ನೃತ್ಯಂ ಶಿವಂ ಸುಂದರಂ


Team Udayavani, Jan 26, 2019, 2:29 AM IST

7.jpg

ಜಾತ್ರೆಯೆಂದರೆ ಖುಷಿ, ಜಾತ್ರೆಯೆಂದರೆ ಅಚ್ಚರಿ, ಜಾತ್ರೆಯೆಂದರೆ ವರ್ಣಮಯ ಲೋಕ. ಅಲ್ಲಿ ಏನುಂಟು, ಏನಿಲ್ಲ? ಬೆಂಡು-ಬತ್ತಾಸು, ಬಳೆ-ಸರ ಅಂಗಡಿ, ಐಸ್‌ಕ್ಯಾಂಡಿ, ಬಾಂಬೆ ಮಿಠಾಯಿ, ಗೊಂಬೆ ಕುಣಿತ, ರಥೋತ್ಸವ… ಜಾತ್ರೆಯೆಂದರೆ ಥಟ್ಟನೆ ಮನಸ್ಸಿಗೆ ಬರುವ ಚಿತ್ರಣಗಳಿವು. ಆದರೆ, ಇಲ್ಲಿ ನಡೆಯುತ್ತಿರುವ ಜಾತ್ರೆಯೇ ಬೇರೆ ರೀತಿಯದ್ದು. ಇದು “ಡ್ಯಾನ್ಸ್‌ ಜಾತ್ರೆ’; ನೃತ್ಯಕ್ಕಾಗಿಯೇ ಮೀಸಲಾಗಿರುವ ಜಾತ್ರೆ. 

ಸತತ ಏಳು ವರ್ಷಗಳಿಂದ ದೇಶ- ವಿದೇಶದ ನೃತ್ಯ ಕಲಾವಿದರನ್ನು “ಡ್ಯಾನ್ಸ್‌ ಜಾತ್ರೆ’ಯ ನೆಪದಲ್ಲಿ ಒಂದೆಡೆ ಸೇರಿಸುತ್ತಿರುವವರು ಖ್ಯಾತ ನೃತ್ಯ ಕಲಾವಿದೆ, ಶಾಂಭವಿ ಸ್ಕೂಲ್‌ ಆಫ್ ಡ್ಯಾನ್ಸ್‌ನ ಸ್ಥಾಪಕಿ ವೈಜಯಂತಿ ಕಾಶಿ. ಭಾರತದಲ್ಲಿಯೇ ಮೊದಲ ಬಾರಿಗೆ ನೃತ್ಯಕ್ಕಾಗಿ ಜಾತ್ರೆ ನಡೆಸಿದ ಹೆಗ್ಗಳಿಕೆ ವೈಜಯಂತಿ ಅವರಿಗೆ ಸೇರಬೇಕು. ಭರತನಾಟ್ಯ, ಕೂಚಿಪುಡಿ, ಕಥಕ್‌, ಒಡಿಸ್ಸಿ, ಮಣಿಪುರಿ, ಮೋಹಿನಿಯಟ್ಟಂ, ಜಾನಪದ ನೃತ್ಯ ಹೀಗೆ ಎಲ್ಲಾ ಬಗೆಯ ನೃತ್ಯಪ್ರಕಾರಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳುವ ಅವಕಾಶ ಇಲ್ಲಿದೆ. 

ದಿಗ್ಗಜರ ದಂಡು
ಈ ಬಾರಿ, ಪದ್ಮಶ್ರೀ ಪುರಸ್ಕೃತ ಗೀತಾ ಚಂದ್ರನ್‌ ಹಾಗೂ ಇಲಿಯಾನ ಚಿತರಿಸ್ತಿ, ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೀತಿ ಪಟೇಲ ಹಾಗೂ ವೈಜಯಂತಿ ಕಾಶಿ, ಬಿಸ್ಮಿಲ್ಲಾ  ಖಾನ್‌ ಯುವ ಪ್ರಶಸ್ತಿ ಪುರಸ್ಕೃತ ಅನುಜ್‌ ಮಿಶ್ರಾ ಹಾಗೂ ಪ್ರತೀಕ್ಷಾ ಕಾಶಿ ಮುಂತಾದ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ವಿಶೇಷ ಆಕರ್ಷಣೆಯಾಗಿ, ನೃತ್ಯ ಕಲಾವಿದರಿಂದ ಫ್ಯಾಷನ್‌ ಶೋ ನಡೆಯಲಿದೆ

