ಡುಗ್ ಡುಗ್ ಡುಗ್… ಜಾವಾ ಯೆಜ್ಡಿ ಮೇಳ
Team Udayavani, Jul 7, 2018, 12:04 PM IST
ಮಾರುಕಟ್ಟೆಯಲ್ಲಿ ಎಂಥದ್ದೇ ಲಕ್ಷುರಿ ಬೈಕುಗಳು ಬಂದಿದ್ದರೂ, ಜಾವಾ ಯೆಜ್ಡಿಯ ಮೋಹ ರೈಡಿಂಗ್‌ಪ್ರಿಯರಿಂದ ದೂರವಾಗಿಲ್ಲ. ಪ್ರತಿವರ್ಷವು ಜಾವಾ ಯೆಜ್ಡಿಗೆ ಗೌರವ ಸೂಚಿಸಲು, ಅದಕ್ಕೇ ಅಂತಲೇ ಒಂದು ದಿನವನ್ನೇ ನಿಗದಿಪಡಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ “ಅಂತಾರಾಷ್ಟ್ರೀಯ ಜಾವಾ ಡೇ’ ಆಚರಣೆಗೊಳ್ಳುತ್ತಿದೆ. ಜಾವಾ ಯೆಜ್ಡಿ ಬೈಕುಗಳ ಪ್ರದರ್ಶನ ಈ ಬಾರಿಯ ವಿಶೇಷ.
ಜಾವಾ ಯೆಜ್ಡಿ ಬೈಕ್ ಅನ್ನು ಭಾರತಕ್ಕೆ ಮೊದಲು ಪರಿಚಯಿಸಿದ್ದ ಮೈಸೂರು ರಾಜಮನೆತನ. 80-90ರ ದಶಕದಲ್ಲಂತೂ ಈ ಬೈಕ್‌ಗಳು ಭರ್ಜರಿ ಕ್ರೇಜ್ ಹುಟ್ಟಿಸಿದ್ದವು. ಇವುಗಳ ಉತ್ಪಾದನೆ ಈಗ ನಿಂತಿದ್ದರೂ, ಜನರ ಮನಸ್ಸಿಂದ ಈ ಎರಡು ಚಕ್ರದ ವೇಗದ ರಥಗಳು ಇಂದಿಗೂ ಮರೆಯಾಗಿಲ್ಲ. ಈ ಬೈಕುಗಳ ಗುಂಗಿನಲ್ಲಿಯೇ ಹುಟ್ಟುಕೊಂಡಿದ್ದು, ಜಾವಾ ಯೆಜ್ಡಿ ಕ್ಲಬ್. 2007ರಲ್ಲಿ ಆರಂಭವಾದ ಈ ಕ್ಲಬ್ ಪ್ರತಿವರ್ಷವೂ ರ್ಯಾಲಿಯನ್ನು ನಡೆಸುತ್ತಾ ಗಮನ ಸೆಳೆದಿದೆ.
ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲೆಂದೇ ದೆಹಲಿ, ಮುಂಬೈ, ಚೆನ್ನೈನಿಂದ ಹಳೆಯ ರೈಡರ್‌ಗಳು ಬರುತ್ತಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಈ ಸಲ ರ್ಯಾಲಿ ಬದಲು ಬೈಕ್‌ನ ಪ್ರದರ್ಶನವನ್ನು ಏರ್ಪಡಿಸಲಾಗಿದೆ. “ಜಾವಾ ಯೆಜ್ಡಿ ಬೈಕ್ ತನ್ನ ಅಳಿವನ್ನು ಹೊಂದುತ್ತಿದ್ದು, ಈ ಬೈಕ್‌ಗೆ ಬೇಕಾದ ಬಿಡಿ ಭಾಗಗಳು ಸಿಗುತ್ತಿಲ್ಲ. ಇಂಥ ಬೈಕ್‌ನ ಪ್ರದರ್ಶನಗಳ ಮೂಲಕ ಹಳೆಯ ವೈಭವವನ್ನು ನೆನೆಯುತ್ತಿದ್ದೇವೆ’ ಎಂದು ಕ್ಲಬ್‌ನ ಅಧ್ಯಕ್ಷ ಬ್ರಾಯನ್ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.