ಬೆಂಗಳೂರಿನ ಮಹಾತ್ಮರ ಸನ್ನಿಧಿಯಲ್ಲಿ…
Team Udayavani, Oct 7, 2017, 11:26 AM IST
ಅಮೆರಿಕಕ್ಕೆ ಪ್ರವಾಸ ಹೋದವರೆಲ್ಲರೂ ಸ್ಟಾಚ್ಯೂ ಆಫ್ ಲಿಬರ್ಟಿಯನ್ನು ನೋಡದೇ ವಾಪಸಾಗುವುದಿಲ್ಲ. ಬ್ರೆಜಿಲ್‌ನ ರಿಯೋ ಡಿಜನೈರೋದಲ್ಲಿ ವಿಶ್ವವನ್ನೇ ತಬ್ಬಿಕೊಳ್ಳಲು ಹೊರಟ ಯೇಸು ಮುಂದೆ ಪ್ರ ವಾಸಿಗರು ಸೆಲ್ಫಿಗಾಗಿಯೇ ಕ್ಯೂ ನಿಲ್ಲುವುದುಂಟು. ಪ್ರಪಂಚದ ಪ್ರತಿ ನಗರಿಗೂ ಒಂದೊಂದು ಪ್ರತಿಮಗಳ ಸಿಂಬಲ್ ಇದೆ. ಹಾಗೆಯೇ ನಮ್ಮಲ್ಲಿ ಮೈಸೂರು ಎಂದರೆ ನಂದಿ, ಮುಡೇìಶ್ವರ ಎಂದ ಕೂಡ ಲೇ ಬೃಹತ್ ಗಾತ್ರದ ಶಿವ, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಕಾರ್ಕಳದ ಕರಿಕಲ್ಲಿನ ಬಾಹುಬಲಿಯ ವಿಗ್ರಹ… ನಮ್ಮ ಕಣ್ಮುಂದೆ ಬಂದು ನಿಲ್ಲುತ್ತವೆ. ಆದರೆ, ಇದು ಬೆಂಗಳೂರಿಗೆ ಅನ್ವಯವಾಗುವುದಿಲ್ಲ. ಯಾಕೆಂದರೆ, ಇದು ಪ್ರತಿಮೆಗಳ ನಗರಿ. ಇಲ್ಲಿ ಗಲ್ಲಿ ಗಲ್ಲಿಯಲ್ಲೂ ಎತ್ತರೆತ್ತರದ ಪ್ರತಿಮೆಗಳು ಎದ್ದು ನಿಂತಿವೆ. ನಟರು, ಕವಿಗಳು, ದಾರ್ಶನಿಕರು, ವಿಜ್ಞಾನಿಗಳು… ಹೀಗೆ ಎಲ್ಲ ಮಹನೀಯರೂ ನಮ್ಮ ನಡುವೆ ಸ್ಮಾರಕವಾಗಿ ಉಳಿದಿದ್ದಾರೆ.
ಗೊಮ್ಮಟೇಶನಿಗೆ ಹನ್ನೆರಡು ವರ್ಷಕ್ಕೊಮ್ಮೆ ಮಸ್ತಕಾಭಿಷೇಕ, ಮೈಸೂರಿನ ನಂದಿಗೆ ನಿತ್ಯವೂ ಪೂಜೆ… ಆದರೆ, ನಮ್ಮ ಬೆಂಗಳೂರಿನ ಪ್ರತಿಮೆಗಳಿಗೆ ನಿತ್ಯ ಅಭಿಷೇಕ, ಆರತಿಗಳಿಲ್ಲ. ಆಯಾ ಜಯಂತಿ, ಜನ್ಮದಿನಗಳಂದು ಮಾತ್ರ ಹಾರ- ತುರಾಯಿಗಳಿಂದ ಕಂಗೊಳಿಸಿ, ಉಳಿದ ದಿನಗಳಲ್ಲಿ ಮೌನವಾಗಿ ಟ್ರಾಫಿಕ್ ಗಡಿಬಿಡಿಯಲ್ಲಿ ಜನರಿಂದ ನಿರ್ಲಕ್ಷ್ಯಕ್ಕೊಳಪಟ್ಟು ನಿಂತಿರುತ್ತವೆ.
1. ವಾಲ್ಮೀಕಿ ಪ್ರತಿಮೆ
ವಿಧಾನಸೌಧ ಸನಿಹದ ಆಕರ್ಷಣೀಯ ತಾಣಗಳ ಪಟ್ಟಿಗೆ ಈಗ ವಾಲ್ಮೀಕಿಯ ಬೃಹತ್ ಪ್ರತಿಮೆಯೂ ಸೇರಿ ಕೊಂಡಿದೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಂಡ ಈ ಪ್ರತಿಮೆಯ ನಿರ್ಮಾಣಕ್ಕೆ ತಗುಲಿದ್ದು ಬರೋಬ್ಬರಿ 50 ಲಕ್ಷ ರೂ.! 25 ಟನ್ ತೂಕ ದ, 12 ಅಡಿ ಎತ್ತರದ ಈ ಪ್ರತಿಮೆಯನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೆತ್ತಿಸಲಾಗಿತ್ತು.
