ಮಜ್ಜನ ನೆಪದ ಭೋಜನ


Team Udayavani, Feb 17, 2018, 11:26 AM IST

majjana.jpg

ಮಹಾ ಮಸ್ತಕಾಭಿಷೇಕ ಸಂಭ್ರಮದ ಈ ಹೊತ್ತಿನಲ್ಲಿ ನಮ್ಮೆಲ್ಲರ ಮನಸ್ಸೂ ಸಾತ್ವಿಕ ಚಿಂತನೆಗಳತ್ತ ತುಡಿಯುತ್ತಿದೆ. ಜೈನ ಚಿಂತನೆಗಳು, ಆಚಾರ ವಿಚಾರಗಳು ಆತ್ಮಕ್ಕೆ ಚೈತನ್ಯ ಒದಗಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಂತೆ ಜೈನ ಆಹಾರ ಕ್ರಮವೂ ದೇಹಕ್ಕೆ ಚೈತನ್ಯದ ಗುಟ್ಟೇ ಆಗಿದೆ. ಇದು ಅವರ “ಸ್ವಾದದ ಅಧ್ಯಾತ್ಮ’.

ಜೈನ ಚಿಂತನೆಗಳಿಂದ ಪ್ರೇರಿತರಾದವರಿಗೆ ಅವರ ಆಹಾರಕ್ರಮದಲ್ಲಿಯೂ ಕೆಲ ಕಟ್ಟುನಿಟ್ಟುಗಳು ಇವೆಯೆನ್ನುವುದು ಗೊತ್ತಿರುತ್ತೆ. ಅವುಗಳಲ್ಲಿ ಮುಖ್ಯವಾದುದು ತಾವು ಸೇವಿಸುವ ಆಹಾರ “ನೀರುಳ್ಳಿ ಮತ್ತು ಬೆಳ್ಳುಳ್ಳಿ ರಹಿತ’ವಾಗಿರಬೇಕು ಎನ್ನುವುದು. ಅದಕ್ಕೇ ಅವರು ಬಹಳಷ್ಟು ಹೋಟೆಲ್ಲುಗಳಲ್ಲಿ ಆಹಾರ ಸೇವಿಸಲು ಹಿಂದೇಟು ಹಾಕುವುದು. ಅವರ ಈ ಕ್ರಮ ದೇಹ- ಮನಸ್ಸಿಗೆ ಪೂರಕ ಎನ್ನುತ್ತದೆ ವಿಜ್ಞಾನ. ಬೆಂಗಳೂರಿನಲ್ಲಿ ಜೈನರ ಸಾತ್ವಿಕ ಆಹಾರ ಪೂರೈಸುವ ಕೆಲ ತಾಣಗಳಿವೆ…

ಶ್ರೀನಾಥ್‌ಜೀ ಕೆಫೆ: ಸಾತ್ವಿಕ ಆಹಾರ ಸಿಗುವ ಶ್ರೀನಾಥ್‌ಜೀ ಕೆಫೆಯಲ್ಲಿ ಇಸ್ಕಾನ್‌ನ ಪಾಕಶಾಲೆಯ ಶಿಷ್ಟಾಚಾರಗಳನ್ನು ಬಳಸಿಯೇ ಆಹಾರ ತಯಾರಿಸಲಾಗುತ್ತೆ. ಈ ಕಾರಣಕ್ಕಾಗಿಯೇ ಸಸ್ಯಾಹಾರಿಗಳು ಈ ತಾಣವನ್ನು ಇಷ್ಟಪಡುತ್ತಾರೆ. ಗ್ರಾಹಕ ಸ್ನೇಹಿ ಸಿಬ್ಬಂದಿವರ್ಗ ಈ ತಾಣದ ಹೆಗ್ಗಳಿಕೆ. ಅಂದಹಾಗೆ ಚಿಲ್ಲಿ ಇಡ್ಲಿ, ಲೈಮ್‌ ಸೋಡಾ ಈ ಕೆಫೆಯ ವೈಶಿಷ್ಟತೆ. 
ಎಲ್ಲಿ?: ಬುಲ್‌ಟೆಂಪಲ್‌ ರಸ್ತೆ, ಮೋರ್‌ ಮಳಿಗೆಯ ಪಕ್ಕ, ಬಸವನಗುಡಿ

