ಶೂರ್ಪನಖಿಯ ಕೂಗು ಕೇಳಿತೇ?


Team Udayavani, Dec 21, 2019, 6:09 AM IST

shoorpanki

ದಂಡಕಾರಣ್ಯದಲ್ಲಿ ಶ್ರೀರಾಮನ ಬಹುತೇಕ ಪ್ರಯಾಣ, ಸಾಗುವುದು ಗೋದಾವರಿಯ ತೀರದಲ್ಲಿ. ಪಂಚವಟಿಯ ಸೀತಾ ಗುಹೆ, ಕಲಾರಾಮ ಮಂದಿರಗಳನ್ನು ಕಳೆದವಾರ ದರ್ಶಿಸಿದ್ದಾಯಿತು. ಇವೆಲ್ಲವನ್ನೂ ನೋಡಿಕೊಂಡು, ಗೋದಾವರಿ ತೀರದ ಬಲಭಾಗಕ್ಕೆ ಬಂದರೆ, ಸಿಗುವುದೇ ನಾಸಿಕ್‌. ಅಂದರೆ, ಈ ನದಿ ತನ್ನ ಎಡ ತಟದಲ್ಲಿ ಪಂಚವಟಿಯನ್ನೂ ಮತ್ತು ಬಲಭಾಗದಲ್ಲಿ ನಾಸಿಕ್‌ ಅನ್ನೂ ಹೊಂದಿದೆ. ಗೋದಾವರಿ ಮತ್ತು ಕಪಿಲಾ ನದಿಗಳ ಸಂಗಮ ಇರುವುದೂ ಇಲ್ಲಿಯೇ. ಈ ಸಂಗಮದ ಸಮೀಪ ತಾಣವನ್ನು ಗೌತಮ ಮಹರ್ಷಿಗಳ ತಪೋಭೂಮಿ ಎನ್ನಲಾಗುತ್ತದೆ.

ರಾಮ- ಲಕ್ಷ್ಮಣ- ಸೀತೆಯರು ಇಲ್ಲಿನ ತಪೋವನದಲ್ಲಿ, ಕೆಲವು ದಿನಗಳನ್ನು ಕಳೆದಿದ್ದರಂತೆ. ತಪೋವನದ ತಂಪು ನೆರಳನ್ನು ದಾಟುತ್ತಲೇ ಸೆಳೆಯುವುದು, ಲಕ್ಷ್ಮಣ ಮಂದಿರ. ರಾವಣನ ಸಹೋದರಿ, ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಸ್ಥಳ ಇದೆಂದು ನಂಬಲಾಗುತ್ತದೆ. ಹಾಗೆ ಕತ್ತರಿಸಲ್ಪಟ್ಟ ಮೂಗು, ಗೋದಾವರಿ ನದಿಯ ಬಲಭಾಗಕ್ಕೆ ಹೋಗಿ ಬಿದ್ದಿದ್ದರಿಂದ, ಆ ಪ್ರದೇಶವನ್ನು “ನಾಸಿಕ್‌’ ಎಂದು ಕರೆಯುತ್ತಾರೆ. ನಾಸಿಕ ಎಂದರೆ ಸಂಸ್ಕೃತದಲ್ಲಿ ಮೂಗು ಎಂದರ್ಥ.

ಶೂರ್ಪನಖಿಯ ಶಿಲ್ಪಾಕೃತಿ: ಲಕ್ಷ್ಮಣ ಮಂದಿರವು, ಬೃಹತ್‌ ಆಲದ ಮರದ ಕೆಳಗಿದೆ. ಅದರ ಪಕ್ಕದಲ್ಲಿಯೇ, ಮೂಗು ಸೀಳಲ್ಪಟ್ಟ ಶೂರ್ಪನಖಿಯ ಶಿಲ್ಪಾಕೃತಿ, ರಾಮಾಯಣದ ಕತೆ ಹೇಳುತ್ತದೆ. ಶೂರ್ಪನಖಿಯ ಮೂಗು ರಕ್ತಸಿಕ್ತವಾಗಿದ್ದು, ಆಕೆಯ ಮುಂದೆ ಲಕ್ಷ್ಮಣ ಖಡ್ಗ ಹಿಡಿದು ನಿಂತಿರುವ ದೃಶ್ಯವಿದೆ. ತನ್ನ ಪತಿ ದುಷ್ಟಬುದ್ಧಿಯನ್ನು ರಾವಣನು ಕೊಲ್ಲಿಸಿದ್ದರಿಂದ, ಸೋದರನ ಮೇಲೆ ಕೋಪಗೊಂಡ ಶೂರ್ಪನಖಿ, ದಂಡಕಾರಣ್ಯದಲ್ಲಿ ಅಲೆಯುತ್ತಿರುತ್ತಾಳೆ. ವನವಾಸದಲ್ಲಿದ್ದ ಶ್ರೀರಾಮನು, ಈಕೆಯ ಕಣ್ಣಿಗೆ ಬಿದ್ದಾಗ, ಮೋಹಿತಳಾಗುತ್ತಾಳೆ. ಮದುವೆಯಾಗುವಂತೆ ಪೀಡಿಸುತ್ತಾಳೆ. ರಾಮ ನಿರಾಕರಿಸಿ, ಲಕ್ಷ್ಮಣನನ್ನು ಕೇಳು ಅಂದಾಗ, ಆತ ಸಿಟ್ಟಾಗಿ, ಮೂಗನ್ನೇ ಕತ್ತರಿಸುತ್ತಾನೆ. ಶೂರ್ಪನಖಿ ಲಂಕೆಗೆ ಹೋಗಿ, ರಾವಣನಿಗೆ ದೂರು ನೀಡುವಾಗ, ಸೀತೆಯ ಸೌಂದರ್ಯದ ಬಗ್ಗೆ ವರ್ಣಿಸುತ್ತಾಳೆ. ಈ ಪ್ರಸಂಗವೇ, ರಾಮಾಯಣದ ಬಹುಮುಖ್ಯ ತಿರುವು.

