“ಸಿಜಿಕೆ’ ರಂಗ ಹಬ್ಬ
ಐದು ದಿನಗಳ ಬಹುಭಾಷಾ ನಾಟಕೋತ್ಸವ
Team Udayavani, Oct 12, 2019, 4:07 AM IST
ರಂಗ ನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ. ಭಾನುವಾರದಿಂದ, ಐದು ದಿನಗಳ ಕಾಲ ರಂಗೋತ್ಸವ ನಡೆಯಲಿದ್ದು, ಬಹುಭಾಷಾ ನಾಟಕಗಳು ಹಾಗೂ ಗಿರೀಶ್ ಕಾರ್ನಾಡ್ ಸ್ಮರಣಾರ್ಥ ಕನ್ನಡದ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ, ಹಾಡು- ಹರಟೆ, ದೇಸಿ ತಿಂಡಿ, ಕೈಮಗ್ಗ ಉಡುಪುಗಳು ಮತ್ತು ಗುಡಿ ಕೈಗಾರಿಕೆ ಉತ್ಪನ್ನಗಳ ಮಾರಾಟವೂ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಉತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕ-ಕಿರುಚಿತ್ರಗಳ ವಿವರ
ಅ.13, ಭಾನುವಾರ ಸಂಜೆ 5.45- ಅಕ್ಷರದವ್ವನ ಕಥೆ (ಸಾವಿತ್ರಿಬಾಯಿ ಫುಲೆ ಕುರಿತ ರಂಗ ಪ್ರಯೋಗ), ರಚನೆ: ರಾಜೇಶ್ವರಿ ಧಾರವಾಡ.
ಅ.13, ಭಾನುವಾರ ಸಂಜೆ 6.30- ಉದ್ಘಾಟನಾ ಸಮಾರಂಭ.
(ಗಿರೀಶ್ ಕಾರ್ನಾಡ್ ವೇದಿಕೆ- ಕಿರುಚಿತ್ರ)
ಅ.14, ಸೋಮವಾರ ಸಂಜೆ 4.30-ಬೆನ್ನಿಗೆಲ್ಲಿಯ ಕಣ್ಣು, ನಿರ್ದೇಶನ- ನರೇಶ್ ಹೆಗಡೆ ದೊಡ್ಮರಿ
ಅ.15, ಮಂಗಳವಾರ ಸಂಜೆ 4.30-ಭೂತ ಮಿಸ್ಸಿಂಗ್, ನಿರ್ದೇಶನ- ಶಶಾಂಕ ಸೋಗಾಲ
ಅ.16-ಬುಧವಾರ ಸಂಜೆ 4.30-ನಾನ್ ದೇವ್ರು, ನಿರ್ದೇಶನ-ಉತ್ಕರ್ಷ ಬಲರಾಮ್ ಮತ್ತು ಬಿಡುಗಡೆ, ನಿರ್ದೇಶನ- ನವೀನ್ ತೇಜಸ್ವಿ.
ಅ.17-ಗುರುವಾರ ಸಂಜೆ 4.30- ಜಿ.ಪಿ.ಎಸ್., ನಿರ್ದೇಶನ- ರಘುನಂದನ್ ಕಾನಡ್ಕ
(ಅ.ನಾ.ರಮೇಶ್ ವೇದಿಕೆ- ನಾಟಕ)
ಅ.14, ಸೋಮವಾರ ಸಂಜೆ 5.15- ಮತ್ತೂಬ್ಬ ಮಾಯಿ- ರಚನೆ: ರಾಘವೇಂದ್ರ ಪಾಟೀಲ್, ತಂಡ: ಆಟ-ಮಾಟ
ಅ.15, ಮಂಗಳವಾರ ಸಂಜೆ 5.15-ಕಸ್ತೂರಬಾ- ರಚನೆ: ಎಸ್. ರಾಮನಾಥ, ಅಭಿನಯ: ಬಿ.ಎನ್. ಶಶಿಕಲಾ, ರಂಗಾಯಣ
ಅ.16, ಬುಧವಾರ ಸಂಜೆ 5.15- ದ್ವೀಪ- ರಚನೆ: ಅತುಲ್ ಫ್ಯೂಗಾರ್ಡ್, ತಂಡ: ಆಯನ ನಾಟಕದ ಮನೆ (ಮಂಗಳೂರು)
ಅ.17, ಗುರುವಾರ ಸಂಜೆ 5.15- ಊರ್ಮಿಳಾ- ರಚನೆ: ಎಚ್.ಎಸ್.ವೆಂಕಟೇಶ ಮೂರ್ತಿ- ತಂಡ: ಸ್ಪಂದನ ಮತ್ತು ಸೀತಾಂತರಾಳ- ರಚನೆ: ಶಶಿಕಾಂತ ಯಡಹಳ್ಳಿ, (ಮಂಜುಳಾ ಬದಾಮಿ ಅವರಿಂದ ಏಕವ್ಯಕ್ತಿ ಪ್ರದರ್ಶನ)
(ಡಿ.ಕೆ. ಚೌಟ ವೇದಿಕೆ, ಬಹುಭಾಷಾ ನಾಟಕ)
ಅ.13, ಭಾನುವಾರ ಸಂಜೆ 7- ಪುಳುದಿ ಮರಪರವೈಗಳ್ (ತಮಿಳು)- ರಚನೆ: ಮುರುಗ ಭೂಪತಿ-ತಂಡ: ಮನಳ್‌ಮಾಗುಡಿ ಥಿಯೇಟರ್ ಲ್ಯಾಂಡ್
ಅ.14, ಸೋಮವಾರ ಸಂಜೆ 7- ಕನ್ನಗತ್ತಿ (ಕನ್ನಡ)-ರಚನೆ: ಲಕ್ಷ್ಮೀಪತಿ ಕೋಲಾರ- ತಂಡ: ರಂಗನಿರಂತರ
ಅ.15, ಮಂಗಳವಾರ ಸಂಜೆ 7- ಸಂಗೀತ್ ದೇವಬಜಾಲಿ (ಮರಾಠಿ)- ರಚನೆ- ಪ್ರಾಜಕ್¤ ದೇಶಮುಖ್- ತಂಡ: ಭದ್ರಕಾಳಿ ಪ್ರೊಡಕ್ಷನ್ಸ್, ಮುಂಬಯಿ
ಅ.16, ಬುಧವಾರ ಸಂಜೆ 7- ಪರೆಯಾನ್ ಮರನ್ನ ಕಥೆಗಳ್ (ಮಲಯಾಳಂ)- ರಚನೆ- ಶ್ರೀಜಿತ್ ಸುಂದರಂ- ತಂಡ: ಧ್ವಯ, ಎರ್ನಾಕುಲಂ
ಅ.17, ಗುರುವಾರ ಸಂಜೆ 7-ಘರೇ ಫಿರಾರ್ ಗಾನ್ (ಬಂಗಾಳಿ)- ರಚನೆ: ಪ್ರೊಬಿರ್ ಗುಹಾ- ತಂಡ: ಆಲ್ಟರ್‌ನೆàಟಿವ್ ಲಿವಿಂಗ್ ಥಿಯೇಟರ್
ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಯಾವಾಗ?: ಅ.13-17, ಪ್ರತಿದಿನ ಸಂಜೆ 4ರಿಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.