ಸಂಪೂರ್ಣ ಕ್ರಿಸ್‍ಮಸ್ ಖುಷಿ
Team Udayavani, Nov 30, 2019, 6:00 AM IST
ಕರಕುಶಲ ವಸ್ತುಗಳ ಸಂಪೂರ್ಣ್ ಸೊಸೈಟಿಯು ಕ್ರಿಸ್‌ಮಸ್ ಪ್ರಯುಕ್ತ ಕರಕುಶಲ ವಸ್ತುಗಳ ಮಾರಾಟ ಮೇಳವನ್ನು ಆಯೋಜಿಸಿದೆ. ಗೃಹಾಲಂಕಾರ ವಸ್ತುಗಳು, ಆಭರಣಗಳು, ಮತ್ತಿತರ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಸುಮಾರು 100ಕ್ಕೂ ಅಧಿಕ ಮಳಿಗೆಗಳು ಮೇಳದಲ್ಲಿ ಇರಲಿವೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪಾರ್ಟಿಗಳಿಗೆ ಧರಿಸಲು ಸೂಕ್ತವಾದ ವೆಸ್ಟರ್ನ್ ವಸ್ತ್ರಗಳನ್ನು ಇಲ್ಲಿ ಖರೀದಿಸಬಹುದು. ಹಾಗೆಯೇ, ಸಾಂಪ್ರದಾಯಿಕ ದಿರಿಸುಗಳ ಅಂಗಡಿಗಳೂ ಇರಲಿವೆ.
ಮೇಳದ ಮುಖ್ಯ ಆಕರ್ಷಣೆಯಾಗಿ- ಕ್ರಿಸ್ಮಸ್ ಥೀಮ್ ಹೊಂದಿರುವ ದಿಂಬುಗಳು, ಕ್ಯಾಂಡಲ್‌ಗಳು, ಗೋಡೆ ವರ್ಣಗಳು ಸಿಗಲಿವೆ. ಪುಸ್ತಕ ಪ್ರೇಮಿಗಳು, “ಹುಕ್ಡ್ ಆನ್ ಬುಕ್ಸ್’ ಮಳಿಗೆಯಲ್ಲಿ ಪುಸ್ತಕವನ್ನು ಖರೀದಿಸಬಹುದು, ಬಾಡಿಗೆಗೆ ಪಡೆದುಕೊಳ್ಳಬಹುದು. ಅಲ್ಲಿಯೇ ಕುಳಿತು ಓದಲೂಬಹುದು. ದಿನ ಪೂರ್ತಿ ಶಾಪಿಂಗ್ ಮಾಡಿ ಬಳಲಿದವರಿಗೆ ಮುದ ನೀಡಲು ಲೈವ್ ಮ್ಯೂಸಿಕ್ ಬ್ಯಾಂಡ್ ಪ್ರದರ್ಶನ, ಬಾಯಿ ರುಚಿ ತಣಿಸಲು ಆಹಾರ ಮಳಿಗೆಗಳು ಕೂಡಾ ಇವೆ.
ಯಾವಾಗ?: ಡಿಸೆಂಬರ್ 1, ಭಾನುವಾರ ಬೆಳಗ್ಗೆ 11- 9
ಎಲ್ಲಿ?: ಜಯಮಹಲ್ ಪ್ಯಾಲೇಸ್ ಹೋಟೆಲ್, ಜಯಮಹಲ್ ರಸ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.