ತಿಂಡಿಪೋತರ ಬೀದಿ:ವಿವಿ ಪುರಂ ಫುಡ್‌ಸ್ಟ್ರೀಟ್‌ನಲ್ಲಿ ನಿತ್ಯವೂ ಜಾತ್ರೆ
Team Udayavani, Dec 8, 2018, 1:57 PM IST
ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ಇಲ್ಲಿನ ಅಂಗಡಿಗಳು ತೆರೆದುಕೊಳ್ಳುತ್ತವೆ. ಸುಮಾರು ಅರ್ಧ ಕಿ.ಮೀ. ಉದ್ದಕ್ಕಿರುವ ಈ ರಸ್ತೆಗೆ ಆಹಾರಪ್ರಿಯರು ಲಗ್ಗೆಯಿಡಲಾರಂಭಿಸುತ್ತಾರೆ. ಇದು ನಗರದ ಆಹಾರಪ್ರಿಯರ ನೆಚ್ಚಿನ ವಿ.ವಿ. ಪುರಂನ ಫುಡ್‌ಸ್ಟ್ರೀಟ್…
ಬಸವನಗುಡಿಯ ಸಜ್ಜನ್ ರಾವ್ ಸರ್ಕಲ್ ಬಳಿ ಇರುವ ಈ ಓಣಿ, ಸಂಜೆ ಆಗುತ್ತಿದ್ದಂತೆ ಜನಜಂಗುಳಿಯಿಂದ ತುಂಬುತ್ತದೆ. ಇಲ್ಲಿಗೆ ಹೊಸದಾಗಿ ಬಂದವರು ಇಲ್ಲೇನೋ ಜಾತ್ರೆ ಇರಬಹುದು ಎಂದುಕೊಳ್ಳುತ್ತಾರೆ. ಆದರೆ, ಇದು ನಿತ್ಯದ ಜಾತ್ರೆ. ತಿಂಡಿ ಖಾದ್ಯಗಳಿಗೆಂದೇ ಮೀಸಲಾದ ಜಾತ್ರೆ. ಇದು ನಗರದ ತಿಂಡಿಪೋತರು ಮತ್ತು ಆಹಾರಪ್ರಿಯರ ನೆಚ್ಚಿನ ತಾಣ. ಅಂದಹಾಗೆ, ನಾವು ಮಾತಾಡುತ್ತಿರುವುದು ವಿ.ವಿ. ಪುರಂ ಫುಡ್‌ಸ್ಟ್ರೀಟ್ ಬಗ್ಗೆ. ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ಇಲ್ಲಿನ ಅಂಗಡಿಗಳು ತೆರೆದುಕೊಳ್ಳುತ್ತವೆ. ಸುಮಾರು ಅರ್ಧ ಕಿ.ಮೀ. ಉದ್ದಕ್ಕಿರುವ ಈ ರಸ್ತೆಗೆ ಆಹಾರಪ್ರಿಯರು ಲಗ್ಗೆಯಿಡಲಾರಂಭಿಸುತ್ತಾರೆ. ಜೋಡಿ ಹಕ್ಕಿಗಳು, ಒಂಟಿಯಾಗಿ ಬಂದವರು, ಕುಟುಂಬಸ್ಥರು ಎಲ್ಲಾ ಬಗೆಯ ಗ್ರಾಹಕರನ್ನು ಇಲ್ಲಿ ನೋಡಬಹುದು. ಈ ರಸ್ತೆಯ ಎರಡೂ ಬದಿ ಥರಹೇವಾರಿ ಖಾದ್ಯಗಳು ಲಭ್ಯ.
