ಉಪಹಾರಕ್ಕೊಂದು ನೆಚ್ಚಿನ ತಾಣ ಬ್ರಾಹ್ಮಿನ್ಸ್ ತಟ್ಟೆ ಇಡ್ಲಿ
Team Udayavani, Jul 28, 2018, 3:37 PM IST
ಬೆಂಗಳೂರಿನಂಥ ನಗರದಲ್ಲಿ ಹಸಿದವರ ಹೊಟ್ಟೆ ತುಂಬಿಸುವ ಫಲಹಾರ ಮಂದಿರ, ಹೋಟೆಲ್, ಮೆಸ್, ಖಾನಾವಳಿಗಳ ಸಂಖ್ಯೆ ಸಾವಿರಾರು. ಆದರೆ, ಕೆಲವೇ ಕೆಲವು ಆಹಾರತಾಣಗಳು ಮಾತ್ರ ತಮ್ಮದೇ ಆದ ಗ್ರಾಹಕರನ್ನು ಸೃಷ್ಟಿಸಿಕೊಂಡು, ಶುಚಿರುಚಿಯಾದ ಊಟ ಬಡಿಸುವಲ್ಲಿ ಯಶಸ್ವಿಯಾಗಿವೆ. ಅವುಗಳಲ್ಲಿ ಮುಖ್ಯವಾದುದು ಬ್ರಾಹ್ಮಿನ್ಸ್ ತಟ್ಟೆ ಇಡ್ಲಿ. ಬೆಂಗಳೂರಿನ ಹಲವಾರು ಕಡೆಗಳಲ್ಲಿ ಇದರ ಶಾಖೆಗಳಿದ್ದು, ಸದಾ ಗ್ರಾಹಕರಿಂದ ಗಿಜಿಗುಡುತ್ತಲೇ ಇರುತ್ತದೆ. ಇಲ್ಲಿನ ಬೆಣ್ಣೆಯಂಥ ಇಡ್ಲಿ – ಚಟ್ನಿಯ ರುಚಿಗೆ ಮಾರು ಹೋದವರು, ಪದೇ ಪದೆ ಅದನ್ನು ಹುಡುಕಿಕೊಂಡು ಬರುತ್ತಾರೆ.
ಇಡ್ಲಿ ಪ್ರಿಯ ಮಾಲೀಕರು
ಬ್ರಾಹ್ಮಿನ್ಸ್ ತಟ್ಟೆ ಇಡ್ಲಿ ಪ್ರಾರಂಭವಾಗಿದ್ದು 2014ರಲ್ಲಿ. ಬೆಂಗಳೂರಿನ ಸ್ನೇಹಿತರಾದ ಸುಭಾಷ್ ಶರ್ಮ ಹಾಗೂ ರಂಜಿತ್ ಬೀಜು ಸೇರಿ ಇದನ್ನು ಪ್ರಾರಂಭಿಸಿದರು. ವಿಶೇಷವೆಂದರೆ, ಸುಭಾಷ್‌ರವರು ವೃತ್ತಿಯಲ್ಲಿ ಚಾರ್ಟೆರ್ಡ್ ಅಕೌಂಟೆಂಟ್ ಮತ್ತು ರಂಜಿತ್‌ರವರು ಎಂ.ಬಿ.ಎ ಪದವೀಧರರು. ಆದರೆ ಇವರನ್ನು ಆಕರ್ಷಿಸಿದ್ದು ಹೋಟೆಲ್ ಉದ್ಯಮ. ಇಡ್ಲಿ ಪ್ರಿಯರಾದ ಇಬ್ಬರೂ, ಅದನ್ನೇ ಪ್ರಮುಖ ತಿಂಡಿಯನ್ನಾಗಿಸಿಕೊಂಡು ಹೋಟೆಲ್ ತೆರೆದರು.
