ಬಬಲ್ ಫುಟ್ಬಾಲ್‌ನ ಮಸ್ತ್ ಮಜಾ
Team Udayavani, Jun 10, 2017, 4:06 PM IST
ಮೆಸ್ಸಿ, ರೊನಾಲ್ಡೋ ಆಡುವ ಫುಟ್ಬಾಲ್ ಗೊತ್ತಿದ್ದವರಿಗೆ, ಬಬಲ್ ಫುಟ್ಬಾಲ್ ಕೊಂಚ ಕನ್‌ಫ್ಯೂಸ್ ಹುಟ್ಟಿಸಬಹುದು. ಆದರೆ, ಬೆಂಗಳೂರಿನ ಇಂದಿರಾ ನಗರದ “ದಿ ಬುಲ್ ರಿಂಗ್’ಗೆ ಬಂದರೆ ಇಲ್ಲಿ ಬಬಲ್ ಫುಟ್ಬಾಲ್ ಕನ್‌ಫ್ಯೂಷನ್ ಹುಟ್ಟಿಸುವುದಿಲ್ಲ. ಆಡಲು ಆಸೆ ಹುಟ್ಟಿಸುತ್ತದೆ. ಒಂದೆರಡ್ ಕಿಕ್‌ನಲ್ಲಿಯೇ ಇದರ ಮಜಾ ಗೊತ್ತಾಗುತ್ತದೆ.
ಏನಿದು ಬಬಲ್ ಫುಟ್ಬಾಲ್ ಅಂತ ಮತ್ತೆ ಗೊಂದಲಕ್ಕೆ ಬಿದ್ದಿರಾ? ಈ ಆಟ ಬಹಳ ಸಿಂಪಲ್. ಗಾಳಿ ತುಂಬಿದ ಬಲೂನ್‌ಗಳು ಆಟಗಾರರ ತಲೆಯಿಂದ ಸೊಂಟದ ವರೆಗೆ ಆವರಿಸಿರುತ್ತದೆ. ಕಾಲುಗಳು ಮಾತ್ರ ಫ್ರೀ ಇರುತ್ತವೆ. ನೀವೆಷ್ಟೇ ಹುರುಪಿನಲ್ಲಿ ಓಡಾಡಿ, ಪರಸ್ಪರ ಡಿಕ್ಕಿ ಹೊಡೆದರೂ ನಿಮಗೆ ಏಟಾಗುವುದಿಲ್ಲ. ಕೆಳಕ್ಕೆ ಬಿದ್ದರೂ ಯಾವುದೇ ಆಘಾತ ಆಗುವುದಿಲ್ಲ. ಫುಟ್ಬಾಲ್ ಆಟದಂತೆಯೇ ಇಲ್ಲಿ ಎಲ್ಲ ನಿಯಮಗಳೂ ಇರುತ್ತವೆ. ಅಕಸ್ಮಾತ್, ನಿಮಗೆ ರೂಲ್ಸ್ ಗೊತ್ತಾಗಿಲ್ಲ ಅಂತನ್ನಿಸಿದರೆ, ಆಟದ ನಿಯಮ ಹೇಳಿಕೊಡಲು ಅಲ್ಲೊಬ್ಬರು ಟ್ರೈನರ್ ಇರುತ್ತಾರೆ. 3ಎ, 4ಎಬಿ, 5ಎ- ಎಂಬ ಮೂರು ವಿಧದ ವಿಭಾಗಗಳಿದ್ದು, ಇವಕ್ಕೆ ಪ್ರತ್ಯೇಕ ಶುಲ್ಕಗಳೂ ಇವೆ.
ಇಲ್ಲಿ ಆಡುವಾಗ ನಗು ಕೂಡ ಉಕ್ಕುತ್ತದೆ. ಬಬೂಲ್‌ಗಳು ಪರಸ್ಪರ ಸ್ಪರ್ಶಿಸಿದಾಗ, ಸಿಗುವ ಮಜಾನೇ ಬೇರೆ. ಮೇಲಿನಿಂದ ಹಾರಿಬಿದ್ದರೂ, ಯಾವುದೇ ತೊಂದರೆಯಿಲ್ಲ. ಬಬಲ್ ನಿಮ್ಮನ್ನು ಅಪಾಯದಿಂದ ರಕ್ಷಿಸುತ್ತದೆ. ಅಮೆರಿಕ, ಕೆನಡಾ, ನಾರ್ವೆ, ಜರ್ಮನಿಗಳಲ್ಲಿ ಈಗಾಗಲೇ ಜನಪ್ರಿಯವಾಗಿರುವ ಈ ಕ್ರೀಡೆಯನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಿದ ಖ್ಯಾತಿ “ದಿ ಬುಲ್ ರಿಂಗ್’ ಸಂಸ್ಥೆಯದ್ದು.
ಅಂದಹಾಗೆ, ಬಬಲ್ ಫುಟ್ಬಾಲ್‌ನಿಂದ ಆರೋಗ್ಯ ಲಾಭಗಳೂ ಉಂಟು. ಆಟಗಾರರನ್ನು ನಗೆಗಡಲಲ್ಲಿ ತೇಲಿಸುವುದಲ್ಲದೆ, ದೇಹಕ್ಕೆ ಉಲ್ಲಾಸವೂ ಸಿಗುತ್ತದೆ. ರಕ್ತ ಸಂಚಾರ ಸುಗಮವಾಗುತ್ತದೆ. ಮಾನಸಿಕ ಒತ್ತಡಗಳು ದೂರವಾಗುತ್ತವೆ.
ಏನಿದು?
ಗಾಳಿ ತುಂಬಿದ ಬಲೂನ್‌ಗಳನ್ನು ಧರಿಸಿಕೊಂಡು, ಆಡುವ ಫುಟ್ಬಾಲ್. ನಾರ್ವೆಯ ಹೆನ್ರಿಕ್ ಎಲೆಸ್ಟಾಡ್ ಎಂಬಾತ 2011ರಲ್ಲಿ ಈ ಕ್ರೀಡೆಯನ್ನು ತಮಾಷೆಗಾಗಿ ಆರಂಭಿಸಿದ. ಮುಂದೆ ಅಮೆರಿಕದ ಐಟಿ ಕಂಪನಿಯ ಉದ್ಯೋಗಿಗಳು ಒತ್ತಡವನ್ನು ಕರಗಿಸಿಕೊಳ್ಳಲು ಇದನ್ನು ಮುಂದುವರಿಸಿದರು.
ಎಲ್ಲಿ?: ದಿ ಬುಲ್ ರಿಂಗ್, ಬಿಡಿಎ ಕಾಂಪ್ಲೆಕ್ಸ್ ಬಳಿ, ಇಂದಿರಾನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.