ಮಕ್ಕಳೇ ಬನ್ನಿ, ಅಂತರಿಕ್ಷಕೆ!


Team Udayavani, Dec 2, 2017, 1:13 PM IST

makkale-banni.jpg



ಭೂಮಿಯ ಮೇಲೆ ಏನಿದೆ? ವಿಮಾನಗಳು ಎಷ್ಟು ಎತ್ತರದಲ್ಲಿ ಹಾರಾಡುತ್ತವೆ, ಉಪಗ್ರಹಗಳು ಎಷ್ಟು ಎತ್ತರದಲ್ಲಿ ತೇಲುತ್ತಿವೆ? ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸುವುದು ಎಂದರೇನು? ಸ್ಮಾರ್ಟ್‌ಫೋನುಗಳಲ್ಲಿ ಜಿ.ಪಿ.ಎಸ್‌ ಸೌಲಭ್ಯ ಇದೆಯಲ್ಲ, ಅದು ಹೇಗೆ ಕೆಲಸ ಮಾಡುತ್ತೆ? ಮಂಗಳ ಗ್ರಹದಲ್ಲಿ ನೀವು ಎಷ್ಟು ಕೆ.ಜಿ. ತೂಗುತ್ತೀರಾ? ಶಾಲೆಯ ಪಠ್ಯಪುಸ್ತಕಗಳಲ್ಲಿರುವ ಇವೇ ಸರಳ ಸಂಗತಿಗಳು ಅಕ್ಷರ ರೂಪದಲ್ಲೇನೋ ತಲೆಯಲ್ಲಿ ಕೂತುಬಿಟ್ಟಿರುತ್ತವೆ.

ಆದರೆ, ಅದರ ಪ್ರಾತ್ಯಕ್ಷಿಕೆಯನ್ನು ನೋಡಿದಾಗಲೇ ನಿಜ ವಿಷಯ ಅರ್ಥವಾಗೋದು. ಮಕ್ಕಳಿಗೆ ಸರಳ ವಿಜ್ಞಾನವನ್ನು ಬೋಧಿಸುವ ಇಂಥ ಸ್ಥಳವೊಂದು ಈಗ ನಮ್ಮ ನಡುವೆಯಿದೆ. ಕಸ್ತೂರ ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ಕೆಲವರಾದರೂ ಭೇಟಿ ನೀಡಿರುತ್ತೀರಿ. ಅಲ್ಲೀಗ ಹೊಸದಾಗಿ ಬಾಹ್ಯಾಕಾಶ ತಂತ್ರಜ್ಞಾನ ಕುರಿತಾದ ವಸ್ತುಪ್ರದರ್ಶನವನ್ನು ಆಯೋಜಿಸಿದ್ದಾರೆ. ಮಕ್ಕಳಿಗೆ ಇದು ಖಂಡಿತಾ ಇಷ್ಟವಾಗುತ್ತೆ.
 
