ಚಂಡೆ ಹುಡುಗಿ
Team Udayavani, Mar 4, 2017, 2:51 PM IST
ಯಕ್ಷಗಾನದ ಹಿಮ್ಮೇಳದ ಚಂಡೆ ಮತ್ತು ಮದ್ದಲೆವಾದನದಲ್ಲಿ ಅದ್ಭುತ ಪರಿಣತಿಯನ್ನು ಸಾಧಿಸಿರುವುದರಲ್ಲಿ ಬಹುತೇಕರು ಗಂಡಸರೇ. ಆದರೆ ಈಗ ಇನ್ನೊಂದು ಹೆಸರಿದೆ. ಅದು ಅಪೂರ್ವ ಆರ್. ಸುರತ್ಕಲ್.
ಯಕ್ಷಗಾನದಲ್ಲಿ ಎರಡು ಪ್ರಕಾರಗಳಿವೆ. ಒಂದು ತೆಂಕುತಿಟ್ಟು, ಇನ್ನೊಂದು ಬಡಗುತಿಟ್ಟು. ಯಕ್ಷಗಾನ ಎಂದಾಗಥಟ್ಟನೆ ನೆನಪಿಗೆ ಬರುವುದು ಚಂಡೆಯ ಅದ್ಭುತ ಶಬ್ದ, ಭಿನ್ನವಾದ ವೇಷ ಭೂಷಣಗಳು ಮತ್ತು ಅದ್ಭುತ ನಾಟ್ಯ. ಯಕ್ಷಲೋಕದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದವರಲ್ಲಿ ಹೆಚ್ಚಿನವರೆಲ್ಲರೂ ಪುರುಷರೇ .ಇದಕ್ಕೆ ಕಾರಣವೂ ಇಲ್ಲದಿಲ್ಲ. ರಾತ್ರಿಯಿಂದ ಮೊದಲ್ಗೊಂಡು ಬೆಳಗ್ಗಿನವರೆಗೂ ಪ್ರದರ್ಶನ ನಡೆಯುವುದರಿಂದ ರಾತ್ರಿ ಇಡೀ ನಿದ್ದೆ ಬಿಡಬೇಕಾದ ಅನಿವಾರ್ಯತೆಯೂ ಇದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮಹಿಳಾ ಸಾಧಕರು ಕಾಣಸಿಗುವುದು ಅತ್ಯಂತ ವಿರಳವೆಂದು ಹೇಳಬಹುದು. ಇಂತಹ ಸವಾಲಿನ ಕ್ಷೇತ್ರವನ್ನೇ ಆಯ್ದುಕೊಂಡು ಇಲ್ಲೇ ಸಾಧನೆಯನ್ನು ಮಾಡಿರುವುದು ವಿಶೇಷ. ಯಕ್ಷಗಾನದಲ್ಲಿ ಹಲವಾರು ಮಹಿಳಾ ಪಾತ್ರಧಾರಿಗಳು ಮತ್ತು ಭಾಗವತರು ಸಾಧನೆಯನ್ನು ಮಾಡಿರಬಹುದು. ಆದರೆ ಚಂಡೆವಾದನದ ಕ್ಷೇತ್ರದಲ್ಲಿ ಮಹಿಳಾ ಸಾಧಕಿಯರುಕಾಣ ಸಿಗುವುದು ಅತ್ಯಂತ ವಿರಳ.
ತೆಂಕುತಿಟ್ಟು ಯಕ್ಷಗಾನ ಪ್ರಕಾರದಲ್ಲಿ ಚಂಡೆಗೆ ಹೆಚ್ಚಿನ ಪ್ರಾಶಸ್ತ$Âವಿದ್ದು, ಸುಮಾರು ಎರಡರಿಂದ ಮೂರು ಕೆ.ಜಿ ತೂಗುವ ಚಂಡೆಯನ್ನು ಹೆಗಲೇರಿಸಿ ಅದನ್ನು ನಿಂತುಕೊಂಡೇ ಬಾರಿಸುವುದರ ಮೂಲಕ ಪಾತ್ರಧಾರಿಗೆ ಸ್ಪೂರ್ತಿ ತುಂಬುವುದು ಈ ಕೆಲಸದ ವಿಶೇಷ. ಇದು ಸವಾಲು ಕೂಡ. ಯಕ್ಷಗಾನದಲ್ಲಿ ಕಲಾವಿದರು ಮತ್ತು ಚಂಡೆವಾದಕರ ನಡುವಿನ ಪೈಪೋಟಿ ಎಂದೇ ಹೇಳಬಹುದು. ಕುಣಿತದಲ್ಲಿ ಕಲಾವಿದನಿಗೆ ಪ್ರೇಕ್ಷಕರ ಶಿಳ್ಳೆ ಮತ್ತು ಚಪ್ಪಾಳೆಗಳು ಬಿತ್ತೆಂದರೆ ಸಾಕು ಕಲಾವಿದ ಚಂಡೆವಾದಕನನ್ನು ಸುಸ್ತಾಗಿಸಲು ನೋಡುತ್ತಾನೆ. ಇಂತಹ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ನಿರ್ಧಾರವನ್ನು ಮಾಡಿದ ಅಪೂರ್ವಳ ಆತ್ಮಸ್ಥೈರ್ಯವನ್ನು ಮೆಚ್ಚಲೇಬೇಕು.
