ಫುಡ್ಡೀಸ್ ಫೆಸ್ಟಿವಲ್
Team Udayavani, Nov 3, 2018, 1:17 PM IST
ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಫುಡ್ ಫೆಸ್ಟಿವಲ್ ಬಂದು, ಬಾಯಿಯಲ್ಲಿ ನೀರೂರಿಸುತ್ತದೆ. ಈಗ “ಬೀ ಆರ್ಗನೈಸ್ಡ್’ ಸಂಸ್ಥೆಯು ಫುಡ್ಡೀಸ್ ಫೆಸ್ಟಿವಲ್ ಅನ್ನು ವಿಭಿನ್ನವಾಗಿ ಆಯೋಜಿಸಿದ್ದು, ಖಾದ್ಯಗಳ ಸ್ವರ್ಗವನ್ನೇ ಧರೆಗಿಳಿಸುತ್ತಿದೆ. ದೇಸೀ ಅಲ್ಲದೇ, ವಿದೇಶದ ನೂರಾರು ವಿಶಿಷ್ಟ ಖಾದ್ಯಗಳ ರುಚಿಯನ್ನು ಉಣಬಡಿಸಲಿದೆ.
ಇಲ್ಲಿ ನೀವು ಒಳಹೊಕ್ಕರೆ, ಕೇವಲ ಖಾದ್ಯಗಳಷ್ಟೇ ಕಾಣಸಿಗುವುದಿಲ್ಲ. ಅಲ್ಲಿ ಫುಡ್ ಟ್ರಕ್‌ಗಳ ಆಕರ್ಷಣೆ ಇರುತ್ತೆ. ಪ್ರಸಿದ್ಧ ಬಾಣಸಿಗರಿಂದ ಅಡುಗೆ ಟಿಪ್ಸ್ ಪಡೆಯಬಹುದು. ಅವರು ಕೈಯ್ನಾರೆ ಮಾಡಿದ ರೆಸಿಪಿಯ ರುಚಿ ನೋಡಬಹುದು. ಅಡುಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ನೀವು ಪಾಕತಜ್ಞರೂ ಆಗಬಹುದು. ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೀರಿ ಅಂತಾದರೆ, ಅಲ್ಲಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಬಹುಮಾನವನ್ನೂ ಗಿಟ್ಟಿಸಿಕೊಳ್ಳಬಹುದು. ಬಂದವರ ಜೊತೆ ಹರಟುತ್ತಾ, ಇಲ್ಲವೋ ಒಬ್ಬರೇ ಏಕಾಂತವಾಗಿ ಕುಳಿತು ಆಹಾರ ಸವಿದರೂ, ನಿಮಗೆ ಆಹಾರದ ಜತೆ ಲೈವ್ ಮ್ಯೂಸಿಕ್‌ನ ಸಾಥ್ ಇದ್ದೇ ಇರುತ್ತೆ.
ಫ್ಯಾಮಿಲಿ ಜೊತೆ ಹೋಗುತ್ತಿದ್ದೀರಿ ಅಂತಿಟ್ಟುಕೊಳ್ಳಿ. ಪುಟ್ಟ ಮಕ್ಕಳಿದ್ದರಂತೂ ಅದು ಇನ್ನೂ ಲಾಭ. 1 ಗಂಟೆಯ ಅವಧಿಯಲ್ಲಿ ಮಕ್ಕಳಿಗೆ ಉಚಿತವಾಗಿ ಯಾವುದೇ ಖಾದ್ಯ ಸವಿಯುವ ಆಫರ್ ಕೂಡ ನೀಡಿರುವುದು ಇಲ್ಲಿನ ಹೈಲೈಟ್. ಫುಡ್ಡೀಸ್ ಫೆಸ್ಟಿವಲ್ ಇಷ್ಟಕ್ಕೇ ತನ್ನ ಸ್ಪೆಷಾಲಿಟಿ ಮುಗಿಸುವುದಿಲ್ಲ. ಯಾರಿಗೆ ಗೊತ್ತು… ಖರೀದಿಸಿದ ಖಾದ್ಯಗಳ ಜೊತೆ, ಬಗೆಯ ಬಗೆಯ ವೋಚರ್‌ಗಳು ನಿಮ್ಮ ಅದೃಷ್ಟವನ್ನೂ ಬದಲಿಸಬಹುದು. ಏನೇ ಅನ್ನಿ… ಈ ಆಹಾರ ಜಾತ್ರೆ ಮಿಸ್ ಮಾಡಿಕೊಂಡರೆ, ನಿಮ್ಮ ಹೊಟ್ಟೆಗೇ ನಷ್ಟ.
ಯಾವಾಗ?: ನ.3-4, ಬೆ.11ರಿಂದ ರಾ.10
ಎಲ್ಲಿ?: ವರ್ಜಿನಿಯಾ ಮಾಲ್, ವರ್ತೂರು ರಸ್ತೆ, ವೈಟ್‌ಫೀಲ್ಡ್
ಪ್ರವೇಶ: 99 ರೂ.