ಇಡ್ಲಿ ಮಾತ್ರ ಸಿಗೋದಲ್ಲ
ಹೆಸರು ಬ್ರಾಹ್ಮಿನ್ಸ್ ತಟ್ಟೆ ಇಡ್ಲಿ ಅಂತಿದ್ದರೂ, ಈ ಹೋಟೆಲ್ ಬರೀ ಇಡ್ಲಿಗೆ ಮಾತ್ರ ಸೀಮಿತವಾಗಿಲ್ಲ. ತಟ್ಟೆ ಇಡ್ಲಿ, ಉದ್ದಿನ ವಡೆ, ಕೇಸರಿ ಬಾತ್, ಖಾರಾಬಾತ್, ಅವಲಕ್ಕಿ ಬಾತ್, ಗೊಜ್ಜವಲಕ್ಕಿ, ಮಂಡಕ್ಕಿ ಒಗ್ಗರಣೆ, ಹಾಲ್‌ಬಾಯ್, ನುಚ್ಚಿನುಂಡೆ, ಹಯಗ್ರೀವ… ಹೀಗೆ ಬಾಯಲ್ಲಿ ನೀರೂರಿಸುವ ಬಗೆಬಗೆಯ ತಿಂಡಿಗಳು ಇಲ್ಲಿ ಲಭ್ಯ.
ಶಾಖೆಗಳು ಎಲ್ಲೆಲ್ಲಿವೆ?
ಸಂಜಯ್‌ನಗರ, ಅಶ್ವಥ§ ನಗರ 80 ಅಡಿರಸ್ತೆ, ಮಲ್ಲೇಶ್ವರಂ 8ನೇ ಮುಖ್ಯರಸ್ತೆ, ಮಹಾಲಕ್ಷ್ಮಿ ಲೇಔಟ್ (ಮೆಟ್ರೋ ನಿಲ್ದಾಣದ ಪಕ್ಕ), ಆರ್.ಟಿ.ನಗರ ಸಿಬಿಐ ರಸ್ತೆ, ಹೆಬ್ಟಾಳ್ ಕೆಂಪಾಪುರ, ಯಲಹಂಕದ ಶೇಷಾದ್ರಿಪುರಂ ಕಾಲೇಜು ಮುಂಭಾಗ, ರಾಜಾಜಿನಗರ (ಮೆಟ್ರೋ ನಿಲ್ದಾಣದ ಪಕ್ಕ) ಹೀಗೆ ಬೇರೆ ಬೇರೆ ಕಡೆ ಶಾಖೆಗಳನ್ನು ತೆರೆದಿದ್ದಾರೆ. ಇಲ್ಲಿನ ರುಚಿಗೆ ಸಿನಿಮಾ ನಟರು, ನಿರ್ದೇಶಕರು, ಶಿಕ್ಷಣ ತಜ್ಞರು, ಉದ್ಯಮಿಗಳೂ ಸೈ ಎಂದಿದ್ದಾರೆ.
ಕೋಟ್
ಕೈಗೆಟಕುವ ದರದಲ್ಲಿ ಶುಚಿ-ರುಚಿಯ ಆಹಾರವನ್ನು ನೀಡಿ ಗ್ರಾಹಕರನ್ನು ಸಂತೃಪ್ತಿಗೊಳಿಸುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಯಶಸ್ವಿಯಾಗಿರುವ ಸಂತೃಪ್ತಿ, ಸಮಾಧಾನ ನಮಗಿದೆ. ಮುಂದಿನ ದಿನಗಳಲ್ಲಿ ಇನ್ನೂ ವಿಭಿನ್ನ, ವಿಶೇಷ ತಿಂಡಿಗಳನ್ನು ಪರಿಚಯಿಸುವ ಯೋಚನೆಯಿದೆ.
– ಸುಭಾಷ್ ಶರ್ಮ, ಮಾಲೀಕ
ಹೋಟೆಲ್ ಸಮಯ:
ಬೆಳಗ್ಗೆ: 7-12
ಮಧ್ಯಾಹ್ನ: 4.30- 8.30
ವಾರದ ಎಲ್ಲಾ ದಿನಗಳೂ ತೆರೆದಿರುತ್ತದೆ.
ಲೇಖನ: ಬಳಕೂರು ವಿ.ಎಸ್ ನಾಯಕ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.