ಆಹಾರೋತ್ಸವ
ಏಷ್ಯಾದ ಅತಿದೊಡ್ಡ ಸಸ್ಯಾಹಾರ ಹಬ್ಬ
Team Udayavani, Oct 19, 2019, 8:25 PM IST
ಸಾಂದರ್ಭಿಕ ಚಿತ್ರ
ಸಸ್ಯಾಹಾರ ಪ್ರಿಯರಿಗೊಂದು ಸ್ವರ್ಗ ಸೃಷ್ಟಿಯಾಗಿದೆ. ಸಸ್ಯಾಹಾರದಲ್ಲಿ ಎಂತೆಂಥ ರುಚಿಕಟ್ಟಾದ ತಿನಿಸುಗಳಿವೆ ಅಂತ ತಿಳಿಯಲು, ಫ್ರಿಡಂ ಪಾರ್ಕ್ಗೆ ಬನ್ನಿ. ಅಲ್ಲಿ, ಏಷ್ಯಾದ ಅತಿದೊಡ್ಡ ಸಸ್ಯಾಹಾರ ಉತ್ಸವ ನಡೆಯುತ್ತಲಿದೆ.
ರೆಸ್ಟೋರೆಂಟ್ ಕನ್ಸಲ್ಟಿಂಗ್ ಕಂಪನಿಯಾದ ಮಾಂಕ್ ಸ್ಟುಡಿಯೋಸ್, ಈ ಉತ್ಸವವನ್ನು ಆಯೋಜಿಸಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿರುವ ಈ
ಉತ್ಸವದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಇವೆ.
ಇಡ್ಲಿ-ದೋಸೆಯಿಂದ ಹಿಡಿದು ಪಿಜ್ಜಾ-ಪಾಸ್ತಾ ತನಕ, ಚೋಲೆ ಬಟೂರೆ ಇಂದ ಟಾಕೋಸ್ ತನಕ, ಇಟಾಲಿಯನ್, ಅಮೆರಿಕನ್, ಚೈನೀಸ್ ಅಷ್ಟೇ ಅಲ್ಲದೆ, ಬೀದಿ ತಿಂಡಿಗಳನ್ನೂ ಕೂಡಾ ಇಲ್ಲಿ ಸವಿಯಬಹುದು. ನಾಲಗೆಗೆ ರುಚಿ ಸಿಗುವುದಷ್ಟೇ ಅಲ್ಲ, ಮನಸ್ಸನ್ನು ತಣಿಸುವ ಮನೋರಂಜನಾ ಕಾರ್ಯಕ್ರಮಗಳು ಕೂಡಾ ಈ ಮೇಳದ ವೈಶಿಷ್ಟ್ಯಗಳಲ್ಲೊಂದು. ಸುಧಾ ಬರಗೂರರಿಂದ ಹಾಸ್ಯ ಕಾರ್ಯಕ್ರಮ, ಮೆಲ್ಲೋ ಟ್ರೀ ತಂಡದಿಂದ ಹಳೆಯ ಕನ್ನಡ ಹಾಡುಗಳು, ದಿ ನಾಯ್ಕ ಅಂಡ್ ಜೋಯಿಸ್ ಪ್ರಾಜೆಕ್ಟ್ನಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಎಲ್ಲಿ?: ಫ್ರಿಡಂ ಪಾರ್ಕ್ ಆವರಣ
ಯಾವಾಗ?: ಅ.19-20, ಶನಿ-ಭಾನುವಾರ ಬೆಳಗ್ಗೆ 10- 8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.