ಪರಿಷೆಯಲ್ಲಿ ಚಿಮಣಿಯ ದೀಪಾವಳಿ
Team Udayavani, Nov 23, 2019, 5:09 AM IST
ಕೆಲ ದಶಕಗಳ ಹಿಂದಿನ ಪರಿಷೆ, ಇಂದಿನಂತೆ ಕಡಲೆಕಾಯಿಗೂ ಹೊರತಾದ ಬೇರೆ ಸಾಮಾನುಗಳ ಮಾರಾಟ ಜಾತ್ರೆ ಯಾಗಿರಲಿಲ್ಲ. ನೂರಾರು ಬಗೆಯ ಕಡಲೆಕಾಯಿಗಳನ್ನು ಗೋಪುರದಂತೆ ಕೂಡಿಸಿ, ಪಾವು- ಸೇರು- ಚಟಾಕುಗಳಲ್ಲಿ ಅಳೆದು ಮಾರುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ರಾಮಕೃಷ್ಣ ಆಶ್ರಮದಿಂದ ಬಿ.ಎಂ.ಎಸ್. ಕಾಲೇಜಿನ ತನಕ, ದೊಡ್ಡ ಬಸವಣ್ಣನ ದೇಗುಲದ ಸುತ್ತ ಕಡಲೆಕಾಯಿ ಮಾರಾಟಗಾರರ ಭರಾಟೆ.
ಚೌಕಾಸಿ ವ್ಯಾಪಾರದಲ್ಲಿ ನಿಪುಣರಾಗಿದ್ದ ನನ್ನ ಚಿಕ್ಕಪ್ಪ, ತಮ್ಮ ಹತ್ತಾರು ಚೀಲಗಳಲ್ಲಿ ಆಯ್ದ ವಿವಿಧ ಬಗೆಯ ಕಡಲೆಕಾಯಿಗಳನ್ನು ತುಂಬಿಸಿಕೊಳ್ಳುತ್ತಿದ್ದರು. ಏತನ್ಮಧ್ಯೆ, ನಾವು ಹುಡುಗರಿಗೆ ಅವರು ಕೊಡುತ್ತಿದ್ದದ್ದು ಅಳತೆಯ ಲೆಕ್ಕಗಳನ್ನು, ಅದಕ್ಕೆ ಕಟ್ಟಿದ ಬೆಲೆಯನ್ನು ಕೂಡಿ- ಗುಣಿಸುವ ಅಸೈನ್‌ಮೆಂಟ್. ಇಳಿ ಬೆಳಕಿನ ಚಳಿಗಾಲದ ಆ ಸಂಜೆಗಳಲ್ಲಿ ಕಡಲೆಕಾಯಿ ವ್ಯಾಪಾರಿಗಳ ಚಿಮಣಿ ಬುಡ್ಡಿಯ ಬೆಳಕೇ ಕಣ್ಣಿಗೆ ರಾಚುವಂತಿರುತ್ತಿತ್ತು. ಇವರ ನಡುವೆ ದೀಪದ ಹಂಗಿಲ್ಲದೇ ವ್ಯಾಪಾರ ನಡೆಸುತ್ತಿದ್ದವರು ಹುರಿದ ಕಡಲೆಕಾಯಿ ಬೀಜ ಮಾರುವ ಕೈಗಾಡಿಯವರು.
ಇದ್ದಿಲ ಕಿಡಿ ಸಿಡಿಯುವ ಅವರ ಒಲೆಯ ಭಗಭಗ ದೂರದಿಂದಲೇ ನಮಗೆ ದೀಪಾವಳಿಯ ದೃಶ್ಯ ಕಟ್ಟಿಕೊಡುತ್ತಿತ್ತು. ಬಿಸಿ ಬಾಣಲೆ, ಕಾದ ಮರಳು, ಅದರ ಮೇಲೆ ಬಣ್ಣ ದಟ್ಟವಾಗುತ್ತಿದ್ದ ಕಡಲೆಕಾಯಿ ಬೀಜ- ಇವೆಲ್ಲಕ್ಕೂ ಮಿಗಿಲಾಗಿ ಆ ಮಾರಾಟಗಾರ ಲಯಬದ್ಧವಾಗಿ ಜಾಲರಿಯನ್ನು ಬಾಣಲೆಗೆ ತಾಗಿಸಿ ಸೃಷ್ಟಿಸುತ್ತಿದ್ದ ಶಬ್ದ ಮಾಧುರ್ಯ. ಇಡೀ ಪೊಟ್ಟಣದ ಕಡಲೆಕಾಯಿ ಬೀಜವನ್ನು ಗಾಡಿಯ ಸುತ್ತಲೇ ತಿಂದು ಮುಗಿಸುವಾಗ ಒಲೆಯ ಬಿಸಿ ಚಳಿಗಾಲದ ಆ ಸಂಜೆಯನ್ನು ಮತ್ತಷ್ಟು ಆಪ್ತವಾಗಿಸುತ್ತಿತ್ತು.
* ಸುಧೀಂದ್ರ ಹಾಲ್ದೊಡ್ಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.