ಮೊಸರು ಕೋಡ್ ಬಳೆ ಸವಿರುಚಿ
ಸುಮಾರು 20 ವರ್ಷಗಳಿಂದ ನಗರದಲ್ಲಿ ಅವರೆ ಮೇಳವನ್ನು ಆಯೋಜಿಸುತ್ತಿರುವ ವಾಸವಿ ಕ್ಯಾಂಡಿಮೆಂಟ್ಸ್ ಅವರ ಖಾನಾವಳಿ ಮಧ್ಯಾಹ್ನದಿಂದಲೇ ಗ್ರಾಹಕರಿಂದ ಅವರಿಸಲ್ಪಡುತ್ತದೆ. ಇಡ್ಲಿ ಚಟ್ನಿ, ರೈಸ್ ಬಾತ್, ಚಿತ್ರಾನ್ನ, ಮಸಾಲೆ ದೋಸೆ, ಈರುಳ್ಳಿ ದೋಸೆ, ಮೈಸೂರು ಮಸಾಲೆ ದೋಸೆ, ಚಟ್ನಿ ರೋಸ್ಟ್, ಪುಡಿ ದೋಸೆ, ಅಕ್ಕಿ ರೊಟ್ಟಿ, ಪಡ್ಡು, ಮೊಸರು ಕೋಡ್ ಬಳೆಯ ರುಚಿಯನ್ನು ಸವಿಯಬಹುದು. ಅಲ್ಲದೆ ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ರಾಗಿ ಮು¨ªೆ, ಬಜ್ಜಿ, ಪಲಾವ್, ಹಪ್ಪಳ, ಹೆಸರು ಕಾಳು ಪಲ್ಯ ಈ ಖಾನಾವಳಿಯ ವೈಶಿಷ್ಟé.
ಅವರೆಕಾಯಿಪ್ರಿಯರಿಗೆ
ಫುಡ್‌ಸ್ಟ್ರೀಟ್‌ನಲ್ಲಿರುವ ಸಾಯಿ ಫಾಸ್ಟ್‌ಫುಡ್ ಖಾನಾವಳಿಯಲ್ಲಿ ರಾಗಿ ಮು¨ªೆ ಅವರೆಕಾಳು ಸಾರು, ಅವರೆಕಾಯಿ ಉಪ್ಪಿಟ್ಟು, ಹಿತಕಬೇಳೆ ಎಳ್ಳವರೆ, ಅವರೆಬೇಳೆ ಮಸಾಲೆ ಇಡ್ಲಿ, ಅವರೆಕಾಯಿ, ಉಸಲಿ, ಒತ್ತು ಶಾವಿಗೆ, ಅವರೆಕಾಳಿನಿಂದ ಮಾಡಿದ ವಿವಿಧ ರೀತಿಯ ದೋಸೆಗಳು, ಪಲಾವ್, ಅವರೆಕಾಳು ವಡೆ, ಬೆಂಗಳೂರು ಬೋಂಡಾಗಳು ಸೇರಿದಂತೆ ಥರಹೇವಾರಿ ಅವರೆಕಾಯಿ ಖಾದ್ಯಗಳು ಆಹಾರ ಪ್ರಿಯರ ಹೊಟ್ಟೆ ತಣಿಸುತ್ತವೆ. ಅವರೆಕಾಳಿನಿಂದ ಮಾಡಿದ ಸಿಹಿತಿಂಡಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ಅವರೆಕಾಯಿ ಹಲ್ವಾ, ಮೈಸೂರು ಪಾಕ್, ಜಿಲೇಬಿ, ಅವರೆಕಾಳು ಬರ್ಫಿ, ಸೋನ ಪಾಪಡ್, ಇಲ್ಲಿ ಲಭ್ಯ.
ಕುರುಕಲು ತಿಂಡಿ
ಫುಡ್‌ಸ್ಟ್ರೀಟ್ ಓಣಿಯಲ್ಲಿ ಅನುರಾಧಾ ಸ್ನ್ಯಾಕ್ಸ್ ಎಂಬ ಖಾನಾವಳಿಯೊಂದಿದೆ. ಪಾವ್ ಭಾಜಿ, ವಡಾ ಪಾವ್, ತವಾ ಪಲಾವ್, ಮಸಾಲಾ ಪಾವ್, ಆಲೂ ಫ್ರೈ, ಜೈನ್ ಪಾವ್ ಭಾಜಿ, ಫಿಂಗರ್ ಚಿಪ್ಸ್, ಪೊಟೇಟೋ ಚಿಪ್ಸ್ ದೊರೆಯುತ್ತದೆ. ಚೈನೀಸ್ ತಿಂಡಿಗಳನ್ನು ಇಷ್ಟಪಡುವವರು ಎದುರುಗಡೆ ಇರುವ ಚೈನೀಸ್ ಕಾರ್ನರ್‌ನಲ್ಲಿ ಗೋಬಿ ಮಂಚೂರಿ, ಮಶ್ರೂಮ್ ಮಂಚೂರಿ, ಬೇಬಿ ಕಾರ್ನ್ ಮಂಚೂರಿ, ಪನೀರ್ ಮಂಚೂರಿ, ರುಮಾಲಿ ರೋಟಿ, ಜಿಲೇಬಿ ಇನ್ನೂ ಹಲವು ತಿನಿಸುಗಳನ್ನು ಸವಿಯಬಹುದು.
