ಅಲ್ಲೊಂದು ನಗುವ ಹಾಯಿ ದೋಣಿ…


Team Udayavani, Oct 13, 2018, 3:03 PM IST

2255yu.jpg

ಅಭಿಜಾತ ಎಂದಿಗೂ ಅಭಿಜಾತವೇ. ಅದಕ್ಕೆ ಕಾಲ ದೇಶಗಳ ಹಂಗಿಲ್ಲ. ಹಳತಾಗುವ, ಅಪ್ರಸ್ತುತವಾಗುವ ಗೊಡವೆ ಇಲ್ಲ. ಭಾಷೆ ಒಂದು ಮಾಧ್ಯಮ ಮತ್ತು ಸಾಧನ ಅಷ್ಟೇ. ಮೂಲಕ್ಕೆ ಧಕ್ಕೆ ತರದಂತೆ ಕಾಲದ ಪರಿವೇಷವನ್ನು ಯಾರು ತೊಡಿಸಿದರೂ ಸರಿ, ಅದು ಅದೇ ಕಾಲದ ಪಡಿಯಾಕೃತಿಯಾಗುತ್ತದೆ. ಶೇಕ್ಸ್‌ಪಿಯರ್‌ನ ನಾಟಕ ಕೃತಿಗಳು ಈ ವರ್ಗಕ್ಕೆ ಸೇರುತ್ತವೆಯಾದ್ದರಿಂದ ಅವು ನಿತ್ಯ ಜೀವಂತ. ಅವು ಕಾಲದ ಒತ್ತಡಕ್ಕನುಗುಣವಾಗಿ ಹೊಸ ಅರ್ಥಗಳನ್ನು ಸು#ರಿಸುವ ಜೀವ ಸೆಲೆಗಳು. ಶೇಕ್ಸ್‌ಪಿಯರ್‌ ಚಿತ್ರಿಸಿರುವುದು ಅವನ ಕಾಲದ ಚಿತ್ರಣಗಳೇ ಆಗಿರಬಹುದು. ಆದರೆ, ಅದರ ಆವರಣವನ್ನು ಹಾಗೇ ಇರಿಸಿಕೊಂಡು ಒಳಹೂರಣ ದ ರುಚಿ ಬದಲಿಸಿಕೊಂಡು ಯಶಸ್ಸು ಗಳಿಸಿದರೂ ಅದರ ಯಶಸ್ಸು ಸಂದಾಯ ಆಗಬೇಕಿರುವುದು ಶೇಕ್ಸ್‌ಪಿಯರನಿಗೇನೆ. ಹೂರಣಕ್ಕೆ ಸಂಬಂಧಿಸಿದಂತೆ ನಾಟಕಕಾರ ಎಸ್‌. ಸುರೇಂದ್ರನಾಥ್‌ ಶೇಕ್ಸ್‌ ಪಿಯರ್‌ನ “ದಿ ಕಾಮಿಡಿ ಆಫ್ ಎರರ್’ ನಾಟಕ ಕೃತಿಯನ್ನು ನಮ್ಮ ಪ್ರಾದೇಶಿಕತೆಗೆ ಒಗ್ಗಿಸಿ ಯಶಸ್ಸುಗಳಿಸಿದ್ದಾರೆ.

ಈ ರೂಪಾಂತರಕ್ಕೆ ಅವರು ಕೊಟ್ಟುಕೊಂಡಿರುವ ಹೆಸರು “ನೀನಾನಾದ್ರೆ ನಾ ನೀನೇನಾ..?’. ಇದೂ ಒಂದು ರೀತಿಯಲ್ಲಿ ಸೃಜನಶೀಲ ಕೆಲಸ ಅನಿಸುತ್ತದೆ. ಈ ಕೆಲಸದಲ್ಲಿ ಅವರು ತೋರಿರುವ ಅಚ್ಚುಕಟ್ಟು ಮತ್ತು ಅವರ ರಂಗಪ್ರಜ್ಞೆ ಮೆಚ್ಚುವಂಥದ್ದು. ಅವರ ಅನುಭವದ ಹಿನ್ನೆಲೆಯೂ ಇದಕ್ಕೆ ಕಾರಣವಾಗಿದೆ. ಒಂದು ಅಭಿಜಾತ ಕೃತಿಯನ್ನು ಅದರ ಆವರಣ ಹಾಗೇ ಉಳಿಸಿಕೊಂಡು ಹೂರಣದ ರುಚಿಯನ್ನು ಪ್ರಾದೇಶಿಕತೆಗೆ ಒಗ್ಗಿಸಿ ಈ ಹಿಂದೆ ಯಶಸ್ವಿಯಾಗಿದ್ದರು. ಇದೇ ಪ್ರಯೋಗ ಅವರ ನಿರ್ದೇಶನದಲ್ಲೇ ನೂರಕ್ಕೂ ಮೀರಿ ಪ್ರಯೋಗಗಳನ್ನು ಕಂಡಿತ್ತು.