ರಾಮನ ನೆನಪು…: ಲಕ್ಷ್ಮ ಣನ ಮಂದಿರದಿಂದ ತುಸು ಮುಂದಕ್ಕೆ ಹೋದರೆ ಸಿಗುವುದು, ಸುಂದರ ನಾರಾಯಣನ ದೇಗುಲ. 1793ರಲ್ಲಿ ಕಟ್ಟಲ್ಪಟ್ಟ ಮಂದಿರದಲ್ಲಿ ನಾರಾಯಣನ ಭವ್ಯ ಮೂರ್ತಿ ಇದ್ದು, ಭಕ್ತರು ದರ್ಶನಕ್ಕೆ ಸಾಲುಗಟ್ಟಿ ನಿಂತಿರುತ್ತಾರೆ. ನಾಸಿಕ್‌ನಿಂದ 9 ಕಿ.ಮೀ. ಸಾಗಿದರೆ, ಒಂದು ಪರ್ವತವಿದೆ. ಇಲ್ಲಿರುವ ಎರಡು ಗುಹೆಗಳು ಪ್ರವಾಸಿಗರ ಆಕರ್ಷಣೆ. ವನವಾಸದ ವೇಳೆ, ರಾಮ ಈ ಗುಹೆಗಳಲ್ಲಿ ವಾಸವಿದ್ದ ಎನ್ನಲಾಗುತ್ತದೆ.

ದಂಡಕಾರಣ್ಯವಾಗಿದ್ದ ಕಾರಣ, ಆ ಕಾಲದಲ್ಲಿ ದಟ್ಟ ಕಾಡಿತ್ತು. ಅಂದು ಇಲ್ಲಿ ಮಧ್ಯಾಹ್ನ ಘಟಿಸಿದ್ದ ಸೂರ್ಯ ಗ್ರಹಣ­ದಿಂದಾಗಿ, ಪಂಚವಟಿ ಸಂಪೂರ್ಣ ಕತ್ತಲಾಗಿತ್ತು. ಪಕ್ಷಿಗಳೆಲ್ಲ ಗೂಡು ಸೇರಿದ್ದವು. ಆಕಾಶದಲ್ಲಿ ಗ್ರಹಗಳು ಕಾಣಿಸುತ್ತಿದ್ದವು ಎಂದು ವಾಲ್ಮೀಕಿ ಮಹರ್ಷಿ ವರ್ಣಿಸುತ್ತಾರೆ. ಆದರೆ, ಇಂದು ಪಂಚವಟಿ­ ಯಲ್ಲಿ ಆ ಪ್ರಮಾಣದ ಅರಣ್ಯವೇನೂ ಇಲ್ಲ. ನಾಸಿಕ್‌, ಜಿಲ್ಲಾಕೇಂದ್ರವೂ ಆಗಿರುವು­ದರಿಂದ, ಪಂಚವಟಿ ಪ್ರಗತಿ­ಯತ್ತಲೂ ಮುಖಮಾಡಿದೆ. ಪ್ರತಿ 12 ವರ್ಷ­ ಕ್ಕೊಮ್ಮೆ ನಡೆಯುವ ಕುಂಭಮೇಳ, ನಾಸಿಕ್‌ ಅನ್ನು ಮುಖ್ಯ ಶ್ರದ್ಧಾಕೇಂದ್ರದ ಪಟ್ಟಿಗೆ ಸೇರಿಸಿದೆ.

ಇದುವೆ ಮಾರ್ಗ…: ಮುಂಬೈನಿಂದ ನಾಸಿಕ್‌, 167 ಕಿ.ಮೀ. ದೂರದಲ್ಲಿದೆ. ವಿಮಾನ, ರೈಲ್ವೆ, ರಸ್ತೆ ಮಾರ್ಗಗಳು ಈ ಜಿಲ್ಲೆಗೆ ಸಂಪರ್ಕ ಕಲ್ಪಿಸಿವೆ.

* ಡಾ. ಸುಹಾಸ್‌ ರೈ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.