ವಾಲ್‌ನಲ್ಲಿ ವಿಜ್ಞಾನ: ವಾಲ್‌ ಎಂದಕೂಡಲೆ ಫೇಸ್‌ಬುಕ್‌ ನೆನಪಾಗುವ ಜಮಾನದಲ್ಲಿ, ಇಲ್ಲಿ ವಾಲ್‌ ಮೇಲೆ ವಿಜ್ಞಾನದ ಪಡಿಯಚ್ಚುಗಳನ್ನು ಮೂಡಿಸಿದ್ದಾರೆ. ಒಳಗೆ ಪ್ರವೇಶಿಸುತ್ತಿದ್ದಂತೆ ಮೊದಲಿಗೆ ಕಾಣೋದು ರಾಕೇಶ್‌ ಶರ್ಮಾ ಅವರ ಗೋಡೆ. ಅಲ್ಲಿ ಅವರ ಅಪರೂಪದ ಛಾಯಾಚಿತ್ರಗಳನ್ನು ತೂಗು ಹಾಕಲಾಗಿದೆ. ಹಾಗೆಯೇ ಕಲ್ಪನಾ ಚಾವ್ಲಾ, ವಿಜ್ಞಾನದ ಪ್ರಮುಖ ಮೈಲುಗಲ್ಲುಗಳು, ಭಾರತದ ಚಂದ್ರಯಾನ ಮತ್ತು ಮಂಗಳಯಾನ ಮುಂತಾದ ಮಹತ್ವದ ಸಂಗತಿಗಳ ವಾಲ್‌ಗ‌ಳನ್ನೂ ಕಾಣಬಹುದು. ಕ್ಲಿಷ್ಟಕರವಾದುದನ್ನು ಸರಳ ಭಾಷೆಯಲ್ಲಿ, ಎಷ್ಟು ಬೇಕೋ ಅಷ್ಟು ಹೇಳಿರುವುದು ಈ ವಾಲ್‌ಗ‌ಳ ಹೆಗ್ಗಳಿಕೆ.

ಹಾರಾಟದ ಹಿಂದಿನ ರಹಸ್ಯ: ರಾಕೆಟ್‌ ಹೇಗೆ ಚಲಿಸುತ್ತದೆ? ಹೆಲಿಕಾಪ್ಟರ್‌ ಮತ್ತು ವಿಮಾನಗಳು ಹೇಗೆ ಆಕಾಶದಲ್ಲಿ ಹಾರಾಡುತ್ತವೆ? ಇದನ್ನು ತಿಳಿಯಲು ಎಲೆಕ್ಟಾನಿಕ್‌ ಮಾದರಿಗಳನ್ನು ಇಡಲಾಗಿದೆ. ಮಾದರಿಯ ಬಳಿಯಲ್ಲೇ ಅದುಮು ಗುಂಡಿಗಳು ಮತ್ತು ಸೂಚನೆಗಳನ್ನು ನೀಡಿದ್ದಾರೆ. ಗುಂಡಿ ಒತ್ತಿದರೆ ಹೆಲಿಕಾಪ್ಟರ್‌, ರಾಕೆಟ್‌ನ ಮೋಟಾರ್‌ ಚಾಲೂ ಆಗುವುದು, ಸೂಚನೆಗಳ ಅನುಸಾರ ಗುಂಡಿಗಳನ್ನು ಅದುಮಿದರೆ ಹಾರಾಟದ ಹಿಂದಿನ ರಹಸ್ಯ ಮನವರಿಕೆಯಾಗುವುದು. ಮನರಂಜನೆಯ ಜತೆ ಕಲಿಕೆಯೂ ಇಲ್ಲಿ ಸಿಗುತ್ತೆ.

ರಾಕೆಟ್‌ ಉಡ್ಡಯನ ಹೀಗೆ…: ನಿಜವಾದ ರಾಕೆಟ್‌ ಉಡ್ಡಯನ, ದೀಪಾವಳಿಯ ರಾಕೆಟ್‌ ಉಡಾಯಿಸಿದಷ್ಟು ಸುಲಭವಲ್ಲ. ಎಷ್ಟು ಕಷ್ಟವೆಂಬುದನ್ನು ಸಂಗ್ರಹಾಲಯದಲ್ಲಿನ ಭಾರತದ ಉಪಗ್ರಹ ಉಡ್ಡಯನ ಕೇಂದ್ರ, ಶ್ರೀಹರಿಕೋಟಾದ ಮಾದರಿ ನೋಡಿ ತಿಳಿಯಬಹುದು. ರಾಕೆಟ್‌ ಉಡ್ಡಯನದ ಚಿತ್ರಣವನ್ನೂ ಕಣ್ತುಂಬಿಕೊಳ್ಳಬಹುದು. ರಾಕೆಟ್‌ ಅನ್ನು ಉಡಾವಣಾ ಸ್ಥಳಕ್ಕೆ ಕರೆತಂದು, ಅಲ್ಲಿಂದ ರಾಕೆಟ್‌ ಮೇಲಕ್ಕೇರುವ ಪ್ರಾತ್ಯಕ್ಷಿಕೆಯನ್ನು ಇಲ್ಲಿ ಕಾಣಬಹುದು. ಅಂದಹಾಗೆ, ನಿಜಜೀವನದಲ್ಲಿ ರಾಕೆಟ್‌ ಅನ್ನು ಉಡಾವಣಾ ಸ್ಥಳಕ್ಕೆ ಸ್ಥಳಾಂತರಿಸಲು ಎರಡು ವಾರಗಳಷ್ಟು ಸಮಯ ತಗುಲುತ್ತದಂತೆ. ರಾಕೆಟ್‌ ಉಡಾವಣೆಯಾದ ನಂತರ ಏನಾಗುತ್ತದೆಂಬುದನ್ನು ಗಾಜಿನ ಸ್ಕ್ರೀನ್‌ ಮೇಲೆ ತೋರಿಸಲಾಗುತ್ತದೆ.  

