ಕೈನಿಂದಲೇ ಬಿಡಿಸಿದ ಅನಿಮೇಟೆಡ್ ಸಿನಿಮಾ!
Team Udayavani, Jan 20, 2018, 3:36 PM IST
ಬ್ಲಾಕ್‌ಬಸ್ಟರ್ ಸಿನಿಮಾಗಳು ಆಗಿದ್ದಾಗ್ಗೆ ಬಿಡುಗಡೆಯಾಗುತ್ತಿರುತ್ತವೆ. ಸಿನಿಮಾಮಂದಿರಗಳಲ್ಲಿ, ಟಿ.ವಿ.ಯಲ್ಲಿ, ಡಿವಿಡಿಯಲ್ಲಿ ಅವುಗಳನ್ನು ನೋಡಬಹುದು. ಆದರೆ ನೋಡಲು ಅಪರೂಪವಾದ ಸಿನಿಮಾಗಳೆಂದರೆ ಇಂಡೀ ಸಿನಿಮಾಗಳು.
ನೀವು ಇಂಡಿಪೆಂಡೆಂಟ್ ಸಿನಿಮಾಗಳ ಫ್ಯಾನ್ ಆಗಿದ್ದರೆ ಈ ಕಾರ್ಯಕ್ರಮಕ್ಕೆ ಹಾಜರಾಗಬಹುದು. “ಮಾಚೆರ್ ಝೋಲ್’ ಮತ್ತು ‘ಸರ್ಕಸ್’ ಎಂಬ ಎರಡು ಇಂಡೀ ಸಿನಿಮಾಗಳು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ “ಮಾಚೆರ್ ಝೋಲ್’ ಅನಿಮೇಟೆಡ್ ಸಿನಿಮಾ. ಈ ಸಿನಿಮಾದ ವೈಶಿಷ್ಟವೆಂದರೆ ಇಲ್ಲಿನ ಚಿತ್ರಗಳನ್ನು ಕೈನಿಂದಲೇ ಬಿಡಿಸಿರುವುದು.
ಈಗಿನ ಅನಿಮೇಟೆಡ್ ಸಿನಿಮಾಗಳಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ನ ಬಳಕೆಯಾಗುತ್ತೆ. ಆದರೆ ನಿರ್ದೇಶಕ ಅಭಿಷೇಕ್ ವರ್ಮಾ ಹಳೆಯ ಕಾಲದಲ್ಲಿ ಚಾಲ್ತಿಯಲ್ಲಿದ್ದ ತಂತ್ರವನ್ನು ಉಪಯೋಗಿಸಿ ಈ ಸಿನಿಮಾ ತಯಾರಿಸಿದ್ದಾರೆ. ಪ್ರದರ್ಶನದ ನಂತರ ಸಿನಿಮಾ ಕುರಿತು ಸಂವಾದವೂ ನಡೆಯಲಿದೆ.
ಎಲ್ಲಿ?: ಸೋಷಿಯಲ್, ಚರ್ಚ್ ಸ್ಟ್ರೀಟ್
ಯಾವಾಗ?: ಜನವರಿ 24, ಸಂಜೆ 7
ಟಿಕೆಟ್: 249 ರೂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.