ಜ್ಞಾನಭಾರತಿಯಲ್ಲಿ ಅಂಬೇಡ್ಕರ್‌,ಬಸವಣ್ಣ,ಬುದ್ಧ!


Team Udayavani, Jun 17, 2017, 3:13 PM IST

5872.jpg

ಬೋಧಿ ವೃಕ್ಷದ ಮೇಲೆ ಕುಳಿತ ಬಾಬಾ ಸಾಹೇಬ್‌ ಅಂಬೇಡ್ಕರ್‌, ಬೌದ್ಧರ ಪರಿಕಲ್ಪನೆಯ ಅಜಂತ-ಎಲ್ಲೋರ ಗುಹೆ, ನಾರಾಯಣಗುರು-ಪೆರಿಯರ್‌ ರಾಮಸ್ವಾಮಿ ನಾಯ್ಕರ್‌, ಬಸವಣ್ಣ-ಕಬೀರ್‌, ನಾಲ್ವಡಿ ಕೃಷ್ಣದೇವರಾಯ ಒಡೆಯರ್‌…… ಹೀಗೇ ಸಮಾಜ ಸುಧಾರಣೆಗೆ ಹೋರಾಡಿದ, ಜ್ಞಾನಾರ್ಜನೆಯ ಸಂದೇಶ ನೀಡಿದ ಅನೇಕರ ಶಿಲ್ಪ ಕಲಾಕೃತಿಗಳು ಬೆಂಗಳೂರು ವಿಶ್ವವಿದ್ಯಾಲಯದ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ನಿರ್ಮಾಣಗೊಂಡಿವೆ.

ಬೀದರ್‌, ಧಾರವಾಡ, ಕಲಬುರಗಿ, ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಮಗಳೂರು, ಉತ್ತರಕನ್ನಡ, ಉಡುಪಿ, ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಮತ್ತು ಕಿರಿಯ ಕಲಾವಿದರು ಜನಪರ ಶಿಲಾ ಶಿಲ್ಪಕಲಾ ಶಿಬಿರದಲ್ಲಿ ಅದ್ಭುತವಾದ 14 ಶಿಲ್ಪಾಕೃತಿಗಳನ್ನು ಸೃಷ್ಟಿಸಿದ್ದಾರೆ. ಮೈಸೂರು ಜಿಲ್ಲೆಯ ಎಚ್‌.ಡಿ ಕೋಟೆಯಿಂದ ತಂದಿರುವ ಶಿಲೆಗೆ ಬೆಂಗಳೂರು ವಿಶ್ವವಿದ್ಯಾಲದ ಜ್ಞಾನಭಾರತಿ ಆವರಣದ ಮರಗಿಡಗಳು ಮಧ್ಯೆ ಕುಳಿತು, ಕುಟ-ಕುಟನೆ ಕುಟ್ಟುತ್ತಾ  ಜೀವ ತುಂಬಿದ್ದಾರೆ.