2. ನಾಡಪ್ರಭು ಕೆಂಪೇಗೌಡ
ತನ್ನನ್ನು ನಿರ್ಮಿಸಿದ ನಿರ್ಮಾತೃವನ್ನು ಬೆಂಗಳೂರು ಮರೆಯುತ್ತದೆಯೇ? ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸಿಟಿ ಕಾರ್ಪೋರೇಷನ್ ಬಳಿ ತಲೆ ಎತ್ತಿ ನಿಂತಿದೆ. ಅದನ್ನು 1964ರ ನ.1ರಂದು ಅಂದಿನ ರಾಜ್ಯಪಾಲ ಜಯ ಚಾಮರಾಜ ಒಡೆಯರ್ ಅವರು ಅನಾವರಣಗೊಳಿಸಿದರು. ಇದನ್ನು ನಿರ್ಮಿಸಿ 50 ವರುಷ ದಾಟಿದರೂ, ಇದರ ಸೌಂದರ್ಯ ಇನ್ನೂ ತಾಜಾವಾಗಿಯೇ ಇದೆ.
3. ಡಾ. ರಾಜ್‌ಕುಮಾರ್
ಅಭಿಮಾನಿ ದೇವರುಗಳ ಪ್ರೀತಿಯ ಅಣ್ಣಾವ್ರ ಪ್ರತಿಮೆಗಳು ಬೆಂಗಳೂರಿನ ಹಲವೆಡೆಗಳಲ್ಲಿವೆ. ನೆಚ್ಚಿನ ನಟನನ್ನು ಸಾಧ್ಯವಾದ ಕಡೆಗಳಲ್ಲೆಲ್ಲ ಸ್ಮಾರಕವಾಗಿ ಉಳಿಸಿಕೊಂಡಿದ್ದಾರೆ. ನಂದಿನಿ ಲೇಔಟ್‌ನ ಕುರುಬನಹಳ್ಳಿ ಸರ್ಕಲ್‌ನಲ್ಲಿ ರಾಜಣ್ಣನ ಕಂಚಿನ ಪ್ರತಿಮೆ ಇದೆ. ಹಂಪಿಯ ಕಲ್ಲಿನ ರಥದ ಮಾದರಿಯ ರಥದಲ್ಲಿ ಪ್ರತಿಮೆಯನ್ನು ಇರಿಸಲಾಗಿದೆ. ಆ ಪ್ರತಿಮೆ ಮಯೂರ ವರ್ಮನ ಪೋಷಾಕಿನಲ್ಲಿರುವ ರಾಜ್ ಅವರದ್ದು. ಆ ಕಲ್ಲಿನ ರಥ 45 ಟನ್ ತೂಕವಿದ್ದು, 14 ಅಡಿ ಎತ್ತರವಿದೆ. ಪ್ರತಿಮೆ 10 ಅಡಿ ಎತ್ತರದ್ದಾಗಿದೆ. 2012ರಲ್ಲಿ ಬಸವನಗುಡಿಯಲ್ಲಿ ಮತ್ತೂಂದು ಪ್ರತಿಮೆ ಅನಾವರಣಗೊಂಡಿತು. ಬಿಬಿಎಂಪಿ ವತಿಯಿಂದ 13 ಅಡಿ ಎತ್ತರದ ರಾಜಣ್ಣನ ಪ್ರತಿಮೆ ಸೌತ್ ಆ್ಯಂಡ್ ಸರ್ಕಲ್‌ನಲ್ಲಿ ಸ್ಥಾಪಿತವಾದರೆ, ಬಬ್ರುವಾಹನ ಭಂಗಿಯ ಇನ್ನೊಂದು ಪ್ರತಿಮೆ ಲುಂಬಿನಿ ಗಾರ್ಡ್‌ನಲ್ಲಿದೆ. ಉಪ್ಪಾರ್‌ಪೇಟೆ ಜಂಕ್ಷನ್‌ನಲ್ಲಿ ಕವಿರತ್ನ ಕಾಳಿದಾಸ ರೂಪದ ರಾಜಣ್ಣ ನಗುತ್ತಾ ನಿಂತಿದ್ದಾರೆ
4. ರಾಣಿ ವಿಕ್ಟೋರಿಯಾ
ಬ್ರಿಟನ್‌ನ ರಾಣಿ ವಿಕ್ಟೋರಿಯಾಳ ಪ್ರತಿಮೆ ನಮ್ಮ ಕಬ್ಬನ್ ಪಾರ್ಕ್‌ನಲ್ಲಿದೆ. ಈ ಪ್ರತಿಮೆ 1906ರಲ್ಲಿ ವೇಲ್ಸ್ ಅಂಡ್ ಡ್ನೂಕ್‌ನ ರಾಜಕುಮಾರ ಜಾರ್ಜ್ ಫ್ರೆಡ್ರಿಕ್ ಆಲ್ಬರ್ಟ್‌ನಿಂದ ಸ್ಥಾಪಿತವಾಯಿತು.
