ಗೋಲ್ಡನ್ ಟೈಮ್ ವಿತ್ ಗಣೇಶ
Team Udayavani, Sep 8, 2018, 12:29 PM IST
ಗಣೇಶ ಜನರನ್ನು ಒಗ್ಗೂಡಿಸುತ್ತಾನೆ, ಸಾಮರಸ್ಯದ ಸಂದೇಶ ಸಾರುತ್ತಾನೆ ಎನ್ನುತ್ತಾರೆ. ಅದನ್ನು ಕಣ್ಣಾರೆ ಕಾಣಬೇಕೆಂದರೆ ಗಣೇಶ ಮೂರ್ತಿಗಳು ತಯಾರಾಗುವ ಪ್ಲಾಂಟುಗಳಿಗೆ ಭೇಟಿ ನೀಡಬೇಕು. ಇಲ್ಲಿ ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಧರ್ಮಗಳ ಶಿಲ್ಪಿಗಳಿದ್ದಾರೆ. ಇವರೆಲ್ಲ ಸಾವಿರಾರು ಕಿ.ಮೀ.ಗಳಷ್ಟು ದೂರವನ್ನು ಕ್ರಮಿಸಿ ನಮ್ಮ ಬೆಂಗಳೂರಿಗೆ ಬಂದು ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಕಾಳಿ ಮೂರ್ತಿಗಳಿಗೆ ಜಗದ್ವಿಖ್ಯಾತಿ ಪಡೆದಿರುವ ಕೋಲ್ಕತಾದ ಕೊಮಾತೊìಳಿ ಗಲ್ಲಿಯಿಂದ ಇಲ್ಲಿಗೆ ಬಂದಿರುವ ಅಪ್ಪ- ಮಗ ಅಜಿತ್ ಕುಮಾರ್ ಮೋಂಡೊಲ್ ಮತ್ತು ಸಂಜಯ್ ಮೋಂಡೊಲ್, ಆಂಧ್ರದ ರಾಜು- ಕಾಂತಮ್ಮ ದಂಪತಿಗಳು ಅವರಲ್ಲಿ ಕೆಲವರಷ್ಟೆ…
ಏರಿಯಾದ ಹುಡುಗರು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಬಡಾವಣೆಯ ರಸ್ತೆಗಳಲ್ಲಿ ಪೆಂಡಾಲುಗಳು ಏಳುತ್ತಿವೆ. ಅದೇ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುತ್ತಿದ್ದ ವಾಹನ ಸವಾರರು ಒಂಚೂರೂ ಬೇಜಾರು ಮಾಡಿಕೊಳ್ಳದೆ ಹುಡುಗರ ಖುಷಿಯನ್ನು ಕಂಡು ಸಂಭ್ರಮಿಸುತ್ತಾ ಹೆಲ್ಮೆಟ್ ಒಳಗಿನಿಂದಲೇ ಮುಗುಳ್ನಕ್ಕಿದ್ದಾರೆ. ಗಣೇಶನ ಮಹಿಮೆಯೇ ಅಂಥದ್ದು. ಫೇಸ್‌ಬುಕ್ಕು ಕಾಮೆಂಟ್ ಬಾಕ್ಸ್, ವಾಟ್ಸಪ್ ಗ್ರೂಪುಗಳು, ಟಿ.ವಿ. ಚಾನೆಲ್ಲುಗಳ ಚರ್ಚಾಸ್ಪರ್ಧೆ, ಹಳ್ಳಿ ಜಗುಲಿ ಕಟ್ಟೆ ಟಾಕ್ ಶೋಗಳಲ್ಲಿ ಬಿಝಿಯಾಗಿರುವವರನ್ನು ಅದರಿಂದಾಚೆ ತರಲು, ಒಗ್ಗೂಡಿಸಲು ಬರುತ್ತಿದ್ದಾನೆ ಗಣೇಶ. “ಅನೇಕತೆಯಲ್ಲಿ ಏಕತೆ’ ಎನ್ನುವ ಅವನ ತತ್ವವನ್ನು ಕಣ್ಣಾರೆ ಕಾಣಬೇಕೆಂದರೆ ನಗರದಲ್ಲಿ ಗಣೇಶ ಮೂರ್ತಿಗಳು ತಯಾರಾಗುವ ಪ್ಲಾಂಟುಗಳಿಗೆ ಭೇಟಿ ನೀಡಬೇಕು. ಅಲ್ಲಿ ಕೆಲಸದಲ್ಲಿ ನಿರತರಾಗಿರುವವರಲ್ಲಿ ಹೆಚ್ಚಿನವರು ಹೊರರಾಜ್ಯದವರೇ ಎಂದು ತಿಳಿಯುವುದು ಆಗಲೇ…
