ಬಾಪೂ ಓಡಾಡಿದ್ದ ಜಾಗ
ಗಾಂಧಿ ಭವನ ವಸ್ತು ಸಂಗ್ರಹಾಲಯ
Team Udayavani, Dec 7, 2019, 5:00 AM IST
ಗಾಂಧಿ ಭವನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪಿನಲ್ಲಿ ಸ್ಥಾಪನೆಯಾದ ಕಟ್ಟಡ. ಗಾಂಧಿ ತತ್ತ್ವವನ್ನು ಸಾರುವ ಸಲುವಾಗಿ “ಗಾಂಧಿ ಸ್ಮಾರಕ ನಿಧಿ’ ಹೆಸರಿನಲ್ಲಿ ಪ್ರಾರಂಭವಾದ (ಡಾ. ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ) ಇದು, ಮುಂದೆ “ಗಾಂಧಿ ಭವನ’ವೆಂದು ಮರು ಮಕರಣಗೊಂಡಿತು.
ಹಿನ್ನೆಲೆ
ಗಾಂಧೀಜಿ ಮರಣಾನಂತರ, ಅವರ ನೆನಪಿನಲ್ಲಿ ದೇಶಾದ್ಯಂತ ಗಾಂಧಿ ಸ್ಮಾರಕ ಟ್ರಸ್ಟ್ ನಿರ್ಮಿಸುವ ಯೋಜನೆ ಹಾಕಲಾಯ್ತು. ದೇಶದ ಜನತೆಯಿಂದ ದೇಣಿಗೆ ಸಂಗ್ರಹಿಸಲಾಯ್ತು. ಹಾಗೆ ಸಂಗ್ರಹವಾದ ದೇಣಿಗೆ 10 ಕೋಟಿ 98 ಲಕ್ಷ 29 ಸಾವಿರದ 106. 95 ರೂ. ಕರ್ನಾಟಕ ಪ್ರಾಂತ್ಯದಲ್ಲಿ 23,40,540 ರೂ. ಸಂಗ್ರಹವಾಗಿತ್ತು. ಹೀಗೆ, 1949ರ ಫೆಬ್ರವರಿಯಲ್ಲಿ ಟ್ರಸ್ಟ್ ನೋಂದಣಿಯಾಯ್ತು.
ಕುಮಾರ ಕೃಪಾದ ಪಕ್ಕದ ಜಾಗ
1927ರಲ್ಲಿ ಗಾಂಧೀಜಿಯವರು ಹಳೇ ಮೈಸೂರು ಪ್ರಾಂತ್ಯಕ್ಕೆ ಭೇಟಿ ನೀಡಿದ್ದಾಗ ತಂಗಿದ್ದ ಕುಮಾರ ಕೃಪ ಗೆಸ್ಟ್ ಹೌಸ್‌ನ ಪಕ್ಕದ ಜಾಗವನ್ನೇ ಕರ್ನಾಟಕ ಸರ್ಕಾರವು ಗಾಂಧಿ ಸ್ಮಾರಕ ಭವನಕ್ಕೆ ಬಿಟ್ಟು ಕೊಟ್ಟಿತು.
ವೈಶಿಷ್ಟ್ಯ
ವಸ್ತು ಸಂಗ್ರಹಾಲಯದಲ್ಲಿ ಗಾಂಧೀಜಿಯವರ ಸಂಪೂರ್ಣ ಜೀವನವನ್ನು ಅನಾವರಣಗೊಳಿಸುವ ಅಪರೂಪದ ಭಾವಚಿತ್ರಗಳು, ಕೈ ಬರಹದ ಪತ್ರಗಳು, ಗಾಂಧೀಜಿಯವರ ಆದರ್ಶಗಳನ್ನು ಬರೆದಿರುವ ಫಲಕಗಳು ಇವೆ.
ಉದ್ಘಾಟನೆ :(ಮರುನಾಮಕರಣ) ಡಿಸೆಂಬರ್ 8, 1965
ಉದ್ಘಾಟಿಸಿದ್ದು: ಅಂದಿನ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್
ಖರ್ಚು: ಕಟ್ಟಡ ನಿರ್ಮಾಣಕ್ಕೆ 3.80 ಲಕ್ಷ ರೂ. (ಚಿತ್ರ ಗ್ಯಾಲರಿಯೂ ಸೇರಿ)
ಎಲ್ಲಿದೆ?: ಕುಮಾರಕೃಪ ಪೂರ್ವ, ಶಿವಾನಂದ ಸರ್ಕಲ್ ಸಮೀಪ
ಸಾಮರ್ಥ್ಯ: 250 ಸಭಾಂಗಣದ ಆಸನ
ಏನೇನಿದೆ?: ವಸ್ತು ಸಂಗ್ರಹಾಲಯ, ಗ್ರಂಥಾಲಯ ಮತ್ತು ಸಭಾಂಗಣ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.