ಸಿಜಿಕೆ! ಸೋಜಿಗದ ಸೂಜಿಗಲ್ಲು
"ಬೇಡೋ ಕೈಗಳು ಶುದ್ಧವಾಗಿದ್ರೆ, ನೀಡೋ ಕೈಗಳೂ ಸಿದ್ಧವಾಗಿರ್ತವೋ ನನ್ಮಕ್ಳಾ...'!
Team Udayavani, Jun 29, 2019, 4:20 PM IST
ಕನ್ನಡ ರಂಗಭೂಮಿಗೆ ರಂಗು ತಂದವರು ಸಿಜಿಕೆ. “ಒಡಲಾಳ’ ದಂಥ ಅಪರೂಪದ ಕೃತಿಗೆ ರಂಗರೂಪ ನೀಡಿ, ಅದನ್ನು ಎಲ್ಲರ ಎದೆಗೂ ತಲು ಪಿಸಿದ ಧೀಮಂತ. ನಟಿ ಉಮಾಶ್ರೀ ಯನ್ನು “ಸಾಕವ್ವ’ನನ್ನಾಗಿ ಬದ ಲಿ ಸಿದ್ದೇ ಇವರು. ಸಿಜಿಕೆ ಒಂದು ನಾಟಕ ಮಾಡಿಸುತ್ತಾರೆಂದರೆ, ಅದರಲ್ಲಿ ಪಾತ್ರ ಮಾಡಲು, ಹವ್ಯಾಸಿ ಕಲಾವಿದರೆಲ್ಲ ಸಾಲುಗಟ್ಟುತ್ತಿದ್ದರು. ಜು.27ರಂದು ಸಿಜಿಕೆಯ ಹುಟ್ಟುಹಬ್ಬದ ದಿನ. ಆ ನೆಪದಲ್ಲಿ ರಂಗಭೂ ಮಿಯ ಕಲಾವಿದ, ನಿರ್ದೇಶಕರು ಸಿಜಿಕೆಯನ್ನು ಇಲ್ಲಿ ಆಪ್ತವಾಗಿ ಕಟ್ಟಿಕೊ ಟ್ಟಿದ್ದಾರೆ…
ಚಳ್ಳಕೆರೆ ಗೋವಿಂದನಾಯಕನ ಮಗ ಕೃಷ್ಣಸ್ವಾಮಿ!
ಸಿಜಿಕೆ ಎಂದರೆ ಭಯ… ಸಿಜಿಕೆ ಎಂದರೆ ಭಕ್ತಿ… ಸಿಜಿಕೆ ಎಂದರೆ ಗೌರವ… ಮತ್ತು ಸಿಜಿಕೆ ಎಂದರೆ ಪ್ರೀತಿ!
ಪ್ರಾಯಶಃ ಬಿ ವಿ ಕಾರಂತರ ನಂತರ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಹವ್ಯಾಸಿ ರಂಗಭೂಮಿ ಕಲಾವಿದರನ್ನೆಲ್ಲಾ ಒಗ್ಗೂಡಿಸಬಲ್ಲ ಒಂದೇ ಒಂದು ಹೆಸರೆಂದರೆ ಅದು ಸಿಜಿಕೆ. ಹಾಗೆ ನೋಡಿದರೆ ಸಿಜಿಕೆಯವರನ್ನು ಮೀರಿಸಬಲ್ಲ ಪ್ರತಿಭಾವಂತ ರಂಗ ನಿರ್ದೇಶಕರಿದ್ದರು- ಇದ್ದಾ ರೆ. ಆದರೆ, ಅವರ ಸರಳತೆ, ಪ್ರಾಮಾಣಿಕತೆ, ನಿಸ್ವಾರ್ಥತೆ, ಮಾನವೀಯತೆ, ಸಾಮಾಜಿಕ ಕಾಳಜಿ ಮತ್ತು ಅವನ್ನೆಲ್ಲ ವ್ಯಕ್ತಪಡಿಸಲು ಅವರಂತೆ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡವರು ತೀರಾ ವಿರಳ!
ಕನ್ನಡ ರಂಗಭೂಮಿಗೆ ಸಿಜೆಕೆಯವರ ಕೊಡುಗೆ ಅಪಾರ. ಎಂಥೆಂಥಾ ನಾಟಕಗಳನ್ನು ನಿರ್ದೇಶಿಸಿದರು! ಎಂಥೆಂಥಾ ಕಲಾವಿದರನ್ನು, ತಂತ್ರಜ್ಞರನ್ನು ಬೆಳಕಿಗೆ ತಂದರು!!
