ಅಣ್ಣನ ನೆನಪು: ವಿಭಿನ್ನ ರಂಗಪ್ರಯೋಗ


Team Udayavani, Feb 10, 2018, 4:09 PM IST

25899.jpg

ತೇಜಸ್ವಿಯವರ ಅನೇಕ ಕೃತಿಗಳು ಈಗಾಗಲೇ ಯಶಸ್ವಿಯಾಗಿ ರಂಗಪ್ರಯೋಗಗೊಂಡಿವೆ. ಆ ಸಾಲಿಗೆ ಈಗ “ಅಣ್ಣನ ನೆನಪು’ ಕೂಡ ಸೇರಿಕೊಂಡಿದೆ. ಜ. 31ರ ಸಂಜೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ತೇಜಸ್ವಿಯವರ ಕೃತಿ “ಅಣ್ಣನ ನೆನಪು’ ರಂಗಪ್ರಯೋಗಗೊಂಡಿತು. ದೇವರಾಜು ಅವರ ನೇತೃತ್ವದ “ಪದ ಸಾಂಸ್ಕೃತಿಕ ವೇದಿಕೆ’ಯ ರಂಗಮಾಧ್ಯಮ ತಂಡದ ಒಡಗೂಡಿ ಈ ನಾಟಕವನ್ನು ಪ್ರದರ್ಶಿಸಿತು. 

1994ರ ನವೆಂಬರ್‌ 11ರಂದು ಕುವೆಂಪು ಅವರು ನಿಧನರಾದರು. ತಮ್ಮ ತಂದೆಯ ಅಗಲಿಕೆಯ ದುಃಖವನ್ನು ತೇಜಸ್ವಿ “ಅಣ್ಣನ ನೆನಪು’ಗಳನ್ನು ಬರೆಯುವ ಮೂಲಕ ನೀಗಿಸಿಕೊಂಡರು. ಈ ಮೂಲಕ ಕನ್ನಡಿಗರ ಪಾಲಿಗೆ ರಸ ಋಷಿ, ಮಹಾಕವಿ ಎಂದು ಬಿಂಬಿತವಾಗಿದ್ದ ಕುವೆಂಪು ವ್ಯಕ್ತಿತ್ವದ ಆವರಣ ಪೊರೆ ಕಳಚಿ, ಕುವೆಂಪು ಕೂಡ ನಮ್ಮ ನಿಮ್ಮಂತೆ ಅನ್ನ ತಿನ್ನುವ ಮನುಷ್ಯ ಎಂಬಂತೆ ತೇಜಸ್ವಿ ಚಿತ್ರಿಸಿದ್ದೇ ಈ ಕೃತಿಯ ಮಹತ್ತಿಗೆ ಕಾರಣ. ಇದರೊಂದಿಗೆ ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯಿಕ ವಾತಾವರಣದ ಚಿತ್ರವೂ ಸೇರಿತು. ಒಬ್ಬ ತಂದೆಯಾಗಿ ಕುವೆಂಪು ಹೇಗಿದ್ದರೆಂಬುದರ ಜೊತೆಗೆ ಬೂಸಾ ಪ್ರಕರಣದಂಥ ಘಟನೆಯ ವಿವರವೂ ಸೇರಿ ಕುವೆಂಪು ಅವರೊಂದಿಗೆ ತೇಜಸ್ವಿಯವರ ಆತ್ಮಕಥೆಯ ಪುಟಗಳಾಗಿಯೂ “ಅಣ್ಣನ ನೆನಪು’ ಮಹತ್ವ ಪಡೆಯಿತು. 

ಇಂಥ ಒಂದು ಕೃತಿಯನ್ನು ರಂಗರೂಪಕ್ಕೆ ತಂದು ನಿರ್ದೇಶಿಸುವ ಸಾಹಸವನ್ನು ಎಸ್‌. ರಂಗಸ್ವಾಮಿಯವರು ಯಶಸ್ವಿಯಾಗಿ ಮಾಡಿದರು. ಅಣ್ಣನ ನೆನಪುವಿನಲ್ಲಿ ಅನೇಕ ಪ್ರಸಂಗಗಳ ಜೋಡಣೆಯಿಂದ ನಾಟಕಕ್ಕೆ ರಂಗು ತುಂಬಿತು. ತೇಜಸ್ವಿ-ಕಡಿದಾಳ್‌ ಶಾಮಣ್ಣನ ಸಂಗೀತಾಭ್ಯಾಸ, ಲೈಸೆನ್ಸ್‌ ಇಲ್ಲದೆ ಸೈಕಲ್‌ ಓಡಿಸಿದ್ದಕ್ಕೆ ಪೊಲೀಸಿನವನೊಂದಿಗಾದ ಜಗಳ, ತೇಜಸ್ವಿ ಇಂಗ್ಲಿಷಿನಲ್ಲಿ ಫೇಲಾದುದಕ್ಕೆ ಕುವೆಂಪು ಅವರ ಪ್ರತಿಕ್ರಿಯೆ, ಬ್ರಾಹ್ಮಣ ಮೇಷ್ಟ್ರು ಕುವೆಂಪು ಮಾಂಸಾಹಾರ ತ್ಯಜಿಸಿದ್ದರಿಂದ ಮಹಾಕಾವ್ಯ ರಚಿಸಲು ಸಾಧ್ಯವಾಯೆ¤ಂದು ಎಳೆಯ ಮಕ್ಕಳನ್ನು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದರ ಕುರಿತು ಕುವೆಂಪು ಖಾರವಾಗಿ ಪ್ರತಿಕ್ರಿಯಿಸಿದ್ದು…ಇವೇ ಮುಂತಾದ ಸನ್ನಿವೇಶಗಳನ್ನು ಜೋಡಿಸಿ, ಇವನ್ನೆಲ್ಲಾ ತೇಜಸ್ವಿ-ಶಾಮಣ್ಣ ನೆನಪಿಸಿಕೊಳ್ಳುತ್ತಾ ಹರಟುತ್ತಿರುವಂತೆ ಸಂಯೋಜಿಸಲಾಗಿತ್ತು. 