ಆಕರ್ಷಕ ಶಿಲ್ಪ ಕಲಾಕೃತಿಗಳು
ಅಂಬೇಡ್ಕರ್‌ ಸೃಷ್ಟಿಸಿದ ಆರ್‌ಬಿಐ

1923ರಲ್ಲಿ ಅಂಬೇಡ್ಕರ್‌ರವರು ತಮ್ಮ ಸಂಶೋಧನಾ ಗ್ರಂಥವಾದ ಭಾರತದ ರೂಪಾಯಿ ಸಮಸ್ಯೆ ಮತ್ತು ಪರಿಹಾರ. ಹಣಕಾಸು ವ್ಯವಸ್ಥೆ ಹಾಗೂ ಬ್ಯಾಂಕಿಂಗ್‌ ಬಗ್ಗೆ ವಿಸ್ತೃತವಾದ ವಿಶ್ಲೇಷಣೆ ನೀಡಿದ್ದಾರೆ. ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞರು ಅವರಾಗಿದ್ದಾರೆ. ಆರ್‌ಬಿಐಗೆ ಲಾಂಛನ ಸೂಚಿಸಿದ ಮಹಾನ್‌ ಚಿಂತಕರ ಕಲ್ಪನೆಯಲ್ಲಿ ಆರ್‌ಬಿಐ ಲಾಂಛನದ ಕೆತ್ತನೆ ಮಾಡಿದ್ದೇವೆ. ಇದು ಅಂಬೇಡ್ಕರ್‌ ಅವರ ಆರ್ಥಿಕ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ ಎಂದು ಶಿಲ್ಪಿ ಅಶೋಕ್‌ ಮೇಲಿನಮನಿ ಹಾಗೂ ಶಿವಕುಮಾರ್‌ ಮಾಹಿತಿ ನೀಡಿದರು.

ಚೌಡರ್‌ಕೆರೆ ಚಳುವಳಿ
ರಾಯಘಡ ಜಿಲ್ಲೆಯ ಮಹಡ್‌ದ ಚೌಡರ್‌ಕೆರೆಯನ್ನು ಮಾರ್ಚ್‌1930 ರಲ್ಲಿ ಅಂಬೇಡ್ಕರ್‌ರವರು ಮುಟ್ಟಿದರು. ಅಸ್ಪೃಶ್ಯರಿಗೂ ಸಾರ್ವಜನಿಕ ಸ್ಥಳಗಳ ಪ್ರವೇಶದ ಹಕ್ಕು ಸಿಗಬೇಕು ಎಂದು ಅಂಬೇಡ್ಕರ್‌ ಅವರು ಮೊದಲು ಹೋರಾಟ ಆರಂಭಿಸಿದ್ದರು. ಅದರ ನೆನಪಿಗಾಗಿ ಚೌಡರ್‌ ಕೆರೆ ಚಳುವಳಿಯ ಕಲಾಕೃತಿ ರಚಿಸಲಾಗಿದೆ.

ಕಾಳಾರಾಂ ಚಳುವಳಿ
1930 ರಲ್ಲಿ ಅಂಬೇಡ್ಕರ್‌ರವರು ನಾಸಿಕದಲ್ಲಿ ಅಸ್ಪೃಶ್ಯರೊಂದಿಗೆ ದೇವಾಲಯಗಳ ಪ್ರವೇಶದ ಹಕ್ಕಿಗಾಗಿ ಹೋರಾಟ ಮಾಡಿದರು. ಇದು ದೇವರ ದರ್ಶನಕ್ಕಲ್ಲ, ಮಾನವ ಹಕ್ಕಿನ ಹೋರಾಟ ಎಂಬುದನ್ನು ಸಾರುವ ಶಿಲ್ಪಕಲೆಯೂ ಮೈದಾಳಿದೆ.

ಪುಲೆ ದಂಪತಿ ಮತ್ತು ರಮಾಬಾಯಿ
ಶೋಷಿತರಿಗೇ, ಹಿಂದುಳಿದ ವರ್ಗದರಿಗೆ ಹಾಗೂ ಮಹಿಳೆಯರಿಗೆ ಅಕ್ಷರ ಕಲಿಸಿದವರು ಮತ್ತು ಅವರಿಗಾಗಿ ಶಾಲೆ ತೆರೆದವರು. ಅಂಬೇಡ್ಕರ್‌ರ ಪತ್ನಿ ರಮಾಬಾಯಿ. ಆಕೆ  ತ್ಯಾಗಜೀವಿ. ಅವರ ನೆನಪು ಮತ್ತು ಪರಿಚಯವನ್ನು  ಇಂದಿನ ಪೀಳಿಗೆಗೆ ತಲುಪಿಸಲು ಈ ಕಲಾಕೃತಿ.

