ಚಿತ್ರಕಲಾ ಪರಿಷತ್‌ನಲ್ಲಿ “ಚಿತ್ತಾರ’
Team Udayavani, Jun 2, 2018, 12:03 PM IST
ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ “ಚಿತ್ತಾರ’ ಹರಡಿಕೊಂಡಿದೆ. ಏನಿದು “ಚಿತ್ತಾರ’ ಅಂತಿದೀರ? ಇದು ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ. 10 ದಿನಗಳ ಈ ಮೇಳದಲ್ಲಿ ದೇಶದ ಬೇರೆಬೇರೆ ಪ್ರದೇಶಗಳ ನೇಕಾರರು, ಕರಕುಶಲ ಕರ್ಮಿಗಳು ತಯಾರಿಸಿದ ವಸ್ತುಗಳು ಪ್ರದರ್ಶನಗೊಳ್ಳಲಿವೆ.
ಗ್ರಾಹಕರು ಮತ್ತು ಮಾರಾಟಗಾರರ ನಡುವಿನ ಅಂತರವನ್ನು ಕಡಿಮೆ ಮಾಡುವುದು “ಚಿತ್ತಾರ’ದ ಉದ್ದೇಶ. ಮೇಳದ ಸುಮಾರು 90 ಮಳಿಗೆಗಳಲ್ಲಿ, ಪೇಂಟಿಂಗ್‌ಗಳು, ಕರಕುಶಲ ವಸ್ತುಗಳು, ಗೃಹಾಲಂಕಾರ ವಸ್ತುಗಳು, ಕೈಮಗ್ಗ ಬಟ್ಟೆಗಳು, ಕೈಯಿಂದಲೇ ತಯಾರಿಸಲ್ಪಟ್ಟ ಆಭರಣಗಳು ಪ್ರದರ್ಶನ ಕಾಣುತ್ತಿವೆ. ಸಾಂಪ್ರದಾಯಿಕ ಶೈಲಿಯ ಗೃಹಾಲಂಕಾರ ವಸ್ತುಗಳು, ರಾಜಸ್ಥಾನಿ ಕರಕುಶಲ ವಸ್ತುಗಳು ಹಾಗೂ ಕಾಶ್ಮೀರಿ ಕಾಪೆìಟ್‌ಗಳು, ನಾನಾ ಬಗೆಯ ಕಲಂಕಾರಿ ಪೇಟಿಂಗ್‌ಗಳು, ಭಾಗಲ್‌ಪುರಿ ಸೀರೆಗಳು, ಕೈಮಗ್ಗದ ಬೆಡ್ ಲಿನೆನ್‌ಗಳು, ಮೊಸೈಕ್ ಲ್ಯಾಂಪ್ ಶೇಡ್‌ಗಳು, ಸೆರಾಮಿಕ್ ಪಾಟ್‌ಗಳು, ಅಡುಗೆ ಪರಿಕರಗಳು, ಹಿತ್ತಾಳೆ ಅಲಂಕಾರಿಕ ವಸ್ತುಗಳು, ಹರಳಿನ ಆಭರಣಗಳು ಇಲ್ಲಿವೆ. ಪ್ರವೇಶ ಉಚಿತ.
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ
ಯಾವಾಗ?: ಜೂನ್ 2-10, ಬೆಳಗ್ಗೆ 10- 7
ಹೆಚ್ಚಿನ ಮಾಹಿತಿ: 96118 35597/ 9742204002
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.