ಕೋಲ್ಕತಾ ಟು ವಿ.ವಿ.ಪುರಂ
ಕೋಲ್ಕತಾದ ಕೊಮಾತೊìಳಿ, ಲಕ್ಷಾಂತರ ದೇವರ ವಿಗ್ರಹಗಳ ಜನ್ಮಸ್ಥಳ. ಇದರ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟದ್ದು. ಅನೇಕ ಸಿನಿಮಾ, ಡಾಕ್ಯುಮೆಂಟರಿಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಗಣೇಶ, ದುರ್ಗೆ, ಸರಸ್ವತಿ ದೇವರ ವಿಗ್ರಹಗಳು ತಯಾರಾಗುತ್ತವಾದರೂ, ಕಾಳಿ ವಿಗ್ರಹಗಳಿಗೆ ಕೊಮಾತೊìಳಿ ಜಗದ್ವಿಖ್ಯಾತಿ ಪಡೆದಿದೆ. ಅಲ್ಲಿನ ಅನೇಕರಿಗೆ ಬೆಂಗಳೂರು ಎರಡನೇ ಮನೆ ಇದ್ದಂತೆ. ಹಾಗೆ ಹೌರಾ- ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹತ್ತಿ ಬೆಂಗಳೂರಿನಲ್ಲಿ ಇಳಿದವರು ಅಜಿತ್ ಕುಮಾರ್ ಮೋಂಡೊಲ್ ಮತ್ತು ಸಂಜಯ್ ಮೋಂಡೊಲ್. ತಂದೆ ಮಗ ಇಬ್ಬರೂ ವರ್ಷದಲ್ಲಿ ನಾಲ್ಕು ತಿಂಗಳುಗಳನ್ನು ನಮ್ಮ ಬೆಂಗಳೂರಿನ ವಿ.ವಿ.ಪುರಂನಲ್ಲಿ ಕಳೆಯುತ್ತಾರೆ. ಆರ್.ವಿ. ರಸ್ತೆಯ ವಿನಾಯಕ & ಕೋ ವಿಗ್ರಹದಂಗಡಿಯಲ್ಲಿ ಅವರ ಕೈಯಾರೇ ಗಣಪತಿ ವಿಗ್ರಹಗಳು ಜೀವ ಪಡೆಯುತ್ತವೆ. ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಕಳೆದುಕೊಂಡೇ ಅವರು ತಮ್ಮೂರಿಗೆ ಮರಳುವುದು.
ಕರೆದಿದೆ ಮನೆ ಓ…
“ಊಟ ತಿಂಡಿಯತ್ತ ಗಮನವಿಲ್ಲದೆ ಹಗಲು ರಾತ್ರಿ ವಿಗ್ರಹ ತಯಾರಿಯಲ್ಲಿ ತೊಡಗುವುದು ನಿರಾಯಾಸ. ಆದರೆ, ತಿಂಗಳ ಕಾಲ ಮನೆಯಿಂದ ದೂರವಿರುವುದೇ ಕಷ್ಟ. ಅದರಲ್ಲೂ ಮುದ್ದಿನ ಮಡದಿ ಮತ್ತು ಒಂದು ವರ್ಷದ ಮಗ ತನಗಾಗಿ ಕಾಯುತ್ತಿರುವುದನ್ನು ನೆನೆದಾಗ ಕಷ್ಟವಿದ್ದದ್ದು, ಕಡು ಕಷ್ಟವಾಗುತ್ತದೆ’ ಎನ್ನುತ್ತಾರೆ ಸಂಜಯ್. ಆದರೆ, ಅದೇ ಸಮಯದಲ್ಲಿ ಒಮ್ಮೆ ಕೆಲಸದಲ್ಲಿ ತಲ್ಲೀನರಾದರೆ ಮತಾöವ ಆಲೋಚನೆಯೂ ಬರುವುದಿಲ್ಲ ಎನ್ನಲು ಅವರು ಮರೆಯುವುದಿಲ್ಲ.
ಹೊರರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿದವರನ್ನೂ ನಮ್ಮವರೆಂದು ಒಳಕ್ಕೆಳೆದುಕೊಳ್ಳುವವರು ನಾವು. ಇಂದು ನಮ್ಮ ನಗರ ಕಾಸ್ಮೋಪಾಲಿಟನ್ ಎಂದು ಕರೆಸಿಕೊಳ್ಳುವುದಕ್ಕೆ ಕಾರಣವಾಗಿರೋರು ಐಟಿ- ಬಿಟಿ ಮಂದಿ ಮಾತ್ರವಲ್ಲ, ಹೊರರಾಜ್ಯಗಳ ಕಲಾವಿದರು, ಕುಸುರಿಗಾರರು, ಆಟಗಾರರು, ಕಾರ್ಮಿಕರು ಎಲ್ಲರೂ ಇದ್ದಾರೆ. ಬೆಂಗಳೂರು ಗ್ರೇಟ್ ಅನ್ನಿಸಿಕೊಳ್ಳುವುದಕ್ಕೆ ಇವರೆಲ್ಲರ ಪಾತ್ರವೂ ಇದೆ. ಹ್ಯಾಪಿ ಗಣೇಶ ಚತುರ್ಥಿ ಇನ್ ಅಡ್ವಾನ್ಸ್!
ಇತರೆ ರಾಜ್ಯಗಳ, ಭಿನ್ನ ಸಂಸ್ಕೃತಿಗಳ ಮಂದಿಯ ಜೊತೆ ಕೆಲಸ ಮಾಡೋದು ಖುಷಿ ಅನ್ನಿಸುತ್ತೆ. ಇಲ್ಲಿಂದ ಮರಳಿ ಹೋಗುವಾಗ ಇಲ್ಲಿನ ಸುಂದರ ನೆನಪುಗಳನ್ನು ನನ್ನೂರಿಗೆ ಕೊಂಡೊಯ್ಯುತ್ತೇನೆ.
– ಸಂಜಯ್ ಮೋಂಡೋಲ್, ಶಿಲ್ಪಿ
ಸೀಮಾಂಧ್ರ ಟು ಬೆನ್ಸನ್ ಟೌನ್
ಆಂಧ್ರ ಸೀಮೆಯ ರಾಜು- ಕಾಂತಮ್ಮ ದಂಪತಿಗಳು ಗಣಪತಿಯನ್ನು ಹಬ್ಬಕ್ಕೆ ಸಿದ್ಧಪಡಿಸುವ ಕೆಲಸದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಅವರು ಜೋಡಿಯಾಗಿ ಕೆಲಸ ಮಾಡುವುದನ್ನು ನೋಡುವುದೇ ಚೆಂದ. ಒಬ್ಬರು ಗಣಪತಿಗೆ ಸ್ನಾನ ಮಾಡಿಸಿದರೆ, ಇನ್ನೊಬ್ಬರು ಬಟ್ಟೆಯಿಂದ ಮೈ ಒರೆಸುತ್ತಾರೆ. ಒಬ್ಬರು ಗಣಪತಿಗೆ ಬಣ್ಣದಿಂದ ಸಿಂಗಾರ ಮಾಡಿದರೆ ಮತ್ತೂಬ್ಬರು ಇನ್ನೊಂದು ಸುತ್ತಿನ ಕೋಟಿಂಗ್ ನೀಡುತ್ತಾರೆ. 6 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ದಂಪತಿ “ಪಾಟರಿ ಟೌನ್’ ಎಂದೇ ಹೆಸರಾಗಿರುವ ಬೆನ್ಸನ್ ಟೌನ್‌ನ ಪ್ರದೇಶದಲ್ಲಿ ವಾಸವಿದ್ದಾರೆ. ತಮಿಳುನಾಡು, ಕೇರಳದಿಂದ ನೆಲೆ ನಿಂತವರನ್ನೂ ಅಕ್ಕಪಕ್ಕದ ಮನೆಗಳಲ್ಲಿ ಕಾಣಬಹುದು.
