ನವಮಾಸ ಸಂಭ್ರಮ ಪ್ರಗ್ನೆಂಟ್ ಆದ್ರೂ ಡ್ಯಾನ್ಸ್ ಮಾಡ್ತಾರೆ!
Team Udayavani, Feb 23, 2019, 5:46 AM IST
ತಾಯ್ತನದ ಅನುಭೂತಿಯನ್ನು ವರ್ಣಿಸಲು ಪದಗಳಿಲ್ಲ. ಅದರಲ್ಲೂ ಒಡಲಲ್ಲಿ ಕುಡಿಯನ್ನಿಟ್ಟು ಪೋಷಿಸುವ “ನವಮಾಸ’ ಹೆಣ್ಣಿನ ಪಾಲಿಗೆ ಬಹಳ ಮಹತ್ವದ್ದು. ಜೋರಾಗಿ ಓಡಲು, ನಡೆಯಲು ಆಗದ, ನಿತ್ಯದ ಚಟುವಟಿಕೆಗಳನ್ನೆಲ್ಲ ನಿಧಾನವಾಗಿ ಮಾಡಬೇಕಾದ ಗರ್ಭಿಣಿಯರಿಗೆ, ಹಾಗೆ ಮಾಡಬೇಡ, ಹೀಗೆ ಮಾಡಬೇಡ ಅನ್ನುವ ಸಲಹೆಗಳು ಸಾಮಾನ್ಯ. ಇನ್ನು ನೃತ್ಯ, ನಟನೆ, ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರು, ಗರ್ಭಿಣಿ ಎಂಬ ಕಾರಣಕ್ಕೆ ಚಟುವಟಿಕೆಗಳನ್ನು ನಿಲ್ಲಿಸಿಬಿಡುತ್ತಾರೆ. ಆದರೆ, ತಾಯ್ತನವನ್ನು ಎಂಜಾಯ್ ಮಾಡುತ್ತಲೇ, ಎಲ್ಲ ಕೆಲಸಗಳನ್ನು ಮಾಡಬಹುದು ಅಂತ ಗರ್ಭಿಣಿಯರಲ್ಲಿ ಧೈರ್ಯ ಮೂಡಿಸುವ ನೃತ್ಯ ಪ್ರದರ್ಶನ ವೊಂದು ನಗರದಲ್ಲಿ ನಡೆಯಲಿದೆ. ನೃತ್ಯಗಾತಿ ಅರಣ್ಯಿನಿ ಭಾರ್ಗವ್ ಮತ್ತು ತಂಡದಿಂದ “ಕ್ವೆಶ್ಚನಿಂಗ್ ಫ್ರಂಟಾಲಿಟಿ-ಚೇಂಜಿಂಗ್ ಬಾಡಿ’ ಎಂಬ ಈ ಪ್ರದರ್ಶನ ನಡೆಯಲಿದೆ.
ಆರು ತಿಂಗಳ ಗರ್ಭಿಣಿಯಾಗಿರುವ ಅರಣ್ಯಿನಿ ಅವರೇ ಈ ಭರತನಾಟ್ಯ ಪ್ರದರ್ಶನದ ಕೇಂದ್ರಬಿಂದು.
“ಮಹಿಳೆಯರಿಗೆ ತಾಯ್ತನವೋ, ಉದ್ಯೋಗವೋ (ಕಲೆ/ಹವ್ಯಾಸ) ಎಂಬ ಗೊಂದಲ ಕಾಡುತ್ತದೆ. ನನ್ನ ಪ್ರಕಾರ ಇದರಲ್ಲಿ ಆಯ್ಕೆಯ ಪ್ರಶ್ನೆ ಬರುವುದೇ ಇಲ್ಲ. ಹೆಣ್ಣಾದವಳು ತಾಯ್ತನದ ಜೊತೆಗೆ ತನ್ನಿಷ್ಟದ ಕ್ಷೇತ್ರದಲ್ಲಿಯೂ ಮುಂದುವರಿಯಬಹುದು. ಅದನ್ನು ಮನವರಿಕೆ ಮಾಡಿಕೊಡುವುದೇ ಈ ಪ್ರದರ್ಶನದ ಉದ್ದೇಶ. ನಾನು ಮೊದಲಿನಂತೆ ನೃತ್ಯ ಪ್ರದರ್ಶನಗಳನ್ನು ನೀಡುವುದರ ಜೊತೆಗೆ, ಡ್ಯಾನ್ಸ್ ಕ್ಲಾಸ್‌ಗಳನ್ನು ಕೂಡ ನಡೆಸುತ್ತಿದ್ದೇನೆ. ಹೊಟ್ಟೆಗೆ ತೊಂದರೆಯಾಗಬಹುದಾದ ಸ್ಟೆಪ್ಸ್ ಗಳನ್ನು ಮಾಡುವುದಿಲ್ಲ. ವೈದ್ಯರ ಸಲಹೆಗಳನ್ನು ಪಾಲಿಸುತ್ತಾ, ದೇಹದ ಮಾತನ್ನು ಆಲಿಸಿದರೆ, ಯಾವ ತೊಂದರೆಯೂ ಆಗುವುದಿಲ್ಲ ಅನ್ನೋದು ನನ್ನ ಅನುಭವ’
ಅರಣ್ಯಿನಿ ಭಾರ್ಗವ್
ಎಲ್ಲಿ?: ಶೂನ್ಯ ಸ್ಪೇಸ್, 4ನೇ ಮಹಡಿ, ರೇರ್ ವಿಂಗ್, ಬ್ರಹ್ಮಾನಂದ ಕೋರ್ಟ್, ಲಾಲ್‌ಬಾಗ್ ರಸ್ತೆ
ಯಾವಾಗ?: ಫೆ. 23-24, ಶನಿವಾರ ಸಂಜೆ 7, ಭಾನುವಾರ ಮಧ್ಯಾಹ್ನ 3.30
ಬುಕಿಂಗ್ ಪಾಸ್‌ಗಳಿಗೆ: [email protected] ಹೆಚ್ಚಿನ ವಿವರ: 9902077066
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.