ದೇವನೂರ ಮಹಾದೇವ ಅವರ “ಒಡಲಾಳ’ ಕೃತಿಯನ್ನು ಸಿಜಿಕೆ ರಂಗಕ್ಕೆ ಅಳವಡಿಸಿ ಉಮಾಶ್ರೀ ಅವರಲ್ಲಿ ‘ಸಾಕವ್ವ’ನನ್ನು ಆವಾಹನೆ ಮಾಡಿಸಿರದಿದ್ದರೆ, “ಪುಟ್ನಂಜ’ ಚಿತ್ರದಲ್ಲಿ “ಪುಟ್ಟಮಲ್ಲಿ’ಯನ್ನು ಕಾಣಲು ಸಾಧ್ಯವಿರುತ್ತಿರಲಿಲ್ಲ. ಸಿಜಿಕೆಯವರು ತೀರಿಕೊಂಡಾಗ ಮೊದಲ ಬಾರಿಗೆ ಅವರ ಸ್ಮರಣೆಯಲ್ಲಿ ನಡೆದ ನಾಟಕೋತ್ಸವದಲ್ಲಿ ಸಾಕವ್ವನ ಪಾತ್ರ ಮುಗಿಸಿ ಗ್ರೀನ್ ರೂಮಿಗೆ ಬಂದ ಉಮಾಶ್ರೀಯವರು ಗಳಗಳನೆ ಅತ್ತುಬಿಟ್ಟಿದ್ದರು! ಅವರಿಗೆ ಇಡೀ ಜೀವಮಾನದಲ್ಲಿ “ಒಡಲಾಳ’ದ ಸಾಕವ್ವನನ್ನು ಮೀರಿಸುವಂಥ ಮತ್ತೂಂದು ಪಾತ್ರ ಸಿಗಲು ಸಾಧ್ಯವೇ?!
ಇವತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾ ನಿರ್ದೇಶಕರಾದ ಶಶಿಧರ ಅಡಪ (ಮಲೆಗಳಲ್ಲಿ ಮದುಮಗಳು ನಾಟಕದ ಹಾಗೂ ಹಲವಾರು ಹಿಂದಿ ಚಲನಚಿತ್ರಗಳ ಅತ್ಯಂತ ಬೇಡಿಕೆಯ ಕಲಾ ನಿರ್ದೇಶಕರೂ ಹೌದು), “ಕುಸುಮಬಾಲೆ’, “ಮಲೆಗಳಲ್ಲಿ ಮದುಮಗಳು’ ನಾಟಕಗಳ ಮೂಲಕ ಭಾರತೀಯ ರಂಗಭೂಮಿಯಲ್ಲಿ ಅಭೂತಪೂರ್ವ ಇತಿಹಾಸ ಸೃಷ್ಟಿಸಿದ ಪ್ರಯೋಗಶೀಲ ನಿರ್ದೇಶಕರೆನಿಸಿದ ಬಸವಲಿಂಗಯ್ಯ, ರಾಷ್ಟ್ರ ಮಟ್ಟದ ಖ್ಯಾತಿ ಗಳಿಸಿದ್ದ ಬೆಳಕು ತಜ್ಞ ದಿ. ಅ.ನ. ರಮೇಶ್- ಇವರೆಲ್ಲರೂ ನಾವು ಸಿಜಿಕೆಯ ಸಂಸರ್ಗದಲ್ಲಿ ಅರಳಿದವರೆಂದು ಹೆಮ್ಮೆಯಿಂದ ಹೇಳಿಕೊಳ್ಳುವವರು. ಮೈಕೊ ಮಂಜು, ಮುರುಡಯ್ಯ, ಮೈಕೊ ಶಿವಶಂಕರ್… ಹೀಗೇ ತರುಣ ಕಲಾವಿದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಸಿಜಿಕೆ ಒಂದು ನಾಟಕ ಮಾಡಿಸುತ್ತಿದ್ದಾ ರೆ ಎಂದರೆ ಕಲಾಕ್ಷೇತ್ರದ ಆವರಣದಲ್ಲಿ ಸಂಭ್ರಮದ ವಾತಾವರಣ!! ತಾಲೀಮು ಆರಂಭಗೊಂಡಂದಿನಿಂದ ಪ್ರದರ್ಶನದವರೆಗೂ ಬಂದು ಹೋಗುತ್ತಿದ್ದ ಪ್ರತಿಭಾವಂತರು ಅದೆಷ್ಟೋ!! ನಾಟಕ ಇರದಿದ್ದರೂ ಕೂಡ ಸಿಜಿಕೆ ಯೂನಿವರ್ಸಿಟಿಯ ಕೆಲಸ ಮುಗಿದ ಕೂಡಲೇ ಹೊರಟುಬರುತ್ತಿದ್ದುದು ಕಲಾಕ್ಷೇತ್ರಕ್ಕೇನೇ. “ಸಂಸ’ದಲ್ಲಿ ಕುಳಿತು ತಮ್ಮ ಕಲಾಬಳಗದವರೊಂದಿಗೆ ಮಾತುಕತೆಯಾಡುತ್ತಾ ರಾತ್ರಿಯ ಹೊತ್ತಿಗೆ ಮನೆಗೆ ತೆರಳುತ್ತಿದ್ದುದು ನಿತ್ಯದ ಪರಿಪಾಠ.
