ಕಿಕ್‌ನಿಂದ ಕಿಕ್ ಏರಿಸುವ ಬ್ಲೂಬಾಯ್ಸ್!
Team Udayavani, Dec 16, 2017, 12:39 PM IST
ಕ್ರಿಕೆಟ್‌ನಲ್ಲಿ “ಬ್ಲೂ ಬಾಯ್ಸ’ ಎಂದರೆ ಭಾರತದ ತಂಡದವರು, ಹಾಗೆಯೇ ಫುಟ್‌ಬಾಲ್‌ನಲ್ಲಿ ಬೆಂಗಳೂರು ತಂಡದವರು. ಕರ್ನಾಟಕದಲ್ಲಿ ಫುಟ್‌ಬಾಲ್ ಕಿಚ್ಚು ಹತ್ತಿಸಿದ ಶ್ರೇಯ “ಬೆಂಗಳೂರು ಎಫ್.ಸಿ.’ ತಂಡಕ್ಕೆ ಸಲ್ಲಬೇಕು. ಸದ್ಯ ನಡೆಯುತ್ತಿರುವ “ಹೀರೋ ಐಎಸ್‌ಎಲ್ ಫುಟ್‌ಬಾಲ್ ಲೀಗ್‌ನಲ್ಲಿ’ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರು ಎಫ್.ಸಿ. ತಂಡ ಭಾರತದಲ್ಲೇ ಮುಂಚೂಣಿಯಲ್ಲಿರುವ ಫುಟ್‌ಬಾಲ್ ಕ್ಲಬ್‌ಗಳಲ್ಲೊಂದು.
ಅಂಕಪಟ್ಟಿಯಲ್ಲಿ 9 ಅಂಕಗಳನ್ನು ಗಳಿಸಿ ಮುಂಚೂಣಿಯಲ್ಲಿರುವ ತಂಡಗಳ ಪೈಕಿ ಬೆಂಗಳೂರು ಎಫ್.ಸಿ. ಕೂಡಾ ಒಂದು. ಈ ವಾರಾಂತ್ಯ ಬೆಂಗಳೂರು ಮತ್ತು ಚೆನ್ನೈ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಜಿದ್ದಾಜಿದ್ದಿನ ಈ ಪಂದ್ಯವನ್ನು ಫುಟ್‌ಬಾಲ್ ಪ್ರೇಮಿಗಳು ಮಿಸ್ ಮಾಡದೇ ನೋಡಬೇಕಾದದ್ದು.
ಪಂದ್ಯವನ್ನು ಕ್ರೀಡಾಂಗಣದಲ್ಲೇ ನೋಡಿದರೆ ಅಲ್ಲಿನ ರೋಮಾಂಚನ, ಹರ್ಷೋದ್ಗಾರವನ್ನೂ ಕಣ್ತುಂಬಿಕೊಳ್ಳಬಹುದು. ಅಂದಹಾಗೆ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವವರು ಭಾರತ ಫುಟ್‌ಬಾಲ್ ತಂಡದ ನಾಯಕರಾಗಿರುವ ಸುನಿಲ್ ಚೆಟ್ರಿಯವರು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
ಎಲ್ಲಿ?: ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ
ಯಾವಾಗ?: ಡಿಸೆಂಬರ್ 17, ಸಂಜೆ 5.30
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.