ಇಂಟರ್ಯಾಕ್ಟಿವ್‌ ಪರದೆಗಳು: ಈ ಬಾಹ್ಯಾಕಾಶ ವಸ್ತುಸಂಗ್ರಹಾಲಯದ ವೈಶಿಷ್ಟವೆಂದರೆ, ಇಲ್ಲಿ ಪ್ರದರ್ಶನಕ್ಕಿಡಲಾಗಿರುವ ಬಹುತೇಕ ಮಾದರಿಗಳ ಎದುರಿನಲ್ಲಿ ಟಚ್‌ಸ್ಕ್ರೀನ್‌ ಡಿಜಿಟಲ್‌ ಡಿಸ್‌ಪ್ಲೇ ಇಟ್ಟಿರುವುದು. ಹೆಚ್ಚಿನ ಮಾಹಿತಿಗಾಗಿ ಸ್ವಲ್ಪ ಜಾಲಾಡಿದರೆ ಸಾಕು, ಮಾಹಿತಿ ಕ್ಷಣ ಮಾತ್ರದಲ್ಲಿ ಹಾಜರ್‌. ಗೈಡ್‌ನ‌ ಅಗತ್ಯವೇ ಬೀಳುವುದಿಲ್ಲ. ಸಾಮಾನ್ಯವಾಗಿ ಕಂಡುಬರುವ ಟಚ್‌ಸ್ಕ್ರೀನ್‌ ಪರದೆಗಳ ಜೊತೆಗೆ ಎರಡು ವಿಶೇಷ ತಂತ್ರಜ್ಞಾನದ ಅತ್ಯಾಧುನಿಕ ಸ್ಕ್ರೀನ್‌ಗಳನ್ನು ಇಲ್ಲಿ ಬಳಸಿ ನೋಡಬಹುದಾಗಿದೆ.

ಮೊದಲನೆಯದು ಟೇಬಲ್‌ ಟಾಪ್‌ ಕಂಪ್ಯೂಟರ್‌ ಡಿಸ್‌ಪ್ಲೇ. ಮಲ್ಟಿ ಟಚ್‌ ಸೌಲಭ್ಯವಿರುವ ಈ ಪರದೆಯನ್ನು ಎಷ್ಟು ಮಂದಿ ಬೇಕಾದರೂ ಸ್ಪರ್ಶಿಸಿ ಸಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಎರಡನೆಯ ವಿಶೇಷ ಪರದೆಯೆಂದರೆ, ಮೋಷನ್‌ ಸೆನ್ಸಾರ್‌ ಪರದೆ. ಮೈಕ್ರೋಸಾಫ್ಟ್ನವರ ಕೈನೆಕ್ಟ್ ವಿಡಿಯೋ ಗೇಮ್‌ ಉಪಕರಣವನ್ನು ನೋಡಿದವರಿಗೆ ಈ ತಂತ್ರಜ್ಞಾನದ ಪರಿಚಯವಿದ್ದೇ ಇರುತ್ತದೆ.