ಸುರೇಂದ್ರನಾಥ್‌ ಮೂಲ ಎಳೆಯನ್ನು ಹಾಗೇ ಉಳಿಸಿಕೊಂಡು ಅವಳಿ ಜವಳಿಗಳು ಬದಲಾದ ಪ್ರಸಂಗಗಳನ್ನು ಮಲ್ಲೇಶ್ವರದ ಪರಿಸರದಲ್ಲಿ ಚಿತ್ರಿಸಿ ಗೆದ್ದಿದ್ದರು. ಅವಳಿ ಜವಳಿಗಳಿಗೆ ಒಂದೇ ಥರದ ಪ್ರಸಾಧನ ಮಾಡಿಸಿದರೂ ಅದೇ ಆಕಾರ ಮತ್ತು ಎತ್ತರದವರು ಸಿಗುವುದು ಕಷ್ಟದ ಕೆಲಸ. ಇದು ರಂಗಭೂಮಿಯಲ್ಲಿನ ತೊಡಕು. ಮತ್ತು ಸವಾಲೂ ಹೌದು. ಇದನ್ನು ರಂಗತಂತ್ರದ ಮೂಲಕ ಭೇದಿಸಿಯೇ ದೃಶ್ಯಗಳನ್ನು ಕಟ್ಟಬೇಕು. ಈ ಕೆಲಸವನ್ನು ತಮ್ಮ ಸೃಜನಶೀಲ ಕೌಶಲದಲ್ಲಿ ಕಟ್ಟಿರುವುದು ಸುರೇಂದ್ರನಾಥ್‌ರ ಹೆಗ್ಗಳಿಕೆ. “ಸ್ಪಷ್ಟ’ ರಂಗತಂಡ ರಂಗಕೃತಿಯ ಆಯ್ಕೆ ಮತ್ತು ಅದರ ಪ್ರಸ್ತುತಿಯಲ್ಲಿ ಮೊದಲಿಗಿಂತ ಸ್ಪಷ್ಟವಾಗಿದೆ. ಈಚೆಗೆ ಕಲಾಗ್ರಾಮದಲ್ಲಿ ಇದೇ ತಂಡ “ನೀನಾನಾದ್ರೆ ನಾನೀನೇನಾ..?’ ನಾಟಕ ಪ್ರದರ್ಶಿಸಿತು. ಸೃಜನಶೀಲ ರೂಪಾಂತರಕ್ಕೆ ಈ ತಂಡದ ಪ್ರತಿಯೊಬ್ಬರೂ ಲವಲಕೆಯಿಂದ ಅಭಿನಯಿಸಿ ಹೊಸ ಮೆರುಗು ತಂದರು. ಇದರ ಹಿಂದೆ ನಿರ್ದೇಶಕ ಗಗನ್‌ ಪ್ರಸಾದ್‌ ಅವರ ತುಡಿತ, ಮಿಡಿತ, ಶ್ರಮ, ಅಕ್ಕರೆ, ಅಚ್ಚುಕಟ್ಟು ಮತ್ತು ರಂಗದ ಬೇರೆಬೇರೆ ಭಾಗಗಳಲ್ಲಿ ಅವರಿಗಿರುವ ಪ್ಯಾಷನ್‌ ಸ್ಪಷ್ಟವಾಗಿ ಕಾಣಿಸಿತು. ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡು ಹಳತಾಗಿರುವ ನಾಟಕದ ವಿನ್ಯಾಸವನ್ನು ಅದರ ಪಡಿಯಚ್ಚಿನಂತೆಯೇ ಮಾಡಿಕೊಂಡು ಮುಂದುವರಿಯಬಹುದಿತ್ತು. ಗಗನ್‌ ಈ ರಂಗಕೃತಿಯನ್ನು ಕಟ್ಟುವ ನಿಟ್ಟಿನಲ್ಲಿ ಹೊಸ ಸೆಲೆಗಳ ಬಗೆಗೆ ಯೋಚಿಸಿರುವುದು ಕಂಡು ಬಂದಿತು. ಅಂದರೆ ಅವರು ವಿನ್ಯಾಸವನ್ನು ಅವರ ದರ್ಶನದ ಅನುಸಾರ ಮಾಡಿಕೊಂಡಿದ್ದರು. ಅದರಲ್ಲಿ ಖಚಿತತೆ ಇತ್ತು. ಎಲ್ಲರ ಅಭಿನಯಕ್ಕೆ ಸರಾಗ ದಕ್ಕಿಸಿಕೊಟ್ಟಿದ್ದರು.