5. ಸರ್ ಮಾರ್ಕ್ ಕಬ್ಬನ್
1834-1861ರವರೆಗೆ ಕೊಡಗು ಮತ್ತು ಮೈಸೂರಿನ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್‌ರ ಪ್ರತಿಮೆ ಕರ್ನಾಟಕ ಹೈ ಕೋರ್ಟ್‌ನ ಮುಂಭಾಗದಲ್ಲಿ 1866ರಲ್ಲಿ ಸ್ಥಾಪನೆಯಾಗಿದೆ.
6. ಕುವೆಂಪು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮೊದಲ ಕನ್ನಡದ ಕವಿ ಕುವೆಂಪು ಅವರ ಪ್ರತಿಮೆ ಲಾಲ್‌ಬಾಗ್‌ನ ಮುಂಭಾಗದಲ್ಲಿದೆ. ನಿಜಲಿಂಗಪ್ಪನವರು ಸಿಎಂ ಆಗಿ ದ್ದಾ ಗ ಈ ಪ್ರತಿಮೆ ಸ್ಥಾಪನೆಯಾಯಿತು. ಕುವೆಂಪು ಅವರ ಇನ್ನೊಂದು ಪ್ರತಿಮೆ ಫ್ರೀಡಂ ಪಾರ್ಕ್‌ನಲ್ಲಿದೆ.
7. ಡಾ. ದೇವರಾಜ ಅರಸ್
1972- 80ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸ್ ಅವರ ಪ್ರತಿಮೆ ವಿಧಾನಸೌಧದ ಮುಂಭಾಗದಲ್ಲಿದೆ. 1994ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಂದ ಈ ಪ್ರತಿಮೆ ಅನಾವರಣಗೊಂಡಿತು.
8. ಕೆಂಗಲ್ ಹನುಮಂತಯ್ಯ
ನಮ್ಮ ರಾಜಧಾನಿ ಕೆಂಗಲ್ ಹನುಮಂತಯ್ಯ ಅವರನ್ನು ಮರೆಯಲು ಸಾಧ್ಯವೇ? ಕರ್ನಾಟಕದ ಎರಡನೇ ಮುಖ್ಯಮಂತ್ರಿಯಾಗಿ, ವಿಧಾನಸೌಧದ ನಿರ್ಮಾತೃವಾಗಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸ್ಮರಣಾರ್ಥವಾಗಿ ಅವರ ಪ್ರತಿಮೆ 1985ರಲ್ಲಿ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಾಣವಾಯ್ತು.
9. ಬಸವಣ್ಣ
ಸಮಾಜ ಸುಧಾರಕ ಬಸವಣ್ಣನವರು ಕುದುರೆ ಸವಾರಿ ಮಾಡುತ್ತಿರುವ ಪ್ರತಿಮೆ ಬಸವೇಶ್ವರ ಸರ್ಕಲ್‌ನಲ್ಲಿ 1994ರಲ್ಲಿ ಅನಾವರಣಗೊಂಡಿದೆ.
10 . ಸರ್ ಎಂ. ವಿಶ್ವೇಶ್ವರಯ್ಯ
ಕೆ.ಆರ್. ಸರ್ಕಲ್‌ನಲ್ಲಿ ಇರುವ ಕೃಷ್ಣರಾಜೇಂದ್ರ ಸಿಲ್ವರ್ ಜುಬ್ಲಿ ಟೆಕ್ನಾಲಜಿಕಲ್ ಇನ್ಸ್‌ಟಿಟ್ಯೂಟ್‌ನಲ್ಲಿ ಸರ್. ಎಂ.ವಿ ಅವರ ಪ್ರತಿಮೆಯಿದೆ. 1970ರಲ್ಲಿ ಅಂದಿನ ಪ್ರಧಾನಿ ವಿ.ವಿ.ಗಿರಿ ಅವರು ಈ ಪ್ರತಿಮೆಯನ್ನು ನಾಡಿಗೆ ತೆರೆದಿಟ್ಟರು.