ನಿಮಗೂ ಇದೆ ಅವಕಾಶ
ಇದು ಕೇವಲ ನೃತ್ಯ ಕಲಾವಿದರಿಗಿರುವ ವೇದಿಕೆಯಲ್ಲ. ಎಳೆಯರಿಂದ ಹಿರಿಯರವರೆಗೆ, ನೃತ್ಯಶಾಲೆಗಳಿಂದ ಹಿಡಿದು, ಶಾಲೆ-ಕಾಲೇಜುಗಳು, ಕಾರ್ಪೊರೇಟ್‌ ಕಂಪನಿಗಳು ಕೂಡ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಸಮೂಹ ನೃತ್ಯ ಸ್ಪರ್ಧೆಗಳಲ್ಲಿ ಗೆಲ್ಲುವ ತಂಡಕ್ಕೆ ನಗದು ಬಹುಮಾನದ ಜೊತೆಗೆ ಸಂಜೆಯ ಮುಖ್ಯಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಅವಕಾಶವಿದೆ. ಏಕವ್ಯಕ್ತಿ ಸ್ಪರ್ಧೆಯ ವಿಜೇತರಿಗೆ ಸ್ಕಾಲರ್‌ಶಿಪ್‌ ಹಾಗೂ ಬಿರುದು ನೀಡಲಾಗುವುದು. ಇದೇ ಮೊದಲ ಬಾರಿಗೆ, ಚಿಕ್ಕ ಮಕ್ಕಳಿಗಾಗಿಯೂ (7-10ವರ್ಷ) ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನೃತ್ಯಕ್ಕೆ ಸಂಬಂಧಿಸಿದ ವಿಮರ್ಶೆ, ಪ್ರಬಂಧ ಸ್ಪರ್ಧೆ, ಚರ್ಚೆ, ರಸಪ್ರಶ್ನೆ, ಆಟಗಳು ಕೂಡ ನಡೆಯಲಿವೆ. ಸ್ಪರ್ಧೆಗಳಿಗೆ ಆನ್‌ಲೈನ್‌ ಮೂಲಕ ಅಥವಾ ಸ್ಥಳದಲ್ಲಿಯೂ ಹೆಸರು ನೋಂದಾಯಿಸಬಹುದು. 

ಅಂಗಡಿಗಳೂ ಉಂಟು!
ಜಾತ್ರೆ ಅಂದಮೇಲೆ ಅಂಗಡಿಗಳು ಇರಲೇಬೇಕು. ಡ್ಯಾನ್ಸ್‌ ಜಾತ್ರೆಯಲ್ಲಿ, ನೃತ್ಯಸಂಬಂಧಿ ವೇಷಭೂಷಣ, ಆಭರಣ, ಪುಸ್ತಕ, ಡಿವಿಡಿ, ಪತ್ರಿಕೆಗಳ ಮಳಿಗೆಗಳು ಇರಲಿವೆ. ಸಾವಯವ ಧಾನ್ಯ-ತರಕಾರಿಗಳಿಂದ ಮಾಡಿದ, ಬಾಯಲ್ಲಿ ನೀರೂರಿಸುವ ತಿನಿಸುಗಳನ್ನು ಸವಿಯುವ ಅವಕಾಶವೂ ಇಲ್ಲಿದೆ. 

ಛಾಯಾಚಿತ್ರ ಪ್ರದರ್ಶನ
ಡ್ಯಾನ್ಸ್‌ ಫೋಟೊಗ್ರಫಿ ಕೂಡ ಒಂದು ಅಪರೂಪದ ಕಲೆ. ಅದನ್ನೇ ಹವ್ಯಾಸವಾಗಿಸಿಕೊಂಡಿರುವ ಮುಂಬೈನ ಮಧುಸೂದನ್‌ ಸುರೇಂದ್ರ ಮೆನನ್‌ ಸೆರೆ ಹಿಡಿದಿರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ, “ಬೆಸ್ಟ್‌ ಮುಮೆಂಟ್‌ ಆಫ್ ಎನ್‌ ಆರ್ಟಿಸ್ಟ್‌’ ಜಾತ್ರೆಯ ಮತ್ತೂಂದು ಆಕರ್ಷಣೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಸರ್ಕಾರದ ಮಿನಿಷ್ಟ್ರಿ ಆಫ್ ಕಲ್ಚರ್‌, ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಸಹಕಾರದಲ್ಲಿ ಈ ಜಾತ್ರೆ ನಡೆಯುತ್ತಿದೆ. 

