ಚಂದ್ರಪ್ಪ ಹೋಟೆಲ್‌ ಚರಿಷ್ಮಾ

Team Udayavani, Mar 10, 2018, 2:54 PM IST

25896336.jpg

ಯಶವಂತಪುರಕ್ಕೆ ಅಂಟಿಕೊಂಡಂತಿರುವ ಮತ್ತೀಕೆರೆಗೆ, ಮತ್ತೀಕೆರೆಯ ಲ್ಯಾಂಡ್‌ಮಾರ್ಕ್‌ನಂತಿರುವ ಎಂ.ಎಸ್‌. ರಾಮಯ್ಯ ಕಾಲೇಜಿನ ಬಸ್‌ಸ್ಟಾಪ್‌ ಬಳಿ ನಿಂತವರು ಒಮ್ಮೆ ದೀರ್ಘ‌ವಾಗಿ ಉಸಿರಾಡಿ, “ಓಹ್‌, ಇಲ್ಲೆಲ್ಲೋ ನಾನ್‌ವೆಜ್‌ ಹೋಟೆಲ್‌ ಇದೆ. ಇಷ್ಟೊಂದ್‌ ದೂರಕ್ಕೂ ಘಮ ಘಮ ಸೆ¾ಲ್‌ ಬರ್ತಾ ಇದೆಯಲ್ಲ….’ಎಂದು ಉದ್ಗರಿಸುತ್ತಾರೆ. ಅಲ್ಲಿಂದ ಐವತ್ತು ಹೆಜ್ಜೆ ನಡೆದರೆ ಚಂದ್ರಪ್ಪ ಹೋಟೆಲ್‌ ಕಾಣಿಸುತ್ತದೆ.

ಮಾಂಸಾಹಾರಿ ಭೋಜನಕ್ಕೆ ಮತ್ತೀಕೆರೆ, ಯಶವಂತಪುರ, ಗೊರಗುಂಟೆಪಾಳ್ಯ, ಈ ಕಡೆ ಹೆಬ್ಟಾಳ, ಸಂಜಯನಗರದವರೆಗೂ ಖ್ಯಾತಿ ಪಡೆದಿರುವುದು ಚಂದ್ರಪ್ಪ ಹೋಟೆಲಿನ ವಿಶೇಷ. ಇದು ಶುರುವಾಗಿದ್ದು 1976ರಲ್ಲಿ. ಅಂದರೆ ಈ ಹೋಟೆಲ್‌ಗೆ ನಾಲ್ಕು ದಶಕಗಳ ಇತಿಹಾಸವಿದೆ. ಬೆಂಗಳೂರಿನವರೇ ಆದ ರಾಜಶೇಖರ್‌ ಇದನ್ನು ಆರಂಭಿಸಿದರು. ಹೋಟೆಲಿಗೆ ಯಾವುದಾದರೂ ಹೆಸರಿಡಬೇಕು ಅನ್ನಿಸಿದಾಗ, ತಮ್ಮ ತಂದೆ ಚಂದ್ರಪ್ಪನವರ ಹೆಸರನ್ನೇ ಇಟ್ಟರು. (ತಂದೆಗಿಂತ ದೊಡ್ಡವರು, ತಂದೆಗಿಂತ ಒಳ್ಳೆಯವರು ಯಾರಿದಾರೆ ಹೇಳಿ ಅನ್ನುವುದು ರಾಜಶೇಖರ್‌ ಅವರ ಮಾತು) ಈಗ, ಚಂದ್ರಪ್ಪನವರ ಮೊಮ್ಮಗ ಲೋಹಿತ್‌ ಈ ಹೋಟೆಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 