ಕಂಪ್ಯೂಟರ್‌ ಪರದೆ ಮೇಲೆ ಫೋಲ್ಡರ್‌ ತೆರೆಯಲು, ಹಾಡು ಕೇಳಲು, ಮುಂದಿನ ಪೇಜಿಗೆ ಹೋಗಲು ಮೌಸ್‌ ಅಥವಾ ಟಚ್‌ಪ್ಯಾಡ್‌ ಬಳಸುತ್ತೇವಲ್ಲ, ಈ ಮೋಷನ್‌ ಸೆನ್ಸಾರ್‌ ಪರದೆಯನ್ನು ನಿಯಂತ್ರಿಸಲು ಕೈಗಳು ಮಾತ್ರ ಸಾಕು. ಅಂದರೆ, ನಿರ್ದಿಷ್ಟ ದೂರದಲ್ಲಿ ಮುಂದೆ ನಿಂತು ಕೈಸನ್ನೆ ಮುಖಾಂತರ ಸೂಚನೆಗಳನ್ನು ಪರದೆ ಮೇಲೆ ರವಾನಿಸಬಹುದು. 

50 ಕೆ.ಜಿ ತೂಕವನ್ನು ಬೆರಳಲ್ಲೆತ್ತಿ…: ಅತ್ಯಾಧುನಿಕ ಉಪಕರಣಗಳು, ಯಂತ್ರಗಳನ್ನು ಅಂತರಿಕ್ಷವಾಹನ ಒಳಗೊಂಡಿರುವುದರಿಂದ ಸಹಜವಾಗಿಯೇ ಅದರ ತೂಕವೂ ಹೆಚ್ಚಿರುತ್ತದೆ. ಅದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲೆಂದೇ ವಿಶೇಷ ಲೋಹಗಳನ್ನು ಬಳಸಿರುತ್ತಾರೆ. ಇವು ಎಷ್ಟು ಹಗುರವೆಂದರೆ ನೋಡಲು 40- 50 ಕೆ.ಜಿ ತೂಗುತ್ತಿರುವಂತೆ ತೋರಿದರೂ ಒಂದೇ ಬೆರಳಲ್ಲಿ ಎತ್ತಬಹುದು.

ನಂಬಲು ಕಷ್ಟವಾಗುತ್ತಿದೆಯಲ್ಲವೆ? ಈ ಅನುಮಾನ ಪರಿಹರಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ಇಲ್ಲಿ ಗಾಜಿನ ಬಾಕ್ಸ್‌ ಒಳಗೆ ಅಂಥದ್ದೊಂದು ವಿಶೇಷ ಲೋಹದಿಂದ ತಯಾರಾದ ದೊಡ್ಡ ವಸ್ತುವನ್ನು ಇರಿಸಿದ್ದಾರೆ. ಬಾಕ್ಸ್‌ನಲ್ಲಿ ಕೈಬೆರಳು ತೂರುವಷ್ಟು ಚಿಕ್ಕ ರಂಧ್ರವಿದೆ. ಅದರೊಳಕ್ಕೆ ಬೆರಳು ತೂರಿ ಅಷ್ಟು ದೊಡ್ಡ ಗಾತ್ರದ ಲೋಹವನ್ನು ಪರಿಶ್ರಮವಿಲ್ಲದೆ ಎತ್ತಿನೋಡಬಹುದು.

