ಹೊಸವರ್ಷದ ಹೊಸ್ತಿಲಲ್ಲಿ ಹಳೇಬೀಡಿಗೆ ಬನ್ನಿ


Team Udayavani, Dec 23, 2017, 4:21 PM IST

2-sss.jpg

ನಾವು ಅಂಗಡಿ, ಮಳಿಗೆಗಳಲ್ಲಿ ಆಸೆಯಿಂದ ಕೊಳ್ಳುವ ಅದೆಷ್ಟೋ ಹೊಚ್ಚ ಹೊಸ ವಸ್ತುಗಳು ಬಹಳ ಬೇಗನೆ ಮೂಲೆ ಸೇರಿಬಿಡುತ್ತವೆ. ಆದರೆ ನಾವು ಭದ್ರವಾಗಿ ಪೆಟ್ಟಿಗೆಯಲ್ಲಿ ಕಾಪಿಟ್ಟುಕೊಂಡಿರುವ ಚಿಕ್ಕಪುಟ್ಟ ವಸ್ತುಗಳು ಅಷ್ಟು ಸುಲಭಕ್ಕೆ ಮಾಸುವುದಿಲ್ಲ, ಕಳೆದುಹೋಗುವುದಿಲ್ಲ. ಏಕೆಂದರೆ ಅವು ನೆನಪುಗಳು. ನೆನಪುಗಳಿಗೆ ಎಕ್ಸ್‌ಪೈರಿ ದಿನಾಂಕ ಇರುವುದಿಲ್ಲ! ಹಾಗೆ ನೋಡಿದರೆ ಆ್ಯಂಟಿಕ್‌ ಮಳಿಗೆಗಳು, ಸೆಕೆಂಡ್ಸ್‌ ಪುಸ್ತಕದಂಗಡಿಗಳು ನಮ್ಮನ್ನು ಹಳೆಯ ಕಾಲಕ್ಕೆ ಹೊತ್ತೂಯ್ಯುವ ಕಾಲಯಂತ್ರಗಳೇ ಸರಿ!

ಹೊಸ ವರ್ಷಕ್ಕೆ ಕಾಲಿಡುವ ಹೊತ್ತಿನಲ್ಲಿ ನಮಗೆ ಮುಂದೆ ಬರಲಿರುವ ವರ್ಷದ್ದೇ ಯೋಚನೆ. ಮನೆಗೆ ಹೊಸದಾಗಿ ಯಾವ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರುವುದು, ಪ್ರವಾಸದ ಪ್ಲಾನಿಂಗು, ಯಾವ ಏರಿಯಾಗೆ ಮನೆ ಶಿಫ‌ುr ಮಾಡೋದು, ಈ ಬಾರಿ ಮಕ್ಕಳ ಹುಟ್ಟಿದಹಬ್ಬಕ್ಕೆ ಏನು ಉಡುಗೊರೆ ಕೊಡೋದು, ಹೀಗೆ ಹೊಚ್ಚ ಹೊಸ ಸಂಗತಿಗಳಲ್ಲೇ ನಮ್ಮ ಮನಸ್ಸು ಕಳೆದು ಹೋಗುವುದು. ಅದು ಸಹಜ ಕೂಡಾ. ಹಾಗೆ ನೋಡಿದರೆ ಹೊಸ ವರ್ಷ ಎನ್ನುವುದು ಪ್ರತಿಯೊಬ್ಬರಿಗೂ ಒಂದು ಮೈಲಿಗಲ್ಲು ಇದ್ದಂತೆ. ಹೊಸ ನಿವೇದನೆಗಳನ್ನು ಮಾಡಿಕೊಳ್ಳಲು, ಹೊಸ ಗುರಿಗಳನ್ನು ಹಾಕಿಕೊಳ್ಳಲು ಹೊಸ ವರ್ಷ ಅನ್ನೋದು ಬಹುತೇಕರಿಗೆ ಡೆಡ್‌ಲೈನ್‌. ಆದರೆ ಹೊಸತರ ಜೊತೆ ಜೊತೆಗೇ ನಾವು ಹಳತನ್ನೂ ನಮ್ಮ ಜೊತೆ ಕೊಂಡೊಯ್ಯುತ್ತಿದ್ದೇವೆ ಎನ್ನುವುದನ್ನು ಈ ಕ್ಷಣದಲ್ಲಿ ಮರೆಯುತ್ತಿದ್ದೇವೆ ಎಂದೆನಿಸುತ್ತಿದೆ. 

