ನೋಡಲೇ ಬೇಕಾದ 8 ಸಿನಿಮಾಗಳ ಫೆಸ್ಟ್‌ಲುಕ್‌


Team Udayavani, Feb 24, 2018, 6:23 PM IST

111.jpg

ಇದು ಕಾನ್‌ ಚಿತ್ರೋತ್ಸವದಲ್ಲಿ ನಿರ್ಣಾಯಕರ ಮನಗೆದ್ದಿದ್ದಷ್ಟೇ ಅಲ್ಲದೆ, ಜ್ಯೂರಿ ಪ್ರಶಸ್ತಿಗೆ ಪಾತ್ರವಾದ ಸಿನಿಮಾ. ಹದಿಹರೆಯದ ತಾಯ್ತನ ಸಿನಿಮಾದ ಕಥಾವಸ್ತು. ಚಿಕ್ಕವಯಸ್ಸಿಗೇ ತಾಯಿಯಾಗುತ್ತಿರುವ ವೆಲೇರಿಯಾ ಆ ವಿಷಯವನ್ನು ತಾಯಿಗೆ ತಿಳಿಸಲು ಸಿದ್ಧಳಿಲ್ಲ. ಮಗುವಿನ ತಂದೆಯ ಜೊತೆಗೂಡಿ ಭವಿಷ್ಯದ ಕನಸು ಕಾಣುವಲ್ಲಿ ಅವಳು ಬಿಝಿ. ಅಂತಾರಾಷ್ಟ್ರೀಯ ಕಾನ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಸಿನಿಮಾವನ್ನು ನಮ್ಮ ಬೆಂಗಳೂರು ಚಿತ್ರೋತ್ಸವದಲ್ಲಿ ವೀಕ್ಷಿಸುವುದು ಹೆಮ್ಮೆಯ ಸಂಗತಿಯೇ ಸರಿ.

ಎ ಪೆಂಟಾಸ್ಟಿಕ್‌ ವುಮನ್‌
ಬಹಳ ಹಿಂದೆ ಹಾಲಿವುಡ್‌ ಸಿನಿಮಾಗಳಲ್ಲಿ ಬಿಳಿಯರು ಮಾತ್ರವೇ ನಟಿಸುತ್ತಿದ್ದ ಕಾಲವೊಂದಿತ್ತು. ಎಷ್ಟರ ಮಟ್ಟಿಗೆ ಎಂದರೆ ಅಪ್ರಿಕನ್‌ ಅಮೆರಿಕನ್‌ ಪಾತ್ರಗಳನ್ನೂ ಬಿಳಿಯರೇ ಮುಖಕ್ಕೆ ಕಪ್ಪು ಬಣ್ಣವನ್ನು ಬಳಿದುಕೊಂಡು ನಟಿಸುತ್ತಿದ್ದರಂತೆ. ಈಗ ಆ ಪರಿಸ್ಥಿತಿ ಇಲ್ಲ ಅನ್ನೋದು ನೆಮ್ಮದಿಯ ಸಂಗತಿ. ಒಂದು ಪಾತ್ರಕ್ಕೆ ನಿಜಕ್ಕೂ ನ್ಯಾಯ ಒದಗಿಸಲೇ ಬೇಕೆಂದರೆ ಕುರುಡ ಪಾತ್ರಕ್ಕೆ ಕುರುಡರನ್ನೇ ಏಕೆ ಆರಿಸಬಾರದು, ವೇಶ್ಯೆಯ ಪಾತ್ರಕ್ಕೆ ವೇಶ್ಯೆಯನ್ನೇ ಆರಿಸಬಾರದೇಕೆ? ಈ ಒಂದು ಚರ್ಚೆ ಅನಾದಿ ಕಾಲದಿಂದಲೂ ನಡೆಯುತ್ತಿರುವಂಥದ್ದು. ಈ ಕಾರಣಕ್ಕೇ “ಎ ಫೆಂಟಾಸ್ಟಿಕ್‌ ವುಮನ್‌’ ಚಿತ್ರ ವಿಭಿನ್ನವಾಗಿ ಕಾಣುವುದು. ಈ ಸಿನಿಮಾದಲ್ಲಿ ಒಬ್ಬ ಹಿಜಡಾಳ ಮನ ಮಿಡಿಯುವ ಕತೆಯಿದೆ, ಸಾಮಾಜಿಕ ಸಂಘರ್ಷವಿದೆ. ಸಲಿಂಗಿಯ ಆಂತರ್ಯವನ್ನು ನಿರ್ದೇಶಕ ಹಿಡಿದಿಡುವುದರ ಹಿಂದಿನ ಪ್ರಮುಖ ಕಾರಣ, ಆ ಪಾತ್ರವನ್ನು ನಿರ್ವಹಿಸಿರುವ ಡೇನಿಯೆಲಾ ವೇಗಾ ಸ್ವತಃ ಒರ್ವ ಹಿಜಡಾ ಆಗಿರುವುದು! ದೈನಂದಿನ ಜೀವನದಲ್ಲಿ ದೈಹಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಏನೇನನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ತಿಳಿಯಲಾದರೂ ಈ ಸಿನಿಮಾ ನೋಡಬೇಕು.