ಗ್ರಾಮೀಣ್‌: ಹೆಸರಿಗೆ ತಕ್ಕ ಹಾಗೆ ಈ ಖಾನಾವಳಿಯ ಒಳಗೆ ಕಾಲಿಟ್ಟರೆ ಹಳ್ಳಿಯ ಗುಡಿಸಲಿನೊಳಗೆ ಕಾಲಿಟ್ಟ ಅನುಭವವಾಗುತ್ತೆ. ಉತ್ತರ ಭಾರತೀಯ ಶೈಲಿಯ ಸಸ್ಯಾಹಾರಿ ಅಡುಗೆಗೆ ಗ್ರಾಮೀಣ್‌ ಹೆಸರಾಗಿದೆ. ಈ ರೆಸ್ಟೋರೆಂಟಿನ ಇನ್ನೊಂದು ವೈಶಿಷ್ಟವೆಂದರೆ ಹೆಚ್ಚು ಬಗೆಯ ಖಾದ್ಯಗಳು. ಇಲ್ಲಿ ಭೇಟಿ ನೀಡುವವರಿಗೆ ಒಂದು ಖಾದ್ಯ ಇಷ್ಟವಾಗಲಿಲ್ಲವೆಂದಾದರೆ ಇಲ್ಲಿನ ಉದ್ದ ಮೆನುವಿನಿಂದ ತಮಗಿಷ್ಟವಾದುದನ್ನು ಆರಿಸಿಕೊಳ್ಳಬಹುದು.
ಎಲ್ಲಿ?: ರಹೇಜಾ ಆರ್ಕೇಡ್‌, ಗಣಪತಿ ಟೆಂಪಲ್‌ ರಸ್ತೆ, 7ನೇ ಬ್ಲಾಕ್‌, ಕೋರಮಂಗಲ

ಸಾಯಿ ವಿಶ್ರಾಮ್‌: ಅಪ್ಪಟ ಸಸ್ಯಾಹಾರಿ ಊಟ ಸಿಗುವ ತಾಣವಿದು. ಇದು ಬಿಜಿನೆಸ್‌ ಹೋಟೆಲ್‌ ಆಗಿದ್ದು, ಇಲ್ಲಿಗೆ ಪದೇಪದೆ ಭೇಟಿ ನೀಡುವವರು ಹೆಚ್ಚಾಗಿ ವೆಜಿಟೇರಿಯನ್‌ ಬಫೆಯನ್ನು ಇಷ್ಟಪಡುತ್ತಾರೆ. ಊಟದ ಮೆನುನಲ್ಲಿ ಕೊನೆಗೆ ಬರುವ ಹಲ್ವಾ, ಬಾಸುಂದಿ, ಗ್ರಾಹಕರ ಇಷ್ಟದ ಫ್ಲೇವರ್‌ನ ಐಸ್‌ಕ್ರೀಮ್‌ ಮುಂತಾದ ಸಿಹಿತಿಂಡಿಗಳೂ ಇಲ್ಲಿನ ಗ್ರಾಹಕರ ಅಚ್ಚುಮೆಚ್ಚು. ಸೌತ್‌ ಮತ್ತು ನಾರ್ತ್‌ ಇಂಡಿಯನ್‌ ಎರಡೂ ಶೈಲಿಯ ಭಕ್ಷ್ಯಗಳು ಇಲ್ಲಿ ಲಭ್ಯ.
ಎಲ್ಲಿ?: ಕಿರ್ಲೋಸ್ಕರ್‌ ರಸ್ತೆ, ಬೊಮ್ಮಸಂದ್ರ ಇಂಡಸ್ಟ್ರಿಯಲ್‌ ಏರಿಯಾ

