ಪುಸ್ತಕ ಮೇಳದಲ್ಲಿ ಮಕ್ಕಳೇ “ಪ್ರಥಮ’
Team Udayavani, Oct 20, 2018, 3:59 PM IST
ದಶಕಗಳ ಹಿಂದೆ ಎರಡಾಣೆ ನಾಕಾಣೆ ದುಡ್ಡನ್ನು ತೆತ್ತು ಕೊಂಡ ಪುಸ್ತಕ ಓದಿದ್ದ ಮನಸ್ಸುಗಳಿಗೆ ಈಗಲೂ ಬಣ್ಣದ ತುತ್ತೂರಿ, ಅಜ್ಜನ ಕೋಲು, ನಮ್ಮ ಮನೆಯ ಸಣ್ಣ ಪಾಪ ಮುಂತಾದ ಕವಿತೆಗಳು ನೆನಪಿವೆ. ಕವಿತೆಗಳ ಜೊತೆ ನೀಡಲಾಗಿದ್ದ ಚಿತ್ರಗಳೂ ಮನದಲ್ಲಿ ಹಚ್ಚ ಹಸಿರು. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ಗಂಭೀರ ಸಾಹಿತ್ಯದ ಜೊತೆ ಜೊತೆಗೇ ಗುಣಮಟ್ಟದ, ರಂಗು ರಂಗಿನ ಚಿತ್ರಗಳನ್ನು ಹೊತ್ತ ಮಕ್ಕಳ ಪುಸ್ತಕಗಳು ಮೇಳದ ರಂಗನ್ನು ಹೆಚ್ಚಿಸಿವೆ. ಶಿಶು ಸಾಹಿತ್ಯಕ್ಕೆ ಹಿಂದಿದ್ದ ಮಹತ್ವ, ಆಕರ್ಷಣೆ, ಬೆರಗನ್ನು ಉಳಿಸಿಕೊಳ್ಳುವ ಕೆಲಸ ನಡೆದೇ ಇದೆ. ಈ ಕೆಲಸದಲ್ಲಿ ನಿರತವಾಗಿರುವ ಸಂಸ್ಥೆಗಳಲ್ಲೊಂದು ಲಾಭರಹಿತ ಎನ್‌ಜಿಒ ಪ್ರಥಮ್ ಬುಕ್ಸ್.
ಕನ್ನಡದ ಹಳೆಯ ತಲೆಮಾರಿನ ಕವಿಗಳು, ಸಾಹಿತಿಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಸಲುವಾಗಿ ಪಂಜೆ ಮಂಗೇಶರಾಯರು, ಕುವೆಂಪು, ಡಾ. ಜಿ.ಪಿ. ರಾಜರತ್ನಂ, ಡಾ. ಸಿದ್ದಯ್ಯ ಪುರಾಣಿಕ ಮತ್ತು ಬಿ.ಕೆ. ತಿರುಮಲಮ್ಮ ಅವರ ಕವಿತೆಗಳ ಗುಚ್ಚವನ್ನು ಪ್ರಥಮ್ ಬುಕ್ಸ್ ಹೊರತಂದಿತ್ತು. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಇರುವ ದ್ವಿಭಾಷಾ ಪುಸ್ತಕಗಳು ಮಳಿಗೆಯಲ್ಲಿವೆ.
ಇತರೆ ಪುಸ್ತಕ ಮಳಿಗೆಗಳಲ್ಲೂ ಮಕ್ಕಳು, ಪಾಲಕರು ಮಕ್ಕಳ ಪುಸ್ತಕಗಳನ್ನು ಬಿಡಿಸಿ ಓದುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೇಳದಲ್ಲಿ ಎಲ್ಲಾ ಪುಸ್ತಕಗಳ ಮೇಲೆ ಕನಿಷ್ಠ ಶೇ.15 ರಿಯಾಯಿತಿ ಇದೆ. ಡಿಜಿಟಲ್ ಯುಗದಲ್ಲಿ ಕಾಗದ ಬೆಲೆ ಕಳೆದುಕೊಳ್ಳುತ್ತಿದೆ ಎಂಬ ಆತಂಕ ಮನೆ ಮಾಡಿರುವ ಹೊತ್ತಿನಲ್ಲಿ ಮಕ್ಕಳನ್ನು ಸ್ಮಾರ್ಟ್‌ಫೋನ್‌ಮತ್ತು ಕಂಪ್ಯೂಟರ್ ಪರದೆಯಿಂದ ಆಚೆಗೆ ಕರೆ ತರುವ ಕೆಲಸ ಪುಸ್ತಕ ಮೇಳಗಳಿಂದಾಗುತ್ತಿರುವುದು ಸುಳ್ಳಲ್ಲ. ಅಕ್ಟೋಬರ್ 15ರಿಂದ ನಡೆಯುತ್ತಿರುವ “ಬೆಂಗಳೂರು ಪುಸ್ತಕ ಮೇಳ’ ನಾಳೆ ಕೊನೆಗೊಳ್ಳಲಿದೆ.
ಎಲ್ಲಿ?: ತ್ರಿಪುರವಾಸಿನಿ, ಅರಮನೆ ಮೈದಾನ
ಯಾವಾಗ?: ಅ. 21ರ ವರೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.