ಫುಡ್ ಬೆಟರ್ ಬೆಸ್ಟ್
ಅತ್ಯುತ್ತಮ ಹೋಟೆಲ್‌ಗೆ ಪುರಸ್ಕಾರದ ಸಿಹಿ
Team Udayavani, Aug 3, 2019, 5:50 AM IST
ಜಗತ್ತಿನ ಯಾವ ಭಾಗ ದಿಂದಲೇ ಬಂದಿರಲಿ, ಬೆಂಗಳೂರಿನಲ್ಲಿ ಅವರಿಗೆ ಊಟಕ್ಕೇನೂ ತೊಂದರೆ ಆಗುವುದಿಲ್ಲ. ಮುದ್ದೆಯೂಟ, ಗಂಜಿ ಊಟ, ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಚೈನೀಸ್, ಇಟಾಲಿಯನ್, ಮೆಕ್ಸಿಕೊ ಹೀಗೆ ಬಹುತೇಕ ಎಲ್ಲ ಭಾಗಗಳ, ಎಲ್ಲ ವರ್ಗದ ಜನರ ಹೊಟ್ಟೆ ತಣಿಸುವ ಸಾವಿರಾರು ಹೋಟೆಲ್‌ಗಳು ನಗರದಲ್ಲಿವೆ. ಇಲ್ಲಿನ ಅದೆಷ್ಟೋ ಲಕ್ಷ ಜನರು, ದಿನನಿತ್ಯ ಹೋಟೆಲ್ ಊಟವನ್ನು ಅವಲಂಬಿಸಿದ್ದಾರೆ. ಶುಚಿ- ರುಚಿ ಯಿಂದ ಗ್ರಾಹಕರನ್ನು ತೃಪ್ತಿಪಡಿಸುತ್ತಿರುವ ಈ ಅನ್ನದಾತರನ್ನು ನೆನೆಯದೇ ಇರಲು ಸಾಧ್ಯವೇ?
ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ವತಿಯಿಂದ, ಬೆಂಗಳೂರಿನ ಉತ್ಕೃಷ್ಠ ಹೋಟೆಲ್‌ಗಳನ್ನು ಗುರುತಿಸಿ, ಗೌರವಿಸುವ ಕೆಲಸ ನಡೆಯುತ್ತಲಿದೆ. ಇದೇ ಮೊದಲ ಬಾರಿಗೆ, ಬಿಬಿಎಚ್‌ಎ ಆಹಾರ ಪ್ರಶಸ್ತಿಯನ್ನು ಘೋಷಿಸಿದ್ದು, ನವರತ್ನ ಎಂಬ ಒಂಬತ್ತು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಆಯ್ಕೆ ಹೇಗೆ?
ಹೋಟೆಲ್‌ಗಳು, ಈ ಸ್ಪರ್ಧೆಗೆ ತಮ್ಮ ಹೆಸರನ್ನು ನೋಂದಾಯಿ ಸಿಕೊಳ್ಳಬೇಕು. ನಂತರ ಬೇರೆ ಬೇರೆ ಮಾನದಂಡಗಳ ಮೂಲಕ ಹೋಟೆಲ್‌ಗಳನ್ನು ಕೊನೆಯ ಸುತ್ತಿಗೆ ಆಯ್ಕೆ ಮಾಡಲಾಗುವುದು. ಆಯ್ಕೆ ಯಾದ ಪ್ರತಿ ಹೋಟೆಲ್‌ಗೂ ತೀರ್ಪುಗಾರರ ತಂಡ ಖುದ್ದಾಗಿ ಭೇಟಿ ನೀಡುತ್ತದೆ. ಆನಂತರ, ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಬೆಂಗಳೂರಿನ ನಾಗಾಲೋಟದ ಬೆಳವಣಿಗೆಯಲ್ಲಿ ಹೋಟೆಲ್‌ಗಳ ಪಾತ್ರ ಬಹಳ ಮಹತ್ವದ್ದು. ಇಲ್ಲಿ ಎಲ್ಲ ವರ್ಗದ ಜನರ ಕೈಗೆಟಕುವ ಹೋಟೆಲ್‌ಗಳಿವೆ. ಈ ಉದ್ಯಮದಲ್ಲಿ ಉತ್ತಮ ಅಭ್ಯಾಸಗಳನ್ನು ಪಾಲಿಸುತ್ತಿರುವವರನ್ನು ಗುರುತಿಸುವುದು, ಗೌರವಿಸುವುದು ಹಾಗೂ ಉತ್ತೇಜಿಸುವುದು ನಮ್ಮ ಸಂಘದ ಉದ್ದೇಶ.
ಪಿ.ಸಿ. ರಾವ್, ಸಂಘದ ಅಧ್ಯಕ್ಷರು
ಯಾರ್ಯಾರಿಗೆ ಪ್ರಶಸ್ತಿ ಇದೆ?
ಅತ್ಯುತ್ತಮ ದರ್ಶಿನಿ ಮಾದರಿಯ ರೆಸ್ಟೋರೆಂಟ್.
ಅತ್ಯುತ್ತಮ ಕ್ಯಾಶುವಲ್ ಊಟ- ಸಸ್ಯಾಹಾರ.
ಅತ್ಯುತ್ತಮ ಕ್ಯಾಶುವಲ್ ಊಟ- ಮಾಂಸಾಹಾರ.
ಅತ್ಯುತ್ತಮ ಫೈನ್ ಡೈನಿಂಗ್
ಮಲ್ಟಿ ಕ್ವಿಸಿನ್.
ಅತ್ಯುತ್ತಮ ಸಿಹಿ-ಖಾರದ ತಿಂಡಿಗಳು.
ಅತ್ಯುತ್ತಮ ಬೇಕರಿ.
ಅತ್ಯುತ್ತಮ ಹೋಟೆಲ್
(ವಸತಿ ಸೌಲಭ್ಯ).
ಉದಯೋನ್ಮುಖ ಹೋಟೆಲ್‌ಗಳು.
ಜೀವಮಾನದ ಸಾಧನೆ ಪ್ರಶಸ್ತಿ.
ಎಲ್ಲಿ?: ಸರ್ ಎಂ.ವಿ. ಸಭಾಂಗಣ, ಎಫ್ಕೆಸಿಸಿಐ, ಕೆಂಪೇಗೌಡ ರಸ್ತೆ
ಯಾವಾಗ?: ಆಗಸ್ಟ್ 17, ಶನಿವಾರ
ಹೆಚ್ಚಿನ ಮಾಹಿತಿಗೆ: https://tinyurl.com/y6fkwzxu
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.