11. ಮಹಾತ್ಮ ಗಾಂಧಿ
ರೇಸ್ ಕೋರ್ಸ್ ರಸ್ತೆಯ ಸುಬ್ಬಣ್ಣ ಸರ್ಕಲ್‌ನಲ್ಲಿ ಮಹಾತ್ಮ ಗಾಂಧಿಯ ಪ್ರತಿಮೆಯಿದೆ. ಗಾಂಧಿ ಭವನದಲ್ಲಿ ಹಾಗೂ ಎಂ.ಜಿ. ರಸ್ತೆಯಲ್ಲಿಯೂ ಕೂಡ ಪ್ರತಿಮೆಗಳಿವೆ.
12. ಡಾ. ಬಿ.ಆರ್. ಅಂಬೇಡ್ಕರ್
ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರ ಪ್ರತಿಮೆಯನ್ನು 1981ರಲ್ಲಿ ಅಂದಿನ ಸಿಎಂ ಗುಂಡೂರಾವ್ ಅವರು ವಿಧಾನಸೌಧದ ಎದುರು ಅನಾವರಣಗೊಳಿಸಿದರು.
13. ನೇತಾಜಿ ಸುಭಾಷ್ ಚಂದ್ರ ಬೋಸ್
ನೇತಾಜಿ ಅವರ ಪ್ರತಿಮೆ ಕೂಡ ವಿಧಾನ ಸೌಧದ ಬಳಿ ಸ್ಥಾಪಿತವಾಗಿದ್ದು, ಅದನ್ನು 2001ರಲ್ಲಿ ಅಂದಿನ ಸಿಎಂ ಎಸ್.ಎಂ. ಕೃಷ್ಣ ಅವರು ಅನಾವರಣಗೊಳಿಸಿದರು.
14. ವಿಷ್ಣವರ್ಧನ್
ಆಪ್ತರಕ್ಷಕ ಸಿನಿಮಾದ ವಿಷ್ಣುವರ್ಧನ ಅವರ ಭಂಗಿ ಗೋರಿಪಾಳ್ಯದಲ್ಲಿದೆ. ಲಗ್ಗೆರೆ ಮತ್ತು ಕೆ.ಪಿ. ಅಗ್ರಹಾರದಲ್ಲಿಯೂ ವಿಷ್ಣುವರ್ಧನ್ ಅವರ ಪ್ರತಿಮೆಗಳಿವೆ.
15. ಎಚ್.ಎ.ಎಲ್. ಶಿವ
ಎಚ್.ಎ.ಎಲ್. ಬಳಿ ಇರುವ ಬೃಹತ್ ಶಿವನ ವಿಗ್ರಹ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲೊಂದು. 65 ಅಡಿ ಎತ್ತರದ, ಬಿಳಿ ಅಮೃತಶಿಲೆಯಲ್ಲಿ ಶಿವನನ್ನು ಕೆತ್ತಿಡಲಾಗಿದೆ.
ಎಲ್ಲೆಲ್ಲೂ ಕಾಣುವ ದೊಡ್ಡವರು!
1. ಕವಿ ಬಿ.ಎಂ.ಶ್ರೀಕಂಠಯ್ಯ – ಸೌತ್ ಎಂಡ್ ಸರ್ಕಲ್
2. ಕಿತ್ತೂರು ರಾಣಿ ಚೆನ್ನಮ್ಮ – ಪುಟ್ಟಣ್ಣ ಚೆಟ್ಟಿ ಟೌನ್‌ಹಾಲ್
3. ಜವಹರಲಾಲ್ ನೆಹರು – ವಿಧಾನ ಸೌಧ ಮುಂಭಾಗ
4. ರಾಜೀವ ಗಾಂಧಿ – ಶೇಷಾದ್ರಿಪುರಂ ನಾಗರಾಜ ಟಾಕೀಸ್ ಬಳಿ
5. ಜೆ.ಎನ್. ಟಾಟಾ – ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಮುಖ್ಯ ಕಟ್ಟಡದ ಮುಂಭಾಗ
6. ಸ್ವಾಮಿ ವಿವೇಕಾನಂದ – ಬಸವನಗುಡಿ
7. ಛತ್ರಪತಿ ಶಿವಾಜಿ – ಸ್ಯಾಂಕಿ ಟ್ಯಾಂಕ್ ಬಳಿ
8. ಡಿ.ವಿ. ಗುಂಡಪ್ಪ -ಬಗಲ್ ರಾಕ್ ಗಾರ್ಡನ್
9. ಚಾಮರಾಜೇಂದ್ರ ಒಡೆಯರ್
10. ತಿರುವಳ್ಳವರ್ – ಹಲಸೂರು
11. ರೆವರೆಂಡ್ ಕಿಟಲ್ – ಎಂ.ಜಿ. ರೋಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.