ಡೈನೋಸಾರ್ಗಳು ಸಾರ್ ಡೈನೋಸಾರ್ಗಳು!
Team Udayavani, Apr 27, 2019, 11:26 AM IST
ಜುರಾಸಿಕ್ ಪಾರ್ಕ್ ಸಿನಿಮಾ ನೋಡದವರಾರು? ಮಿಲಿಯ ವರ್ಷಗಳ ಹಿಂದೆ ಭೂಮಿ ಮೇಲೆ ನಡೆದಾಡಿದ ದೈತ್ಯ ಉರಗಜೀವಿಗಳನ್ನು ರೋಚಕವಾಗಿ ತೆರೆ ಮೇಲೆ ತೋರಿಸಿದ ಸಿನಿಮಾ ಅದು. ತೆರೆ ಮೇಲೆ ನೋಡಿದ ಡೈನೋಸಾರ್ಗಳನ್ನು ಕಣ್ಣಾರೆ ನೋಡುವ ಆಸೆ ನಿಮಗಿದ್ದರೆ ಇಲ್ಲಿದೆ ಅದಕ್ಕೊಂದು ಅವಕಾಶ. ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ನಲ್ಲಿ ಮಕ್ಕಳಿಗಾಗಿ “ಹಾಲಿಡೇ ಲ್ಯಾಂಡ್’ಅನ್ನು ನಿರ್ಮಿಸಲಾಗಿದೆ. ಹೆದರಿದಿರಿ ಈ ಡೈನೋಸಾರ್ಗಳಿಂದ ಅಪಾಯವೇನೂ ಇಲ್ಲ. ಇವು ಚಲಿಸುವುದಿಲ್ಲ, ಅವು ತಟಸ್ಥ ಡೈನೋಸಾರ್ಗಳ ಪ್ರತಿಕೃತಿಗಳಷ್ಟೆ.. ಆದರೆ ಒಮ್ಮೆ ನೋಡಿದರೆ ಎದೆ ಝಲ್ಲೆನ್ನುವುದು ಖಂಡಿತ. ಸುಮಾರು 45 ದಿನಗಳ ಕಾಲ ಡೈನೋಸಾರ್ಗಳು ಮಕ್ಕಳಿಂದ ದೊಡ್ಡವರ ತನಕ ರಂಜಿಸಲಿದೆ. ಜಗತ್ತಿನ ಪ್ರಖ್ಯಾತ ಸಿನಿಮಾ ತಯಾರಕ ಸಂಸ್ಥೆ ಯುನಿವರ್ಸಲ್ ಮತ್ತು ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ನ ಸಹಗಭಾಗಿತ್ವದಲ್ಲಿ ಈ “ಹಾಲಿಡೇ ಲ್ಯಾಂಡ್’ ಮೂಡಿಬರುತ್ತಿದೆ.
ಹಾಲಿಡೇ ಲ್ಯಾಂಡ್ನಲ್ಲಿ ಬರೀ ಡೈನೋಸಾರ್ಗಳು ಮಾತ್ರವಲ್ಲ, “ಮಡಗಾಸ್ಕರ್’ ಸಿನಿಮಾದ ಪ್ರಾಣಿಗಳು, “ಡೆಸ್ಪಿಕೆಬಲ್ ಮಿ’ಯ ಮಿನಿಯನ್ಗಳು, ಮತ್ತು “ಹೌ ಟು ಟ್ರೇನ್ ಡ್ರ್ಯಾಗನ್’ ಸಿನಿಮಾದ ಡ್ರ್ಯಾಗನ್ನ ಪ್ರತಿಕೃತಿಗಳೂ ಇರಲಿವೆ. ಮಕ್ಕಳು ಅವುಗಳ ಮಧ್ಯೆಯೇ ಓಡಾಡಿ ಫೋಟೋಗಳನ್ನು ತೆಗೆದುಕೊಳ್ಳಬಹುದು.
ಫ್ಲಾಷ್ ಮಾಬ್ ಡ್ಯಾನ್ಸ್
ಇಲ್ಲಿನ ಇನ್ನೊಂದು ಆಕರ್ಷಣೆ ಎಂದರೆ ಫ್ಲಾಷ್ ಮಾಬ್ ಡ್ಯಾನ್ಸ್. ಜನರ ನಡುವಿನಿಂದಲೇ ಡ್ಯಾನ್ಸರ್ಗಳು ಮೂಡಿ ಬಂದು, ಯಾವುದೇ ಮುನ್ಸೂಚನೆ ಇಲ್ಲದೆ ಹಾಡಿಗೆ ಹೆಜ್ಜೆ ಹಾಕುವುದು ಈ ನೃತ್ಯದ ವೈಶಿಷ್ಟéತೆ. ಮಕ್ಕಳಿಗೆ ಈ ನೃತ್ಯ ಮನರಂಜನೆ ಒದಗಿಸಲಿದೆ.
ಎಲ್ಲಿ?: ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್, ವೈಟ್ಫೀಲ್ಡ್
ಯಾವಾಗ?: ಏ. 27 ರಿಂದ- ಜೂ. 10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.