ನಿರ್ದೇಶಕ: ಸೆಬಾಸ್ಟಿಯನ್‌ ಲೆಲಿಯೋ
ದೇಶ: ಚಿಲಿ 

ಏಪ್ರಿಲ್ಸ್‌ ಡಾಟರ್‌
ಇದು ಕಾನ್‌ ಚಿತ್ರೋತ್ಸವದಲ್ಲಿ ನಿರ್ಣಾಯಕರ ಮನಗೆದ್ದಿದ್ದಷ್ಟೇ ಅಲ್ಲದೆ, ಜ್ಯೂರಿ ಪ್ರಶಸ್ತಿಗೆ ಪಾತ್ರವಾದ ಸಿನಿಮಾ. ಹದಿಹರೆಯದ ತಾಯ್ತನ ಸಿನಿಮಾದ ಕಥಾವಸ್ತು. ಚಿಕ್ಕವಯಸ್ಸಿಗೇ ತಾಯಿಯಾಗುತ್ತಿರುವ ವೆಲೇರಿಯಾ ಆ ವಿಷಯವನ್ನು ತಾಯಿಗೆ ತಿಳಿಸಲು ಸಿದ್ಧಳಿಲ್ಲ. ಮಗುವಿನ ತಂದೆಯ ಜೊತೆಗೂಡಿ ಭವಿಷ್ಯದ ಕನಸು ಕಾಣುವಲ್ಲಿ ಅವಳು ಬಿಝಿ. ಅಂತಾರಾಷ್ಟ್ರೀಯ ಕಾನ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಸಿನಿಮಾವನ್ನು ನಮ್ಮ ಬೆಂಗಳೂರು ಚಿತ್ರೋತ್ಸವದಲ್ಲಿ ವೀಕ್ಷಿಸುವುದು ಹೆಮ್ಮೆಯ ಸಂಗತಿಯೇ ಸರಿ.
ನಿರ್ದೇಶಕ: ಮೈಕೆಲ್‌ ಫ್ರಾಂಕೊ
ದೇಶ: ಮೆಕ್ಸಿಕೊ

ಬಿಂಗೋ: ದಿ ಕಿಂಗ್‌ ಆಫ್ ಮಾರ್ನಿಂಗ್ಸ್‌
ಅಗಸ್ಟೋ ಒಬ್ಬ ನತದೃಷ್ಟ ಕಲಾವಿದ. ಅವನಿಗೆ ಅವಕಾಶಗಳೇ ಇಲ್ಲ. ಸಿನಿಮಾದಲ್ಲಿ ನಟಿಸಲು ಯಾವ ಹಂತಕ್ಕೂ ಇಳಿಯಲು ಆತ ಸಿದ್ಧನಿದ್ದಾನೆ. ಪೋಲಿ ಸಿನಿಮಾಗಳಲ್ಲೂ ನಟಿಸಿ ಬಂದಿದ್ದಾನೆ. ಇನ್ನೇನು ಆ ಕ್ಷೇತ್ರವನ್ನೇ ಬಿಟ್ಟು ಹೋಗಬೇಕು ಎನ್ನುವ ಸಂದರ್ಭದಲ್ಲಿ ಒಂದು ರಿಯಾಲಿಟಿ ಶೋ ಪಾತ್ರ ಅವನನ್ನರಸಿ ಬರುತ್ತದೆ. ಜೀವನವೇ ಹಾಗಲ್ಲವೇ, ಬೇಕು ಅಂದಾಗ ಯಾವುದೂ ಹತ್ತಿರ ಇರುವುದಿಲ್ಲ, ಬೇಡ ಎನ್ನುವ ಹಂತದಲ್ಲಿ ಎಲ್ಲವನ್ನೂ ಅದು ಕೊಡುತ್ತದೆ. ಆ ಪಾತ್ರ ಒಬ್ಬ ಜೋಕರ್‌ನದ್ದು. ಆ ಪಾತ್ರದಿಂದ ರಾತ್ರೋ ರಾತ್ರಿ ಅವನು ದೇಶಾದ್ಯಂತ ಪ್ರಖ್ಯಾತನಾಗಿಬಿಡುತ್ತಾನೆ. ಆದರೆ ವಿಪರ್ಯಾಸವೆಂದರೆ ಅದರಲ್ಲಿ ನಟಿಸುವ ಮುನ್ನ ಒಂದು ಕರಾರಿಗೆ ಅಗಸ್ಟೋ ಒಪ್ಪಿರುತ್ತಾನೆ. ಅದರ ಪ್ರಕಾರ ಎಲ್ಲೂ ಜೋಕರ್‌ ಪಾತ್ರವನ್ನು ನಿರ್ವಹಿಸಿದ್ದು ತಾನು ಎಂದು ಹೇಳಿಕೊಳ್ಳುವ ಹಾಗಿಲ್ಲ, ಸ್ವಂತ ಮಗಳಿಗೂ! ನಟಿಸುವುದಕ್ಕೆ ಮುಂಚೆ ಇದ್ದ ಅಸ್ತಿತ್ವದ ಪ್ರಶ್ನೆ ಮತ್ತೆ ಪೆಂಡಭೂತವಾಗಿ ಕಾಡತೊಡಗುತ್ತದೆ.
ನಿರ್ದೇಶಕ: ಡೇನಿಯಲ್‌ ರೆಝೆಂಡ್‌
ದೇಶ: ಬ್ರೆಝಿಲ್‌