ಜಾತ್ರೆ, ಜನರನ್ನು ಒಂದುಗೂಡಿಸುತ್ತದೆ. ನೃತ್ಯ ಕೂಡ ಮನಸ್ಸುಗಳನ್ನು ಬೆಸೆಯುತ್ತದೆ. ಹಾಗಾಗಿ ನೃತ್ಯಕ್ಕಾಗಿಯೇ ಒಂದು ಜಾತ್ರೆ ನಡೆಯಬೇಕು, ಆ ಮೂಲಕ ಕಲಾರಸಿಕರನ್ನು ಒಂದುಗೂಡಿಸಬೇಕು ಎಂಬ ದೃಷ್ಟಿಯಿಂದ ಶುರುವಾದದ್ದು ಈ ಡ್ಯಾನ್ಸ್‌ ಜಾತ್ರೆ. ನೃತ್ಯದ ಬೇರೆ ಬೇರೆ ಆಯಾಮಗಳನ್ನು ತೆರೆದಿಡುವುದು ಡ್ಯಾನ್ಸ್‌ ಜಾತ್ರೆಯ ಉದ್ದೇಶ. ನೃತ್ಯ ಪ್ರದರ್ಶನ, ಸ್ಪರ್ಧೆಗಳು ಅಷ್ಟೇ ಅಲ್ಲ, ನೃತ್ಯ ಸಂಯೋಜನೆಯ ಕುರಿತು, ನೃತ್ಯಶಾಸ್ತ್ರದಲ್ಲಿ ಫಿಟ್‌ನೆಸ್‌, ಪ್ರಸಾದನ ಕಲೆ ಹೀಗೆ ಬೇರೆ ಬೇರೆ ವಿಷಯಗಳ ಕುರಿತು ಕಾರ್ಯಾಗಾರಗಳು ನಡೆಯಲಿವೆ. ಸಾಂಸ್ಕೃತಿಕ ಸೊಗಡಿನ ವಾತಾವರಣದಲ್ಲಿ ಎರಡು ದಿನ ಕಳೆಯುವ ಅವಕಾಶ ಕಲಾರಸಿಕರಿಗೆ ಸಿಗುತ್ತದೆ.
-ವೈಜಯಂತಿ ಕಾಶಿ, ಡ್ಯಾನ್ಸ್‌ ಜಾತ್ರೆ ರೂವಾರಿ 

ಮೊದಲ ದಿನ
* 10.30-5.30ರವರೆಗೆ ಕಿರಿಯ (11-16 ವರ್ಷ) ಹಿರಿಯರ (17 ವರ್ಷ ಮೇಲ್ಪಟ್ಟ) ಸಮೂಹ ನೃತ್ಯ ಹಾಗೂ ಸಬ್‌ ಜೂನಿಯರ್‌ (7-10) ವಿಭಾಗದ ಏಕವ್ಯಕ್ತಿ ಸ್ಪರ್ಧೆಗಳು ನಡೆಯಲಿವೆ 
*10.30-2.30ರವರೆಗೆ ಪದ್ಮಶ್ರೀ ಗೀತಾ ಚಂದ್ರನ್‌ರಿಂದ ಭರತನಾಟ್ಯ, ಅನುಜ್‌ ಮಿಶ್ರಾರಿಂದ ಕಥಕ್‌, ಭೂಮಿ ಥಕ್ಕರ್‌ರಿಂದ ದಾಂಡಿಯಾ ಪ್ರದರ್ಶನ
* 2-30 ರಿಂದ 5-30ರವರೆಗೆ, “ದಿ ಆರ್ಟ್‌ ಆಫ್ ಕೊರಿಯೋಗ್ರಫಿ’- ಮಯೂರಿ ಉಪಾಧ್ಯಾಯ, “ನಾಟ್ಯಾಗ್ರಫಿ’- ವಿಜಯ್‌ ಮಾಧವನ್‌, “ಚಾವು-ಮೂವಿಂಗ್‌ ಇನ್‌ ಸ್ಪೇಸ್‌’ ಪದ್ಮಶ್ರೀ ಇಲಿಯಾನ ಚಿತರಿಸ್ತಿ ಅವರಿಂದ ಕಾರ್ಯಾಗಾರ ನಡೆಯಲಿವೆ
*ಸಂಜೆ 6-9ರವೆರಗೆ, ಶರ್ಮಿಳಾ ಮುಖರ್ಜಿ ಮತ್ತು ತಂಡದಿಂದ ಒಡಿಸ್ಸಿ, ಗೀತಾ ಚಂದ್ರನ್‌ ಮತ್ತು ತಂಡದಿಂದ ಭರತನಾಟ್ಯ, ಅನುಜ್‌ ಮಿಶ್ರಾ ಮತ್ತು ತಂಡದಿಂದ ಕಥಕ್‌ ನೃತ್ಯ ಪ್ರದರ್ಶನ 

