ಜೋಕು ಮಾಡಿ ಓನರನ್ನು ಒಪ್ಪಿಸಿದ್ದೆ!


Team Udayavani, Sep 16, 2017, 4:31 PM IST

111.jpg

ಬಾಡಿಗೆ ಮನೆಗೆ ಬಂದು ಆಗಲೇ ಹನ್ನೊಂದು ತಿಂಗಳು ಮುಗಿದಿತ್ತು. ಅಲ್ಲೇ ಮುಂದುವರಿಯುವುದಾದರೆ ಮತ್ತೆ ಕರಾರು ಆಗಲೇ ಬೇಕೆಂದು ಓನರ್‌ ಮಹಾಶಯ ಮೊದಲೇ ಹೇಳಿದ್ದ. ಆ ತಿಂಗಳ ಬಾಡಿಗೆ ಕೊಡಲು ಓನರ್‌ ಮನೆಗೆ ಹೋದೆ. ಲೆಕ್ಕಾಚಾರದಿಂದ, ಲೋಕಾಭಿರಾಮದತ್ತ ಮಾತು ಹೊರಳಿತು. ಅವರು ನಿವೃತ್ತರು, ಅಂದ ಮೇಲೆ ಮಾತಿಗೆ ಬರವೇ..!?  ಮೊನ್ನೆ ತಾನೇ ತಾವು ಮಾಡಿದ ತೀರ್ಥಯಾತ್ರೆಯ ಕುರಿತು ಹೇಳತೊಡಗಿದರು. ಸಾಕ್ಷಿ ಹೇಳುವಂತೆ ದೇವಸ್ಥಾನದ ಪ್ರಸಾದ ಕೂಡಾ ಟಿಪಾಯ… ಮೇಲೆ ಇತ್ತು.  ಕೇಳುವಷ್ಟು ಕೇಳಿದ ನಾನು, ಅವರ ಮಾತು ತುಂಡರಿಸುತ್ತಾ, ಮುಂದೆ ಕೂಡಾ ಈಗಿನ ಮನೆಯಲ್ಲೇ ಮುಂದುವರಿಯುವ ಇಚ್ಛೆ ಇರುವುದಾಗಿ ಮಾತು ಸೇರಿಸಿದೆ. ನಮ್ಮಿಬ್ಬರ ನಡುವೆ ಸೌಹಾರ್ದ ವಾತಾವರಣ ಇದ್ದುದರಿಂದ ಅವರಿಗೂ ಆ ಮಾತು ಹಿತವೇ ಆಯಿತು. 

ಅಲ್ಲಿಯೇ ಮುಂದುವರಿಯುವುದಾದರೆ ಹೇಗೆ…? ಬಾಡಿಗೆ, ಅಡ್ವಾನ್ಸ್‌ಗಳ ಮಾತು ಮೊದಲಾಯಿತು. ಅವರು ಬಾಡಿಗೆಯ ಬಗ್ಗೆ ಒಲವು ಹೊಂದಿದ್ದರೆ, ನನ್ನದು ಲೀಸಿಗೆ ಆದೀತೆನ್ನುವ ನಿಲುವು. ಅದೇನೋ…! ನನ್ನ ಅವರ ಮಧ್ಯೆ ಕೊಂಚ ಸಲಿಗೆಯೂ ಬೆಳೆದಿತ್ತು. ಹೀಗಾಗಿ ಗಂಭೀರವಾಗಬಹುದಾಗಿದ್ದ ಮಾತನ್ನು ಕೊಂಚ ಹಾಸ್ಯದ ದಾಟಿಗೆ ಹೊರಳಿಸಿದೆ. “ಸಾರ್‌ ಮೊನ್ನೆ ತಾನೆ ನೀವು ಕಷ್ಟಪಟ್ಟು ಬೆಟ್ಟ ಹತ್ತಿ ದೇವರ ದರ್ಶನ ಮಾಡಿ, ಕಾಣಿಕೆ ಹಾಕಿ ಚೆನ್ನಾಗಿ ಬಾಡಿಗೆ ಬರಲಿ ಅಂತ ಕೇಳ್ಕೊಂಡು, ಆಶೀರ್ವಾದ ತಗೊಂಡ್‌ ಬಂದ್ರಿ! ಈಗ ನಾನು ದೇವರ ದರ್ಶನ ಮಾಡಿ, ಯಜಮಾನ್ರು ಮನೇನ ಲೀಸಿಗೆ ಕೊಡೋ ಹಂಗ್‌ ಮಾಡು ತಂದೆ ಅಂತ ಕೇಳ್ತೀನಿ. ಆತ ದಯಾಮಯ, ನನಗೂ- ನಿಮಗೂ ಇಬ್ಬರಿಗೂ ತಥಾಸ್ತು ಅಂತಾನೆ. ನಾವು ಯಾಕೆ ಆತನ ಏಕಾಂತಕ್ಕೆ ಭಂಗ ತರೋಣ? ನಾವು ಇಲ್ಲೇ ಹೇಗೋ  ಹೊಂದಿಕೊಂಡು ಹೋಗಿಬಿಟ್ಟರೆ ಒಳ್ಳೆಯದಲ್ವಾ?’ ಅಂದೆ. ಓನರ್‌ ಮುಖದಲ್ಲಿ ನಗೆ ಬಿರಿಯಿತು. ಅವರು ಆ…! ಅಂತ ಉದ್ಗರಿಸಿದವರೇ… “ನಿಮೊªಳ್ಳೇ ತಮಾಷಿ!’ ಅಂತ ನಗುವಿನ ವಾಲ್ಯೂಂ ಏರಿಸಿದವರೇ… ಒಂದು ನಿಮಿಷ ಕಣ್ಣು ಮುಚ್ಚಿ ಧ್ಯಾನ ಮುದ್ರೆಯಲ್ಲಿ ಕುಳಿತರು. ಘನ ಗಂಭೀರತೆಯ ನೀರವ ವಾತಾವರಣ. 