ಹೊಸ ವರ್ಷದಂದು ಹೊಸತರ ಬಗ್ಗೆ ಚಿಂತಿಸುವಂತೆಯೇ ಹಳತನ್ನು ಮೆಲುಕು ಹಾಕಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನೆನಪುಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಹಿಯೇ ಇರಲಿ, ಸಿಹಿಯೇ ಇರಲಿ, ನೆನಪುಗಳು ಬೇಕು! ಹೀಗಾಗಿ ಹೊಸತನ್ನು ಅಪ್ಪಿಕೊಳ್ಳುವ ಮುನ್ನ ಒಮ್ಮೆ ಕಪಾಟಿನ ಮೂಲೆಯಲ್ಲಿ ಅಥವಾ ಅಟ್ಟದ ಮೇಲೆ ನೀವು ಜತನದಿಂದ ಕಾಪಾಡಿಕೊಂಡಿರುವ ನಿಮ್ಮ ಹಳೆ ಪೆಟ್ಟಿಗೆಯನ್ನು ತೆರೆಯಿರಿ. ಅಥವಾ ಡೈರಿ ಪುಸ್ತಕ ಹಾಳೆಗಳನ್ನು ಒಂದೊಂದಾಗಿ ತಿರುವಿ. ನಾವು ಅಂಗಡಿ, ಮಳಿಗೆಗಳಲ್ಲಿ ಕೊಳ್ಳುವ ಅದೆಷ್ಟೋ ವಸ್ತುಗಳು ಬಹಳ ಬೇಗನೆ ಮೂಲೆ ಸೇರಿಬಿಡುತ್ತವೆ. ಆದರೆ ನಾವು ಭದ್ರವಾಗಿ ಪೆಟ್ಟಿಗೆಯಲ್ಲಿ ಕಾಪಿಟ್ಟುಕೊಂಡಿರುವ ಚಿಕ್ಕಪುಟ್ಟ ವಸ್ತುಗಳಲ್ಲಿ, ಡೈರಿಯ ಅಕ್ಷರಗಳು ಸುಲಭಕ್ಕೆ ಮಾಸುವುದಿಲ್ಲ, ಕಳೆದುಹೋಗುವುದಿಲ್ಲ. ಏಕೆಂದರೆ ಅವು ನೆನಪುಗಳು. ನೆನಪುಗಳಿಗೆ ಎಕ್ಸ್‌ಪೈರಿ ದಿನಾಂಕ ಇರುವುದಿಲ್ಲ! 

ಅದಕ್ಕೇ ಹಳತರ ಗೀಳಿರುವವರನ್ನು ನಾವು ಹೆಚ್ಚಾಗಿ ಆ್ಯಂಟಿಕ್‌ ವಸ್ತುಗಳ ಅಂಗಡಿಗಳಲ್ಲೋ, ಗುಜರಿಯಂಗಡಿಯಲ್ಲೋ, ಸೆಕೆಂಡ್ಸ್‌ ಪುಸ್ತಕದ ಮಳಿಗೆಯಲ್ಲೋ ವಸ್ತುವೊಂದರ ಹುಡುಕಾಟದಲ್ಲಿರುವುದನ್ನು ಕಾಣುತ್ತೇವೆ. ಎಂದೋ ಓದಿ ಕಳೆದುಕೊಂಡ ಪುಸ್ತಕವಿರಬಹುದು, ಯಾವುದೋ ಜಮಾನಾದಲ್ಲಿ ಕೇಳಿದ್ದ ಗ್ರಾಮೋಪೋನ್‌ ರೆಕಾರ್ಡ್‌ ಇರಬಹುದು, ಯಾರೂ ಕೇಳದೇ ಇದ್ದ ಓಬಿರಾಯನ ಕಾಲದ ಕಂಪನಿಯ ಗಡಿಯಾರವಿರಬಹುದು ಹೀಗೆ ಒಂದಿಲ್ಲೊಂದು ವಸ್ತುಗಳ ಹಿಂದೆ ಬೀಳುವುದರಲ್ಲೂ ಒಂದು ಸಂತಸವಿದೆ. ಈ ಸಂತಸವನ್ನು ನಿಮ್ಮದಾಗಿಸಿಕೊಳ್ಳಲು ಬೆಂಗಳೂರಿನಲ್ಲಿ ಹಳೆ ವಸ್ತುಗಳು ಸಿಗೋ 5 ಜಾಗಗಳನ್ನು ನೀಡಿದ್ದೇವೆ. ಸಮಯವಾದರೆ ಒಮ್ಮೆ ಹೋಗಿ ಬನ್ನಿ.

