ಕಾಫಿಗೆ ಹೋಗೋಣ್ವ?


Team Udayavani, Oct 27, 2018, 12:36 PM IST

544548.jpg

ಬಿಸಿ ಬಿಸಿ ಕಾಫಿ…ಈ ಮಾತು ಕೇಳಿದ ಕೂಡಲೇ, ಮಂಪರು ಹಾರಿಹೋಗುತ್ತದೆ. ಮೈ ಮನಸ್ಸಲ್ಲಿ ಚೈತನ್ಯ ಮೂಡುತ್ತದೆ. ಕಾಫಿ ಕೇವಲ ಪೇಯವಲ್ಲ, ಅದೊಂಥರಾ ಎನರ್ಜಿ ಡ್ರಿಂಕ್‌. ಬೆಳಗಿನ ಆಲಸ್ಯ ತೊಲಗಿಸಲು, ನೈಟ್‌ ಶಿಫ್ಟಿನ ನಿದ್ದೆಯ ಮಂಪರನ್ನು ಕಿತ್ತೂಗೆಯಲು ಕಾಫಿ ಬೇಕೇ ಬೇಕು. ಹತ್ತು ರೂ. ಕೊಟ್ಟು ಗೆಳೆಯರೊಂದಿಗೆ ಹೀರುವ ಗೂಡಂಗಡಿಯ ಬಿಸಿ ಕಾಫಿಗೂ, ಪ್ರೇಯಸಿ ಜೊತೆ ಕಾಫಿ ಡೇನಲ್ಲಿ ಕುಡಿಯುವ ದುಬಾರಿ ಕೋಲ್ಡ್‌ ಕಾಫಿಗೂ ಹೆಚ್ಚು ವ್ಯತ್ಯಾಸವಿಲ್ಲ. ಆದರೂ, ಕಾಫಿಯ ನೈಜ ಸ್ವಾದವನ್ನು ಆಸ್ವಾದಿಸಬೇಕಿದ್ದರೆ ಎಲ್ಲೆಲ್ಲಿಗೆ ಭೇಟಿ ಕೊಡಬಹುದು ಎಂಬ ಲಿಸ್ಟ್‌ ಇಲ್ಲಿದೆ. ಮುಂದಿನ ಬಾರಿ ಕಾಫಿಪ್ರಿಯ ಗೆಳೆಯನಿಗೆ ಟ್ರೀಟ್‌ ಕೊಡಿಸಲು, ಗೆಳತಿಯ ಮನ ಮೆಚ್ಚಿಸಲು ಇಲ್ಲಿಗೆ ಕರೆದುಕೊಯ್ಯಬಹುದು… 

1. ಹಟ್ಟಿ ಕಾಫಿ
ಮಲೆನಾಡಿನ ಕಡೆ ಮಾಡುವ ಬೆಲ್ಲದ ಕಾಫಿಯ ರುಚಿ ನೋಡಬೇಕಿದ್ದರೆ “ಹಟ್ಟಿ ಕಾಫಿ’ ಕಡೆಗೊಮ್ಮೆ ಬನ್ನಿ. ಇಲ್ಲಿ ಗಟ್ಟಿ ಹಾಲು ಹಾಗೂ ಬೆಲ್ಲದಿಂದ ಮಾಡಿದ ಕಾಫಿ ದೊರೆಯುತ್ತದೆ. ಪಕ್ಕಾ ಹಳ್ಳಿ ಪದ್ಧತಿಯಂತೆ ವಾಟೆ ಹಾಗೂ ಬಟ್ಟಲಿನಲ್ಲಿ ಕಾಫಿ ಹಾಕಿ ಕೊಡುತ್ತಾರೆ. ಹೊಗೆಯಾಡುವ ಬಿಸಿ ಕಾಫಿಯನ್ನು ಬಟ್ಟಲಿನಿಂದ ವಾಟೆಗೆ ಸೇರಿಸುತ್ತಾ ನಿಧಾನವಾಗಿ ಕುಡಿದರೆ, ಮತ್ತೂಂದು ಲೋಟ ಕಾಫಿ ಆರ್ಡರ್‌ ಮಾಡೋಣ ಅನ್ನಿಸುತ್ತದೆ. ಬೆಂಗಳೂರಿನಲ್ಲಿ 10-12 ಶಾಖೆಗಳನ್ನು ಹೊಂದಿರುವ ಹಟ್ಟಿ ಕಾಫಿಯಲ್ಲಿ, ನೀವು ನಿಂತುಕೊಂಡೇ ಕಾಫಿ ಕುಡಿಯಬೇಕು. ಇಲ್ಲಿ ಜೇನುತುಪ್ಪದಿಂದ ಮಾಡಿದ ಕಾಫಿಯೂ ಲಭ್ಯ. ಒಂದು ಲೋಟ  
ಎಲ್ಲಿದೆ?: ನಾಗವಾರ, ಮಲ್ಲೇಶ್ವರ, ಹಲಸೂರು, ಜಯನಗರ 4ನೇ ಬಡಾವಣೆ, ಕೋರಮಂಗಲ 5ನೇ ಬಡಾವಣೆ, ಬ್ರಿಗೇಡ್‌ ರೋಡ್‌, ರಾಜಾಜಿನಗರ 
ದರ: 25-100 ರೂ. 

