ಬೆಂಗ್ಳೂರಲ್ಲಿದೆ ವಿಶ್ವದ ಅತಿ ದೊಡ್ಡ 16 ಅಡಿಯ ಮುಕ್ತಿನಾಗ!
Team Udayavani, Jul 29, 2017, 4:18 PM IST
ನಿನ್ನೆ ತಾನೆ ನಾಗರ ಪಂಚಮಿ ಮುಗಿದಿದೆ. ಆದರೆ, ಭಕ್ತರ ಮನದೊಳಗೆ ನಾಗನ ಮೇಲಿನ ಭಕ್ತಿ ನಿರಂತರ ಪ್ರವಹಿಸುತ್ತಲೇ ಇರುತ್ತೆ. ನಾಗದೇವರು ಅಂದಾಕ್ಷಣ ಕುಕ್ಕೆ ಸುಬ್ರಮಣ್ಯವೇ ನೆನಪಾದರೂ, ಬೆಂಗ್ಳೂರಿನಲ್ಲಿ ವಿಶ್ವದ ಅತಿದೊಡ್ಡ ಮುಕ್ತಿನಾಗ ಮೂರ್ತಿಯನ್ನು ಕಾಣಬಹುದಾಗಿದೆ. ಈ ಮೂರ್ತಿಯ ವಿಗ್ರಹದ ಎತ್ತರವೇ ಬರೋಬ್ಬರಿ 16 ಅಡಿ!
ತಮಿಳುನಾಡಿನ ನಾಗರಕೋಯಿಲ್ ಹಾಗೂ ಸಿಂಗಾಪುರದಲ್ಲಿ 5 ಅಡಿ ಎತ್ತರದ ನಾಗವಿಗ್ರಹ ಇರುವುದು ಅನೇಕರಿಗೆ ಗೊತ್ತು. ಆದರೆ, ಬೆಂಗಳೂರಿನಲ್ಲಿನ ಮುಕ್ತಿನಾಗ ಕ್ಷೇತ್ರದ ವಿಗ್ರಹ ಅದಕ್ಕೂ ಮೂರು ಪಟ್ಟು ಎತ್ತರವಿದ್ದು, ಈ ಮೂರ್ತಿಯನ್ನು ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿದೆ. ಅಲ್ಲದೆ, ಈ ಕ್ಷೇತ್ರದಲ್ಲಿ 1008 ಸಣ್ಣ ಸಣ್ಣ ನಾಗ ಮೂರ್ತಿಗಳ ಬನವೂ ಇದೆ.
ಇದಕ್ಕೂ ಒಂದು ಕತೆ!
ದೇಗುಲದ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಶಾಸ್ತ್ರೀಗಳು, ತಿಂಗಳಿಗೊಮ್ಮೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿಬರುತ್ತಿದ್ದರಂತೆ. ಒಂದು ದಿನ ನಾಗದೇವರು ಇವರ ಕನಸಿನಲ್ಲಿ ಬಂದು ಇವರ ಕನಸಿನಲ್ಲಿ ಬಂದು, ರಾಮೋಹಳ್ಳಿಯ ಬಳಿ ಓಡಾಡಿದ ಹಾಗೆ ಕಾಣಿಸಿತಂತೆ. ಶಾಸ್ತ್ರೀಗಳು ರಾಮೋಹಳ್ಳಿಯ ದಾರಿಯಲ್ಲಿ ಸಾಗುವಾದ 16 ಅಡಿ ಇರುವ ಹಾವಿನ ಪೊರೆಯೊಂದು ಕಂಡಿದ್ದು, ಆ ಹಿನ್ನೆಲೆಯಲ್ಲಿ 16 ಅಡಿ ಎತ್ತರದ ನಾಗಮೂರ್ತಿಯನ್ನು ನಿರ್ಮಿಸಲು ತೀರ್ಮಾನಿಸಿದರಂತೆ.
ಸ್ಥಾಪನೆ ಹಿಂದಿನ ಸಾಹಸ
ಇಲ್ಲಿ ನಾಗ ವಿಗ್ರಹವನ್ನು ಗರ್ಭಗುಡಿಯಲ್ಲಿ ಸ್ಥಾಪಿಸಿದ್ದೇ ಒಂದು ಸಾಹಸಗಾಥೆ. ಈ ಮೂರ್ತಿಯನ್ನು ತಮಿಳುನಾಡಿನ ಕಾಂಚೀಪುರದ ಶಿಲ್ಪಿ ಪದ್ಮಶ್ರೀ ಗಣಪತಿಸ್ಥಪತಿ ಹಾಗೂ 15 ಮಂದಿ ಸಹ ಶಿಲ್ಪಿಗಳು ನಿರ್ಮಿಸಿದರು. ಈ ಮೂರ್ತಿಯನ್ನು ಬೆಗ್ಳೂರಿಗೆ 32 ಚಕ್ರದ ಬೃಹತ್ ಟ್ರಕ್ಕಿನಲ್ಲಿ ತರಲಾಯಿತು. 2010ರ, ಏಪ್ರಿಲ್ 4ರಂದು ಇಲ್ಲಿ ಪ್ರತಿಷ್ಠಾಪಿಸಲಾಯಿತು. ನಾಗದೋಷ ಪರಿಹಾರಕ್ಕೆ ಪ್ರಸಿದ್ಧವಾಗಿರುವ ಈ ಕ್ಷೇತ್ರದ ನಿರ್ಹಹಣೆಯನ್ನು ಗೌರಿ ಸುಬ್ರಹ್ಮಣ್ಯ ಹೊತ್ತಿದ್ದಾರೆ.
ಏನಿದು?: ಮುಕ್ತಿನಾಗ ಕ್ಷೇತ್ರ
ದರುಶನಕೆ ದಾರಿ: ಮೆಜೆಸ್ಟಿಕ್‌ನಿಂದ 18 ಕಿ.ಮೀ. ದೂರದ ದೊಡ್ಡ ಆಲದ ಮರದ ರಸ್ತೆಯಲ್ಲಿ 5 ಕಿ.ಮೀ. ಸಾಗಿದರೆ, ರಾಮೋಹಳ್ಳಿ ಸಿಗುತ್ತೆ. ಅಲ್ಲಿಂದ ಕೇವಲ 1 ಕಿ.ಮೀ.
ಸಂಪರ್ಕ: 9535383921, 8880936094
ಅನಿಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.