ಅಪಾಲಜಿ ಗ್ಯಾಲರಿ
ಫ್ರೆàಜರ್‌ ಟೌನ್‌ಗೆ ಸಮೀಪವಿರುವ ರಿಚರ್ಡ್ಸ್‌ ಟೌನ್‌ನಲ್ಲಿ ಅಪಾಲಜಿ ಗ್ಯಾಲರಿ ಇದೆ. ವ್ಯಂಗ್ಯ ಚಿತ್ರಕಾರ- ಕಲಾವಿದ ಪೌಲ್‌ ಫೆರ್ನಾಂಡಿಸ್‌ ಮಾಲಕತ್ವದ ಮಳಿಗೆ ಇದು. 60- 70ರ ದಶಕದಲ್ಲಿ ಬೆಂಗಳೂರು ಹೇಗಿತ್ತು ಎಂಬುದನ್ನು ವಿವರಿಸುವ ಅಪರೂಪದ ಕಲಾಕೃತಿಗಳು, ವ್ಯಂಗ್ಯಚಿತ್ರಗಳು ಇಲ್ಲಿವೆ. ಶಿವಾಜಿನಗರ, ಎಂ.ಜಿ. ರಸ್ತೆ ಹಾಗೂ 7 ಏರ್‌ಲೈನ್ಸ್‌ ಹೋಟೆಲಿನ ಪ್ರದೇಶ 70ರ ದಶಕದಲ್ಲಿ ಹೇಗಿತ್ತು ಎಂಬುದನ್ನು ಇಲ್ಲಿರುವ ಕಲಾಕೃತಿಗಳು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತವೆ. ಇಷ್ಟಲ್ಲದೆ ಹೆಂಗಸರು, ಮಕ್ಕಳು ಬಳಸುವ ಬ್ಯಾಗ್‌ಗಳು, ಮನೆಯನ್ನು ಚೆಂದಗಾಣಿಸುವ, ಮನಸ್ಸಿಗೆ ಖುಷಿ ಕೊಡುವ ವಸ್ತುಗಳು ಇಲ್ಲಿ ಲಭ್ಯ. ಖರೀದಿಸದೇ ಹೋದರೂ ಇಲ್ಲಿನ ವಸ್ತುವೈವಿಧ್ಯವನ್ನು ಕಣ್ತುಂಬಿಕೊಳ್ಳಲು ಈ ಮಳಿಗೆಗೆ ಭೇಟಿ ಕೊಡಬಹುದು.

ಎಲ್ಲಿ?: ನಂ.5, ಕ್ಲಾರ್ಕ್‌ ರಸ್ತೆ, ರಿಚರ್ಡ್ಸ್‌ ಟೌನ್‌

ಬಾಲಾಜಿ ಆ್ಯಂಟಿಕ್ಸ್‌ 
ಬೆಂಗಳೂರಿನ ಪುರಾತನ ಆ್ಯಂಟಿಕ್‌ ಮಾರಾಟ ಮಳಿಗೆಯೆಂದರೆ ಬಾಲಾಜಿ ಆ್ಯಂಟಿಕ್ಸ್‌. 1924ರಲ್ಲಿ, ಅಂದರೆ 83 ವರ್ಷಗಳ ಹಿಂದೆಯೇ ಆರಂಭವಾದ ಮಳಿಗೆ ಎಂಬ ಹೆಗ್ಗಳಿಕೆ ಇದಕ್ಕಿದೆ. ಆರಂಭದ ದಿನಗಳಲ್ಲಿ ಗ್ರಾಮೋಪೋನ್‌ ಹಾಗೂ ವರ್ಣಚಿತ್ರಗಳನ್ನು ಮಾತ್ರವೇ ಇಲ್ಲಿ ಮಾರಲಾಗುತ್ತಿತ್ತು. ಹಳೆಯ ಕಾಲದ ಕಡಗಗಳು, ಟೈಪ್‌ರೈಟಿಂಗ್‌ ಮಶೀನುಗಳು, ಕಪ್ಪು ಬಿಳುಪು ಸಿನಿಮಾಗಳ ಪೋಸ್ಟರ್‌ಗಳು ಸೇರಿದಂತೆ ಹಳೆಯ, ಸುಸ್ಥಿತಿಯಲ್ಲಿರುವ ವಸ್ತುಗಳು ಇಲ್ಲಿ ಸಿಗುತ್ತವೆ.
ಎಲ್ಲಿ?: ನಂ.64 ಬಾಲಾಜಿ ಸಿಲ್ಕ್ ಕಾಂಪ್ಲೆಕ್ಸ್‌, ಅವೆನ್ಯೂ ರಸ್ತೆ, ರೇಮಂಡ್ಸ್‌ ಶೋರೂಂ ಎದುರು