2. ಲಾವೊನ್ನೆ ಕಾಫಿ 
 ದೊಡ್ಡ-ದೊಡ್ಡ ಹೋಟೆಲ್‌ಗ‌ಳು ಕೇವಲ ತಿಂಡಿ-ತಿನಿಸುಗಳ ಮೇಲೆ ಗಮನ ಹರಿಸಿ ಕಾಫಿಯನ್ನು ನಿರ್ಲಕ್ಷಿಸುತ್ತವೆ. ಆದರೆ ಲಾವೊನ್ನೆ ಹೋಟೆಲ್‌ ಶುರುವಾಗಿದ್ದೇ ಕಾಫಿ ಪ್ರಿಯರಿಗಾಗಿ. ಇಲ್ಲಿ ಸಿಗುವ ಕಾಫಿಯಲ್ಲಿ ಹಾಲಿನ ಪ್ರಮಾಣ ಕಡಿಮೆಯಿದ್ದು, ಡಿಕಾಕ್ಷನ್‌ ಹೆಚ್ಚಿರುತ್ತದೆ. ಕಾಫಿ ಕುಡಿದ ನಂತರವೂ ಅದರ ಸ್ವಾದ ಬಾಯಲ್ಲಿ ಉಳಿಯುತ್ತದೆ. ಇಲ್ಲಿನ ಕಾಫಿ ಅಷ್ಟು ಸ್ಟ್ರಾಂಗ್‌. ಕೇವಲ ಬಿಸಿ ಕಾಫಿಯಷ್ಟೇ ಅಲ್ಲ, ವಿಧವಿಧವಾದ ಕೋಲ್ಡ್‌ ಕಾಫಿಯೂ ಇಲ್ಲಿ ಲಭ್ಯ.  
ಎಲ್ಲಿದೆ?: ದೊಮ್ಮಲೂರು 2ನೇ ಹಂತ, ಇಂದಿರಾನಗರ  
ದರ: 30-300 ರೂ. 

3. ಕಾಫಿ ರೋಸ್ಟರ್ 
ಕೆಲವೇ ವರ್ಷಗಳ ಹಿಂದೆ ಸಣ್ಣ ಅಂಗಡಿಯಾಗಿ ಪ್ರಾರಂಭವಾದ ಕಾಫಿ ರೋಸ್ಟರ್, ಈಗ ನಾಲ್ಕು ಶಾಖೆಗಳನ್ನು ಹೊಂದಿದೆ. ಈ ಕಾಫಿಯ ಬೆಲೆ ಸ್ವಲ್ಪ ದುಬಾರಿ. ಇಲ್ಲಿ ನಿಮಗೆ ಯಾವ ಕಾಫಿ ಬೇಕು ಹಾಗೂ ಎಷ್ಟು ಪ್ರತಿಶತ ಸಕ್ಕರೆ ಮತ್ತು ಡಿಕಾಕ್ಷನ್‌ ಬೇಕು ಎಂದು ಹೇಳಿದರೆ ಸಾಕು. ಮೆಷಿನ್‌ ಮೂಲಕ ತಯಾರಾದ ಕಾಫಿಯನ್ನು ತಲುಪಿಸಲಾಗುತ್ತದೆ. ಸಕಾಫಿಯ ಜೊತೆಗೆ ಸವಿಯಲು ವಿವಿಧ ರೀತಿಯ ಬಿಸ್ಕೆಟ್‌ಗಳನ್ನೂ ಇಲ್ಲಿ ಕೊಳ್ಳಬಹುದು.  
ಎಲ್ಲಿದೆ?: ಕೋರಮಂಗಲ, ಇಂದಿರಾನಗರ, ಸದಾಶಿವನಗರ ಹಾಗೂ ಎಚ್‌.ಎಸ್‌.ಆರ್‌ ಬಡಾವಣೆ
ದರ: 100- 250 ರೂ. 

