ಅಪರೂಪ. ಏಕೆಂದರೆ, ಈ ಬ್ಯಾಕ್ಟೀರಿಯಾವು ಆರೋಗ್ಯವಂತರ ದೇಹವನ್ನು ಪ್ರವೇಶಿಸುವುದು ಉಸಿರಿನ ಮೂಲಕ. ಲೆಪ್ರಮೇಟಸ್ ಲೆಪ್ರಸಿ ಎಂದು ಕರೆಯಲ್ಪಡುವ, ತೀವ್ರ ಸ್ವರೂಪದ ಕುಷ್ಠರೋಗ ಪೀಡಿತನ ಸೀನಿನ ಮೂಲಕ ಗಾಳಿಯನ್ನು ಸೇರಿದ ಸೂಕ್ಷ್ಮನೀರಿನ ಹನಿಗಳನ್ನು ಉಸಿರಾಡಿದರೆ ಮಾತ್ರ ಅದು ಆರೋಗ್ಯವಂತರ ದೇಹವನ್ನು ಪ್ರವೇಶಿಸುತ್ತದೆ. ಆದರೆ ಹೀಗಾಗುವುದು ತೀರಾ ಅಪರೂಪ. ಜತೆಗೆ, ಬ್ಯಾಕ್ಟೀರಿಯಾ ನಮ್ಮ ದೇಹದೊಳಕ್ಕೆ ಪ್ರವೇಶಿಸಿದರೂ ನಮ್ಮಲ್ಲಿ ಶೇ.90ರಷ್ಟು ಜನರು ಆರೋಗ್ಯವಂತರಾಗಿದ್ದು, ಆ ಬ್ಯಾಕ್ಟೀರಿಯಾವನ್ನು ಕೊಲ್ಲಬಲ್ಲಷ್ಟು ಸದೃಢವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತೇವೆ. ಕೇವಲ ಶೇ.10ರಷ್ಟು ಜನರು ಮಾತ್ರ ರೋಗ ನಿರೋಧಕ ಶಕ್ತಿಯಲ್ಲಿರುವ ನಿರ್ದಿಷ್ಟ ಸಮಸ್ಯೆಯಿಂದಾಗಿ ಬ್ಯಾಕ್ಟೀರಿಯಾವನ್ನು ಕೊಲ್ಲಲು ಶಕ್ತವಾಗುವುದಿಲ್ಲ. ಈ ಶೇ.10 ಮಂದಿಯಲ್ಲೂ ಶೇ.80ರಷ್ಟು ಮಂದಿ ತೀರಾ ಸೌಮ್ಯಸ್ವರೂಪದ ಕುಷ್ಠರೋಗಕ್ಕೆ ತುತ್ತಾಗುತ್ತಾರೆ. ವ್ಯಕ್ತಿಯೊಬ್ಬ ಕುಷ್ಠರೋಗ ನಿರ್ದಿಷ್ಟವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿಲ್ಲದೆ ಕುಷ್ಠ ರೋಗಕ್ಕೆ ತುತ್ತಾದರೂ ಶೀಘ್ರ ರೋಗಪತ್ತೆ ಮತ್ತು ಸಮರ್ಪಕ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು.
ಕುಷ್ಠರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವು ಚರ್ಮ ಮತ್ತು ನರಗಳನ್ನು ತನ್ನ ನೆಲೆಯನ್ನಾಗಿಸಿಕೊಳ್ಳಲು ಇಷ್ಟಪಡುತ್ತದೆ. ಅದು ಕಣ್ಣುಗಳು ಮತ್ತು ಆಂತರಿಕ ಅಂಗಗಳನ್ನು ಬಾಧಿಸುವುದು ತೀರಾ ಮುಂದುವರಿದ ಹಂತಗಳಲ್ಲಿ ಮಾತ್ರ.
– ಮುಂದಿನ ವಾರಕ್ಕೆ
– ಡಾ| ಸ್ಮಿತಾ ಪ್ರಭು
ಅಸೊಸಿಯೇಟ್ ಪ್ರೊಫೆಸರ್
ಚರ್ಮರೋಗ ವಿಭಾಗ, ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.