ದಾಹಾ
ಯಾವ ದೇಶಕ್ಕೂ ಸಲ್ಲದ ನಿರಾಶ್ರಿತರ ಬದುಕು ಯಾತನಾಮಯ. ಮಾಧ್ಯಮಗಳಲ್ಲಿ ಅವರ ಪರಿಸ್ಥಿತಿ ಕುರಿತು ವರದಿಗಳು ಪ್ರಕಟಗೊಂಡಾಗ ಎಲ್ಲರೂ ಮರುಗುವವರೇ. ಅವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳ ಒತ್ತಡ, ದೇಶ ದೇಶಗಳ ನಡುವಿನ ಶಾಂತಿ ಮಾತುಕತೆಗಳು ಇವ್ಯಾವುವೂ ಫ‌ಲ ನೀಡದ ವಿಚಿತ್ರ ಸಂಧಿಗ್ಧ ಸನ್ನಿವೇಶ ಅದು. ಇಂಥಾ ಒಂದು ಪ್ರದೇಶದಲ್ಲಿ ನಿರಾಶ್ರಿತರನ್ನು ದೇಶದ ಗಡಿ ದಾಟಿಸಿ ನೆರೆರಾಷ್ಟ್ರದೊಳಕ್ಕೆ ಸಾಗಿಸುವ ಅಪಾಯಕಾರಿ ಕೆಲಸವನ್ನು 14 ವರ್ಷ ಹುಡುಗನೊಬ್ಬ ತನ್ನ ತಂದೆಯ ಜೊತೆ ಸೇರಿಕೊಂಡು ಮಾಡುತ್ತಿದ್ದಾನೆ. ಈ ಕೆಲಸದಲ್ಲಿ ಪ್ರಯಾಣಿಕರಿಗೆ ನೀರು, ಆಹಾರ, ತಾತ್ಕಾಲಿಕ ಆಶ್ರಯ ಎಲ್ಲವೂ ಆ ಹುಡುಗನ ಜವಾಬ್ದಾರಿ. ಅಪರಾಧದ ಜಗತ್ತಿನಿಂದ ದೂರವಾಗುವ ಸಲುವಾಗಿ ಈ ಕೆಲಸವನ್ನು ಹುಡುಕಿಕೊಂಡಿರುವ ಆ ಹುಡುಗ ತನ್ನ ತಂದೆಯ ಕಾರಣದಿಂದಲೇ ಮತ್ತೆ ಅಪರಾಧದ ಕರಾಳ ಜಗತ್ತಿಗೆ ಕಾಲಿಡುತ್ತಾನೆ.
ನಿರ್ದೇಶಕ: ಒನುರ್‌ ಸಾಯ್ಲಕ್‌
ದೇಶ: ಟರ್ಕಿ