ಸ್ವತಃ ತಾವು ಬೇರೆ ಬೇರೆ ಛಾಯೆಗಳಲ್ಲಿ ನಟಿಸಿದ್ದು ಖುಷಿ ತರಿಸಿತು. ಉಳಿದವರು ಪಾತ್ರಗಳನ್ನು ಅಂತರಂಗೀಕರಿಸಿಕೊಂಡಿದ್ದರು. ಅವಳಿ ಜವಳಿಗಳು ಸೃಷ್ಟಿಸುವ ಗೊಂದಲ ನಗು ತರಿಸುವುದರ ಜೊತೆಗೆ ಬೇರೆಬೇರೆ ಬದುಕಿನ ವಲಯದ ಛಾಯೆಗಳನ್ನು ಇದು ಕಾಣಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ದೃಶ್ಯವೊಂದು ಮುಗಿದು ಬೇರೆ ಸಜ್ಜಿಕೆ ಸಜ್ಜುಗೊಳಿಸುವಾಗ ರಂಗದ ಮೇಲೆ ಮಂದ ಬೆಳಕು ತುಂಬಿಸುವುದು ರೂಢಿ. ಗಗನ್‌ ಈ ಪ್ರಕ್ರಿಯೆಗೆ ಹೊಸ ಆಯಾಮ ದಕ್ಕಿಸಿಕೊಟ್ಟಿದ್ದರು. ನಟ ನಟಿಯರು ಕ್ಲೌನ್‌ ಗಳ ರೀತಿಯಲ್ಲಿ ನರ್ತಿಸುತ್ತ, ನಾಟಕೀಯವಾಗಿ ಓಡಾಡುತ್ತ, ಕದಲುತ್ತ ರಂಗ ಸಜ್ಜಿಕೆ ಬದಲಿಸುತ್ತಿದ್ದರು. ಇದಕ್ಕೆ ಹಿನ್ನೆಲೆಯಲ್ಲಿ ನಾಟಕದ ಕಥೆಯನ್ನು ಹೇಳುವ ಬೆಳೆಸುವ ಹಾಡುಗಳು. ಇದರ ಆರಂಭ ಮತ್ತು ಮುಕ್ತಾಯದ ಗೇಯತೆ ಒಂದೇ ಲಯ ದಕ್ಕಿಸಿಕೊಂಡಿದ್ದು ಹೊಸ ಹುಮ್ಮಸ್ಸು ತುಂಬುತ್ತಿತ್ತು. ಎಲ್ಲ ನಟರ ಅಭಿನಯ ಚೇತೋಹಾರಿಯಾದರೂ ಗಗನ್‌ ಹಾಗೂ ಸಹನರ ಅಭಿನಯ ಸಹಜ ಮತ್ತು ಸುಂದರ. ಬೆಳಕು ನಿಖರ ಮತ್ತು ಸ್ಪಷ್ಟ. ಇದು ಸೃಜನಶೀಲ ಅಲೆಗಳ ಮೇಲೆ ತೇಲಿದ ನಗುವ ಹಾಯಿದೋಣಿ.

ಎನ್‌ ಸಿ ಮಹೇಶ್‌ 

ಟಾಪ್ ನ್ಯೂಸ್

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.