ಯಶವಂತಪುರದಲ್ಲಿ ಹೋಟೆಲುಗಳಿಗೆ ಬರವಿಲ್ಲ. ಹಾಗಿದ್ದರೂ ನಿಮ್ಮ ಹೋಟೆಲನ್ನೇ ಹುಡುಕಿಕೊಂಡು ಜನ ಬರುತ್ತಾರೆ. ಈ ಜನಪ್ರಿಯತೆಗೆ ಕಾರಣವೇನು ಎಂದು ಕೇಳಿದರೆ, “ಶುಚಿ ಮತ್ತು ರುಚಿಯೇ ನಮ್ಮ ಹೋಟೆಲಿನ ಪ್ಲಸ್‌ ಪಾಯಿಂಟ್‌. ಯಾವುದೇ ಜಾಗಕ್ಕೆ ಜನರು ಮತ್ತೆ ಮತ್ತೆ ಹೋಗಬೇಕೆಂದರೆ ಅಲ್ಲಿ ಶುಚಿತ್ವ ಕಾಣಿಸಬೇಕು. ಅದರಲ್ಲೂ, ಒಂದು ಹೋಟೆಲ್‌ನ್ನು ಎರಡು ಮತ್ತು ಮೂರನೇ ಬಾರಿಯೂ ನೆನಪಿಸಿಕೊಂಡು ಗ್ರಾಹಕರು ಬರಬೇಕಾದರೆ ಅಲ್ಲಿ ಸಿಗುವ ಆಹಾರಕ್ಕೆ ಬಾಯಿ ಚಪ್ಪರಿಸುವಂಥ ರುಚಿಯೂ ಇರಬೇಕು. ನಮ್ಮ ಹೋಟೆಲಿನಲ್ಲಿ ತಯಾರಾಗುವ ಐಟಂಗಳಲ್ಲಿ ‘ಕ್ವಾಲಿಟಿ’ ಉಳಿಸಿಕೊಂಡಿದ್ದೇವೆ. ಆಹಾರದ ಕ್ವಾಲಿಟಿ ಮತ್ತು ಕ್ವಾಂಟಿಟಿ ಎರಡೂ ಚೆನ್ನಾಗಿರುವುದರಿಂದ ಈ ಹೋಟೆಲಿಗೆ ಪರ್ಮನೆಂಟ್‌ ಗ್ರಾಹಕರು ಸೃಷ್ಟಿಯಾಗಿದ್ದಾರೆ’ ಅನ್ನುತ್ತಾರೆ. ಈ ಹೋಟೆಲ್‌ ಮಾಲೀಕ ಲೋಹಿತ್‌

ಹೋಂ ಡೆಲಿವರಿಯೂ ಇದೆ
ಶನಿವಾರ-ಭಾನುವಾರಗಳಂದು, ಮಧ್ಯಾಹ್ನ ಹಾಗೂ ರಾತ್ರಿ ಈ ಹೋಟೆಲಿನ ಮುಂದೆ ಕಾಣುವ ಜನಜಂಗುಳಿ ನೋಡಿದರೆ, ಈ ರಶ್‌ ಕರಗಿ ನಾವು ಊಟ ಪಡೆವ ಹೊತ್ತಿಗೆ ಮೂರು ಗಂಟೆ ಆಗಿಬಿಡುತ್ತೆ ಎಂಬ ಅನುಮಾನ ಜೊತೆಯಾಗುವಷ್ಟು ಗದ್ದಲ ಇರುತ್ತದೆ. ಹಾಗಂತ ಗಾಬರಿಯಾಗಬೇಕಿಲ್ಲ. ಹೋಂ ಡೆಲಿವರಿ ವ್ಯವಸ್ಥೆ ಕೂಡ ಇಲ್ಲಿದೆ. 