ಗೋಕುಲ್‌ ಕುಟೀರ: ಜೇಬಿಗೆ ಹೊರೆಯಾಗದೆ ಸವಿಯಬಹುದಾದ ಸಸ್ಯಾಹಾರಿ ಭೋಜನಕ್ಕಾಗಿ ಈ ರೆಸ್ಟೋರೆಂಟಿಗೆ ಭೇಟಿ ನೀಡಬಹುದು. ಸಸ್ಯಾಹಾರಿ ಮೆನುವಿನಲ್ಲಿ ಖಾದ್ಯಗಳ ಪಟ್ಟಿ ತುಂಬಾ ಉದ್ದವಿಲ್ಲದಿದ್ದರೂ, ಇಲ್ಲಿ ಸಿಗೋದೆಲ್ಲವೂ ರುಚಿಕರವಾಗಿರುತ್ತೆ ಮತ್ತು ಆರೋಗ್ಯಕ್ಕೆ ಹಿತಕರವೂ ಆಗಿರುತ್ತೆ ಅನ್ನೋದು ಇಲ್ಲಿನ ಗ್ರಾಹಕರ ಅಭಿಪ್ರಾಯ. 
ಎಲ್ಲಿ?: ನಂ. 21, ಸಿ.ಎಂ.ಎಚ್‌ ರಸ್ತೆ, 2ನೇ ಹಂತ ಇಂದಿರಾನಗರ

ಕೃಷ್ಣ ವೈಭವ: ಮಾರತ್ತಹಳ್ಳಿ ಬ್ರಿಡ್ಜ್ ಬಳಿಯ ಲ್ಯಾಂಡ್‌ಮಾರ್ಕ್‌ ಈ ಹೋಟೆಲ್‌. ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದ ರೇಟಿನಲ್ಲಿ ಸಸ್ಯಾಹಾರವನ್ನು ಇಲ್ಲಿ ನೀಡಲಾಗುತ್ತೆ. ಉತ್ತರ ಭಾರತೀಯ ಖಾದ್ಯಗಳು ಇಲ್ಲಿ ಸಿಗುತ್ತವಾದರೂ, ದಕ್ಷಿಣ ಶೈಲಿಯ ಅಡುಗೆಗೆ ಈ ರೆಸ್ಟೋರೆಂಟು ಹೆಸರುವಾಸಿ. ಕಾಜು ಕರ್ರಿ ಇಲ್ಲಿನ ಸ್ಪೆಷಾಲಿಟಿ.
ಎಲ್ಲಿ?: ಮಾರತ್ತಹಳ್ಳಿ ಬ್ರಿಜ್‌ ಬಳಿ, ಸಂಜಯನಗರ

ಬೆಂಗಳೂರು ಅಗರ್‌ವಾಲ್‌ ಭವನ್‌: ಶುದ್ಧ ಶಾಕಾಹಾರಿ ಆಹಾರ ಮತ್ತು ಸಿಹಿತಿಂಡಿಗಳನ್ನು ಒಂದೇ ಕಡೆ ಸವಿಯುವ ಅವಕಾಶವನ್ನು ಅಗರ್‌ವಾಲ್‌ ಭವನ್‌ ರೆಸ್ಟೋರೆಂಟ್‌ ಒದಗಿಸುತ್ತೆ. ಇದು ಸಿಹಿತಿಂಡಿಗಳಿಗೇ ಹೆಸರುವಾಸಿಯಾದ ತಾಣ. ರಾಜಸ್ಥಾನಿ ಥಾಲಿ ಇಲ್ಲಿನ ವೈಶಿಷ್ಟéತೆ. ಜೊತೆಗೇ ಉತ್ತರಭಾರತೀಯ ಶೈಲಿಯ ಚಾಟ್ಸ್‌ ಸವಿಯೋದನ್ನು ಮರೆಯದಿರಿ.
ಎಲ್ಲಿ?: 9ನೇ ಮುಖ್ಯರಸ್ತೆ, ಸೆಕ್ಟರ್‌7, ಎಚ್‌ಎಸ್‌ಆರ್‌ ಲೇಔಟ್‌