ಸಂಸ್ಕಾರ
ಮಾಧ್ವ ಬ್ರಾಹ್ಮಣನಾದ ನಾರಣಪ್ಪ ನಿಧನನಾಗಿದ್ದಾನೆ. ನಾರಣಪ್ಪನಿಗೆ ತನ್ನವರೆಂದು ಹೇಳಿಕೊಳ್ಳುವವರು ಯಾರೂ ಗ್ರಾಮದಲ್ಲಿರಲಿಲ್ಲ. ಅಂತ್ಯಸಂಸ್ಕಾರವನ್ನು ನಡೆಸಿಕೊಡುವ ಹೊಣೆ ಗ್ರಾಮದ ಬ್ರಾಹ್ಮಣ ಪಂಗಡದ ಮುಖ್ಯಸ್ಥರ ಹೆಗಲೇರುತ್ತದೆ. ಇಲ್ಲೊಂದು ಸಮಸ್ಯೆ ಇದೆ. ನಾರಣಪ್ಪನ ವ್ಯಕ್ತಿತ್ವ ಎಂಥದ್ದೆಂದರೆ, ಬದುಕಿರುವಾಗ ಅದೇ ಬ್ರಾಹ್ಮ ಣ ಮುಖ್ಯಸ್ಥರ ಕೆಂಗಣ್ಣಿಗೆ ಗುರಿಯಾದವನು. ಒಂದು ದಿನವೂ ಬ್ರಾಹ್ಮಣಿಕೆಯನ್ನು ಪಾಲಿಸದವನು. ಅವನು ಮಾಂಸ ತಿನ್ನುತ್ತಿದ್ದ, ಮದ್ಯ ಸೇವಿಸುತ್ತಿದ್ದ. ಎಲ್ಲಕ್ಕಿಂತ ಮಿಗಿಲಾಗಿ ಆತ ಮದುವೆಯಾಗಿದ್ದು ಒಬ್ಬಳು ವೇಶ್ಯೆಯನ್ನು. ಸ್ವಜಾತಿಗೆ ಇಷ್ಟೆಲ್ಲಾ ಅಪಚಾರ ಎಸಗಿದ ವ್ಯಕ್ತಿಯೊಬ್ಬನನ್ನು ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರ ನಡೆಸುವುದು ಥರವೇ ಎನ್ನುವುದು ಬಿಡಿಸಲಾರದ ಪ್ರಶ್ನೆಯಾಗಿದೆ! ಅ ದನ್ನು ನಿರ್ಧರಿಸುವ ಗುರುತರ ಜವಾಬ್ದಾರಿ ಪ್ರಾಣೇಶಾಚಾರ್ಯರ ಪಾಲಾಗಿದೆ! ಅತ್ಯುತ್ತಮ ಭಾರತೀಯ ಸಿನಿಮಾಗಳಲ್ಲಿ ಸ್ಥಾನ ಪಡೆದಿರುವ ಈ ಕನ್ನಡ ಸಿನಿಮಾ ಸಂಸ್ಕಾರ.
ನಿರ್ದೇಶಕ: ಪಟ್ಟಾಭಿರಾಮ ರೆಡ್ಡಿ
ದೇಶ: ಭಾರತ

ರಾಜಕುಮಾರ
ಪುನೀತ್‌ ರಾಜ್‌ಕುಮಾರ್‌ ಅಬಿನಯದ “ಬೊಂಬೆ ಹೇಳುತೈತೆ’ ಹಾಡು ರಾಜ್ಯಾದ್ಯಂತ ಪ್ರಸಿದ್ಧಿಯನ್ನು ಪಡೆದು ಯೂಟ್ಯೂಬ್‌, ವಾಟ್ಸಾಪ್‌ನಲ್ಲಿ   ಹರಿದಾಡಿದ್ದ “ರಾಜಕುಮಾರ’ ಸಿನಿಮಾದ ಈ ಹಾಡಿನ ವಿವಿಧ ಅವೃತ್ತಿಗಳನ್ನು ಬಹುತೇಕರು ನೋಡಿಯೇ ಇರುತ್ತಾರೆ. ಸಿನಿಮಾದಲ್ಲಿ ಅನಿವಾಸಿ ಭಾರತೀಯನೊಬ್ಬ ಮತ್ತೆ ತಾಯ್ನಾಡಿಗೆ ಹಿಂದಿರುಗುವ ಅನಿವಾರ್ಯತೆ ಎದುರಾಗುತ್ತದೆ. ಇಲ್ಲಿಗೆ ಬಂದು ಕುಟುಂಬದ ಸಮಸ್ಯೆಯನ್ನು ಸರಿಪಡಿಸುವ ಪಾತ್ರದಲ್ಲಿ ಪುನೀತ್‌ ನಟಿಸಿದ್ದಾರೆ. ರಾಜ್ಯಾದ್ಯಂತ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದ “ರಾಜಕುಮಾರ’ ಸಿನಿಮಾವನ್ನು ಮತ್ತೆ ದೊಡ್ಡ ಪರದೆ ಮೇಲೆ ವೀಕ್ಷಿಸಲು ಇದೊಳ್ಳೆ ಅವಕಾಶ. 
ನಿರ್ದೇಶಕ: ಸಂತೋಷ್‌ ಆನಂದರಾಮ್‌
ದೇಶ: ಭಾರತ

