ನಾಳೆ ಬಾ, ನಾಳೆಯೇ ಪ್ರದರ್ಶನ!
Team Udayavani, Nov 4, 2017, 3:13 PM IST
ದಶಕಗಳ ಹಿಂದೆ ಹುಟ್ಟಿಕೊಂಡ, ಅಂತ್ಯಕಾಲಕ್ಕೆ ಸಮೀಪ ಎನ್ನುವ “ನಾಳೆ ಬಾ’ ಪದವನ್ನು ಯಾರೂ ಮರೆಯುವುದಿಲ್ಲ. ಆ ಭಯ ಹುಟ್ಟಿಸೋ ಪದವನ್ನೇ ನಾಟಕದ ಶೀರ್ಷಿಕೆ ಮಾಡಿಕೊಂಡು ರಂಗದ ಮೇಲೆ ಬರುತ್ತಿದೆ, ಯುವ ಚೇತನ ಸಂಸ್ಥೆ. ಅಂದಹಾಗೆ, “ನಾಳೆ ಬಾ’ ಎನ್ನುವುದು ನಗೆನಾಟಕ. ನಗರದ ಜಂಜಾಟದಲ್ಲಿ ವಿಪರೀತ ಬ್ಯುಸಿ ಇರುವ ಸಾಫ್ಟ್ವೇರ್ ಎಂಜಿನಿಯರ್ ಒಬ್ಬನ ಕತೆಯಿದು.
ತನ್ನೆಲ್ಲ ಸಮಯವನ್ನು ಕಚೇರಿಗೆ ವಿನಿಯೋಗಿಸುತ್ತಾ, ವೈಯಕ್ತಿಕ ಕೆಲಸಗಳನ್ನು ಮುಂದೂಡುತ್ತಾ, ಸಮಸ್ಯೆಯ ಗೂಡಿನಲ್ಲಿ ಸಿಲುಕಿ ನಲುಗುವ ಸಾಫ್ಟ್ವೇರ್ ಎಂಜಿನಿಯರ್‌ನ ಬದುಕನ್ನು ಹಾಸ್ಯದ ಮೂಲಕ ಚಿತ್ರಿಸಲಾಗಿದೆ. ಸಂತೋಷ್ ಗಣಾಚಾರಿ ಇದರ ನಿರ್ದೇಶಕರು. ತಾರಾಗಣದಲ್ಲಿ ಸಂತೋಷ್ ಗಣಾಚಾರಿ, ಅಭಿಜಿತ್ ವೈ.ಎಸ್. ಮಧುಶ್ರೀ ಸಿ., ಮೇಖಲಾ ಕುಲಕರ್ಣಿ ಮತ್ತಿತರರು ನಟಿಸಿದ್ದಾರೆ.
ಎಲ್ಲಿ?: ಎಚ್.ಎನ್. ಕಲಾಕ್ಷೇತ್ರ, ನ್ಯಾಶನಲ್ ಕಾಲೇಜು ಕ್ಯಾಂಪಸ್, ಜಯನಗರ
ಯಾವಾಗ?: ನವೆಂಬರ್ 5, ಸಂಜೆ 7
ಟಿಕೆಟ್: 100 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.