ಯಾವುದೇ ಕಲಾವಿದರಿಗೆ ವೈಯಕ್ತಿಕ ಸಮಸ್ಯೆಗಳೇನೇ ಇದ್ದರೂ ಸಿಜಿಕೆಯವರ ಸಹಾಯ ಹಸ್ತ ಇದ್ದೇಇರುತ್ತಿತ್ತು. ಹಾಗಾಗಿ, ಅವರನ್ನು ಕಾಣಲು ಒಬ್ಬರಲ್ಲ ಒಬ್ಬರು ಬರುತ್ತಲೇ ಇರುವುದು ಸಹಜವಾಗಿತ್ತು.
ಹೀಗೆಯೇ ಒಂದು ದಿನ ಸಿಜಿಕೆ ತಮ್ಮ ಶಿಷ್ಯ ಮುರುಡಯ್ಯನ ಜೊತೆ ಸಂಸದಲ್ಲಿರುವಾಗ ಅವರನ್ನು ಕಾಣಲು ಮಂಡ್ಯದಿಂದ ಒಬ್ಬರು ಹೆಣ್ಣುಮಗಳು ಬರುತ್ತಾರೆ.
“ಓಹೋ! ಏನಮ್ಮಾ ನಟಿಮಣಿ ಇಷ್ಟು ದೂರ?’
“ನಮ್ಮ ಚಿಕ್ಕಪ್ಪನನ್ನು ನೋಡಲು ಬಂದೆ ಸರ್. ಅವರಿಗೆ ಆಪರೇಷನ್ ಆಗ್ತಿದೆ. ಮಾರ್ಕೆಟ್‌ನಲ್ಲಿ ಬಸ್ ಇಳಿದ ತಕ್ಷಣ ನಿಮ್ಮ ನೆನಪಾಯ್ತು. ಸಿಗಬಹುದೇನೋ ಅಂತ ಬಂದೆ’
“ಊಟ ಮಾಡ್ದೇನಮ್ಮಾ? ಏ ಮುರುಡಯ್ಯ, ಹೋಗಿ ಊಟ ಮಾಡಿಸ್ಕೊಂಡು ಬಾರೋ…’
ಮುರುಡಯ್ಯ ಆಕೆಯನ್ನು ಕಾರಂತರ ಕ್ಯಾಂಟೀನ್‌ಗೆ ಕರೆದೊಯ್ದು, ಊಟ ಮಾಡಿಸಿ ಬರುವಷ್ಟರಲ್ಲಿ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಸಿಜಿಕೆಯವರನ್ನು ಕಂಡು ಮಾತಾಡುತ್ತಿರುತ್ತಾರೆ. ಸಿಜಿಕೆ ಆ ವ್ಯಕ್ತಿಗೆ, “ಬಹಳ ದಿನ ಆದ್ಮೇಲೆ ಸಿಕ್ಕಿದೀಯಾ ನನ್ಮಗನೆ, ಟ್ಯಾಕ್ಸ್ ಹಾಕದೇ ಹಂಗೇ ಕಳಿಸಬಾರದು ನಿನ್ನ – ತೆಗಿ ಜೇಬಲ್ಲಿ ಎಷ್ಟ್ ಇಟ್ಟಿàದಿಯಾ?’ ಎನ್ನುತ್ತಾರೆ. ಹಾಗೆ ಪ್ರೀತಿಯ ಸಲುಗೆಯಿಂದ ಕೇಳಿದಾಗ ಯಾರೂ ಸಿಜಿಕೆಗೆ ಇಲ್ಲವೆನ್ನುತ್ತಿರಲ್ಲ.
ಆತ ನಗುತ್ತಾ, “ಎಷ್ಟು ಬೇಕಿತ್ತು ಸರ್?’
