ಪ್ಯಾಂಟಸಿ ಲೋಕದಿಂದ ವಾಸ್ತವಕ್ಕೆ ಹೊರಳಿದ ಮಕ್ಕಳ ರಂಗಭೂಮಿ


Team Udayavani, Feb 25, 2017, 4:23 PM IST

12.jpg

“Children do not listen to what you say, but they do what you do’ ಅನ್ನುವ ಮಾತಿದೆ. “ವಿಜಯನಗರ ಬಿಂಬ’ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “ರಂಗ ಸುಗ್ಗಿ’ ಉತ್ಸವದಲ್ಲಿ ಪ್ರದರ್ಶಿತವಾದ “ಅಬುìದ ಕಾಡು’,  “ಸಲಿಲ’ ಮತ್ತು “ಸ್ವಪ್ನದ್ವೀಪ’ ಎಂಬ ಮೂರು ನಾಟಕಗಳನ್ನು ಗಮನಿಸಿದಾಗ ಈ ಮಾತಿನ ಮಾರ್ಮಿಕತೆ ಅರ್ಥವಾಗುತ್ತದೆ.       

ಎಸ್‌.ವಿ ಕಶ್ಯಪ್‌ ಅವರ “ಅಬುìದ ಕಾಡು’ ನಾಟಕವನ್ನು ಸುಷ್ಮಾ ನಿರ್ದೇಶಿಸಿದ್ದು, ಕಾಡಿನಲ್ಲಿ ಒಂದು ರಿಯಾಲಿಟಿ ಷೋ ನಡೆಸುವ ಮೂಲಕ ನಮ್ಮ ಟಿ.ವಿ. ರಿಯಾಲಿಟಿ ಷೋಗಳ ಹಿಂದಿರುವ ಹುನ್ನಾರಗಳನ್ನು ನಾಟಕ ತೆರೆದಿಡುತ್ತದೆ. ರಿಯಾಲಿಟಿ ಷೋಗಳು ಜನರ ಮನೋಭಿಲಾಷೆಗಳನ್ನು ಆವರಿಸಿಕೊಂಡಿರುವ ಬಗೆಯನ್ನು ಅಣಕಿಸುತ್ತಲೇ, ಇಂಥ ಅಪದ್ಧತೆಗಳ ಸೃಷ್ಟಿಗೆ ಜನ ಕೂಡ ಕಾರಣರಾಗಿರುತ್ತಾರೆ ಎಂದು ಸೂಚ್ಯವಾಗಿ ಹೇಳುವ ನಾಟಕ ಇದಾಗಿದೆ.    

 
ಶೈಲೇಶಕುಮಾರ್‌ ಅವರ “ಸಲಿಲ’ ನಾಟಕದಲ್ಲಿ ಅನ್ಯಗ್ರಹದಿಂದ “ಯಾಕೆ’ (ಈತ ಆಮೀರ್‌ ಖಾನನ “ಪೀಕೆ’ಯಂತೆ ರಂಗದ ಮೇಲೆ ಬಂದು ಎಲ್ಲರನ್ನು ರಂಜಿಸಿದ್ದು ಗಮನಾರ್ಹ) ಏಲಿಯನ್‌ ಓರ್ವ ಭೂಗ್ರಹದ ವಿಜಾnನಿಯೊಬ್ಬನ ಬಳಿ ತಮ್ಮ ಗೃÖದಲ್ಲಿ ನೀರಿನ ಉತ್ಪಾದನೆಗೆ ಬೇಕಾದ ಫಾರ್ಮುಲಾ ಕೇಳಿಕೊಂಡು ಬರುತ್ತಾನೆ. ಈ ನಾಟಕದಲ್ಲಿ ನೀರಿನ ಮಿತವ್ಯಯದ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ವಿಜಾnನಿಯೊಬ್ಬ ಆ ಕಾರಣಕ್ಕೆ ತನ್ನ ಸಂಬಂಧಗಳನ್ನು ಕೂಡ ತ್ಯಜಿಸಲು ಸಿದ್ಧವಾಗುತ್ತಾನೆ ಎಂಬುದು ಈ ನಾಟಕದ ಕಥಾವಸ್ತು. ನೀರಿನ ಬಳಕೆಯಲ್ಲಿ ಎಚ್ಚರ ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ಮನೋಜ¡ವಾಗಿ ಪ್ರೇಕ್ಷಕರಿಗೆ ಮನದಟ್ಟು ಮಾಡಿದರು.

ಯುವ ರಂಗಾಸಕ್ತ ಭರತ್‌ ಸ. ಜಗನ್ನಾಥ ರಚಿಸಿದ “ಸ್ವಪ್ನದ್ವೀಪ’ ನಾಟಕವನ್ನು ಎಸ್‌.ವಿ.ಕಶ್ಯಪ್‌ ನಿರ್ದೇಶಿಸಿದ್ದರು. “ಸ್ವಪ್ನದ್ವೀಪದಲ್ಲಿ’ ಕನಸವ್ವನಿಗೆ ಸಂಬಂಧಿಸಿದಂತೆ ಒಂದು ನಂಬಿಕೆ ಇಡೀ ಊರಿನ ಹಿರಿಯರಲ್ಲಿದೆ. ಊರಿನ ಎಲ್ಲರೂ ಪ್ರತಿದಿನ ತಮ್ಮ ದಿಂಬುಗಳನ್ನು ವಿನಿಮಯಿಸಿಕೊಂಡು ಮಲಗುತ್ತಾರೆ. ಆಗ ಅವರಿಗೆ ಆ ದಿಂಬಿನ ಮನೆಯವರ ನೋವು- ನಲಿವುಗಳ ಪರಿಚಯವಾಗಿ ಆ ಮೂಲಕ ಪರಸ್ಪರರು ಸಹಬಾಳ್ವೆ ಸಹಕಾರದಿಂದ ಒಬ್ಬರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಚಿಕ್ಕ ಮಕ್ಕಳಿಗೆ ಮಾತ್ರ ದಿಂಬು ಕೊಡಲೊಲ್ಲದ ಹಿರಿಯರನ್ನು ಪ್ರಶ್ನಿಸುವ ಚಿಕ್ಕವರ ಪ್ರಯತ್ನಗಳ ಸುತ್ತ ಈ ನಾಟಕ ರಚನೆಯಾಗಿದೆ. ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದ ಈ ನಾಟಕೋತ್ಸವ, ಫ್ಯಾಂಟಸಿ ಲೋಕದಿಂದ ವಾಸ್ತವಕ್ಕೆ ಮಕ್ಕಳ ರಂಗಭೂಮಿ ಹೊರಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಯಿತು.

– ಶಿವಕುಮಾರ್‌ ಮಾವಲಿ 

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.