ಅಲ್ಲಮ
ಅಲ್ಲಮಪ್ರಭುವಿನ ಜೀವನ ಚರಿತ್ರೆಯನ್ನು ಸಾರುವ ಈ ಸಿನಿಮಾ ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಲ್ಲಮ ಕಲ್ಯಾಣಕ್ಕೆ ಬರುತ್ತಾನೆ. ಬಸವಣ್ಣ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಾನೆ. ಈ ಸಂದರ್ಭದಲ್ಲಿ ಮದ್ದಳೆ ಬಾರಿಸುತ್ತಿದ್ದ ಬಾಲಕನನ್ನು ನೋಡಿ ಅಲ್ಲಮ ತನ್ನ ಬಾಲ್ಯಕ್ಕೆ ಜಾರುತ್ತಾರೆ. ತಮ್ಮ ಕಥೆಯನ್ನು ಹೇಳಿಕೊಳ್ಳುತ್ತಾರೆ. ಅಲ್ಲಮ ಪ್ರಭುಗಳ ಜೀವನವನ್ನು ತಿಳಿಯಲು ಈ ಸಿನಿಮಾವನ್ನು ನೋಡಬಹುದು. ನಟ ಧನಂಜ¿å ಅವರು ಅಲ್ಲಮನಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ: ಟಿ.ಎಸ್‌. ನಾಗಾಭರಣ
ದೇಶ: ಭಾರತ

ನ್ಯೂಟನ್‌
ಚುನಾವಣೆ ಹತ್ತಿರದಲ್ಲಿರುವ ಈ ಸಂದರ್ಭದಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಈ ಸಿನಿಮಾ ಹೆಚ್ಚು ಪ್ರಸ್ತುತ. ಕಾಡಿನ ಮಧ್ಯದಲ್ಲಿ ಇರುವ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಮತದಾನ ನಡೆಸುವ ಜವಾಬ್ದಾರಿ ಪ್ರಾಮಾಣಿಕ ಅಧಿಕಾರಿ ನ್ಯೂಟನ್‌ ಕುಮಾರ್‌ ಹೆಗಲೇರುತ್ತದೆ. ಕಾಡಿನಲ್ಲಿ ಮತದಾನ ನಡೆಸಲು ಅನೇಕ ಅಡ್ಡಿಗಳು ಎದುರಾಗುತ್ತವೆ. ಅವೆಲ್ಲವನ್ನೂ ನ್ಯೂಟನ್‌ ಮೀರುತ್ತಾನೆಯೇ? ಅಂತಾರಾಷ್ಟ್ರೀಯ ಒತ್ತಡಕ್ಕೆ ಹೆದರಿ ನಾಮಕೆವಾಸ್ತೆ ಚುನಾವಣೆ ನಡೆಸಲು ಮುಂದಾಗುವ ವ್ಯವಸ್ಥೆಯ ಅಣಕವನ್ನೂ ಈ ಸಿನಿಮಾ ಸೆರೆಹಿಡಿಯುತ್ತದೆ. ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ನಾಮಾಂಕಿತಗೊಂಡ ರಾಜಕುಮಾರ್‌ ರಾವ್‌ ಅಭಿನಯದ ಈ ಸಿನಿಮಾ ಪ್ರೇಕ್ಷಕರನ್ನು ನಗಿಸುವುದಲ್ಲದೆ ಚಿಂತನೆಗೂ ಹಚ್ಚುತ್ತದೆ.
ನಿರ್ದೇಶಕ: ಅಮಿತ್‌ ವಿ. ಮಸೂರ್‌ಕರ್‌
ದೇಶ: ಭಾರತ

ಹರ್ಷವರ್ಧನ್‌ ಸುಳ್ಯ 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.