ಕಾಳಿಯನ್ನೂ ಮೀರಿಸಿದ ಗಣಪತಿ
ಈವರೆಗೆ ಅಸಂಖ್ಯ ಕಾಳಿ- ದುರ್ಗೆಯರನ್ನು ಸಿಂಗರಿಸಿರುವ ಸಂಜಯ್‌ಗೆ ಗಣೇಶನನ್ನು ಸಿಂಗರಿಸುವುದೇ ಕಷ್ಟವಂತೆ. ಯಾಕೆ ಅಂತ ಕೇಳಿದರೆ ಗ್ರಾಹಕರತ್ತ ಬೊಟ್ಟು ಮಾಡುತ್ತಾರವರು. ಜನರು ಗಣೇಶನನ್ನು ಹೆಚ್ಚು ಅಲಂಕಾರದಲ್ಲಿ ನೋಡಲು ಇಷ್ಟಪಡುತ್ತಾರೆ ಎನ್ನುವುದು ಅವರ ಅನುಭವದ ಮಾತು. ತಲೆ, ಕೈ, ಎದೆ, ಸೊಂಡಿಲು, ಹೊಟ್ಟೆ ಸೇರಿದಂತೆ ಯಾವೆಲ್ಲಾ ಭಾಗಗಳಲ್ಲಿ ಆಭರಣಗಳನ್ನು ಕೂರಿಸಲು ಸಾಧ್ಯವೋ ಅಲ್ಲೆಲ್ಲಾ ಪ್ಲಾಸ್ಟಿಕ್‌ನ ವಜ್ರ, ನೀಲ ಮಣಿ, ವೈಢೂರ್ಯ, ಮುತ್ತು ರತ್ನಗಳ ಆಭರಣಗಳನ್ನು ತೊಡಿಸಬೇಕಾಗುತ್ತದಂತೆ. ಎಷ್ಟೋ ಬಾರಿ ಗ್ರಾಹಕರೇ ಇಂಥ ಜಾಗದಲ್ಲಿ ಇಂಥಾ ಬಣ್ಣದ ಮುತ್ತುಗಳನ್ನು ಬಳಸಿ ಎಂದು ನಿರ್ದೇಶನಗಳನ್ನು ನೀಡಿ ಹಾಕಿಸಿಕೊಳ್ಳುವುದೂ ಇದೆಯಂತೆ. ಅಲ್ಲಿಗೆ, ಅಲಂಕಾರದಲ್ಲಿ ಕಾಳಿಯನ್ನೂ ಮೀರಿಸಿದ್ದಾನೆ ಗಣೇಶ ಅಂತಾಯ್ತು ಎನ್ನಿ!
ಮೀನಿಲ್ಲದೆ ಊಟವಿಲ್ಲ
ಬೆಂಗಾಲಿಯರಿಗೆ ಮೀನಿಲ್ಲದೆ ಊಟವೇ ಪೂರ್ತಿಯಾಗದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಜಿತ್ ಮತ್ತು ಸಂಜಯ್ ಕೂಡಾ ಇದಕ್ಕೆ ಹೊರತಾದವರಲ್ಲ. ಅಪ್ಪ ಮಗ ಇಬ್ಬರೂ ಸೇರಿ ವಿ.ವಿ. ಪುರಂನ ತಮ್ಮ ಕೋಣೆಯಲ್ಲೇ ಅಡುಗೆಯನ್ನು ತಯಾರಿಸಿಕೊಳ್ಳುತ್ತಾರೆ. ಹತ್ತಿರದ ಮೀನು ಮಾರುಕಟ್ಟೆಯಿಂದ ಮೀನನ್ನು ಖರೀದಿಸಿ ತಂದು ಪದಾರ್ಥ ಮಾಡುತ್ತಾರೆ. ಅಡುಗೆ ಮಾಡಲು ಉದಾಸೀನವಾದರೆ ಫುಡ್ ಸ್ಟ್ರೀಟ್‌ಗೊà, ದರ್ಶಿನಿಗೋ ತೆರಳುತ್ತಾರೆ.
ಚಿತ್ರ- ಲೇಖನ: ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.