ಟೆಕ್ಕಿ ನೆಲದಲ್ಲಿ ಹಕ್ಕಿ ಲೋಕ!
Team Udayavani, Jun 9, 2018, 2:31 PM IST
ಮನುಷ್ಯನ ನೆರಳು ಕಂಡರೂ, ಪುರ್ರನೆ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಸಾಹಸದ ಕೆಲಸ. ಅಂಥೊಬ್ಬ ಸಾಹಸಿಯ ಕ್ಯಾಮೆರಾಗೆ ಸೆರೆ ಸಿಕ್ಕ ಹಕ್ಕಿಗಳು ಈಗ ಸಬ್‌ಲೈಮ್ ಗಲೇರಿಯದಲ್ಲಿ ಬಂದು ಕುಳಿತಿವೆ. ಖ್ಯಾತ ಛಾಯಾಗ್ರಾಹಕ ಎಂ.ಎನ್.ಜಯಕುಮಾರ್‌ರ ಹಕ್ಕಿ ಚಿತ್ರಗಳ, “ಬರ್ಡ್ಸ್ ಆ್ಯಸ್ ಆರ್ಟ್’ ಪ್ರದರ್ಶನ ಜುಲೈ 3 ರವರೆಗೆ ನಡೆಯಲಿದೆ.
ವನ್ಯಜೀವಿಗಳ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯನ್ನೇ ಪ್ರವೃತ್ತಿಯಾಗಿಸಿಕೊಂಡಿರುವ ಎಂ.ಎನ್. ಜಯಕುಮಾರ್, ಭಾರತದ ಅತ್ಯುತ್ತಮ ಪ್ರಕೃತಿ ಛಾಯಾಗ್ರಾಹಕರಲ್ಲಿ ಒಬ್ಬರು. ಇವರು ವೃತ್ತಿಯಲ್ಲಿ ಅರಣ್ಯ ಅಧಿಕಾರಿಯಾಗಿರುವುದು ಮತ್ತೂಂದು ವಿಶೇಷ.
“ಬರ್ಡ್ಸ್ ಆ್ಯಸ್ ಆರ್ಟ್’
ಜಯಕುಮಾರ್ ಅವರನ್ನು ಹಕ್ಕಿಗಳು ಸದಾ ಆಕರ್ಷಿಸುತ್ತವೆ. ಲೆಕ್ಕವಿಲ್ಲದಷ್ಟು ಸಮಯವನ್ನು ಅವರು ಹಕ್ಕಿಯ ಚಲನವಲನ, ಸಂತಾನೋತ್ಪತ್ತಿ, ಗೂಡು ಕಟ್ಟುವಿಕೆ, ಆಹಾರ ಒದಗಿಸುವಿಕೆ, ಮರಿಗಳನ್ನು ರಕ್ಷಿಸುವ ಹಾಗೂ ಸುದೀರ್ಘ ಹಾರಾಟಗಳ ವೀಕ್ಷಣೆಯಲ್ಲಿ ಕಳೆದಿದ್ದಾರೆ. 2018ನ್ನು “ಹಕ್ಕಿಗಳ ವರ್ಷ’ವೆಂದು ಘೋಷಿಸಿರುವುದರಿಂದ, ಈವರೆಗೆ ಸೆರೆ ಹಿಡಿದಿರುವ ಪಕ್ಷಿಗಳ ಕಲಾತ್ಮಕ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.
ಭಾವನೆಗಳನ್ನು ಪ್ರಚೋದಿಸುವ, ಬಣ್ಣಗಳನ್ನು ಹೊರಸೂಸುವ, ಪಕ್ಷಿಲೋಕದ ಹೊಸ ನೋಟವನ್ನು ಅನಾವರಣಗೊಳಿಸುವ ಹಕ್ಕಿಚಿತ್ರಗಳು ಇಲ್ಲಿವೆ.
ಎಲ್ಲಿ?: ಸಬ್‌ಲೈಮ್ ಗಲೇರಿಯ, ಯುಬಿ ಸಿಟಿ
ಯಾವಾಗ?: ಜುಲೈ 3ರವರೆಗೆ, ಸೋಮ- ಶನಿವಾರ, ಬೆಳಿಗ್ಗೆ 11- ರಾತ್ರಿ 8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.