ಬಿಂಬದಲ್ಲಿ ಬೊಂಬೆ ಹಬ್ಬ
Team Udayavani, Oct 12, 2019, 4:02 AM IST
ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಮಕ್ಕಳಿಂದ ಬೊಂಬೆ ಹಬ್ಬ ನಡೆಯುತ್ತಲಿದೆ. ಮಕ್ಕಳೇ ರಚಿಸಿ, ನಿರ್ದೇಶಿಸಿ, ನಟಿಸಿದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಶನಿವಾರ ಸಂಜೆ 7 ಗಂಟೆಗೆ, ಪ್ರವರ್ತರಾಜ್ ನಿರ್ದೇಶನದ “ರಾಜಾನಾ? ಮಂತ್ರೀನಾ?’, ಚಿತ್ತ ರಂಜನ್ ನಿರ್ದೇಶನದ “ಕಳೆದುಹೋದ ಮುತ್ತು’, ಸುನಯ್ ನಿರ್ದೇಶನದ “ಚಂದ್ರಯಾನ-4.2.0′ ಪ್ರದರ್ಶನ ಕಾಣಲಿವೆ. ಅತಿಥಿಗಳಾಗಿ, ಕವಯಿತ್ರಿ ಡಾ.ಎಲ್.ಜಿ.ಮೀರಾ, ನಿರ್ದೇಶಕ ವಿಶಾಲ್ ರಾಜ್, ಕಲಾವಿದ ಫಕೀರಪ್ಪ ವರ್ವಿ ಭಾಗವಹಿಸಲಿದ್ದಾರೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಭೂಮಿಕಾ ನಿರ್ದೇಶನದ “ನಾಟಕಾಯಣ’, ಸ್ಕಂದ ಎಚ್.ಪಿ. ನಿರ್ದೇಶನದ “ಗಡಿ-ಬಡಿ’, ಭೂಮಿಕಾ ಶರ್ಮಾ ನಿರ್ದೇಶನದ “ಒಬ್ಬಳ ಕತೆ’ ಪ್ರದರ್ಶನ ಕಾಣಲಿದೆ. ಅತಿಥಿಗಳಾಗಿ ಕಲಾವಿದ ಪಿ.ಡಿ.ಸತೀಶ್ ಚಂದ್ರ, ರಂಗಕರ್ಮಿ ಚಂದನ್ ಭಾಗವಹಿಸಲಿದ್ದಾರೆ. ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ. ರಂಗತಜ್ಞ ಶ್ರೀನಿವಾಸ್ ಜಿ.ಕಪ್ಪಣ್ಣ, ಪ್ರಾಧ್ಯಾಪಕಿ ಉಮಾ ಭಾಗವಹಿಸಲಿದ್ದಾರೆ. ಹಿತೇಶ್ ನಿರ್ದೇಶನದ “ಛಲ’, ವಿಘ್ನೇಶ್ ನಿರ್ದೇಶನದ “ಅಜ್ಞಾನ-ವಿಜ್ಞಾನ’ ಪ್ರದರ್ಶನಗೊಳ್ಳಲಿವೆ.
ಯಾವಾಗ?: ಅ.12, ಶನಿವಾರ ಸಂಜೆ 7 ಮತ್ತು ಅ.13, ಭಾನುವಾರ ಬೆಳಗ್ಗೆ 11
ಎಲ್ಲಿ?: ಬಿಂಬ ರಂಗಶಿಕ್ಷಣ ಕೇಂದ್ರ, 5 ಎ ಮುಖ್ಯರಸ್ತೆ, ವಿಜಯನಗರ 2ನೇ ಹಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.