ಕೇಸರ್‌ ರಾಜಸ್ಥಾನಿ ಪರೋಟ ಪಾಯಿಂಟ್‌: ದರ್ಶಿನಿ ಮಾದರಿಯಲ್ಲಿರುವ ಈ ಕಾನಾವಳಿ ಪರೋಟಾಗೆ ಹೆಸರು ಪಡೆದಿದೆ. ವಿ.ವಿ. ಪುರಂನ ಫ‌ುಡ್‌ಸ್ಟ್ರೀಟ್‌ ಬಳಿಯೇ ಇರುವುದರಿಂದ ದಕ್ಷಿಣ ಭಾರತೀಯ ಶೈಲಿಯ ಆಹಾರ ಸವಿದ ನಂತರ ಇಲ್ಲಿಗೆ ಬಂದು ರಾಜಸ್ಥಾನಿ ಸವಿರುಚಿಯನ್ನೂ ಟ್ರೈ ಮಾಡಬಹುದು. ಪಾಲಕ್‌ ಪರೋಟ ಮತ್ತು ಹಳದಿ ಸಬ್ಜಿ, ಜಾಲ್‌ ಬತಿ ಚುರ್ಮಾ ಸೇರಿದಂತೆ ಹತ್ತು ಹಲವು ರಾಜಸ್ತಾನಿ ಖಾದ್ಯಗಳು ಇಲ್ಲಿನ ಸ್ಪೆಷಾಲಿಟಿ. 
ಎಲ್ಲಿ?: ಫ‌ುಡ್‌ಸ್ಟ್ರೀಟ್‌, ವಿ.ವಿ.ಪುರಂ

ಜೈನರ ಆಹಾರ ಪದ್ಧತಿ ಜಗತ್ತಿನ ಆರೋಗ್ಯಕರ ಆಹಾರಾಭ್ಯಾಸಗಳಲ್ಲಿ ಒಂದೆಂದು ಹೆಸರಾಗಿದೆ. ವಿದೇಶಗಳಲ್ಲಿ ಈ ಕುರಿತು ಬಹಳಷ್ಟು ಸಂಶೋಧನೆಗಳು ನಡೆದಿದ್ದು, ಅಲ್ಲಿನವರೇ ಈ ಸಂಗತಿಯನ್ನು ದೃಢಪಡಿಸಿದ್ದಾರೆ. ಸಸ್ಯಾಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆಯಾದರೂ ಅದನ್ನು ಜೈನ ಆಹಾರವೆಂದು ಪರಿಗಣಿಸಲಾಗದು. ಏಕೆಂದರೆ, ಜೈನರ ಆಹಾರ ಪದ್ಧತಿಯಲ್ಲಿ ನೀರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಈ ಥರಹದ ಹಲವು ಕಂಡೀಷನ್‌ಗಳು ಅವರ ಆಹಾರ ಪದ್ಧತಿಯಲ್ಲಿದೆ. ಅವುಗಳನ್ನು ಪಾಲಿಸುವುದರಿಂದ ಲಾಭಗಳು ಹಲವು.

1. ಹೊಟ್ಟೆ ಭಾರವೆನಿಸುವುದಿಲ್ಲ. ಹೀಗಾಗಿ, ಚುರುಕಾಗಿ ನಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು.
2. ಮನಸ್ಸು ಶಾಂತಿ ಸಮಾಧಾನದಿಂದಿರುತ್ತೆ.
3. ಫ್ರೆಶ್‌ ಆದ ಆಹಾರವನ್ನೇ ಸೇವಿಸುವುದರಿಂದ ಆರೋಗ್ಯವೃದ್ಧಿಯೂ ಆಗುತ್ತೆ.
4. ಬೊಜ್ಜಿನ ಸಮಸ್ಯೆ ಉಂಟಾಗೋದಿಲ್ಲ. ಈ ಕಾರಣಕ್ಕೇ ಜೈನ ಆಹಾರ ಪದ್ಧತಿಯನ್ನು ವೇಗನ್‌ ಆಹಾರ ಪದ್ಧತಿಗೆ ಹೋಲಿಸಲಾಗುತ್ತೆ.
5. ಪೌಷ್ಟಿಕಾಂಶಭರಿತ ಆಹಾರ ಪದಾರ್ಥಗಳನ್ನು ಒಳಗೊಳ್ಳುವುದರಿಂದ, ಅದನ್ನು ಸೇವಿಸಿದಾಗ ದೇಹ ಬಲಿಷ್ಠಗೊಳ್ಳುವುದು.

ಜೈನ ಆಹಾರ ಪದ್ಧತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಜಾಲತಾಣದಿಂದ ಪಡೆದುಕೊಳ್ಳಬಹುದು.: goo.gl/weZwDM

* ಹವನ

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.