ವರೈಟಿ..ವರೈಟಿ….
ಮಟನ್‌ ಬಿರಿಯಾನಿ, ಮಟನ್‌ ಖೀಮಾ, ಪುದೀನಾ ಮಟನ್‌, ಮಟನ್‌ ಚಾಪ್ಸ್‌, ಪೆಪ್ಪರ್‌ ಚಿಕನ್‌, ಚಿಲ್ಲಿ ಚಿಕನ್‌, ಗ್ರೀನ್‌ ಚಿಕನ್‌, ಗಾರ್ಲಿಕ್‌ ಚಿಕನ್‌, ಬಾದೂಷಾ ಚಿಕನ್‌, ಹೈದ್ರಾಬಾದಿ ಚಿಲ್ಲಿ ಚಿಕನ್‌, ಜಾಲಾ ಚಿಕನ್‌, ಚಿಕನ್‌ ಮಂಚೂರಿಯನ್‌, ಲೆಮನ್‌ ಚಿಕನ್‌, ಚಿಕನ್‌ ಕಬಾಬ್‌ ಹಾಗೂ ಇಷ್ಟೇ ತರಹದ ಪೋರ್ಕ್‌ ಐಟಂಗಳು ಈ ಹೋಟೆಲಿನಲ್ಲಿ ಲಭ್ಯ. ಪ್ರತಿಯೊಂದು ಐಟಂನ ಬೆಲೆಯೂ 150 ರೂಪಾಯಿಗಳ ಒಳಗೇ ಇದೆ. ಅಂದಮೇಲೆ, ಮಾಂಸಾಹಾರ ಪ್ರಿಯರು, ಅದರಲ್ಲೂ ಹಸಿದವರು ಈ ಹೋಟೆಲಿಗೆ ನುಗ್ಗದೇ ಬಿಟ್ಟಾರೆಯೇ? ನೀವೇನಾದರೂ ಮತ್ತೀಕೆರೆ ಅಥವಾ ಎಂ.ಎಸ್‌. ರಾಮಯ್ಯ ಕಾಲೇಜಿನ ಕಡೆಗೆ ಹೋಗಿದ್ದೇ ಆದರೆ, ನೀವು ಮಾಂಸಾಹಾರ ಪ್ರಿಯರಾಗಿದ್ದರೆ ಚಂದ್ರಪ್ಪ ಹೋಟೆಲಿಗೂ ಹೋಗಿ ಬನ್ನಿ.

ರಜಾದಿನ: ಸೋಮವಾರ
 ಸಮಯ?: ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ
ತೆರೆದಿರುತ್ತದೆ
 ವಿಶೇಷತೆ: ಗಾರ್ಲಿಕ್‌ ಚಿಕನ್‌, ಪೆಪ್ಪರ್‌ ಪೋರ್ಕ್‌ ಫ್ರೈಗೆ ಹೆಸರುವಾಸಿ
 ಸಂಪರ್ಕ: 080-23606186, 9986119710/ 9731719888

11ರಿಂದ 11
ಬೆಳಗ್ಗೆ 11 ಗಂಟೆಯಿಂದ ರಾತ್ರಿ 11ರವರೆಗೂ ತೆರೆದಿರುವ ಈ ಹೋಟೆಲಿನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಲಭ್ಯ. ಆದರೆ ಮೆನುವಿನಲ್ಲಿ ಮಾಂಸಾಹಾರದ ತಿನಿಸುಗಳಿಗೇ ಸಿಂಹಪಾಲು. ಇಲ್ಲಿಗೆ ವೆಜ್‌ ಫ‌ುಡ್‌ ಬಯಸಿ ಬರುವ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯೇ ಇದೆ. ಗಾರ್ಲಿಕ್‌ ಚಿಕನ್‌ ಮತ್ತು ಪೆಪ್ಪರ್‌ ಪೋರ್ಕ್‌ಗೆ ಹೆಸರಾಗಿರುವ ಈ ಹೋಟೆಲಿನಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಕಾಲಿಡಲು ಜಾಗವಿಲ್ಲದಷ್ಟು ಗ್ರಾಹಕರು
ತುಂಬಿರುತ್ತಾರೆ

ನರೇಶ್‌ ಕುಮಾರ್‌

ಟಾಪ್ ನ್ಯೂಸ್

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.