ಸೈಕಲಿಸ್ಟರಿಗೊಂದು ಕೆಫೆ
Team Udayavani, Oct 14, 2017, 4:20 PM IST
ಸೈಕಲಿಂಗ್ ಮಾಡುವ ಅಭ್ಯಾಸವಿಟ್ಟುಕೊಂಡವರಿಗೆಂದೇ ಪ್ರತ್ಯೇಕ ಕೆಫೆ/ ರೆಸ್ಟೋರೆಂಟ್ ಒಂದು ನಗರದಲ್ಲಿ ಶುರುವಾಗಿದೆ. “ಚೀಕ್ಲೊ ಕೆಫೆ'(Ciclo cafe) ಎಂಬ ಹೆಸರಿನ ಈ ಕೆಫೆಯಲ್ಲಿ ಸೈಕಲಿಸ್ಟರು ತಮ್ಮ ಸೈಕಲ್ ಜೊತೆ ಬರಬಹುದು. ಅದರ ಸರ್ವೀಸ್ ಜೊತೆಗೆ ಸೈಕಲಿಸ್ಟರ ಸರ್ವೀಸ್ ಕೂಡಾ ಮಾಡಿಸಿಕೊಂಡು ಹೋಗಬಹುದು. ಅಂದರೆ ಹೊಟ್ಟೆ ತುಂಬಾ ಇಲ್ಲಿನ ಪ್ರೀಮಿಯಂ ಗುಣಮಟ್ಟದ ಆಹಾರ ಮತ್ತು ವಿಶ್ವದರ್ಜೆಯ ಸರ್ವೀಸ್ ಇಲ್ಲಿ ಲಭ್ಯ. ಅಂತಾರಾಷ್ಟ್ರೀಯ ಮಟ್ಟದ ಸೈಕಲ್ ಬ್ರಾÂಂಡ್ಗಳಾದ ಮಾಂಟ್ರಾ, ರಿಡ್ಲಿ, ಕ್ಯಾನನ್ಡೇಲ್, ಜಿ.ಟಿ ಮುಂತಾದ ಕಂಪನಿಗಳ ಸೈಕಲ್ಗಳನ್ನು ಇಲ್ಲಿ ಖರೀದಿಸಬಹುದು, ಅಲ್ಲವೇ ಅವುಗಳ ಬಿಡಿಭಾಗಗಳೂ ಲಭ್ಯ. ನಗರದ ಮೆಟ್ರೋಪಾಲಿಟನ್ ಮಂದಿಗೆ ಇಷ್ಟವಾಗುವ ಹಾಗೆ ಇಲ್ಲಿನ ಮೆನುವನ್ನು ಸಿದ್ಧಪಡಿಸಲಾಗಿದೆ. ವೆಜ್ ಮತ್ತು ನಾನ್ ವೆಜ್ ಎರಡೂ ಬಗೆಗಳು ಇಲ್ಲಿ ಸಿಗುತ್ತವೆ. ಕುಟುಂಬ ಸಮೇತರಾಗಿ ಇಲ್ಲಿನ ವಿಶಿಷ್ಟ ಆ್ಯಬಿಯನ್ಸ್ನ ಸೊಗಸನ್ನು ಸವಿಯಬಹುದಾಗಿದೆ.
ಎಲ್ಲಿ?: ನಂ.948, 12ನೇ ಮುಖ್ಯರಸ್ತೆ, ಇಂದಿರಾನಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.