ತರಂಗ್‌ ಆರ್ಟ್ಸ್
ಶಾಪಿಂಗ್‌ ಅಂದ ತಕ್ಷಣ ಜಯನಗರದ ಹೆಸರು ನೆನಪಾಗಲೇಬೇಕು. ಒಂದು ರೂಪಾಯಿಯಿಂದ ಒಂದು ಕೋಟಿ ರೂಪಾಯಿವರೆಗಿನ ಬೆಲೆಯ ವಸ್ತುಗಳು ಇಲ್ಲಿ ಲಭ್ಯ. ಈ ಏರಿಯಾದಲ್ಲೇ ಇದೆ ತರಂಗ್‌ ಆರ್ಟ್ಸ್ ಮಳಿಗೆ. ಹಿತ್ತಾಳೆ ಕಂಚಿನ, ಬಂಗಾರ ಲೇಪನದ, ದೇವರ ಮೂರ್ತಿಗಳು, ತಂಜಾವೂರ್‌ ಶೈಲಿಯ ಕಲಾಕೃತಿಗಳು. ಇಲ್ಲಿ ಸಿಗೋ ವಸ್ತುಗಳಲ್ಲಿ ಬಹುತೇಕವು ಗ್ರಾಮೀಣ ಬಾಗದ ಕುಶಲಕರ್ಮಿಗಳು ತಯಾರಿಸಿದವಾಗಿವೆ. 
ಎಲ್ಲಿ?: 11ನೇ ಮುಕ್ಯರಸ್ತೆ, ಜಯನಗರ 4ನೇ ಬ್ಲಾಕ್‌

ಗ್ರಾಫಿಕರಿ
ಬಗೆಬಗೆಯ ವಿನ್ಯಾಸ, ಹತ್ತಾರು ಕಲರ್‌ಗಳ ಕೀ ಚೈನ್‌ಗಳು, ಗೋಡೆಯ ಚೆಂದ ಹೆಚ್ಚಿಸುವ ಕಲಾಕೃತಿಗಳು, ಕನx- ಹಿಂದಿ- ತೆಲುಗಿನ ಹಳೆಯ ಸಿನಿಮಾ ಪೋಸ್ಟರ್‌ಗಳು, ಬೆಡ್‌ರೂಮಿನ ಅಂದ ಹೆಚ್ಚಿಸುವ ಗೃಹಾಲಂಕಾರ ವಸ್ತುಗಳು ಬೇಕೆಂದರೆ ಗ್ರಾಫಿಕರಿ ಅಂಗಡಿಗೆ ಬನ್ನಿ.
ಎಲ್ಲಿ?: ಗ್ರಾಫಿಕರಿ, ನಂ.1, ಶ್ರದ್ದಾ ಕಾಂಪ್ಲೆಕ್ಸ್‌, 4ನೇ ಕ್ರಾಸ್‌, ಕಗ್ಗದಾಸಪುರ 

ಲೆವಿಟೇಟ್‌
ಹಾಲ್‌ನಲ್ಲಿರುವ ಟೇಬಲ್‌ ಮೇಲೆ, ಶೋಕೇಸಿನೊಳಗೆ ಥರಹೇವಾರಿ ಗೊಂಬೆಗಳ ಕಲಾಕೃತಿಗಳಿದ್ದರೆ ಮನೆಯ ಸೌಂದರ್ಯ ದುಪ್ಪಟ್ಟಾಗುವುದು ಗ್ಯಾರೆಂಟಿ. ಇವುಗಳ ಜೊತೆಗೇ ಕೈಗೆಟುಕುವ ದರದಲ್ಲಿ ಪುರಾತನ ಮಾದರಿಯ ಓಲೆ, ಜುಮುಕಿಗಳು, ಬಗೆ ಬಗೆಯ ಸರಗಳು, ಚಿತ್ರಗಳಿಂದ ಕೂಡಿದ ಮಣ್ಣಿನ ಕಲಾಕೃತಿಗಳು ಈ ಮಳಿಗೆಯ ವಿಶೇಷ. ಇದರ ಜೊತೆಗೆ ರಾಜಸ್ತಾನಿ ಕುಸುರಿ ಕೆಲಸವುಳ್ಳ ಬ್ಯಾಗ್‌ಗಳು, ಮಗ್‌ಗಳು ಸೇರಿದಂತೆ ಮನೂರೆಂಟು ವಸ್ತುಗಲಿಗೆ ಲೆವಿಟೇಟ್‌ ಮಳಿಗೆ ತವರುಮನೆ.
ಎಲ್ಲಿ?: ನಂ.777/1, 100 ಅಡಿ ರಸ್ತೆ, ಇಂದಿರಾನಗರ

ಟಾಪ್ ನ್ಯೂಸ್

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.