ಕೆಲ ಕ್ಷಣದ ನಂತರ ಮೆಲ್ಲನೆ ಕಣ್ಣು ತೆರೆಯುತ್ತಾ, “ಲೀಸ್‌ನಿಂದ ನನಗೇನೂ ಅನುಕೂಲವಾಗದು…! ಆದ್ರೂ…’ ಆಂತ ರಾಗವೆಳೆದವರೇ, “ಸರಿ ನೀವು ನಮಗೆ ಇಷ್ಟವಾಗಿದ್ದೀರಿ. ನಿಮಗೂ ನಮ್ಮ ಮನೆ ಇಷ್ಟವಾಗಿದೆ ಅಂದ್ಮೇಲೆ ಅವನಿಚ್ಚೆಯಂತೆ ಆಗ್ಲಿ…!’ ಎಂದು ತುಟಿ ಅರಳಿಸಿದರು. ಇತ್ತ ಕುರ್ಚಿಯ ತುದಿಯಲ್ಲಿ ಅವರ ಗ್ರೀನ್‌ ಸಿಗ್ನಲ್‌ಗೆ ಕಾದು ಕುಳಿತಿದ್ದ ನಾನು, ದೀರ್ಘ‌ ಉಸಿರು ತೆಗೆದುಕೊಂಡೆ. ಅಲ್ಲಿಂದಾಚೆಗೆ ಸುಮಾರು ಇಪ್ಪತ್ತು ವರ್ಷ ಮನೆ ಬದಲಾಯಿಸುವ ಯೋಚನೆಯನ್ನೇ ಮಾಡಲಿಲ್ಲ. ಮುಂದೆ ಸಂಸಾರ ದೊಡ್ಡದಾಯ್ತು, ಅನಿವಾರ್ಯವಾಗಿ ಮನೆ ಬದಲಾಯಿಸಿದೆ. ಅಲ್ಲಿಂದ ಬರುವಾಗ ಇಬ್ಬರ ಕಣ್ಣಲ್ಲೂ ತೆರೆ ನೀರು…! ಇವತ್ತಿಗೂ ನನ್ನ ಮತ್ತು ಆ ಮನೆ ಯಜಮಾನರ ಮಧುರ ಸಂಬಂಧ ಹಾಗೇ ಇದೆ. ನೈಜ ಘಟನೆಗಳು ಕೆಲವು ಸಾರಿ ವಾಸ್ತವತೆಗೆ ಹೊರತಾಗಿರುತ್ತವೆ; ಕೇಳುಗರಿಗೆ ಅದು ಅತಿಶಯ ಅನ್ನಿಸಿದರೆ ಅಚ್ಚರಿಯಿಲ್ಲ. ಮನುಷ್ಯನ ಮನಸ್ಸು ಹೀಗೂ ವರ್ತಿಸುವ ಸಾಧ್ಯತೆ ಇದೆ ಎಂಬುದು ವೇದ್ಯವಾದಾಗ ಮಾತ್ರ ನಂಬಿಕೆ ಮೂಡುತ್ತದೆ.

ಹೊಸ್ಮನೆ ಮುತ್ತು

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.