“ತೆಗೀ ಒಂದಿಪ್ಪತ್ ಸಾವಿರ’
“ಅಯ್ಯೋ ಅಷ್ಟು ತಂದಿಲ್ಲ ಸರ್’
“ಸರಿ ಎಷ್ಟಿದೆಯೋ ಅಷ್ಟು ಕೊಟ್ಟೋಗು’
“ಹತ್ತು ಸಾವಿರ ಇದೆ’ ಎಂದು ಕೊಡಲು ಹೋದಾಗ, “ಇಸ್ಕೊಳ್ಳೋ ಮುರುಡಯ್ಯ’ ಎನ್ನುತ್ತಾರೆ.
ಆತ ಹೋದಮೇಲೆ ಸ್ವಲ್ಪ ದುಡ್ಡನ್ನು ಆ ಹೆಣ್ಣು ಮಗಳಿಗೆ ಕೊಡಿಸುತ್ತಾರೆ. ಆಕೆ ಕೃತಜ್ಞತೆಯಿಂದ ಸ್ವೀಕರಿಸಿ ಹೊರಟ ಮೇಲೆ ಉಳಿದ ಹಣವನ್ನು ಮುರುಡಯ್ಯ ಹಿಂತಿರುಗಿಸಲು ಹೋದಾಗ, “ಏ ಅದನ್ನು ತಗೊಂಡೋಗಿ ಮುಂದಿನ ತಿಂಗಳು ಯಾವ ಡೇಟ್ ಖಾಲಿ ಇದೆಯೋ ನೋಡಿ ಕಲಾಕ್ಷೇತ್ರ ಬುಕ್ ಮಾಡಿºಟ್ಬಾ ಹೋಗೋ…’ ಅಂತಾರೆ.
ಸಿಜಿಕೆ ಮಾಮೂಲಿನಂತೆ ಸಂಸ ಬಯಲು ರಂಗಮಂದಿರದ ವೇದಿಕೆಯ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು ತಲೆಯಡಿಗೆ ಕೈಕೊಟ್ಟುಕೊಂಡು ಅಂಗಾತ ಮಲಗಿ ಆಕಾಶ ನೋಡುತ್ತಿರುವಾಗ, ಕಲಾಕ್ಷೇತ್ರಕ್ಕೆ ಹೋಗಿ ಅವರು ಹೇಳಿದಂತೆ ಡೇಟ್ ಬುಕ್ ಮಾಡಿ ಬಂದ ಮುರುಡಯ್ಯ ಕೆಲವು ಕ್ಷಣಗಳು ಸುಮ್ಮನಿದ್ದು… “ಸರ್ ನಿಮ್ಮನ್ನ ಒಂದು ವಿಷಯ ಕೇಳ್ಬೇಕು ಕೇಳಾÉ? ತುಂಬಾ ದಿನದಿಂದ ಕೇಳ್ಬೇಕು ಅನ್ಕೋತಿದೀನಿ…’
“ಅಯ್ಯೋ ನನ್ಮಗನೇ, ಅದೇನ್ ಕೇಳ್ಳೋ…’
ಮುರುಡಯ್ಯ ಹಿಂಜರಿಯುತ್ತಾ…
“ಅಲ್ಲ… ಏನಿಲ್ಲ… ಯಾರತ್ರಾನೋ ದುಡ್ಡಿಸ್ಕೋತೀರಾ… ಯಾರ್ಗೋ ಕೊಡ್ತೀರಾ… ನಾಟಕ ಮಾಡಿಸ್ತೀರಾ… ಅದಕ್ಯಾರ್ಯಾರೋ ದುಡ್ಕೊಡ್ತಾರೆ… ಹೆಂಗ್ ಸಾರ್ ಇದೆಲ್ಲಾ?!! ನಂಗಂತೂ ಏನೂ ಅರ್ಥ ಆಗ್ತಿಲ್ಲ…’
ನಿರ್ಮಲವಾದ ಆಕಾಶವನ್ನೇ ನೋಡುತ್ತಾ ಸಿಜಿಕೆ ಹೇಳುತ್ತಾರೆ- “ಬೇಡೋ ಕೈಗಳು ಶುದ್ಧವಾಗಿದ್ರೆ, ನೀಡೋ ಕೈಗಳೂ ಸಿದ್ಧವಾಗಿರ್ತವೋ ನನ್ಮಕ್ಳಾ…’!
ಹಾಗಿಲ್ಲದಿದ್ದರೆ, ಡಿ.ಕೆ. ಚೌಟ, ಎಂ.ಪಿ. ಪ್ರಕಾಶ್ ಅಂಥವರು ಸಿಜಿಕೆಯವರ ಬೆನ್ನಿಗೆ ನಿಲ್ಲಲು ಸಾಧ್ಯವಿತ್ತಾ?
– ಶಿವಶಂಕರ್ ಜಿ., ರಂಗ ನಿರ್ದೇಶಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.