ಎರ್ಮಾಯಿ ಎಂಬ ಅಜ್ಞಾತ ಸುಂದರಿ
Team Udayavani, Jul 22, 2017, 12:16 PM IST
ಮಳೆಗಾಲ ಬಂತೆಂದರೆ ಸಾಕು. ಮಳೆಗಾಲದುದ್ದಕ್ಕೂ ಪ್ರಕೃತಿಗೆ ಹಬ್ಬ. ಪ್ರಕೃತಿ ಮಾತೆ ಹಚ್ಚಹಸುರಿನಿಂದ ಕಂಗೊಳಿಸುತ್ತಾಳೆ. ಬತ್ತಿ ಹೋಗಿದ್ದ ನದಿತೊರೆಗಳು ಜೀವ ಪಡೆಯುತ್ತವೆ.ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಖುಷಿ. ಮನಸ್ಸಿಗೆ, ಕಣ್ಣಿಗೆ ಆಹ್ಲಾದ ನೀಡುವ ಜಲಪಾತಗಳು ಆಗ ನಮಗೆ ಕಾಣ ಸಿಗುತ್ತವೆ.ಅಂಥವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರ್ಮಾಯಿ ಜಲಪಾತವೂ ಒಂದು.
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಸಮೀಪದ ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ಸುಮಾರು 80 ಅಡಿ ಎತ್ತರದಿಂದ ಕಲ್ಲುಬಂಡೆಗಳ ನಡುವೆ ಧುಮ್ಮಿಕ್ಕುವ ಈ ಜಲಧಾರೆಯನ್ನು ನೋಡುವುದೇ ಒಂದು ಹಬ್ಬ. ಒಂದು ಕಡೆ ಆಕಾಶದೆತ್ತರ ಬೆಳೆದು ನಿಂತ ಮರಗಳು,ಹಚ್ಚ ಹಸುರಿನ ಪ್ರಕೃತಿ, ಇನ್ನೊಂದು ಕಡೆ ಜೀರುಂಡೆಗಳ ಕಲರವ, ಮತ್ತೂಂದು ಕಡೆ ಮನಸ್ಸಿಗೆ ಖುಷಿ ನೀಡುವ ಜಲಧಾರೆ. ಈ ಎಲ್ಲ ಅನುಭವಗಳನ್ನು ಒಂದೇ ಕಡೆ ಪಡೆಯಬೇಕೆಂದರೆ ನೀವು ಎರ್ಮಾಯಿಗೆ ಬರಲೇಬೇಕು.
ಎರ್ಮಾಯಿ ಎಂಬ ಹೆಸರು ಬಂದಿದ್ದು ಹೇಗೆ?
ಎಳುವರೆ ಹಳ್ಳ ಎಂಬ ಜಾಗ ಈ ಜಲಪಾತದ ಉಗಮ ಸ್ಥಾನ.ಹಿಂದೆ ಏಳು ಜನ ಯುವಕರು ಗದ್ದೆ ಉಳುಮೆ ಮಾಡಿ ಎತ್ತುಗಳನ್ನು ಇದೇ ಜಾಗದಲ್ಲಿ ತೊಳೆಯುತ್ತಿದ್ದರಂತೆ. ಹೀಗೆ ಎತ್ತುಗಳನ್ನು ತೊಳೆಯುತ್ತಿದ್ದಾಗ ಎತ್ತುಗಳು ಇದ್ದಕ್ಕಿದ್ದಂತೆ ಮಾಯವಾದವಂತೆ. ತುಳುವಿನಲ್ಲಿ ಎತ್ತಿಗೆ ಎರು ಎಂದು ಕರೆಯುವ ಕಾರಣಕ್ಕೆ ಈ ಜಾಗಕ್ಕೆ ಎರು ಮಾಯ ಎಂಬ ಹೆಸರು ಬಂತಂತೆ. ಕ್ರಮೇಣ ಜನರ ಬಾಯಲ್ಲಿ ಹೀಗೆ ಕರೆಯಲ್ಪಟ್ಟು ಕಡೆಗೆ ಎರ್ಮಾಯಿ ಎಂದಾಯಿತಂತೆ.
ಬೆಳ್ತಂಗಡಿಯಿಂದ ಕಾಜೂರಿಗೆ ತೆರಳುವ ಹಾದಿಯಲ್ಲಿ ಬಂದು ಕಾಜೂರಿನಲ್ಲಿ ಇಳಿದು ಕಾಡುದಾರಿಯಲ್ಲಿ 2 ಕಿ.ಮೀ ಕ್ರಮಿಸಿದರೆ ಎರ್ಮಾಯಿ ಜಲಪಾತ ತಲುಪಬಹುದು. ಈ ಜಲಪಾತಕ್ಕೆ ಹೋಗುವುದೇ ಒಂದು ಚಾರಣದ ಅನುಭವವನ್ನು ನೀಡುತ್ತದೆ. ಮಣ್ಣಿನ ಮಾರ್ಗದಲ್ಲಿ ಸಾಗುತ್ತಾ ನಡುವೆ ಸಿಗುವ ಹಳ್ಳ,ಬೇಡವೆಂದರೆ ಕಾಲುಸಂಕದಲ್ಲೂ ತೆರಳಬಹುದು. ಅಲ್ಲಿಂದ ಪುನಃ ಮಣ್ಣಿನ ಮಾರ್ಗದಲ್ಲಿ ಸಾಗುತ್ತಾ ದಟ್ಟ ಅಡವಿಯಲ್ಲಿ ದಾರಿ ಹುಡುಕುತ್ತಾ, ಮಧ್ಯದಲ್ಲಿ ಸಿಗುವ ಪುಟ್ಟಝರಿಗಳ ಚೆಲುವನ್ನು ಕಣ್ತುಂಬಿಸಿಕೊಳ್ಳುತ್ತಾ ,ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಸಾಗಿದಂತೆ ಹೊಸಲೋಕವನ್ನು ಪ್ರವೇಶಿಸಿದ ಅನುಭವವಾಗುತ್ತದೆ.
ಆಗಸ್ಟ್‌ನಿಂದ ಡಿಸೆಂಬರ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಆಗ ಎರ್ಮಾಯಿ ಭೋರ್ಗರೆದು ಮನಮೋಹಕವಾಗಿ ಕಾಣಿಸುತ್ತಾಳೆ. . ಇನ್ನು ಇಲ್ಲಿಗೆ ಭೇಟಿ ನೀಡುವಾಗ ತಿಂಡಿ ಪೊಟ್ಟಣಗಳನ್ನು ಕೊಂಡೊಯ್ಯುವುದು ಉತ್ತಮ. ಜಲಪಾತ ನೋಡುವುದರೊಂದಿಗೆ ಚಾರಣದ ಸವಿಯನ್ನೂ ನೀಡುವ ಈ ತಾಣ ಸದಾ ಕೆಲಸದ ಜಂಜಡದಲ್ಲಿರುವವರ ಮನಸ್ಸಿಗೆ ಹಿತ ನೀಡುತ್ತದೆ.
ಸೌಮ್ಯಶ್ರೀ.ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.