ಕಬೀರ-ಬಸವಣ್ಣ
ಸಮಾನತೆಯ ಹರಿಕಾರರಾದ ಸಂತ ಕಬೀರ ಹಾಗೂ ಭ್ರಾತೃತ್ವಕ್ಕಾಗಿ ಹೋರಾಡಿದ ಬಸವಣ್ಣನವರ ಕಲ್ಪನೆಯ ಅನುಭವ ಮಂಟಪ, ಕಾಯಕವೇ ಕೈಲಾಸ ಎಂಬ ತತ್ವ ಎಲ್ಲರಿಗೂ ಪ್ರೇರಣೆಯಾಗಿದೆ. ಅವರನ್ನು ಶಿಲ್ಪದಲ್ಲಿ ಮರು ಸೃಷ್ಟಿಸುವ ಪ್ರಯತ್ನ ಇಲ್ಲಾಗಿದೆ.

ಪ್ರಕೃತಿ ಮಡಿಲಲ್ಲಿ ಬುದ್ಧ
ಬುದ್ಧನಿಗೆ ಪ್ರಕೃತಿ ಕಂಡರೆ ತುಂಬ ಇಷ್ಟ. ಅವರು ಧ್ಯಾನಕ್ಕೆ ಕುಳಿತಿದ್ದು ಹಾಗೂ ಅವರಿಗೆ ಜ್ಞಾನೋದಯವಾಗಿದ್ದು ಪ್ರಕೃತಿಯ ಮಡಿಲಿನಲ್ಲೇ, ಅದನ್ನು ಶಾಂತಿಯ ಸಂಕೇತವಾಗಿ ಜನರಿಗೆ ಪರಿಚಯಿಸುವ ಪ್ರಯತ್ನ ಇಲ್ಲಾಗಿದೆ.

ಭೀಮವೃಕ್ಷದಲ್ಲಿ ಅಂಬೇಡ್ಕರ್‌ 
ಶೋಷಿತ ಸಮುದಾಯಕ್ಕೆ ಸ್ವತಂತ್ರ, ಸಮಾನತೆ, ಭ್ರಾತೃತ್ವದ ಕೊಡುಗೆ ನೀಡಿದ ಸಾಮಾಜಿಕ ಹರಿಕಾರ ಅಂಬೇಡ್ಕರ್‌ ಅವರನ್ನು ಆಲದ ಮರದ ಮೇಲೆ ರಚನೆ ಮಾಡಿರುವುದು ಮನಮೋಹಕವಾಗಿದೆ.

ಸ್ವಾಭಿಮಾನಿ ಚಳುವಳಿಗಾರರು
ತಮಿಳು ನಾಡಿನಲ್ಲಿ ದ್ರಾವಿಡ ಚಳುವಳಿ ಕಟ್ಟಿ, ವ್ಯಚಾರಿಕತೆಯನ್ನು ಬಿತ್ತಿದ ಸಮಾಜ ಸುಧಾರಕ ಪೆರಿಯಾರ್‌ ಹಾಗೂ ಕೇರಳದಲ್ಲಿ ಶಿಕ್ಷಣ ಕ್ರಾಂತಿ ನಡೆಸಿ, ಮೌಡ್ಯದ ವಿರುದ್ಧ ಹೋರಾಡಿದ ನಾರಾಯಣ ಗುರುಗಳನ್ನು ಒಂದೇ ಶಿಲೆಯಲ್ಲಿ ಕೆತ್ತಲಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ 
ಶೋಷಿತ ಮತ್ತು ಹಿಂದುಳಿದ ವರ್ಗಗಳಿಗೆ ಶೇ.75ರಷ್ಟು  ಮೀಸಲಾತಿ ನೀಡಿದವರು, ಜನರ ಜೀವನ ಮಟ್ಟ ಸುಧಾರಣೆಗೆ ಅನೇಕ ರೀತಿಯಲ್ಲಿ ಹೋರಾಟ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್‌, ಛತ್ರಪತಿ ಶಾಹುಮಹಾರಾಜ್‌, ಬಸವಲಿಂಗಪ್ಪ, ಪ್ರೊ.ಕೃಷ್ಣಪ್ಪ ಮೊದಲಾದವರ ಕಲಾಕೃತಿಯ ಝಲಕ್‌ ಶಿಲೆಯಲ್ಲಿ ಕೆತ್ತಲಾಗಿದೆ.