ಈ ಬಹುಮುಖ ಪ್ರತಿಭೆಗೆತಂದೆ ರಮೇಶ್ ಪ್ರೇರಣೆ. ಅಪೂರ್ವ ಸುರತ್ಕಲ್ ಹುಟ್ಟು ಪ್ರತಿಭೆಯ ಖನಿ. ಎರಡನೆಯ ತರಗತಿಯಲ್ಲೇ ಸುರತ್ಕಲ್ನ ವಿದ್ವಾನ್ಚಂದ್ರಶೇಖರ ನಾವುಡರಿಂದ ಭರತನಾಟ್ಯ ಕಲಿಕೆ ಪ್ರಾರಂಭ. ಭರತನಾಟ್ಯದಲ್ಲಿ ಸೀನಿಯರ್ ಮುಗಿದಿದೆ. ಅಪೂರ್ವಳ ಅಸಕ್ತಿಯು ಯಕ್ಷಗಾನದೆಡೆಗೆ ತಿರುಗಲು ಪ್ರಮುಖ ಪ್ರೇರಣೆ ಈಕೆಯ ತಂದೆ. ದೇವರ ಮೆರವಣಿಗೆ ಮತ್ತು ದೇವರ ಪ್ರದಕ್ಷಿಣೆಯಲ್ಲಿ ತಂದೆಯು ಚಂಡೆ ಭಾರಿಸುತ್ತಾರೆ. ಬೃಹತ್ ಕಿರೀಟ ತೊಟ್ಟ ಆರ್ಭಟಿಸುವ ರಾಕ್ಷಸನ ಪಾತ್ರಧಾರಿಯಾಗಿ, ನಾಟಕದಲ್ಲಿ ಅಪ್ರತಿಮ ಪಾತ್ರಧಾರಿಯಾಗಿ ರಮೇಶ್ ಬಹುಮುಖ ಪ್ರತಿಭೆ. ಅಪ್ಪನ ಹವ್ಯಾಸವನ್ನು ಎಳೆ ಮಗುವಿನಿಂದಲೇ ನೋಡುತ್ತಾ ಬೆಳೆದ ಅಪೂರ್ವಾಳ ಅಸಕ್ತಿಯು ಚಂಡೆವಾದನದೆಡೆಗೆ ತಿರುಗಿತು. ತಾಯಿ ರೂಪಾರವರೂ ಮದ್ದಲೆ ವಾದನವನ್ನು ಕಲಿತಿದ್ದಾರೆ. ಇದೂ ಸಹ ಪ್ರೇರಣೆ. ದ್ವಿತೀಯ ಪಿಯುಸಿ ಓದುತ್ತಿರುವ ಸಹೋದರ ಅಮೋಘ ಸುರತ್ಕಲ್ ಸಹ ಚಂಡೆ ಮತ್ತು ಮದ್ದಲೆವಾದನದಲ್ಲಿ ಪರಿಣತಿಯನ್ನು ಹೊಂದಿದ್ದು ಹವ್ಯಾಸಿ ಹಿಮ್ಮೇಳ ವಾದಕರಾಗಿದ್ದಾರೆ. ಇವರ ಕುಟುಂಬ ಪೂರ್ತಿ ಕಲಾರಾಧಕರಿಂದ ಕೂಡಿದ್ದು, ಕಲೆ ಮತ್ತು ಕೌಶಲ್ಯಎಂಬುವುದು ಈಕೆಗೆ ತನ್ನ ಹೆತ್ತವರಿಂದ ಹುಟ್ಟುತ್ತಲೇ ರಕ್ತದಲ್ಲೇ ಬಂದಿದೆ ಎನ್ನಬಹುದು.
ತಂದೆಯಿಂದಲೇ ಪ್ರೇರಿತಳಾದ ಈಕೆ 5ನೇತರಗತಿಯಲ್ಲೇ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ರಿಂದ ಮದ್ದಲೆವಾದನವನ್ನು ಕಲಿತಳು. ಜೊತೆ ಜೊತೆಗೆ ಈಕೆ ಅದ್ಭುತ ಚಿತ್ರಗಾರ್ತಿಯೂ ಹೌದು. ಪ್ರಸಿದ್ಧ ಯಕ್ಷಗಾನ ಮೇಳಗಳಾದ ಕಟೀಲು ಮತ್ತು ಧರ್ಮಸ್ಥಳ ಮೇಳಗಳ ಪ್ರದರ್ಶನಗಳಲ್ಲಿ ಹಿರಿಯ ಕಲಾವಿದರಿಗೂ ಚಂಡೆ ನುಡಿಸಿದ್ದಾಳೆ.
ಸಂತೋಷ್ರಾವ್ ಪೆರ್ಮುಡ
ಚಿತ್ರಗಳು: ಸಂದೀಪ್ ಕೆ. ಬಳ್ಳಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.