ತಿಂಡಿ ಮತ್ತು ತೀರ್ಥ
ತೀರ್ಥ ಎಂದರೆ ಬಾದಾಮಿ ಹಾಲು ಮತ್ತು ಹಣ್ಣಿನ ಪೇಯ ಅಷ್ಟೇ. ಖಾದ್ಯಗಳ ಕುರಿತು ಇಷ್ಟುದ್ದದ ಪಟ್ಟಿ ನೀಡಿದ ಮೇಲೆ ಚಾಟ್ಸ್ ಕುರಿತು ಹೇಳದೇ ಇದ್ದರೆ ಹೇಗೆ! ರಾಜಸ್ಥಾನ ಐಸ್‌ಕ್ರೀಂ ಚಾಟ್ಸ್, ಗುಲಕಂದ್ ಚಾಟ್ಸ್, ಚೈನೀಸ್ ಚಾಟ್ಸ್, ಪಾನಿಪುರಿ ಮುಂತಾದ ಗಾಡಿ ತಿಂಡಿಗಳನ್ನೂ ಸವಿಯಬಹುದು. ಇದೇ ರಸ್ತೆಯಲ್ಲಿ ಮೊದಲಿಗೇ ಸಿಗುವ ವಿ.ವಿ. ಬೇಕರಿ ಕುರಿತು ನಿಮ್ಮಲ್ಲನೇಕರಿಗೆ ಗೊತ್ತಿರುತ್ತದೆ. ಬೆಣ್ಣೆ ಬಿಸ್ಕತ್ತು, ಮಸಾಲಾ ಬನ್, ಪಫ್Õ, ಮುಂತಾದ ಸಿಹಿ ಮತ್ತು ಖಾರ ಬೇಕರಿ ತಿನಿಸುಗಳಿಗೆ ವಿ.ವಿ. ಬೇಕರಿ ಹೆಸರುವಾಸಿ. ಬಾಂಬೆ ಬಾದಾಮಿ ಮಿಲ್ಕ್, ಗುಲ್ಕಂದ್ ಸೆಂಟರ್ ಅಕ್ಕಪಕ್ಕದಲ್ಲೇ ಇವೆ.
ನಾವು ಇಲ್ಲಿಗೆ ಎರಡನೇ ಬಾರಿ ಬಂದಿದ್ದೇವೆ. ಇಲ್ಲಿ ಸಿಗುವ ಅವರೆಕಾಳು ಒಬ್ಬಟ್ಟು ಮತ್ತು ಅವರೆಕಾಳು ಉಪ್ಪಿಟ್ಟಿನ ರುಚಿ ನಾನೆಲ್ಲೂ ಸವಿದಿಲ್ಲ. ಬಿಡುವಿ¨ªಾಗಲೆಲ್ಲಾ ಗೆಳೆಯರೊಂದಿಗೆ ಇಲ್ಲಿಗೆ ಬರುತ್ತೇವೆ.
– ಮಲ್ಲನಗೌಡ
ದೂರದೂರಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ನನಗೆ ವಿ.ವಿ. ಪುರಂ ಫುಡ್‌ಸ್ಟ್ರೀಟ್ ನನ್ನೂರಿನ ಜಾತ್ರೆಯನ್ನು ನೆನಪಿಸುತ್ತದೆ. ಗುಲ್ಕನ್ ಐಸ್‌ಕ್ರೀಂ, ಫೂ›ಟ್ ಸಲಾಡ್, ರೋಜ್ ಗುಲ್ಕನ್ ಮತ್ತು ಜ್ಯೂಸ್ ಸವಿಯುವ ನೆಪದಲ್ಲಿ ಜಾತ್ರೆ ಅನುಭವ ಪಡೆಯಲು ಇಲ್ಲಿಗೆ ಭೇಟಿ ನೀಡುತ್ತಿರುತ್ತೇವೆ.
– ವಿದ್ಯಾ
ಪ್ರಶಾಂತ ಜಿ. ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.