ಶಿಲ್ಪಿಗಳು
 ಶಿಲ್ಪಕಲಾ ಶಿಬಿರದಲ್ಲಿ ಭಾಗವಹಿಸಿದ 15 ಹಿರಿಯ ಹಾಗೂ 15 ಸಹಾಯಕ ಕಲಾವಿದರಿಗೆ ಊಟ, ವಸತಿ ಹಾಗೂ ವೇತನವನ್ನು ಶಿಲ್ಪಕಲಾ ಅಕಾಡೆಮಿ ಹಾಗೂ ಅಂಬೇಡ್ಕರ್‌ ಅಧ್ಯಯನ ಕೇಂದ್ರದಿಂದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗದ ಶಿಲ್ಪಿಗಳಾದ ಅಶೋಕ್‌ ಮೇಲಿನಮನಿ, ಶಿವಕುಮಾರ್‌, ನರೇಶ್‌ನಾಯ್ಕ, ಪ್ರಶಾಂತ್‌, ಚಂದ್ರಶೇಖರ್‌ ನಾಯ್ಕ, ರಾಜಶೇಖರ, ರೇವಣ್ಣ ಪಿ. ಕೆಂಚಪ್ಪಗೋಳ, ಮನುಚಕ್ರವರ್ತಿ ಕೆ.ಎನ್‌, ಸುಕೇಶ್‌ ಬಿ.ಸಿ, ಶಿವಕುಮಾರ್‌, ಉಮೇಶ್‌ ದಂಡಿನ, ರಾಮಕೃಷ್ಣ , ವಿನಯ್‌ಗೌಡ, ಅಮೂಲ್ಯ, ಪ್ರಕಾಶ್‌, ಶ್ವೇತಾ, ಅಶೋಕ್‌, ವೆಂಕಟೇಶ್‌,  ಅನಿಲ್‌ ಬಾಲಚಂದ್ರ ನಾಯ್ಕ, ಓಂಕಾರ್‌ ಮೂರ್ತಿ, ಮಹದೇವಸ್ವಾಮಿ ನರಸಿಂಹ, ಪುನೀತ್‌, ಬಸವರಾಜು, ಮಧುಸೂದನ್‌, ಶಂಕರ್‌, ಸಿದ್ದರಾಜು, ಸುಮನ್‌ ಹಾಗೂ ಆನಂದ ಸೇರಿಕೊಂಡು ಈ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.

ಈ ಎಲ್ಲಾ ಶಿಲ್ಪಕಲೆಗಳು ಸಾರ್ವಜನಿಕರಿಗೆ ಮುಕ್ತವಾಗಿದೆ. ಇದನ್ನು ಶಿಲ್ಪ ಪಾರ್ಕ್‌ ಆಗಿ ನಿರ್ಮಿಸಲಿದ್ದೇವೆ. ಬೆಳಗ್ಗೆ ವಾಯುವಿಹಾರಕ್ಕೆ ಬರುವವರಿಗೂ ವ್ಯವಸ್ಥೆ ಮಾಡಲಾಗುತ್ತದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇವೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಅಂಬೇಡ್ಕರ್‌ ಅಧ್ಯಯನ ಕೇಂದ್ರ ತಲಾ 8 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
-ಪ್ರೊ.ಸಿ.ಬಿ.ಹೊನ್ನುಸಿದ್ಧಾರ್ಥ, ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಬೆಂವಿವಿ

ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.