ಎರಡನೇ ದಿನ
 *10.30-5.30ರವರೆಗೆ ಕಿರಿಯ ಹಾಗೂ ಹಿರಿಯರ ವಿಭಾಗದ ಏಕವ್ಯಕ್ತಿ  ಸ್ಪರ್ಧೆಗಳು ನಡೆಯಲಿವೆ
* 10-5.30ರವರೆಗೆ ಮಣಿಪುರಿ (ಪ್ರೀತಿ ಪಟೇಲ್‌), ಕಲೆºàಲಿಯ (ಭೂಮಿ ಥಕ್ಕರ್‌), ಫಿಟ್‌ನೆಸ್‌ ಥ್ರೂ ಶಾಸ್ತ್ರ (ಜಯಶ್ರೀ ರಾಜಗೋಪಾಲನ್‌) ಮ್ಯಾಜಿಕ್‌ ಆಫ್ ಮೂವ್‌ಮೆಂಟ್‌ (ದೇವೇಶ್‌ ಮಿರ್ಚಂದಾನಿ), ಮೆಟಫ‌ರ್‌ ಇನ್‌ ಡ್ಯಾನ್ಸ್‌ (ಪೂರ್ಣಿಮಾ ಗುರುರಾಜ) ಫ್ಲೋ ಇಂಟು ದ ಮೂವ್‌ಮೆಂಟ್ಸ್‌ (ಅಡ್ರಿನ್‌ ಇಝೆಸೆಪಿ, ಹಂಗೇರಿ) ರಿ ಡ್ರೆಸ್ಸಿಂಗ್‌ ಎ ಫೆಮಿಲಿಯರ್‌ ರಿದಂ (ಲತಾ ಸುರೇಂದ್ರ) ಕುರಿತಾದ ಕಾರ್ಯಾಗಾರಗಳು ನಡೆಯಲಿವೆ
*6-8.15ರವರೆಗೆ, ಸಮೂಹ ನೃತ್ಯದಲ್ಲಿ ವಿಜೇತರಾದ ಹಿರಿಯರ ತಂಡದಿಂದ ನೃತ್ಯ, ವೈಜಯಂತಿ ಕಾಶಿಯವರಿಂದ ಕೂಚಿಪುಡಿ, ಪ್ರೀತಿ ಪಟೇಲ್‌ ಮತ್ತು ತಂಡದಿಂದ ಮಣಿಪುರಿ ನೃತ್ಯ ಪ್ರದರ್ಶನ ಇರಲಿವೆ.

ಎಲ್ಲಿ?: ಶಂಕರ ಫೌಂಡೇಷನ್‌, ಕನಕಪುರ ರಸ್ತೆ (ಯಲಚೇನಹಳ್ಳಿ ಮೆಟ್ರೋ  ಸ್ಟೇಷನ್‌ ಹತ್ತಿರ)
ಯಾವಾಗ?: ಜ.26-27, ಬೆಳಗ್ಗೆ 10-9
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿಗೆ: 9886956596/98866 87559  www.dancejathre.com

ಟಾಪ್ ನ್ಯೂಸ್

Rohit, Pant, Jaiswal, Gill: Team India stars fail in Ranji comeback

Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್

Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?

Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?

Shiva Rajkumar returns on January 26th: Grand preparations for the welcome

Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್‌: ಸ್ವಾಗತಕ್ಕೆ ಅದ್ಧೂರಿ ತಯಾರಿ

Belagavi: Finance loan fraud

Belagavi: ಫೈನಾನ್ಸ್ ಸಾಲದ ವಂಚನೆ; ಜಿಲ್ಲೆಯಲ್ಲಿ ಮೊದಲ ಬಲಿ

Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ

Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Rohit, Pant, Jaiswal, Gill: Team India stars fail in Ranji comeback

Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್

4-uv-fusion

UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ

3-koratagere

Tumkur: ತುಮುಲ್‌ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು

Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?

Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?

Shiva Rajkumar returns on January 26th: Grand preparations for the welcome

Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್‌: ಸ್ವಾಗತಕ್ಕೆ ಅದ್ಧೂರಿ ತಯಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.