ಆರ್ಟ್ to ಹಾರ್ಟ್
ಇದು ದಿವ್ಯಾಂಗರ ಚಿತ್ರಸಂತೆ
Team Udayavani, Feb 22, 2020, 6:09 AM IST
ಕೈಗಳೇ ಇಲ್ಲದವರು ಕಲಾವಿದರಾಗಬಹುದಾ? ಕಾಲಿನಲ್ಲೋ, ಬಾಯಿಯಲ್ಲೋ ಬ್ರಷ್ ಕಚ್ಚಿಕೊಂಡು ಗೆರೆ ಎಳೆಯಲು, ಕಲ್ಪನೆಗೆ ಬಣ್ಣ ತುಂಬಲು ಸಾಧ್ಯವಾ? ಸಿಕೆಪಿಯಲ್ಲಿ ಇದಕ್ಕೆ ಉತ್ತರ ಸಿಗಲಿದೆ…
ಕೈ ಇದ್ದವರಿಗೆಲ್ಲ ಕಲೆ ಒಲಿಯುವುದಿಲ್ಲ ಎಂಬ ಮಾತಿದೆ. ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲ ಎಂಬುದು ಆ ಮಾತಿನ ಅರ್ಥ. ಹಾಗಾದರೆ, ಕೈಗಳೇ ಇಲ್ಲದವರು ಕಲಾವಿದರಾಗಬಹುದಾ? ಕಾಲಿನಲ್ಲೋ, ಬಾಯಿಯಲ್ಲೋ ಬ್ರಷ್ ಕಚ್ಚಿಕೊಂಡು ಗೆರೆ ಎಳೆಯಲು, ಕಲ್ಪನೆಗೆ ಬಣ್ಣ ತುಂಬಲು ಸಾಧ್ಯವಾ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಚಿತ್ರಕಲಾ ಪರಿಷತ್‌ಗೆ ಬನ್ನಿ.
ಅಲ್ಲಿ, ಮೌತ್ ಆ್ಯಂಡ್ ಫುಟ್ ಪೇಟಿಂಗ್ ಆರ್ಟಿಸ್ಟ್ ಅಸೋಸಿಯೇಷನ್ (ಬಾಯಿ ಮತ್ತು ಪಾದ ಚಿತ್ರಕಲಾವಿದರ ಸಂಸ್ಥೆ) ವತಿಯಿಂದ ವಿಶೇಷಚೇತನ ಕಲಾವಿದರ ಚಿತ್ರ ಪ್ರದರ್ಶನ ಹಾಗೂ ಪ್ರತ್ಯಕ್ಷ ನಿರೂಪಣೆ ಹಮ್ಮಿಕೊಳ್ಳಲಾಗಿದೆ. 20 ಕಲಾವಿದರು ಭಾಗವಹಿಸುವ ಈ ಪ್ರದರ್ಶನವು, ಶನಿವಾರ ಸಂಜೆ 4-7ರವರೆಗೆ ನಡೆಯಲಿದೆ. ಕಲಾವಿದರು ಸ್ಥಳದಲ್ಲೇ ಚಿತ್ರಕಲೆಗಳನ್ನು ರಚಿಸಲಿದ್ದಾರೆ.
ಮೃದುಲ್ ಘೋಷ್: 1988ರಲ್ಲಿ ಜನಿಸಿದ ಮೃದುಲ್, 2010ರವರೆಗೆ ಭಾರತೀಯ ವಾಯುಸೇನೆಯಲ್ಲಿದ್ದರು. ಕರ್ತವ್ಯದ ಮಧ್ಯದಲ್ಲಿ ನಡೆದ ಅವಘಡದಲ್ಲಿ ಅವರ ಬೆನ್ನು ಹುರಿಗೆ ಪೆಟ್ಟುಬಿತ್ತು. ಚಿಕಿತ್ಸೆ ಪಡೆದರೂ ಪ್ರಯೋಜನವಾಗದೆ, ಮೃದುಲ್ ಸೇವೆಯಿಂದ ನಿವೃತ್ತರಾದರು. ಅಷ್ಟರಲ್ಲೇ 4 ಬಾರಿ ಪಾರ್ಶ್ವವಾಯುಗೆ ತುತ್ತಾಗಿದ್ದ ದೇಹ, ಶಾಶ್ವತವಾಗಿ ವ್ಹೀಲ್‌ಚೇರ್‌ಗೆ ಅಂಟಿಕೊಂಡಿತು. ಪುಣೆಯ ಪ್ಯಾರಾಪೆಲೆಜಿಕ್ ಪುನಃಶ್ಚೇತನ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವಾಗ ಅವರು ಚಿತ್ರಕಲೆಯತ್ತ ಹೊರಳಿದರು. ನೆಲಕ್ಕೆ ಅಂಟಿಕೊಂಡ ಅವರ ಬದುಕಿಗೆ ಈಗ ಚಿತ್ರಕಲೆ ಹೊಸ ಬಣ್ಣ ತುಂಬಿದೆ.
