ಅಂಕಲ್‌ ಅಂತರಂಗದಲ್ಲೇ ಬೆಂಗ್ಳೂರೂ ಅಡಗಿದೆ…


Team Udayavani, Nov 17, 2018, 3:33 PM IST

3sdfsdf.jpg

ಬೆಂಗಳೂರು ಮಾಯಾ ಪಾತ್ರೆ ಇದ್ದಂತೆ. ಇಷ್ಟಾರ್ಥವನ್ನು ನೆರವೇರಿಸುವ ಪಾತ್ರೆ. ಇಲ್ಲಿ ಸಕಲವೂ ಲಭ್ಯ. ಸಮಾನಮನಸ್ಕರೂ ಸಿಗುತ್ತಾರೆ, ಅವಕಾಶಗಳೂ ಅನಂತ. ಪ್ರತಿಭೆಗಳ್ನನೂ ಪೋಷಿಸುವ, ವೇದಿಕೆ ಕಲ್ಪಿಸಿಕೊಡುತ್ತದೆ ಬೆಂಗಳೂರು. ಅದಕ್ಕೆ ನಿದರ್ಶನವಾಗಿ ನಮ್ಮೊಡನಿದ್ದಾರೆ ಅಂಕಲ್‌ ಶ್ಯಾಮ್‌.

ಕಳೆದ ಮೂರು ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಅಂಕಲ್‌ಗೆ 75 ವರ್ಷಗಳು ತುಂಬುತ್ತಿವೆ. ಅಷ್ಟು ವಯಸ್ಸಾದವರು ಅಂಕಲ್‌ ಹೇಗಾಗುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅವರ ನಿಜವಾದ ಹೆಸರು ಎಮ್‌.ಎಸ್‌. ಶ್ಯಾಮಸುಂದರ್‌ ಆಗಿದ್ದರೂ, ಅಂಕಲ್‌ ಶ್ಯಾಮ್‌ ಎಂದೇ ಬಹುತೇಕರಿಗೆ ಚಿರಪರಿಚಿತ. 1968ರಲ್ಲಿ ಹೆಬ್ಟಾಳದಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡ ಅಂಕಲ್‌ ಶ್ಯಾಮ್‌ ವೃತ್ತಿಯ ಜೊತೆಗೇ ರಂಗಭೂಮಿ ಕೆಲಸಗಳಲ್ಲಿ ತೊಡಗಿಕೊಂಡರು. 1980ರಲ್ಲಿ  “ಆಂತರಂಗ’ ಎಂಬ ರಂಗತಂಡವನ್ನು ಕಟ್ಟಿದರು. ‘ಅಂತರಂಗ’ ತಂಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ನಟ, ರಂಗಕರ್ಮಿ ಸಿ.ಆರ್‌.ಸಿಂಹ ಹಾಗೂ ಆರ್‌.ನಾಗೇಶ್‌ ಅವರ ಉಪಸ್ಥಿತಿಯಲ್ಲಿ ಚೊಚ್ಚಲ ನಾಟಕ ‘ನಾಯಕ’ ಭರ್ಜರಿ ಪ್ರದರ್ಶನ ಕಂಡಿತ್ತು. ಅಂದಿನಿಂದ ತಮ್ಮ ರಂಗತಂಡವನ್ನು ಬೆಳೆಸಬೇಕೆಂಬ ಉಮೇದು ಹೆಚ್ಚಿತ್ತು. ನಂತರ ಅಂತರಂಗ ಕ್ಕೆ ಡಾ.ಬಿ.ವಿ.ರಾಜಾರಾಂ ನಿರ್ದೇಶಿಸಿ, ಸಿ.ಜಿ.ಕೆ ರವರು ಬೆಳಕಿನ ವಿನ್ಯಾಸ ಮಾಡಿದ ‘ಬೇಟೆ’ ನಾಟಕ ಅಪಾರ ಯಶಸ್ಸು ಗಳಿಸಿತು. ಮೇಕಪ್‌ ನಾಣಿಯವರ ಪರಿಚಯವಾಗಿ ಕೈಲಾಸಂ ನಾಟಕಗಳ ಬಗ್ಗೆ ಒಲವು ಮೂಡಿತು. ಕೈಲಾಸಂ ನಾಟಕಗಳೂ ಯಶಸ್ಸು ಕಂಡವು. ಶ್ರೀನಿವಾಸ್‌ ಜಿ. ಕಪ್ಪಣ್ಣ, ಕೆ.ವಿ. ನಾಗರಾಜ್‌ ಮೂರ್ತಿ, ಸಿ.ಕೆ.ಗುಂಡಣ್ಣ, ಎಲ್ಲರೂ ಅಂತರಂಗದ ಬೆಳವಣಿಗೆಗೆ ಕೈಜೋಡಿಸಿ¨ªಾರೆ. ತಂಡ ಇಲ್ಲಿಯ ತನಕ ತಂಡ 41 ರಂಗ ಪ್ರಯೋಗಗಳು, 6 ಬೀದಿ ನಾಟಕಗಳನ್ನು ಪ್ರದರ್ಶಿಸಿದೆ. 

ಅಂತರಂಗ ತಂಡದ ವತಿಯಿಂದ ಪ್ರತೀ ವರ್ಷವೂ 3 ದಿನಗಳ ರಂಗೋತ್ಸವ ನಡೆಯುತ್ತದೆ. ಮೇಕಪ್‌ ನಾಣಿಯವರ ಕಾಲದಲ್ಲಿ ಶುರುವಾದ ಹಾಸ್ಯಮೇಳ ಇಂದಿಗೂ ಪ್ರತೀ ವರ್ಷ ತಪ್ಪದೇ ಆಯೋಜಿಸುತ್ತಾರೆ, ಇಷ್ಟೇ ಅಲ್ಲದೇ ಮೇಕಪ್‌ ನಾಣಿಯವರ ನೆನಪಿನಲ್ಲಿ “ಮೇಕಪ್‌ ನಾಣಿ ಪ್ರಶಸ್ತಿ’ ಯನ್ನು ಪ್ರಸಾಧನಾ ಕಲಾವಿದರಿಗೆ ಕೊಟ್ಟು ಪುರಸ್ಕರಿಸುತ್ತದೆ ಅಂತರಂಗ. ಅಂತರಂಗದಿಂದ ಇತ್ತೀಚೆಗೆ ಪ್ರದರ್ಶನವಾದ ನಾಟಕಗಳು- ಶಾಲಭಂಜಿಕೆ, ಧರ್ಮಸ್ತಂಭ, ಉತ್ತರಭೂಪ ಬೀಚಿ, ಸೂರ್ಯಾಸ್ತ, ಶಾಪುರದ ಸೀನಿಂಗಿ ಸತ್ಯ, ಲೋಕ ಶಾಕುಂತಲ ಮತ್ತು ಹೊರಟು ಉಳಿದವನು. ಈ ನಾಟಕಗಳು ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ. ಶಂಕರ್‌ ನಾಗ್‌ ನಿರ್ದೇಶನದ ‘ಮೆಕ್ಯಾನಿಕ್‌ ಮುದ್ದ’ ಸೀರಿಯಲ…, ದೂರದರ್ಶನದ ಸಾಕ್ಷÂಚಿತ್ರ ಹಾಗೂ ‘ಸಿನೆಮಾ ಮೈ ಡಾರ್ಲಿಂಗ್‌’ ಎಂಬ ಚಲನಚಿತ್ರದಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಅಂಕಲ್‌. 

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.