ಪ್ರಶಾಂತ ಅಗೇರ ಅವರ ಸಂಗೀತ ನಾಟಕಕ್ಕೆ ಅಷ್ಟೇನೂ ನೆರವು ನೀಡಲಿಲ್ಲ. ಪರೇಶ್‌ ಅವರು ಕುವೆಂಪು ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರು. ಅವರು ಕುವೆಂಪು ಅವರಂತೆಯೇ ನಿಧಾನವಾಗಿ ಮಾತನಾಡುತ್ತಿದ್ದರೆ ಸಿ.ಆರ್‌.ಸಿಂಹ ನೆನಪಾಗುತ್ತಿದ್ದರು. ಕೈಯಲ್ಲಿ ವಾಕಿಂಗ್‌ ಸ್ಟಿಕ್‌ ಮತ್ತು ಕನ್ನಡಕ ಹಾಕಿದ್ದಿದ್ದರೆ ಕುವೆಂಪು ಪಾತ್ರಕ್ಕೆ ಇನ್ನಷ್ಟು ಮೆರಗು ಮೂಡುತ್ತಿತ್ತು. ಆ್ಯಂಗ್ರಿ ಯಂಗ್‌ ಮ್ಯಾನ್‌ ತೇಜಸ್ವಿ ಪಾತ್ರದಲ್ಲಿ ದೀಪಕ್‌ ಗಾರೇಮನೆ ಸೊಗಸಾಗಿ ಅಭಿನಯಿಸಿದರು. ಶಾಮಣ್ಣನ ಪಾತ್ರಕ್ಕೆ  ದೇವರಾಜ್‌ ಅವರು ನ್ಯಾಯ ಒದಗಿಸಿದರಲ್ಲದೆ ತೇಜಸ್ವಿ-ಶಾಮಣ್ಣ ನಿಜವಾಗಿಯೂ ನಮ್ಮೆದುರು ಕುಳಿತು ಹರಟೆ ಹೊಡೆಯುತ್ತಿರುವರೇನೋ ಎಂಬ ಭ್ರಮೆ ಮೂಡುವಷ್ಟು ಚೆನ್ನಾಗಿತ್ತು. ಕುವೆಂಪು-ತೇಜಸ್ವಿ-ಶಾಮಣ್ಣ- ಈ ಮೂರು ಮುಖ್ಯ ಪಾತ್ರಗಳ ಸೃಷ್ಟಿಯಲ್ಲಿ ಪ್ರಸಾದನ ಮಾಡಿದ ರಾಮಕೃಷ್ಣ ಬೆಳತೂರು ಅವರ ಪರಿಶ್ರಮ ಎದ್ದು ಕಾಣುತ್ತಿತ್ತು.   

ಒಟ್ಟಾರೆ ನಾಟಕದ ಅವಧಿ ಐವತ್ತು ನಿಮಿಷ. ಇನ್ನಷ್ಟು ಸ್ವಾರಸ್ಯಕರವಾದ ಸಂಗತಿಗಳನ್ನು ನಿರ್ದೇಶಕರು ತೋರಿಸಬಹುದಿತ್ತು. ಹೇಮಾವತಿ ಕುವೆಂಪು ಅವರ ಪಾತ್ರದ ನಿರ್ವಹಣೆ ಅಷ್ಟೇನೂ ಸಮಾಧಾನಕರವಾಗಿಲ್ಲದೇ ಇದ್ದದ್ದು ನಾಟಕದ ದೋಷಗಳಲ್ಲೊಂದು ಎನಿಸುತ್ತಿತ್ತು. 

ಯಾವುದೇ ಹೆಚ್ಚಿನ ರಂಗಪರಿಕರಗಳನ್ನೂ ಅವಲಂಬಿಸದೆ ಎಲ್ಲಿಯೂ ಬೋರ್‌ ಆಗದಂತೆ ನಾಟಕವನ್ನು ರಂಗಸ್ವಾಮಿಯವರು ಯಶಸ್ವಿಯಾಗಿ ನಿರ್ದೇಶಿಸಿದ್ದನ್ನು ಶ್ಲಾ ಸಲೇಬೇಕು. ಅಂದಿನ ಮತ್ತೂಂದು ವಿಶೇಷವೆಂದರೆ, ಒಂದು ಕಡೆ ತೇಜಸ್ವಿ ಬರೆದ “ಅಣ್ಣನ ನೆನಪು’ ಪ್ರಯೋಗವಾಗುತ್ತಿದ್ದರೆ, ಪಕ್ಕದಲ್ಲೇ ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’ ಪ್ರದರ್ಶನಗೊಳ್ಳುತ್ತಿತ್ತು. ಆಕಸ್ಮಿಕ ಯೋಗಾಯೋಗವೆಂದರೆ ಇದೇ ಅಣ್ಣನ ನೆನಪು ನೋಡಿದ ಕೆಲವು ತರುಣರು ಮದುಮಗಳು ನೋಡಲು ಓಡಿದರು!

 ಡಾ. ಎಚ್‌.ಎಸ್‌.ಸತ್ಯನಾರಾಯಣ

ಟಾಪ್ ನ್ಯೂಸ್

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.