ಜಿಲ್‌ಮೋಲ್ ಮ್ಯಾರಿಯೆಟ್ ಥಾಮಸ್: ಕೇರಳದ ಜಿಲ್‌ಮೋಲ್‌ಗೆ ಹುಟ್ಟಿನಿಂದಲೇ ಕೈಗಳಿಲ್ಲ. ಆದರೆ, ಕಾಲೆºರಳಿನ ಮೂಲಕ ಚಿತ್ರಕಲೆಯ ಜಾದೂವನ್ನೇ ಸೃಷ್ಟಿಸಬಲ್ಲರು. ಬರೆಯುವುದು, ಚಿತ್ರ ಬಿಡಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನೂ ಕಾಲಿನಿಂದಲೇ ಮಾಡಬಲ್ಲ ಅವರು, ಆ್ಯನಿಮೇಷನ್ ಆ್ಯಂಡ್ ಗ್ರಾಫಿಕ್ ಡಿಸೈನ್‌ನಲ್ಲಿ ಪದವಿ ಶಿಕ್ಷಣವನ್ನೂ ಮುಗಿಸಿದ್ದಾರೆ.
ಜನಾರ್ದನ್ ಕೇಶವನ್: ಆಗಿನ್ನೂ ಜನಾರ್ದನ್‌ಗೆ 4 ವರ್ಷ. ಮನೆಯ ಎದುರು ಆಟವಾಡುತ್ತಿದ್ದಾಗ ಹೈಟೆನ್ಶನ್ ವಿದ್ಯುತ್ ಲೈನ್ ತಗುಲಿ, ಬಲಕೈಯನ್ನು ಭುಜದಿಂದಲೇ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಯಿತು. ಅಷ್ಟೇ ಅಲ್ಲ, ಎಡ ಕೈಯನ್ನು ಮೊಣಕೈವರೆಗೆ, ಬಲಗಾಲನ್ನು ಮಂಡಿಯವರೆಗೆ ತೆಗೆದರು. ಪುಟಾಣಿ ಜನಾರ್ದನನ ಬದುಕು ಮುಗಿದೇ ಹೋಯ್ತು ಅನ್ನುವಾಗ, ಆತ ಬಾಯಲ್ಲಿ ಬ್ರಶ್ ಹಿಡಿದು ಚಿತ್ರ ಬಿಡಿಸಲು ಆರಂಭಿಸಿದ. ಕ್ರಮೇಣ, ಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿದ. ಪ್ರಶಸ್ತಿಯನ್ನೂ ಪಡೆದ. ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿರುವ ಜನಾರ್ದನ್‌ಗೆ, ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ “ಬೆಸ್ಟ್ ಕ್ರಿಯೇಟಿವ್ ಚೈಲ್ಡ್ ಹಾಗೂ ಬಾಲಶ್ರೀ ಪ್ರಶಸ್ತಿ ನೀಡಿದ್ದರು.
ಬಂದೇನವಾಜ್ ನದಾಫ್: ಬಂದೇನವಾಜ್ ನದಾಫ್ರಿಗೆ ಹುಟ್ಟಿನಿಂದಲೇ ಎಡಗೈ ಇಲ್ಲ. ಕಾಲುಗಳೂ ಬಲಹೀನ. ದೇಹದ ಮೇಲ್ಭಾಗದ ಹಲವು ಅಂಗಗಳು ದೃಢವಾಗಿಲ್ಲ. ಆದರೆ, ಇವರು ಬಿಡಿಸುವ ಚಿತ್ರಗಳು ಮಾತ್ರ ಜೀವಂತಿಕೆಯಿಂದ ನಳನಳಿಸುತ್ತವೆ. ಚಿತ್ರಕಲೆಯಷ್ಟೇ ಅಲ್ಲ, ಈಜುಪಟು, ಬಾಣಸಿಗ, ತಂಬೂರಿ ವಾದಕ, ಸಂಗೀತಗಾರ, ಕರಾಟೆಯಲ್ಲಿ ಯೆಲ್ಲೊ ಬೆಲ್ಟ್… ಹೀಗೆ ಅವರ ಸಾಧನೆಯ ಪಟ್ಟಿ ದೊಡ್ಡದಿದೆ. ವಿಶೇಷ ಚೇತನರ ಮಿನಿ ಒಲಿಂಪಿಕ್ಸ್‌ನಲ್ಲಿ ನದಾಫ್ ಬಹುಮಾನಗಳನ್ನು ಗೆದ್ದಿದ್ದಾರೆ.
ಯಾವಾಗ?: ಫೆ. 22, ಶನಿವಾರ, ಸಂಜೆ 4-7
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಪತ್, ಕುಮಾರಕೃಪಾ ರಸ್ತೆ
ಪ್ರವೇಶ: ಉಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.