ಚಿಣ್ಣರ ನೃತ್ಯ ಚಮತ್ಕಾರ

Team Udayavani, Mar 21, 2020, 6:08 AM IST

chinnara

ಅದು ಎ.ಡಿ.ಎ. ರಂಗಮಂದಿರದಲ್ಲಿ ನಡೆದ “ನೃತ್ಯ ಸಿರಿ- 2020′ ಕಾರ್ಯಕ್ರಮ. ಮೂರು ವರ್ಷದ ಪುಟ್ಟಬಾಲೆಯರಿಂದ ಹದಿಹರೆಯದ ಹುಡುಗಿಯರವರೆಗೆ ನಿರಾಯಾಸವಾಗಿ ನರ್ತಿಸುತ್ತ, ಪ್ರತಿಭಾ ಪ್ರದರ್ಶನ ಮಾಡಿದರು. ನಾಟ್ಯಕಲಾರ್ಪಣ ನೃತ್ಯ ಕೇಂದ್ರ ಟ್ರಸ್ಟ್‌ ನಾಟ್ಯಾಚಾರ್ಯ ಪದ್ಮಜಾ ಜಯರಾಂ ಅವರು ನೀಡಿದ ಸಮರ್ಥ ನೃತ್ಯ ತರಬೇತಿ ಎದ್ದುಕಾಣುತ್ತಿತ್ತು.

“ಮನೋಹರ ಪುಷ್ಪಾಂಜಲಿ’ಯಿಂದ ಪ್ರಾರಂಭವಾದ ಪ್ರಸ್ತುತಿ ಪಂಚವದನ ವಿನಾಯಕನ ವಿವಿಧ ಸುಂದರರೂಪಗಳನ್ನು ಪ್ರದರ್ಶಿಸಿ ಮುದಗೊಳಿಸಿತು. “ಮಹಾದೇವ ಶಿವಶಂಭೋ’- ರೇವತಿ ರಾಗದ ಕೃತಿಯನ್ನು ಸಪ್ತಕನ್ನಿಕೆಯರು ತಮ್ಮ ಸ್ಫುಟವಾದ ಆಂಗಿಕಗಳು ಮತ್ತು ಯೋಗದ ಭಂಗಿಗಳಿಂದ ಸೆಳೆದರು. “ಸುಬ್ರಹ್ಮಣ್ಯ ಕೌತ್ವಂ’ ಕೂಡ ಅಷ್ಟೇ ಶಕ್ತಿಶಾಲಿಯಾಗಿ ಅಭಿವ್ಯಕ್ತಗೊಂಡು, ಮಯೂರಭಂಗಿಗಳ ವಿನ್ಯಾಸದಲ್ಲಿ ಕುಮಾರಸ್ವಾಮಿಯ ಮಹಿಮೆಯನ್ನು ಚಿತ್ರಿಸಿತು.

“ತಂಬೂರಿ ಮೀಟಿದವ’- ಪುರಂದರದಾಸರ ಪದ ಮೈಮರೆಸುವ ಗಾನಲಹರಿಯಲ್ಲಿ ತೇಲಿಸುತ್ತ, ಕಲಾವಿದೆಯರ ಲಾಸ್ಯಪ್ರಧಾನ ಆಂಗಿಕ- ಅಭಿನಯಗಳಿಂದ ಆನಂದ ನೀಡಿತು. ಆಕರ್ಷಕ ವೇಷಭೂಷಣಗಳಿಂದ ಕಂಗೊಳಿಸಿದ ಅಷ್ಟಗೋಪಿಯರೊಡನೆ ಮುದ್ದುಕೃಷ್ಣನಾಡಿದ ಲೀಲಾವಿನೋದ, ಹರ್ಷದಾಯಕ ಕೋಲಾಟದ ಸಂಭ್ರಮ ರಮಣೀಯವಾಗಿತ್ತು. ಪುಟಾಣಿಗಳು “ಶ್ರೀಮನ್ನಾರಾಯಣ’ನನ್ನು ಸಾಕ್ಷಾತ್ಕರಿಸಿದ ಬಗೆ ಚೆಂದವೆನಿಸಿದರೆ, ದುಷ್ಟ ಸಂಹಾರಿ ಭೈರವ ನಾರಿ’ಯರ ವೀರಾವೇಶ ರೌದ್ರರೂಪ, ಮಹಿಷಾಸುರ ಮರ್ದಿನಿಯ ಶಕ್ತ ಕಾಳಗದ ದೃಶ್ಯಗಳು ಕಣ್ಸೆಳೆದವು.

“ನಟೇಶ ಕೌತ್ವಂ’ ದೈವೀಕತೆಯ ರಸಧಾರೆ ಹರಿಸಿದರೆ, ಕರುಣಾಕರ ಶಂಕರನ “ಶಿವ ಶಂಭೋ ಸ್ವಯಂಭೋ’ವಿನ ಶಕ ವಿಭಿನ್ನ ರೂಪಗಳನ್ನು ಸಾಕಾರಗೊಳಿಸಲಾಯಿತು. ಮುಂದೆ ತೆರೆದುಕೊಂಡ ಜಾನಪದ ಆಯಾಮದ ನೃತ್ಯಗಳು ಕುಣಿಸುವ ಲಯದಲ್ಲಿ ಸೆಳೆದೊಯ್ದವು. “ಮೂಡಲ್‌ ಕುಣಿಗಲ್‌ ಕೆರೆ’ಯನ್ನು ಬಣ್ಣಿಸಿದ ಚೆಲುವೆಯರ ಜಾನಪದ ಹೆಜ್ಜೆಗಳು, ಮಲೆ ಮಹದೇಶ್ವರನ ಭಕ್ತರ ಕಂಸಾಳೆಯ ಕಸರತ್ತಿನ ಭಂಗಿಗಳ ರಚನೆ, ಹಾರಿ ಕುಣಿಯುವ ಬನಿ ಸೊಗಸಾಗಿದ್ದವು.

* ವೈ.ಕೆ. ಸಂಧ್ಯಾ ಶರ್ಮ

ಟಾಪ್ ನ್ಯೂಸ್

Viral: ಸೆ**ಕ್ಸ್ ಗಾಗಿ 65ರ ಮುದಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

16-kadaba

Kadaba: ಶಸ್ತ್ರಚಿಕಿತ್ಸೆ ವೇಳೆ ಹೃದಯಾಘಾತ; ಯುವಕ ಸಾವು

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Viral: ಸೆ**ಕ್ಸ್ ಗಾಗಿ 65ರ ಮುದಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.