ಪ್ಯಾಲೇಸ್ ಆಗ್ಬಿಟ್ಟೈತೆ!
Team Udayavani, Nov 3, 2018, 1:07 PM IST
ಮನೆಮನದ ಹಬ್ಬ ದೀಪಾವಳಿಯನ್ನು ಗರುಡ ಮಾಲ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ, ಮಾಲ್‌ನ ಎದುರು ಮೈಸೂರು ಅರಮನೆಯ ಸೆಟ್ ಹಾಕಲಾಗಿದ್ದು, ಮಣ್ಣಿನ ಹಾಗೂ ಎಲೆಕ್ಟ್ರಿಕಲ್ ದೀಪಗಳಿಂದ ಝಗಮಗಿಸುತ್ತಿರುವ ಅರಮನೆ ಒಂದು ಕ್ಷಣ ಮೈಸೂರನ್ನು ನೆನಪಿಸುತ್ತದೆ. 10 ಸಾವಿರಕ್ಕೂ ಹೆಚ್ಚು ಗೊಂಬೆಗಳ ಪ್ರದರ್ಶನ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಮಾಲ್‌ನಲ್ಲಿ ಸ್ಥಾಪಿತವಾಗಿರುವ 5 ಅಡಿ ಅಗಲ, 10 ಅಡಿ ಉದ್ದದ ಬೃಹತ್ ದೀಪ, ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.
ಮಾಲ್ 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗೃಹ ಕೈಗಾರಿಕೆಯ ಹಣತೆಗಳು, ಮಣ್ಣಿನ ಗೊಂಬೆಗಳು, ಸಾವಯವ ಪದಾರ್ಥಗಳು, ಸಾವಯವ ಖಾದ್ಯಗಳು, ಮಣ್ಣಿನ ಕಲಾಕೃತಿಗಳು, ಆಭರಣಗಳು, ಬುಡಕಟ್ಟು ಸಂಪ್ರದಾಯದ ಆಭರಣಗಳು, ಜೈಪುರದ ಕಲಾಕೌತುಕಗಳು, ಚನ್ನಪಟ್ಟಣದ ಗೊಂಬೆಗಳು ಲಭ್ಯವಿದ್ದು, ಸ್ಥಳದಲ್ಲೇ ಗೊಂಬೆಗಳ, ಕಲಾಕೃತಿಗಳ ನಿರ್ಮಾಣ ಮತ್ತು ಪ್ರದರ್ಶನ ಕಾರ್ಯಾಗಾರಗಳೂ ನಡೆಯುತ್ತಿವೆ. ನ. 4 ರವರೆಗೆ ಮಾಲ್‌ನ ಎಲ್ಲ ಮಳಿಗೆಗಳಲ್ಲಿ ಗ್ರಾಹಕರಿಗೆ ಶೇ.50ರಷ್ಟು ರಿಯಾಯಿತಿ ದೊರೆಯಲಿದೆ.
ಎಲ್ಲಿ?: ಗರುಡಾ ಮಾಲ್, ರೆಸಿಡೆನ್ಸಿ ರಸ್ತೆ
ಯಾವಾಗ?: ನ.3 ಮತ್ತು 4
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.