ಮನೆ ಬಾಗಿಲಿಗೇ “ಬಾಣಂತನ ಭಾಗ್ಯ ‘
Team Udayavani, Jul 1, 2017, 4:57 PM IST
ಬಾಣಂತನ ಮಹಿಳೆಯರ ಜೀವನದ ಸೂಕ್ಷ್ಮವಾದ ಘಟ್ಟ. ಈ ಘಟ್ಟದಲ್ಲಿ ಹೆಣ್ಣಿನ ಮನಸ್ಸು ಹಾಗೂ ದೇಹ ಅತಿ ಸೂಕ್ಷ್ಮವಾಗಿರುತ್ತದೆ. ಹಿಂದೆಲ್ಲಾ ಹಳ್ಳಿಗಳಲ್ಲಿ ಸೂಲಗಿತ್ತಿಯರು ಈ ಕಾಯಕವನ್ನು ಮಾಡುತ್ತಿದ್ದರು. ಮಗು ಹಾಗೂ ತಾಯಿಯ ಪಾಲನೆ ಪೋಷಣೆ ಮಾಡುವುದರಲ್ಲಿ ಇವರ ಪಾತ್ರ ಮಹತ್ತರವಾಗಿತ್ತು. ಸೂಲಗಿತ್ತಿಯರು ಮಗು ಹಾಗೂ ತಾಯಿಯ ಸೇವೆಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು.
ಇಂದಿನ ಆಧುನಿಕ ಯುಗದ ಮಹಿಳೆಯರು ಬಾಣಂತನ ಹೇಗೆ ಮಾಡುವುದೆಂಬ ಚಿಂತೆಯಲ್ಲಿರುತ್ತಾರೆ. ಈ ಘಟ್ಟದಲ್ಲಿ ಸರಿಯಾದ ಪಾಲನೆ ಹಾಗೂ ಪೋಷಣೆ ದೊರೆತಾಗ ಮಾತ್ರ ತಾಯಿ ಮತ್ತು ಮಗು ಆರೋಗ್ಯದಿಂದಿರಲು ಸಾಧ್ಯ. ಇಂದು ನಗರಗಳಲ್ಲಿಯೂ ಬಾಣಂತಿಯರ ಸೇವೆ ಹಾಗೂ ಪಾಲನೆ ಮಾಡಲು ಹಲವಾರು ಸಂಸ್ಥೆಗಳು ಹುಟ್ಟಿಕೊಂಡಿವೆ. ಇವುಗಳು ಸೂಲಗಿತ್ತಿ ಮಾಡುತ್ತಿದ್ದ ಸೇವೆಯನ್ನು ಮಾಡುತ್ತಿವೆ. ಅಂಥ ಸಂಸ್ಥೆಗಳಲ್ಲಿ ಪರಿಪಾಲನಾ ಸಂಸ್ಥೆಯೂ ಒಂದು. ಪರಿಪಾಲನಾ ಸಂಸ್ಥೆ ಹೆಸರೇ ಸೂಚಿಸುವಂತೆ ಬಾಣಂತಿಯ ಮನೆಗೆ ತೆರಳಿ ತಾಯಿ ಹಾಗೂ ಮಗುವಿನ ಪಾಲನೆ ಹಾಗೂ ಪೋಷಣೆಯ ಜವಾಬ್ದಾರಿ ಹೊರುತ್ತದೆ
ಸಂಸ್ಥೆ ಕಟ್ಟಲು ಸ್ಪೂರ್ತಿ
ಈ ಪರಿಪಾಲನಾ ಸಂಸ್ಥೆಯ ರೂವಾರಿ ಸುಮಲತಾ. ಸುಮಾರು 12 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸುಮಲತಾ ಅವರಿಗೆ ಜನನಿಯೇ ಮೊದಲ ಗುರು. ಈ ಸಂಸ್ಥೆಯ ರೂವಾರಿ ಸುಮಲತಾ ಅವರಿಗೆ ಅಮ್ಮ ಮಾಡುತ್ತಿದ್ದ ಬಾಣಂತನ ಸೇವೆಯೇ ಸ್ಪೂರ್ತಿಯಂತೆ. ಇದನ್ನೇ ಯಾಕೆ ಮುಂದುವರೆಸಬಾರದು ಎಂದೆನಿಸಿ ಹೆಚ್ಚಿನ ಚಿಕಿತ್ಸಾ ವಿಧಾನಗಳನ್ನು ಕೇರಳದ ಆಯುರ್ವೇದ ಸೆಂಟರ್‌ನಲ್ಲಿ ಅಭ್ಯಸಿಸಿದರು. ನಂತರ ಮನೆಮನೆಗಳಿಗೆ ತೆರಳಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡರು.ಈಗ 4 ಮಂದಿ ಅನುಭವಿ ಮಹಿಳೆಯರು ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪರಿಪಾಲನಾ ಸಂಸ್ಥೆಯು ಬಾಣಂತಿಗೆ ಅಗತ್ಯವಿರುವ ಚಿಕಿತ್ಸೆ ಹಾಗೂ ಸೇವೆಯನ್ನು ನೀಡುತ್ತದೆ. ಬಾಣಂತಿಯರಿಗೆ ಬೇಕಾಗುವ ಆಯುರ್ವೇದ ತೈಲಗಳನ್ನು ತಯಾರಿಸಿ ಅವರಿಗೆ ಅಂಗಮರ್ಧನ ಮಾಡಲಾಗುವುದು.ತೂಕ ಕಡಿಮೆ ಮಾಡಿಕೊಳ್ಳಲು, ದೇಹದಲ್ಲಿ ಇರುವ ಬೇಡದ ಕೊಬ್ಬನ್ನು ಕರಗಿಸಲು ಹಾಗೂ ಬೆನ್ನು ನೋವಿನ ನಿವಾರಣೆಗೆ ಅಂಗಮರ್ಧನ ಮಾಡಲಾಗುವುದು. ವೈದ್ಯರ ಸಲಹೆ ಮೇರೆಗೆ ಈ ಚಿಕಿತ್ಸೆ ನೀಡಲಾಗುವುದು.ಆಹಾರ ತಜ್ಞರ ಸಲಹೆಯಂತೆ ಬಾಣಂತಿಯರು ತೆಗೆದುಕೊಳ್ಳಬೇಕಾದ ಪೌಷ್ಟಿಕ ಆಹಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ಬಾಣಂತಿ ಬಯಸಿದರೆ ಮೂರು ತಿಂಗಳ ನಂತರ ಯೋಗ ತರಬೇತುದಾರರ ಸಲಹೆಯನ್ನು ಅನುಸರಿಸಿ ಯೋಗ ತರಬೇತಿಯನ್ನು ನೀಡಲಾಗುವುದು.
ಈ ಸೇವೆಯನ್ನು ಇನ್ನೂ ವಿಸ್ತರಿಸುವ ಸಲುವಾಗಿ ಭವಿಷ್ಯದಲ್ಲಿ ಆಸಕ್ತ ಮಹಿಳೆಯರಿಗೆ ಬಾಣಂತನದ ತರಬೇತಿ ನೀಡಲಾಗುವುದು. ಹಾಗೂ ಅವರ ಜೊತೆ 2 ವರ್ಷಗಳ ಒಪ್ಪಂದ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎನ್ನುತ್ತಾರೆ ಸುಮಲತಾ.
ಸೌಮ್ಯಶ್ರೀ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.