4. ಬೈಟು ಕಾಫಿ
“ಹತ್ರುಪಾಯ್ಗೆ ಚೇಂಜ್‌ ಕೊಡಿ’, “ಚಿಲ್ರೆ ಇಲ್ಲಾ ಸಾರ್‌’.. ಇಂಥ ಮಾತುಗಳೆಲ್ಲ ಬೈಟು ಕಾಫಿಯಂಗಡಿಯಲ್ಲಿ ಸಾಮಾನ್ಯ. ಹೆಸರೇ ಸೂಚಿಸುವಂತೆ ಇಲ್ಲಿ ಕೇವಲ ಬೈಟು ಕಾಫಿ ಮಾತ್ರ ಸಿಗುತ್ತದೆ. ಒಂದು ಲೋಟ ತುಂಬಾ ಕಾಫಿ ಬೇಕೆಂದರೆ, ನೀವು ಎರಡು ಕಾಫಿಗೆ ಆರ್ಡರ್‌ ಮಾಡಬೇಕು. ಸಂಜೆ ಹೊತ್ತಲ್ಲಿ ಕಾಫಿಯ ಜೊತೆಗೆ ಸವಿಯಲು ಕೆಲವು ಬಗೆಯ ತಿನಿಸುಗಳೂ ಲಭ್ಯ. ಲೋಟ ಹಿಡಿದರೆ ಕೈ ಸುಟ್ಟೇ ಹೋಗುವಷ್ಟು ಬಿಸಿಯಾಗಿರುತ್ತದೆ ಇಲ್ಲಿನ ಕಾಫಿ. ಕೇವಲ 10 ರೂ.ಗೆ ಕಾಫಿ ಸಿಗುವುದರಿಂದ, ಇಲ್ಲಿ ರಶ್‌ ಕೂಡ ಜಾಸ್ತಿಯೇ. 
ಎಲ್ಲಿದೆ?: ಜಯನಗರ, ಬಸವನಗುಡಿ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ನಾಗರಬಾವಿ
ದರ: 10 ರೂ.  

5. ತಲಸ್ಸೇರಿ ಕಾಫಿ
ಒಂದೇ ಬಗೆಯ ಕಾಫಿ ಕುಡಿದು ಬೇಜಾರಾಗಿದ್ದರೆ, ನಾಲಗೆಗೆ ಬೇರೆ ಸ್ವಾದದ ಕಾಫಿಯ ರುಚಿ ಬೇಕಿದ್ದರೆ, ಎಲೆಕ್ಟ್ರಾನಿಕ್‌ ಸಿಟಿಯ ಒಂದನೇ ಹಂತದಲ್ಲಿರುವ ತಲಸ್ಸೇರಿ ರೆಸ್ಟೋರೆಂಟ್‌ಗೆ ಬನ್ನಿ. ಬಹುಶಃ ಇಲ್ಲಿ ದೊರೆಯುವ ಕಾಫಿಯ ರುಚಿ ಮತ್ತೆಲ್ಲಿಯೂ ಸಿಗುವುದಿಲ್ಲ. ಯಾಕಂದ್ರೆ, ಇಲ್ಲಿ ಕೇರಳದ ಶೈಲಿಯಲ್ಲಿ ಕಾಫಿ ತಯಾರಿಸುತ್ತಾರೆ. ಕಾಫಿ, ಜಾಸ್ತಿ ಸಿಹಿಯೂ ಇರುವುದಿಲ್ಲ, ಡಿಕಾಕ್ಷನ್‌ ಕೂಡ ಜಾಸ್ತಿ ಹಾಕುವುದಿಲ್ಲ. ರುಚಿಗೆ ತಕ್ಕಂತೆ ಸಕ್ಕರೆ ಬಳಸುತ್ತಾರೆ. ಕುಳಿತುಕೊಳ್ಳಲು ಸ್ಥಳ ಇರದಿದ್ದರೂ, ಪ್ರತಿದಿನ ಇಲ್ಲಿಗೇ ಬರಬೇಕು ಎನ್ನುವ ಕಾಫಿ ಭಕ್ತರಿದ್ದಾರೆ. 
ಎಲ್ಲಿದೆ?: ಎಲೆಕ್ಟ್ರಾನಿಕ್‌ ಸಿಟಿ 1ನೇ ಮತ್ತು 2ನೇ ಹಂತ
ದರ: 15-50 ರೂ. 

 ಪ್ರಜ್ವಲ್‌ ಹೂಲಿ

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.