ಉಪಗ್ರಹ ದರ್ಶನ: ಆರ್ಯಭಟದಿಂದ ಹಿಡಿದು ಇತ್ತೀಚಿನವರೆಗಿನ ಭಾರತದ ಉಪಗ್ರಹಗಳ ಮಾದರಿಗಳು, ರಾಕೆಟ್‌ಗಳ ಮಾದರಿಗಳನ್ನು ಇಲ್ಲಿನ ಪ್ರದರ್ಶನಕ್ಕಿಡಲಾಗಿದೆ. ಎಸ್‌ಎಲ್‌ವಿ, ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮುಂತಾದ ರಾಕೆಟ್‌ಗಳ ಹೆಸರನ್ನು ಕೇಳಿಯೇ ಇರುತ್ತೀರಿ. ಅವುಗಳ ಕಾರ್ಯವ್ಯಾಪ್ತಿ, ಉದ್ದೇಶ ಮುಂತಾದ ತಾಂತ್ರಿಕ ವಿವರಗಳನ್ನು ಡಿಜಿಟಲ್‌ ಪರದೆ ಮೇಲೆ ಪಡೆಯಬಹುದು. ಅದರ ಜೊತೆಯೇ ಒಂದಕ್ಕಿಂತ ಮತ್ತೂಂದು ಗಾತ್ರದಲ್ಲಿ ಎಷ್ಟು ಭಿನ್ನ ಎನ್ನುವುದನ್ನೂ ತಿಳಿದುಕೊಳ್ಳಬಹುದು.

ಗಗನಯಾತ್ರಿಗಳ ಹೊಟ್ಟೆಪಾಡು: ಗಗನಯಾತ್ರಿಗಳು ಅಂತರಿಕ್ಷದಲ್ಲಿ ತಿಂಗಳುಗಳ ಕಾಲ ಇರುವ ಸಂದರ್ಭಗಳೂ ಬರುತ್ತವೆ. ಅಂಥ ಸಮಯದಲ್ಲಿ ಅವರೇನು ತಿನ್ನುತ್ತಾರೆ ಎಂದು ಯೋಚಿಸಿದ್ದೀರಾ? ಅಡುಗೆ ಮಾಡಿಕೊಳ್ಳುವುದು ಕಷ್ಟ. ಆದ್ದರಿಂದ ಇಲ್ಲಿಂದಲೇ ರೆಡಿಮೇಡ್‌ ಆಹಾರ ಪದಾರ್ಥಗಳನ್ನು ಕೊಂಡೊಯ್ದಿರುತ್ತಾರೆ. ಆದರೆ, ಅವನ್ನು ಸೂಪರ್‌ ಮಾರ್ಕೆಟ್‌ನಿಂದ ಖರೀದಿಸಿದ್ದಲ್ಲ, ವಿಶೇಷವಾಗಿ ತಯಾರಿಸಿದವು.

ಗಗನಯಾತ್ರಿಗಳು ಅಂತರಿಕ್ಷದಲ್ಲಿ ತಿನ್ನಬಹುದಾದ ಸೋಯಾ ಪಲಾವ್‌, ಮಾವು, ಬಾಸ್ಮತಿ ಅನ್ನ ಮುಂತಾದ ಆಹಾರ ಪದಾರ್ಥಗಳನ್ನು ಪ್ರದರ್ಶನದಲ್ಲಿ ನೋಡಬಹುದಾಗಿದೆ. ಇವು ತಯಾರಾಗಿರುವುದು ಮೈಸೂರಿನ ಡಿಫೆನ್ಸ್‌ ಫ‌ುಡ್‌ ರೀಸರ್ಚ್‌ ಪ್ರಯೋಗಾಲಯದಲ್ಲಿ. ಅಂದಹಾಗೆ, ಇಲ್ಲಿ ಪ್ರದರ್ಶನಕ್ಕಿಡಲಾದ ಅಂತರಿಕ್ಷದ ಈ ಮೆನುನಲ್ಲಿ ಐಸ್‌ಕ್ರೀಮ್‌ ಪ್ಯಾಕೆಟ್‌ ಕೂಡಾ ಇದೆ. 

* ಹವನ

ಟಾಪ್ ನ್ಯೂಸ್

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.